Home 2022 August (Page 24)

ಬೆಳಪು : ಸಾವಿನಲ್ಲೂ ಒಂದಾದ ದಂಪತಿ

ಮದುವೆಯಾಗಿ ಐದು ದಶಕಗಳ ಕಾಲ ಜೊತೆಯಾಗಿ ಬಾಳಿ ಸಿಹಿ ಕಹಿ, ನೋವು ನಲಿವು ಸವಾಲುಗಳನ್ನು ಎದುರಿಸಿದ ದಂಪತಿ ಸಾವಿನಲ್ಲೂ ಒಂದಾದ ಅಪರೂಪದ ಘಟನೆ ಕಾಪುವಿನ ಬೆಳಪುವಿನಲ್ಲಿ ನಡೆದಿದೆ. ಬೆಳಪು ಗ್ರಾಮದ ಧೂಮಪ್ಪ ಶೆಟ್ಟಿ ಮನೆ ಕೃಷ್ಣ ಯಾನೆ ಕುಟ್ಟಿ ಶೆಟ್ಟಿ (80) ಮತ್ತು ಅವರ ಪತ್ನಿ ಮುಂಡ್ಕೂರು ಅಂಗಡಿಗುತ್ತು ರೇವತಿ ಕೆ. ಶೆಟ್ಟಿ (75) ಸಾವಿನಲ್ಲೂ ಒಂದಾದ ದಂಪತಿ.ಕೃಷ್ಣ

ಕಾರ್ಕಳದ ಭಾರಿ ಮಳೆ : ತುಂಬಿ ಹರಿದ ಸುವರ್ಣ ನದಿ

ಕಾರ್ಕಳ: ಪಶ್ಚಿಮ ಘಟ್ಟ ಪ್ರದೇಶ ಕುದುರೆ ಮುಖ ಅಭಯಾರಣ್ಯ ವ್ಯಾಪ್ತಿಯ ನಾರಾವಿ ಭಾಗದಲ್ಲಿ ನಿನ್ನೆ ಸಂಜೆ ವೇಳೆಗೆ ಭಾರಿ ಸ್ಪೋಟದ ಸದ್ದು ಕೇಳಿ ಬಂದಿದ್ದು, ಸತತವಾಗಿ ಮಳೆ ಸುರಿದಿದೆ. ಇದರ ಜೊತೆ ಸುವರ್ಣ ನದಿಯಲ್ಲಿ ಭಾರಿ ಕೆಸರು ಮಿಶ್ರಿತ ನೀರು ಹರಿಯುತಿತ್ತು ಎನ್ನಲಾಗಿದೆ.ಸ್ಥಳೀಯರು ಹೇಳುವಂತೆ ಜಲಸ್ಪೋಟ ವಾಗಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಕುದುರೆಮುಖ

 ಕುಲಶೇಖರದ:   ಶ್ರೀ ವೀರನಾರಾಯಣ  ದೇವಸ್ಥಾನದಲ್ಲಿ ಜೀರ್ಣೋದ್ಧಾರ  ಪ್ರಯುಕ್ತಉತ್ತರಾರೋಹಣ ಪೂಜೆ

ಮಂಗಳೂರು: ಕುಲಶೇಖರದ ಪರಿಸರದಲ್ಲಿ ಇತಿಹಾಸ ಪ್ರಸಿದ್ಧ ಶ್ರೀ ವೀರನಾರಾಯಣ ದೇವಸ್ಥಾನದ ಸುಮಾರು 8 ಕೋಟಿ ರೂ. ವೆಚ್ಚದಲ್ಲಿ ಸಮಗ್ರ ಜೀರ್ಣೋದ್ಧಾರದ ಕಾರ್ಯದ ಪ್ರಯುಕ್ತ ಇಂದು ಉತ್ತರಾರೋಹಣ ಕಾರ್ಯಕ್ರಮವು ಧಾರ್ಮಿಕ ವಿಧಿವಿಧಾನಗಳೊಂದಿಗೆ ದೇವಸ್ಥಾನದ ತಂತ್ರಿಗಳಾದ ವಾಮಂಜೂರು ಅನಂತ ಉಪಧ್ಯಾಯ ಅವರ ಮಾರ್ಗದರ್ಶನದಲ್ಲಿ  ಪ್ರಧಾನ ಅರ್ಚಕ ಜನಾರ್ಧನ್ ಭಟ್ ಅವರ

