ಮತ್ತೆ ಮರವೂರು ಸೇತುವೆ ಮೇಲೆ ಸಂಚರಿಸಿದ ವಾಹನಗಳು
ಫಿಲ್ಲರ್ ಕುಸಿತದಿಂದಾಗಿ ಬಿರುಕು ಬಿಟ್ಟಿದ್ದ ಮರವೂರು ಸೇತುವೆಯ ದುರಸ್ತಿ ಕಾರ್ಯ ಪೂರ್ಣಗೊಂಡಿದ್ದು, ಇಂದಿನಿಂದ ವಾಹನ ಸಂಚಾರ ಆರಂಭಗೊಂಡಿದೆ.
ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕೊಂಡಿಯಾಗಿರುವ ಕಾವೂರು ಬಳಿ ಮರವೂರು ಸೇತುವೆಯ ಕುಸಿದು ಪಿಲ್ಲರ್ ದುರಸ್ತಿ ಕಾರ್ಯ ಬಹುತೇಕ ಪೂರ್ತಿಯಾಗಿದ್ದು, ಯಶ್ವಸಿಯಾಗಿದೆ. ಜೂನ್ 15ರಂದು ಮಂಗಳೂರಿನಿಂದ ಬಜ್ಪೆ ಅಂತರ ರಾಷ್ಟ್ರೀಂi ವಿಮಾನ ನಿಲ್ದಾಣ ಹಾಗೂ ಕಟೀಲು ಕಡೆಗೆ ಸಂಪರ್ಕಿಸುವ ಈ ರಸ್ತೆಯ ಮರವೂರು ಸೇತುವೆಯಲ್ಲಿ ಬಿರುಕು ಬಿಟ್ಟಿತ್ತು. ಸೇತುವೆಯ 2.5 ಅಡಿಯಷ್ಟು ಕುಸಿದಿತ್ತು. ಈ ಹಿನ್ನೆಲೆಯಲ್ಲಿ ಸೇತುವೆ ಮೇಲೆ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿತ್ತು, ಸೇತುವೆಯ ಆ ಬದಿಯಲ್ಲಿರುವ ಬಜ್ಪೆ, ಕಟೀಲಿನ ಜನರು ಮಂಗಳೂರಿಗೆ ಜೋಕಷ್ಟೆ ಮೂಲಕ ಬರಬೇಕಾಗಿತ್ತು.
ಕುಸಿದ ಸೇತುವೆಯನ್ನು ಆಧುನಿಕ ತಂತ್ರಜ್ಞಾನ ಬಳಸಿ ಅದನ್ನು ಮತ್ತೆ ಹಳೆಯ ಸ್ಥಿತಿಗೆ ತರಲಾಗಿದೆ. ಸಮರೋಪಾದಿಯಲ್ಲಿ ಸೇತುವೆ ದುರಸ್ತಿ ಕಾರ್ಯ ಕೈಗೊಳ್ಳಲಾಗಿದೆ. ಸುಮಾರು 100ಕ್ಕೂ ಅಧಿಕ ಕಾರ್ಮಿಕರು ಹಗಲು ರಾತ್ರಿ ಎನ್ನದೇ ಕಾಮಗಾರಿಯಲ್ಲಿ ತೊಡಗಿದ್ರು, ಇನ್ನು ಬೆಂಗಳೂರಿನ ಸ್ಟ್ರಕ್ ಜಿಯೊಟಿಕ್ ಸಂಶೋಧನಾ ಪ್ರಯೋಗಾಲಯದ ವ್ಯವಸ್ಥಾಪಕ ನಿರ್ದೇಶಕ ಆರ್.ಕೆ. ಜೈ.ಗೋಪಾಲ್ ಅವರ ಸಲಹೆಯಂತೆ ಲೋಕೋಪಯೋಗಿ ಇಲಾಖೆಯು ಈ ಕಾರ್ಯವನ್ನು ಕೈಗೆತ್ತಿಕೊಂಡಿತು. ಮುಗರೋಡಿ ಕನ್ ಸ್ಟ್ರಕ್ಸನ್ ಸಂಸ್ಥೆಯು 1 ಸಾವಿರ ಟನ್ ತೂಕದ ಹೈಟ್ರೋಲಿಕ್ ಜ್ಯಾಕ್ ಮೂಲಕ ಕುಸಿದ ಸೇತುವೆಯನ್ನು ಮೇಲಕ್ಕೆತ್ತಿ ಸರಿ ಮಾಡುವ ಕಾಮಗಾರಿ ನಡೆಸಿದೆ. ಇದೀಗ ಬಹುತೇಕ ಪೂರ್ಣಗೊಂಡಿದೆ. ಗುರುವಾರ ಹಿರಿಯ ಪರೀಕ್ಷಕ ಜಯಗೋಪಾಲ್ ನೇತೃತ್ವದಲ್ಲಿ ತಜ್ಞರು ಸೇತುವೆ ವಾಹನ ಸಂಚಾರಕ್ಕೆ ಯೋಗ್ಯವಾಗಿದೆಯೇ ಎಂದು ಪರೀಕ್ಷಿಸಲು ರೋಡ್‌ಟೆಸ್ಟ್ ನಡೆಸಿದ್ದಾರೆ. 28ಟನ್, 30ಟನ್ ಹೀಗೆ ವಿವಿಧ ಬಾರಗಳನ್ನು ಹಾಕಿದ ಟ್ರಕ್‌ನ್ನು ಸೇತುವೆ ಮೇಲ್ಭಾಗದಲ್ಲಿ ನಿಲುಗಡೆಗೊಳಿಸಿ, ಬೇರೆ ಬೇರೆ ವಿಧದಲ್ಲಿ ಪರೀಕ್ಷಿಸಲಾಯಿತು. ಇದು ಎರಡೂವರೆ ಅಡಿ ಜಗ್ಗಿತ್ತು. ತಿಂಗಳ ಕಾಲ ಕೆಲಸ ಮಾಡಿ ಮತ್ತೆ ಮೂಲ ಯಥಾ ಸ್ಥಿತಿಗೆ ತರಲಾಗಿದೆ. ಈ ಮೂಲಕ ಕಳೆದ ಒಂದೂವರೆ ತಿಂಗಳನಿಂದ ವಾಹನ ಸಂಚಾರ ಸ್ಥಗಿತಗೊಂಡಿದ್ದು, ಇದೀಗ ಮತ್ತೆ ವಾಹನ ಸಂಚಾರ ಆರಂಭಗೊಂಡಿದೆ.