ಶ್ರೀನಿವಾಸ್‌ ಆಸ್ಪತ್ರೆಯಲ್ಲಿ Duodenal Ulcer Perforation with Severe Respritory Distress ನ ಯಶಸ್ವೀ ಶಸ್ತ್ರಚಿಕಿತ್ಸೆ

ಶ್ರೀನಿವಾಸ್‌ ಆಸತ್ರೆಯ ತುರ್ತು ನಿಗಾ ಘಟಕದ ಮುಂಭಾಗದಲ್ಲಿ ಒಂದು ಕಾರ್‌ ಬಂದು ನಿಂತಿತು. ತಾಯಿಯೊಬ್ಬಳು ತೀವ್ರವಾದ ಉಸಿರಾಟದ ತೊಂದರೆಯೊಂದಿಗೆ ಡ್ಯುವೋಡೆನಲ್ ಅಲ್ಸರ್ ರಂದ್ರದ (Duodenal Ulcer Perforation with Severe Respritory Distress) ಮಗುವನ್ನು ಕೈಯಲ್ಲಿ ಹಿಡಿದು ಅಳುತ್ತಾ ಕಾರಿನಿಂದ ಕೆಳಗಿಳಿದಳು. ತೀವ್ರವಾಗಿ ಅಸ್ವಸ್ಥವಾಗಿದ್ದ ಮಗುವಿನ ಹೊಟ್ಟೆ ಊದಿಕೊಂಡಿದ್ದು, ಉಸಿರಾಡಲು ಕಷ್ಟಪಡುತ್ತಿತ್ತು. ತಕ್ಷಣವೇ ಶ್ರೀನಿವಾಸ್‌ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿಗಳು ಎಚ್ಚೆತ್ತು, ಆ ಮಗುವಿಗೆ ಚಿಕಿತ್ಸೆ ನೀಡಲು ಮುಂದಾದರು. ಆ ಕ್ಷಣದಲ್ಲಿ ಭುವಿತ್‌ರ ಆಕ್ಸಿಜನ್‌ ಸ್ಯಾಚುಟರೇಶನ್‌ 70ರಷ್ಟಿತ್ತು. ತಕ್ಷಣವೇ ಮಕ್ಕಳ ತಜ್ಞ ಶಸ್ತ್ರಚಿಕಿತ್ಸಕ ಡಾ. ಸುಹಾಸ್‌ ಹಾಗೂ ಡಾ. ವಿ.ಪಿ. ಸಿಂಗ್‌ ತೀವ್ರ ನಿಗಾ ಘಟಕಕ್ಕೆ ಬಂದರು.

ಭುವಿತ್‌ ಸ್ಥಿರವಾದ ಆತನ ಹೊಟ್ಟೆಯಲ್ಲಿ ಗಾಳಿ ತುಂಬಿದೆ ಹಾಗೂ ಒಂದು ರಂದ್ರವಿದೆ ಎಂದು ಎಕ್ಸ್‌ ರೇಯಿಂದ ತಿಳಿಯಿತು. ಇನ್ನಷ್ಟು ಭುವಿತ್‌ನ ಆರೋಗ್ಯ ಹದಗೆಟ್ಟುತ್ತಾ ಬಂದಿತು. ತಡ ರಾತ್ರಿ 2 ಗಂಟೆಯ ಸಮಯ ಭುವಿತ್‌ನ ತಂದೆ 45 ಕಿಲೋಮೀಟರ್‌ ದೂರದಲ್ಲಿರುವ ಊರಿನಲ್ಲಿದ್ದರು. ತಕ್ಷಣ ಅವರನ್ನು ಶ್ರೀನಿವಾಸ್‌ ಆಸತ್ರೆಗೆ ಕರೆತರಲಾಯಿತು. ಶಸ್ತ್ರಚಿಕಿತ್ಸಾ ತಂಡದ ಸಹಕಾರದೊಂದಿಗೆ ಅಸ್ವಸ್ಥಗೊಂಡಿರುವ ಮಗುವಿನ ಶಸ್ತ್ರಚಿಕಿತ್ಸೆಯನ್ನು ಯಶಸ್ವೀಯಾಗಿ ಏರ್ಪಡಿಸಲಾಯಿತು. ಡಾ.ಪ್ರಶಾಂತ್ ನೇತೃತ್ವದ ಅರಿವಳಿಕೆ ವಿಭಾಗವು ಅರಿವಳಿಕೆಯನ್ನು ಕಾರ್ಯಾಚರಣೆಯ ಆರಂಭದಿಂದ ಕೊನೆಯವರೆಗೆ ಉತ್ತಮವಾಗಿ ನಿರ್ವಹಿಸಿತು. 5 ವರ್ಷದ ಮಗುವಿನಲ್ಲಿ ಅಪರೂಪವಾಗಿ ಕಾಣಸಿಗುವ ಈ ರಂದ್ರ ಸಣ್ಣ ಕರುಳಿನ ಮೊದಲ ಭಾಗದಲ್ಲಿತ್ತು. ಯಶಸ್ವೀ ಶಸ್ತ್ರಚಿಕಿತ್ಸೆಯ ನಂತರ ಭುವಿತ್‌ನನ್ನು ಇಲೆಕ್ಟಿವ್‌ ಪೋಸ್ಟ್‌ ಓಪರೇಟಿವ್‌ ವೆಂಟಿಲೇಟರ್‌ನಲ್ಲಿ ಇರಿಸಲಾಯಿತು. ಭುವಿತ್‌ನನ್ನು ಗುಣಮುಖವಾಗುವಲ್ಲಿ ಡಾ.ವಿ.ಪಿ. ಸಿಂಗ್ ಅವರ ಮಕ್ಕಳ ಶಸ್ತ್ರಚಿಕಿತ್ಸಾ ತಂಡ ನೇತೃತ್ವದಲ್ಲಿ, ಇಂಟೆನ್ಸ್‌ವಿಸ್ಟ್: ಡಾ.ಜಯಪ್ರಕಾಶ್, ಅರಿವಳಿಕೆ ತಂಡ, ದಾದಿಯರ ತಂಡದ ಸಹಕಾರ ಹಾಗೂ ಕಾರ್ಯ ಶ್ಲಾಘನೀಯ.