ತಲವಾರು ದಾಳಿ ವದಂತಿ ಪ್ರಕರಣ ಹಿಂದಿರುವ ಷಡ್ಯಂತ್ರ ಬಯಲಿಗೆಳೆಯುವಂತೆ ಎಸ್ಡಿಪಿಐ ಒತ್ತಾಯ

ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕೋಟೆಕಾರು ಗ್ರಾಮದ ಮುಳ್ಳುಗುಡ್ಡೆ ಎಂಬಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತ ಕಿಶೋರ್ ಯಾನೆ ಕಿಚ್ಚು ಎಂಬಾತ ಇಂದು ತನ್ನ ಮೇಲೆ ಮೂರು ಜನ ವ್ಯಕ್ತಿಗಳು ತಲವಾರು ದಾಳಿ ನಡೆಸಲು ಯತ್ನಿಸಿದ್ದಾರೆ ಎಂದು ವದಂತಿ ಹಬ್ಬಿಸಿ ಈ ಪ್ರದೇಶದಲ್ಲಿ ಉದ್ವಿಗ್ನತೆ ಮತ್ತು ಆತಂಕ ಸೃಷ್ಟಿಸಲು ಕಾರಣನಾಗಿದ್ದು ಈತ ವದಂತಿ ಹರಡಿರುವುದರ ಹಿಂದೆ ನಿಗೂಢ

ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ ಮಕ್ಕಳ ಅಸ್ಥಿ ಮಜ್ಜೆಯ ಕಸಿ ಸೇವೆಗಳು- ನೊಂದ ರೋಗಿಗಳಿಗೆ ಭರವಸೆಯ ಆಶಾಕಿರಣ

ಮಣಿಪಾಲ: ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮಣಿಪಾಲದ ಸಮಗ್ರ ಕ್ಯಾನ್ಸರ್ ಆರೈಕೆ ಕೇಂದ್ರದ ಭಾಗವಾಗಿರುವ ಮಕ್ಕಳ ರಕ್ತಶಾಸ್ತ್ರ ಮತ್ತು ಆಂಕೊಲಾಜಿ ವಿಭಾಗವು ಮಕ್ಕಳ ಅಸ್ಥಿಮಜ್ಜೆ ಕಸಿ ಸೌಲಭ್ಯದ ಯಶಸ್ಸನ್ನು ಆಚರಿಸುವ ಕಾರ್ಯಕ್ರಮ ಮತ್ತು ಪತ್ರೀಕಾಘೋಷ್ಠಿಯನ್ನು ಇಂದು ಆಯೋಜಿಸಿತ್ತು. ಈ ಸಂದರ್ಭದಲ್ಲಿ ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ

ಕಾರ್ಕಳದ ಮಿಯಾರು ಗ್ರಾಮದಲ್ಲಿ ಕೈಗಾರಿಕೆ ಸ್ಥಾಪನೆಗೆ ವಿರೋಧ

ಕಾರ್ಕಳದ ಮಿಯಾರು ಗ್ರಾಮದಲ್ಲಿ ಜಾನ್ ಸಿಎನ್ ಎಸ್‍ಎಲ್ ಆಯಿಲ್ ಮತ್ತು ಶೆಲ್ ಘಟಕ ಪ್ರಾರಂಭಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ.ಈ ಬಗ್ಗೆ ಕಾರ್ಕಳದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಪ್ರಧಾನ ಕಾರ್ಯದರ್ಶಿ ಶೇಕ್ ಶಬ್ಬೀರ್ ಅವರು, ಕೈಗಾರಿಕಾ ಪ್ರದೇಶ ಸ್ಥಾಪಿಸಲು ಯೋಗ್ಯವಲ್ಲದ ಸ್ಥಳ ಇದಾಗಿದೆ. ಕೈಗಾರಿಕೆ ಪ್ರಾಂಗಾಣಕ್ಕೆ ಹೊಂದಿಕೊಂಡು ಸುಮಾರು

