ಕುಲಶೇಖರದ: ಶ್ರೀ ವೀರನಾರಾಯಣ ದೇವಸ್ಥಾನದಲ್ಲಿ ಜೀರ್ಣೋದ್ಧಾರ ಪ್ರಯುಕ್ತಉತ್ತರಾರೋಹಣ ಪೂಜೆ

ಮಂಗಳೂರು: ಕುಲಶೇಖರದ ಪರಿಸರದಲ್ಲಿ ಇತಿಹಾಸ ಪ್ರಸಿದ್ಧ ಶ್ರೀ ವೀರನಾರಾಯಣ ದೇವಸ್ಥಾನದ ಸುಮಾರು 8 ಕೋಟಿ ರೂ. ವೆಚ್ಚದಲ್ಲಿ ಸಮಗ್ರ ಜೀರ್ಣೋದ್ಧಾರದ ಕಾರ್ಯದ ಪ್ರಯುಕ್ತ ಇಂದು ಉತ್ತರಾರೋಹಣ ಕಾರ್ಯಕ್ರಮವು ಧಾರ್ಮಿಕ ವಿಧಿವಿಧಾನಗಳೊಂದಿಗೆ ದೇವಸ್ಥಾನದ ತಂತ್ರಿಗಳಾದ ವಾಮಂಜೂರು ಅನಂತ ಉಪಧ್ಯಾಯ ಅವರ ಮಾರ್ಗದರ್ಶನದಲ್ಲಿ ಪ್ರಧಾನ ಅರ್ಚಕ ಜನಾರ್ಧನ್ ಭಟ್ ಅವರ ಪೌರೋಹಿತ್ಯದಲ್ಲಿ ದಾರು ಶಿಲ್ಪಿ ಸುಂದರ್ ಆಚಾರ್ಯ ಕೋಟೆಕಾರು ಅವರು ಗರ್ಭಗುಡಿಯ ಮೇಲ್ಚಾವಡಿಯ ಮಾಡಿನ ಕೆಲಸ ಪ್ರಾರಂಭಗೊಂಡಿತು.
ಈ ಸಂದರ್ಭದಲ್ಲಿ ಶಿಲಾಶಿಲ್ಪಿ ಹರೀಶ್ ರಾಯಿ, ದೇವಸ್ಥಾನದ ಆಡಳಿತ ಮೊಕ್ತೇಸರರಾದ ಪುರಷೋತ್ತಮ ಕುಲಾಲ್ ಕಲ್ಬಾವಿ, ದ.ಕ. ಜಿಲ್ಲಾ ಮೂಲ್ಯರ ಯಾನೆ ಮಾತೃಸಂಘದ ಅಧ್ಯಕ್ಷ ಮಯೂರ್ ಉಳ್ಳಾಲ್, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಎ ದಾಮೋದರ್, ಸೇವಾ ಸಮಿತಿಯ ಅಧ್ಯಕ್ಷ ಸುಂದರ್ ಕುಲಾಲ್ ಶಕ್ತಿನಗರ, ಟ್ರಸ್ಟಿನ ಅಧ್ಯಕ್ಷ ಪ್ರೇಮಾನಂದ ಕುಲಾಲ್, ಪ್ರಧಾನ ಸಂಚಾಲಕ ಸುರೇಶ್ ಕುಲಾಲ್ ಮಂಗಳಾದೇವಿ, ಮಹಿಳಾ ವಿಭಾಗದ ಅಧ್ಯಕ್ಷೆ ಗೀತಾ ಮನೋಜ್, ಗಿರಿಧರ್ ಜೆ. ಮೂಲ್ಯ, ಎಂ.ಪಿ. ಬಂಗೇರ, ಮೋಹನ್‌ದಾಸ್ ಅಳಪೆ, ಪುರುಷೋತ್ತಮ ಎಸ್, ಧೂಮಪ್ಪ ಮೂಲ್ಯ, ಶ್ರೀನಿವಾಸ ಪಡೀಲ್, ಚಂದ್ರಹಾಸ್ ಬಜಾಲ್,
ನ್ಯಾಯವಾದಿ ರವೀಂದ್ರ ಮುನ್ನಿಪಾಡಿ, ಭಾಸ್ಕರ್ ಯು ಮೂಲ್ಯ ಬೆಂಗಳೂರು, ಜಯಂತ್ ಕುಮಾರ್ ಬೆಂಗಳೂರು, ರಾಜೇಶ್ ಶಕ್ತಿನಗರ, ಸದಾಶಿವ ಬಿಜೈ, ಭವಾನಿಶಂಕರ್, ರಮೇಶ್ ಮೂಲ್ಯ ಮುಂಬೈ, ಮೋಹನ್ ನೀರುಮಾರ್ಗ, ವಿಶ್ವನಾಥ್ ಮೂಡುಶೆಡ್ಡೆ, ಮುಂಬೈ ಸಮಿತಿಯ ಅಧ್ಯಕ್ಷರಾದ ದಿನೇಶ್ ಕುಲಾಲ್, ಮುಂಬೈ ಕುಲಾಲ ಸಂಘದ ಮಾಜಿ ಅಧ್ಯಕ್ಷ ಗಿರೀಶ್ ಸಾಲ್ಯಾನ್, ಉಪಾಧ್ಯಕ್ಷ ರಘು ಮೂಲ್ಯ ಮಹಿಳಾ ಅಧ್ಯಕ್ಷೆ ಮಮತಾ ಎಸ್. ಗುಜರನ್, ಗೋಪಾಲ್ ಬಂಗೇರ ಮುಂಬೈ. ಕೋಡಿಕಲ್ ವಿಶ್ವಭಾರತಿ ಫ್ರೆಂಡ್ಸ್ ಸರ್ಕಲ್‌ನ ರಾಜೇಶ್ ಸಾಲ್ಯಾನ್ ಹಾಗೂ ಅವಿಭಜಿತ ಜಿಲ್ಲೆಯ ಜೀರ್ಣೋದ್ಧಾರದ ವಿವಿಧ ವಲಯಗಳ ಸಮಿತಿಯ ಪದಾಧಿಕಾರಿಗಳು, ಭಕ್ತರು ಪಾಲ್ಗೊಂಡಿದ್ದರು.