Home 2023 October (Page 4)

ಬೈಕ್ ಕಳವು : ಅಂತರ್ ಜಿಲ್ಲೆ ಚೋರರನ್ನು ಬಂಧಿಸಿದ ಮೂಡುಬಿದಿರೆ ಪೊಲೀಸರು

ಮೂಡುಬಿದಿರೆ : ಉತ್ತರ ಕನ್ನಡ ಜಿಲ್ಲೆ ಮತ್ತು ದ.ಕ.ದ ಮೂಡುಬಿದಿರೆಯಿಂದ ಬೈಕ್ ಕಳವು ಮಾಡಿರುವ ಅಂತರ್ ಜಿಲ್ಲಾ ಚೋರರನ್ನು ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ.ನೇತೃತ್ವದ ಪೊಲೀಸರ ತಂಡವು ಶುಕ್ರವಾರ ಬಂಧಿಸಿದ್ದಾರೆ. ತುಮಕೂರು ಜಿಲ್ಲೆಯ ಅಂಜನೇಯ ದೇವಸ್ಥಾನದ ಬಳಿ ಕೊಡವತಿ ಗ್ರಾಮದ ಆಕಾಶ್ ಕಲ್ಕಿ ಹಾಗೂ ಅಂಜನೇಯ ದೇವಸ್ಥಾನದ ಹತ್ತಿರ,

ಮಂಗಳೂರು: ನಿಗಮ ಮಂಡಳಿಗಳಿಗೆ ಶೀಘ್ರ ಅಧ್ಯಕ್ಷರ ನೇಮಕ: ಸಿಎಂ ಸಿದ್ದರಾಮಯ್ಯ

ಹಲವು ಸಮಯದಿಂದ ಬಾಕಿ ಇರುವ ನಿಗಮ ಮಂಡಳಿಗಳಿಗೆ ಶೀಘ್ರ ಅಧ್ಯಕ್ಷರ ನೇಮಕ ಮಾಡಲಾಗುವುದು. ಮೊದಲ ಹಂತದಲ್ಲಿ ಶಾಸಕರಿಗೆ ಆದ್ಯತೆ ನೀಡಿ, ಎರಡನೇ ಹಂತದಲ್ಲಿ ಕಾರ್ಯಕರ್ತರಿಗೆ ಅವಕಾಶ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಅವರು ಮಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು. ಗೃಹ ಸಚಿವ ಜಿ.

ಮಂಗಳೂರು: ಮಂಗಳೂರು ಪಾಲಿಕೆಯಲ್ಲಿ ಮೇಯರ್ ಫೋನ್-ಇನ್ ಕಾರ್ಯಕ್ರಮ: ಹಲವಾರು ಸಮಸ್ಯೆಗಳನ್ನು ಮೇಯರ್ ಗಮನಕ್ಕೆ ತಂದ ಸಾರ್ವಜನಿಕರು

ಮಂಗಳೂರು ಪಾಲಿಕೆ ವ್ಯಾಪ್ತಿಯ 66 ತಳ್ಳುಗಾಡಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ನೀಡಲು ನಿರ್ಧರಿಸಿದ್ದು, ನ. 1ರಂದು ವಿತರಿಸಲಾಗುವುದು ಎಂದು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಹೇಳಿದರು. ಮಂಗಳೂರು ಪಾಲಿಕೆಯಲ್ಲಿ ನಡೆದ ಸಾರ್ವಜನಿಕ ಫೆÇೀನ್-ಇನ್ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದ ಮೇಯರ್ ಅವರು, ಒಟ್ಟಾರೆ ಸುಮಾರು 900 ಅರ್ಜಿಗಳು ಬಂದಿದ್ದು, ಮೊದಲ ಹಂತದಲ್ಲಿ

ಉಡುಪಿ: ಉದ್ಯಾವರ ಸಾರ್ವಜನಿಕ ಶಾರದಾ ಸಮಿತಿಯಿಂದ ವೈಭವದ ಶೋಭಾಯಾತ್ರೆ

ಉಡುಪಿಯ ಉದ್ಯಾವರ ಸಾರ್ವಜನಿಕ ಶಾರದಾ ಸಮಿತಿಯ ಶಾರಾದ ವಿಸರ್ಜನಾ ವೈಭವದ ಮೆರವಣಿಗೆಯು ನಡೆಯಿತು.ವಿಸರ್ಜನಾ ಮೆರವಣಿಗೆಯಲ್ಲಿ ಹತ್ತಾರು ಟ್ಯಾಬ್ಲೋಗಳು, ಚಂಡೆ ವಾದ್ಯ ಮೇಳಗಳು ಭಾಗವಹಿಸಿದ್ದವು. ಉದ್ಯಾವರ, ಮೇಲ್ಪೇಟೆ ಮಾರ್ಗವಾಗಿ ಪಿತ್ರೋಡಿ ವರೆಗೆ ವೈಭವ ಮೆರವಣಿಗೆಯಲ್ಲಿ ಸಾಗಿ ಬಂದ ಶಾರದೆಯನ್ನು ಕಂಡು ಜನ ಭಕ್ತಿ ಪರವಶರಾದರು.ಇನ್ನೂ ವಿಶೇಷವಾಗಿ ಮೆರವಣಿಗೆಯಲ್ಲಿ ಚಂಡೆ