ಭುವಿತ್‌ ವೆಂಟಿಲೇಟರ್‌ನಿಂದ 4ನೇ ಹೊರಬಂದರು. ಚಿಕಿತ್ಸೆಯ ಗಾಯದ ಆರೈಕೆ ಮಾಡಬೇಕಿರುವುದರಿಂದ 8 ನೇ ದಿನ ಐಸಿಯುನಿಂದ ವಾರ್ಡ್‌ಗೆ ಸ್ಥಳಾಂತರಿಸಲಾಯಿತು. 6ನೇ ದಿನದಿಂದ ಆಹಾರ ಹಾಗು ದ್ರವ್ಯ ಪದಾರ್ಥಗಳನ್ನು ಸೇವಿಸಲು ಸಲಹೆ ನೀಡಿದರು. 10 ನೇ ದಿನದ ವೇಳೆಗೆ ಬೆಂಬಲದೊಂದಿಗೆ ನಿಂತಿದ್ದರು ಮತ್ತು 16 ನೇ ದಿನದಂದು ಆಸ್ಪತ್ರೆಯಿಂದ ಚಿಕಿತ್ಸೆ ಸಂಪೂರ್ಣವಾಗಿ ಪೂರೈಸಿ ಗುಣಮುಖರಾಗಿ ಹೊರಬಂದರು.
ಒಟ್ಟಾರೆಯಾಗಿ ಭುವಿತ್‌ ಐಸಿಯುನಲ್ಲಿದ್ದ ಆರು ದಿನಗಳು ಆತನ ಕುಟುಂಬಕ್ಕೆ ಅಗ್ನಿಪರೀಕ್ಷೆಯಂತಿತ್ತು. ತಾಯಿಯ ಮುಖದ ಮೇಲಿನ ಆತಂಕ, ಕಣ್ಣೀರು ಸ್ಪಷ್ಟವಾಗಿ ಕಾಣುತ್ತಿತ್ತು. ಶ್ರೀನಿವಾಸ್‌ ಆಸತ್ರೆಯ ನರ್ಸಿಂಗ್ ಮತ್ತು ವೈದ್ಯಕೀಯ ಸಿಬ್ಬಂದಿ ಆಕೆಗೆ ವಿಶೇಷ ಕಾಳಜಿ ವಹಿಸಿದ್ದರು. ಪ್ರತಿದಿನ ತನ್ನ ಎಂಭತ್ತರ ಹರೆಯದ ಭುವಿತ್‌ನ ಅಜ್ಜಿ ಒಂದು ಕೈಯಲ್ಲಿ ಕೋಲು ಮತ್ತೊಂದು ಕೈಯಲ್ಲಿ ಟಿಫಿನ್ ಪೆಟ್ಟಿಗೆಯೊಂದಿಗೆ ಭುವಿತ್‌ ಇರುವ ವಾರ್ಡ್‌ಗೆ ಹೋಗಿ ಅವನನ್ನು ಉಪಚರಿಸುತ್ತಿದ್ದರು.

ಇಂದು ಭುವಿತ್‌ ಕಣ್ಣಿನಲ್ಲಿ ಉತ್ಸಾಹದ ಚಿಲುಮೆ ಅರಳುತ್ತಿದ್ದಾರೆ, ತಾಯಿಯ ಕಣ್ಣಲ್ಲಿ ಭರವಸೆಯ ಬೆಳಕು ಚೆಲ್ಲುತ್ತಿದ್ದೆ. ಭುವಿತ್‌ ಅಜ್ಜಿ ಇಂದು ಖುಷಿ ಖುಷಿಯಾಗಿ ನಡೆದಾಡುತ್ತಿದ್ದಾರೆ. ಭುವಿತ್‌ರಂತಹ ಹಲವು ಮಕ್ಕಳ ಸೇವೆಗಾಗಿ ಶ್ರೀನಿವಾಸ್‌ ಆಸ್ಪತ್ರೆ ಕಾರ್ಯನಿರ್ವಹಿಸುತ್ತಿದೆ.

Related Posts

Leave a Reply

Your email address will not be published.