ಹಡಗು ಮುಳುಗಡೆಯಾಗಿರುವ ಜಾಗದಲ್ಲಿ ಎಚ್ಚರಿಕೆ ಗುರುತು: ಸಚಿವ ಎಸ್. ಅಂಗಾರ

ಸಮುದ್ರದಲ್ಲಿ ಹಡಗು ಮುಳುಗಡೆಯಾಗಿರುವ ಜಾಗದಲ್ಲಿ ಎಚ್ಚರಿಕೆ ಗುರುತು ಮಾಡುವ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ಕೊಟ್ಟಿದ್ದೇನೆ ಎಂದು ಮೀನುಗಾರಿಕಾ ಸಚಿವ ಎಸ್. ಅಂಗಾರ ಹೇಳಿದ್ರು. ಈ ಕುರಿತು ಮಂಗಳೂರಲ್ಲಿ ಸುದ್ದಿಗಾರ ಪ್ರಶ್ನೆಯೊಂದಕ್ಕೆ ಉತ್ತರಿಸಿ ಮಾತನಾಡಿದ್ರು, ಸಮುದ್ರದಲ್ಲಿ ಹಡಗು ಮುಳಗಡೆಯಾಗಿರುವ ಜಾಗದಲ್ಲಿ ಯಾವುದೇ ಗುರುತು ಇಲ್ಲದ ಕಾರಣ ಮತ್ತೆ ಅವಘಾತಯಾಗುತ್ತೆ ಎಂಬ ದೂರು ಬಂದಿದೆ. ಈ ನಿಟ್ಟಿನಲ್ಲಿ ಮುಳುಗಡೆಯಾಗಿರುವ ಜಾಗದಲ್ಲಿ ಎಚ್ಚರಿಕೆ ಗುರುತು ಹಾಕುವ ಕುರಿತು ಅಧಿಕಾರಿಗಳಿಗೆ ಸೂಚನೆ ಕೊಡಲಾಗಿದೆ ಎಂದು ಅವರು ಹೇಳಿದರು.

ಇನ್ನು ಮೀನುಗಾರಿಕೆಗೆ ಇಲಾಖೆಗೆ ಸಂಬಂಧಿಸಿ, ಈಗಾಗಲೇ 16 ಪ್ರಸ್ತಾವನೆಗಳು ಕೇಂದ್ರ ಹಾಗೂ ರಾಜ್ಯ ಸರ್ಕಾರದಲ್ಲಿದೆ. ಈ ಬಗ್ಗೆ ಕೇಂದ್ರ ಸಚಿವರೊಂದಿಗೆ ಮಾತನಾಡಿದ್ದೇನೆ. ಅದಷ್ಟು ಬೇಗ ಮಂಜೂರ ಮಾಡುವ ವಿಶ್ವಾಸವಿದೆ ಎಂದು ಅವರು ಹೇಳಿದರು.

Related Posts

Leave a Reply

Your email address will not be published.