ಪುತ್ತೂರು: ನಗರಸಭೆ ವ್ಯಾಪ್ತಿಯ ರಾಜಕಾಲುವೆ, ಚರಂಡಿ ಹೂಳೆತ್ತುವ ಕಾಮಗಾರಿಯಲ್ಲಿ ಅವ್ಯವಹಾರ: ಲೋಕಾಯುಕ್ತದಿಂದ ತನಿಖೆಗೆ ಆದೇಶ

ಪುತ್ತೂರು ನಗರಸಭೆ ವ್ಯಾಪ್ತಿಯಲ್ಲಿ ರಾಜಕಾಲುವೆ, ಚರಂಡಿ ಹೂಳೆತ್ತುವ ಕಾಮಗಾರಿಯಲ್ಲಿ ಭಾರೀ ಅವ್ಯವಹಾರ.ತನಿಖೆ ನಡೆಸುವಂತೆ ಲೋಕಾಯುಕ್ತರಿಂದ ಆದೇಶ. ಪುತ್ತೂರು: ನಗರಸಭೆ ವ್ಯಾಪ್ತಿಯಲ್ಲಿ ರಾಜಕಾಲುವೆ ಹಾಗೂ ಚರಂಡಿಗಳ ಹೂಳೆತ್ತುವ ಕಾಮಗಾರಿಯಲ್ಲಿ ಭಾರೀ ಅವ್ಯವಹಾರ ನಡೆದಿದ್ದು, ಈ ಕುರಿತು ನಗರಸಭೆ ಹಿಂದಿನ ಪೌರಾಯುಕ್ತೆ ರೂಪಾ ಶೆಟ್ಟಿ, ಇಂಜಿನಿಯರ್ ದಿವಾಕರ್ ಹಾಗೂ

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಭಕ್ತರಿಗೆ ದೇವಿಯ ದರ್ಶನ ಸಮಯ ಬದಲಾವಣೆ ಇಲ್ಲ

ಕಟೀಲು ದೇವಸ್ಥಾನ : ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಭಕ್ತರಿಗೆ ದೇವಿಯ ದರ್ಶನ ಸಮಯ ಬದಲಾವಣೆ ಇಲ್ಲ. ರಾತ್ರಿಯ ಮಹಾಪೂಜೆ ಸಾಯಂಕಾಲ ಆರೂವರೆ ಒಳಗೆ ಮುಗಿಯುತ್ತದೆ. ಗ್ರಹಣದ ಸಮಯ ವಿಶೇಷ ಅಭಿಷೇಕ, ಮಧ್ಯಕಾಲದಲ್ಲಿ ವಿಶೇಷ ಅಭಿಷೇಕ ಇರುತ್ತದೆ. ಗ್ರಹಣ ಸಮಯಕ್ಕೆ ದೇವಿಯ ದರ್ಶನಕ್ಕೆ ತುಪ್ಪ, ಎಣ್ಣೆ ಸಮರ್ಪಣೆಗೆ ಅವಕಾಶ ಇದೆ ಎಂದು ಕ್ಷೇತ್ರದ ಮೂಲಗಳು ತಿಳಿಸಿವೆ

ಕುಕ್ಕೆ: ಅ.28 ಗ್ರಹಣ ನಿಮಿತ್ತ ದರುಶನ ಸಮಯದಲ್ಲಿ ವ್ಯತ್ಯಯ

ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಅ.28ರಂದು ಶನಿವಾರ ಚಂದ್ರಗ್ರಹಣ ಇರುವುದರಿಂದ ಶ್ರೀ ದೇವಳದ ಪ್ರಧಾನ ಅರ್ಚಕರ ನಿರ್ದೇಶನದಂತೆ ಭಕ್ತಾಧಿಗಳಿಗೆ ಶ್ರೀ ದೇವರ ದರ್ಶನದ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ಅ.28ರಂದು ಶನಿವಾರ ರಾತ್ರಿ ಮಹಾಪೂಜೆ ಸಾಯಂಕಾಲ ಗಂಟೆ 6.30ಕ್ಕೆ ಮುಕ್ತಾಯಗೊಳ್ಳಲಿದೆ.ಆ ಬಳಿಕ ಶ್ರೀ ದೇವರ ದರುಶನಕ್ಕೆ ಅವಕಾಶ