ಉಡುಪಿ ಶ್ರೀ ಲಕ್ಷ್ಮೀ ವೆಂಕಟೇಶ ದೇವಳದಲ್ಲಿ ಭಜನಾ ಸಪ್ತಾಹ

ಉಡುಪಿಯ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಆಗಸ್ಟ್ 2 ರಿಂದ ಆಗಸ್ಟ್ 9 ರವರೆಗೆ, 122 ನೇ ಭಜನಾ ಸಪ್ತಾಹ ಮಹೋತ್ಸವವು, ನಾಗರ ಪಂಚಮಿಯಂದು ಶುಭಾರಂಭಗೊಂಡು, ದ್ವಾದಶಿ ಪರ್ಯಂತ ಅತ್ಯಂತ ವಿಜೃಂಭಣೆಯಿಂದ ಜರುಗಲಿದೆ. ಊರ ಪರವೂರ ಭಜನಾ ಮಂಡಳಿಗಳಿಂದ ಅಹೋರಾತ್ರಿ 7 ದಿನಗಳ ಕಾಲ, ನಿರಂತರ ಭಜನೆ ಈ ಮಹೋತ್ಸವದಲ್ಲಿ ನಡೆಯಲಿದೆ. ಈ ಪ್ರಯುಕ್ತ ನಡೆದ ದೀಪ ಸ್ಥಾಪನಾ

ಉಳ್ಳಾಲದಲ್ಲಿ ಯಾವುದೇ ಹಲ್ಲೆ ಘಟನೆ ಆಗಿಲ್ಲ, ವದಂತಿ ನಂಬಬೇಡಿ : ಕಮೀಷನರ್ ಶಶಿಕುಮಾರ್.ಎನ್.

ಉಳ್ಳಾಲದಲ್ಲಿ ಯುವಕ ಮೇಲೆ ಹಲ್ಲೆಗೆ ಯತ್ನ ಆಗಿದೆ ಎಂಬ ಸುದ್ದಿಯಲ್ಲಿ ಸತ್ಯಾಂಶವಿಲ್ಲ. ಅಂತಹ ಯಾವುದೇ ಘಟನೆ ನಡೆದಿಲ್ಲ ಎಂದು ಪೊಲೀಸ್ ಕಮೀಷನರ್ ಶಶಿಕುಮಾರ್.ಎನ್. ಸ್ಪಷ್ಟನೆ ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆ ಹಾಗೂ ಸುರತ್ಕಲ್‍ನಲ್ಲಿ ನಡೆದಿರುವ ಹತ್ಯೆ ಹಿನ್ನೆಲೆಯಲ್ಲಿ ಜಿಲ್ಲೆ ಇದೀಗ ಸೂಕ್ಷ್ಮ ಪ್ರದೇಶವಾಗಿ ಮಾರ್ಪಡಿಟ್ಟಿದೆ. ನಗರ ಹಾಗೂ

ಕೊಕ್ಕಡ : ಗ್ರಾಮ ಲೆಕ್ಕಾಧಿಕಾರಿಯ ಕಾನೂನು ಬಾಹಿರ ಚಟುವಟಿಕೆಗೆ ಖಂಡನೆ

ಕರ್ನಾಟಕ ರಾಜ್ಯ ಸಂಘ ದಕ್ಷಿಣಕನ್ನಡ ಜಿಲ್ಲಾ ಯುವ ರೈತ ಘಟಕದ ವತಿಯಿಂದ ಕೊಕ್ಕಡ ಹೋಬಳಿ, ಕಣಿಯೂರು ಗ್ರಾಮದ ಗ್ರಾಮ ಲೆಕ್ಕಾಧಿಕಾರಿಯ ಕಾನೂನು ಬಾಹಿರ ಚಟುವಟಿಕೆಯನ್ನು ಖಂಡಿಸಿ ನ್ಯಾಯಬದ್ಧವಾಗಿ ಕಾರ್ಯ ನಿರ್ವಹಿಸಲು ಬುದ್ಧಿವಾದ ಹೇಳಲಾಯಿತು. ಕಣಿಯೂರು ಗ್ರಾಮ, ಕೊಕ್ಕಡ ಹೋಬಳಿಯಲ್ಲಿ ರೈತ ಸಂಘದ ಯುವ ರೈತ ಘಟಕ ಮತ್ತು ಗ್ರಾಮಸ್ಥರು ಸಹ ರೈತರಿಗೆ ಆಗಿರುವ ಅನ್ಯಾಯದ