Mangaluru : ಅ.27 ರಿಂದ ಅ.30 – ಬ್ರಾಂಡೆಡ್ ಗಾರ್ಮೆಂಟ್ಸ್ ಪ್ರದರ್ಶನ

ಬ್ರಾಂಡೆಡ್ ರೆಡಿಮೇಡ್ ವಸ್ತ್ರ ಪ್ರಿಯರಿಗೆ ಶುಭ ಸುದ್ದಿ. ನಗರದ ಟಿ.ಎಂ.ಎ ಪೈ ಕನ್ವೆನ್ಷನ್ ಸೆಂಟರ್‍ನಲ್ಲಿ 4 ದಿನಗಳ ಬ್ರಾಂಡೆಡ್ ಗಾರ್ಮೆಂಟ್ಸ್ ಪ್ರದರ್ಶನ ನಡೆಯುತ್ತಿದೆ. ಅ.27 ರಿಂದ ಅ.30ರವರೆಗೆ ಆಯೋಜಿಸಿದ್ದು, ವಿವಿಧ ಶೈಲಿಯ ಬ್ರಾಂಡೆಡ್ ವಸ್ತ್ರಗಳು ಅತೀ ಕಡಿಮೆ ದರದಲ್ಲಿ ಲಭ್ಯವಿದೆ. ನಗರದ ಟಿ.ಎಂ.ಎ ಪೈ ಕನ್ವೆನ್ಷನ್ ಸೆಂಟರ್‍ನಲ್ಲಿ

ಮಂಗಳೂರು: ಖಾಸಗಿ ಬಸ್ ಢಿಕ್ಕಿ: ಒಂದು ಜಾನುವಾರು ಸ್ಥಳದಲ್ಲೇ ಮೃತ್ಯು, ಉಳಿದ ಜಾನುವಾರುಗಳಿಗೆ ಗಾಯ

ಮಂಗಳೂರು: ಕುಂದಾಪುರದಿಂದ ಮೈಸೂರ್-ಮಂಡ್ಯ ತೆರಳುವ ದುರ್ಗಾಂಬಾ ಮೋಟಾರ್ಸ್ ಬಸ್ ಚಾಲಕನ ಧಾವಂತಕ್ಕೆ ಒಂದು ಹಸು ಸಾವನ್ನಪ್ಪಿ, ಇನ್ನೊಂದು ಗಂಭೀರ ಗಾಯಗೊಂಡಿರುವ ಘಟನೆ ಕೋಡಿಕಲ್ ಜಂಕ್ಷನ್ನಿನಲ್ಲಿ ತಡರಾತ್ರಿ ವೇಳೆ ಸಂಭವಿಸಿದೆ. ಅಪಘಾತ ನಡೆಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಸ್ಥಳೀಯರು ಹಾಗೂ ವಾಹನ ಸವಾರರು ಬಸ್ ತಡೆದು ಚಾಲಕನನ್ನು ತರಾಟೆಗೆತ್ತಿಕೊಂಡಿದ್ದಾರೆ.

ಬ್ರಹ್ಮಾವರ : ಬಾಲಕಿಯರ ಯಕ್ಷಗಾನ ತಂಡದಿಂದ 1334 ಪ್ರದರ್ಶನ ಕಂಡ ಶ್ರೀ ಕೃಷ್ಣ ಪಾರಿಜಾತ ಯಕ್ಷಗಾನ

ಬ್ರಹ್ಮಾವರ : ಬ್ರಹ್ಮಾವರ ಬಳಿಯ ಚೇರ್ಕಾಡಿಯಲ್ಲಿ ಬಡಗುತಿಟ್ಟಿನ ಯಕ್ಷಗಾನ ಸವ್ಯಸಾಚಿ ಗುರು ಮಂಜುನಾಥ್ ಪ್ರಭು 32 ವರ್ಷದ ಹಿಂದೆ ಸ್ಥಾಪಿಸಿದ ಕಲಾಶ್ರೀ ಬಾಲಕಿಯರ ಯಕ್ಷಗಾನ ಮೇಳದವರಿಂದ ಶ್ರೀ ಕೃಷ್ಣ ಪಾರಿಜಾತ ಪ್ರಸಂಗ ನೀಲಾವರ ಶ್ರೀ ಮಹಿಷಮರ್ಧಿನೀ ದೇವಸ್ಥಾನದಲ್ಲಿ ಜರುಗಿತು. ಎಂಜಿನಿಯರಿಂಗ್ ಸೇರಿದಂತೆ ನಾನಾ ಉನ್ನತ ಶಿಕ್ಷಣ ಪಡೆಯುವ 7 ಯುವತಿಯರಿಂದ ಪ್ರದರ್ಶನ ಕಂಡ