Home 2023 December (Page 4)

ಮೂಗಜ್ಜನ ಕೋಳಿ ಅರೆ ಭಾಷಾ ಚಿತ್ರ : ನವೀನ್ ಡಿ. ಪಡೀಲ್‍ಗೆ ಉತ್ತಮ ನಟ ಪ್ರಶಸ್ತಿ

ಹುಬ್ಬಳ್ಳಿಯಲ್ಲಿ ನಡೆದ ಕರ್ನಾಟಕ ಅಂತರರಾಷ್ಟ್ರ ಚಲನಚಿತ್ರ ಅಕಾಡೆಮಿ ಯೋಜಿತ ಅಂತರರಾಷ್ಟ್ರ ಚಲನಚಿತ್ರೋತ್ಸವದಲ್ಲಿ ಮೂಗಜ್ಜನ ಕೋಳಿ ಚಿತ್ರದ ನಟನೆಗಾಗಿ ಕುಸಲ್ದರಸೆ ನವೀನ್ ಡಿ. ಪಡೀಲ್ ಅವರು ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.ಜೀಟಿಗೆ ಚಿತ್ರದ ಬಳಿಕ ಸಂತೋಷ್ ಮಾಡ ನಿರ್ದೇಶಿಸಿದ ಅರೆ ಭಾಷೆಯ ಚಿತ್ರ ಮೂಗಜ್ಜನ ಕೋಳಿ. ಇದರಲ್ಲಿ ನವೀನ್ ಪಡೀಲ್ ಅವರು

ವಿಧಾನ ಪರಿಷತ್ತಿನಲ್ಲಿ ಪ್ರತಿ ಪಕ್ಷದ ನಾಯಕರಾಗಿ ಮಾಜೀ ಮಂತ್ರಿ ಕೋಟ ಶ್ರೀನಿವಾಸ ಪೂಜಾರಿ ನೇಮಕ

ವಿಧಾನ ಪರಿಷತ್ತಿನಲ್ಲಿ ಪ್ರತಿ ಪಕ್ಷದ ನಾಯಕರಾಗಿ ಮಾಜೀ ಮಂತ್ರಿ ಕೋಟ ಶ್ರೀನಿವಾಸ ಪೂಜಾರಿ ನೇಮಕಗೊಂಡಿದ್ದಾರೆ. ಏಳು ತಿಂಗಳ ಬಳಿಕ ಬಿಜೆಪಿ ಈ ತೀರ್ಮಾನ ತೆಗೆದುಕೊಂಡಿದೆ. ವಿಧಾನ ಪರಿಷತ್ತಿನಲ್ಲಿ ಉಪ ನಾಯಕರಾಗಿ ಸುನಿಲ್ ವಲ್ಯಾಪುರೆ ಅವರನ್ನು ನೇಮಿಸಲಾಗಿದೆ. ಅದೇ ವೇಳೆ ಎನ್. ರವಿಕುಮಾರ್ ಅವರನ್ನು ವಿಧಾನ ಪರಿಷತ್ತಿನಲ್ಲಿ ಮುಖ್ಯ ಸಚೇತಕರಾಗಿ ಬಿಜೆಪಿ ನೇಮಕ ಮಾಡಿದೆ.

ಬೈಕಂಪಾಡಿ : ವಲಸೆ ಕೂಲಿ ಕಾರ್ಮಿಕನ ನಿಗೂಢ ಸಾವು

ಬಹು ಕಾಲದಿಂದ ಮಂಗಳೂರು ಬೈಕಂಪಾಡಿಯಲ್ಲಿರುವ ಎಪಿಎಂಸಿ ಯಾರ್ಡ್‍ನಲ್ಲಿ ಕೂಲಿಕಾರ್ಮಿಕನಾಗಿದ್ದ ಒಡಿಶಾ ಮೂಲದ ವ್ಯಕ್ತಿಯ ಮೃತ ದೇಹವು ಅನುಮಾನಾಸ್ಪದ ಸ್ಥಿತಿಯಲ್ಲಿ ಪತ್ತೆಯಾಗಿದೆ.ಮೃತ ವ್ಯಕ್ತಿಯು ಒಡಿಶಾ ರಾಜ್ಯದ ಜಾವಪುರ ಜಿಲ್ಲೆಯ 44ರ ವಲಸೆ ಕಾರ್ಮಿಕ ರಶಿಂರಂಜನ್ ಎಂದು ತಿಳಿದುಬಂದಿದೆ. ಕಾಲಿನ ಮಂಡಿ ಬಳಿ ಗಾಯದ ಗುರುತುಗಳಿದ್ದು ಲಘು ವಾಹನ ಗುದ್ದಿ ಸಾವು

ನೆಲ್ಯಾಡಿ: ಚಾಲಕನ ನಿಯಂತ್ರಣ ತಪ್ಪಿ ಕಾರು ಚರಂಡಿಗೆ ಡಿಕ್ಕಿ: ತೀವ್ರ ಗಾಯಗೊಂಡ ಮಹಿಳೆ

ನೆಲ್ಯಾಡಿ: ಪೆರಿಯಶಾಂತಿಯ ಬಳಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯರೂ ತೀವ್ರವಾದ ಗಾಯಗೊಂಡ ಘಟನೆ ಸಂಭವಿಸಿದೆ. ಕಡಬ ಸಮೀಪದ ಕುಟ್ರುಪಾಡಿ ನಿವಾಸಿಯಾದ ರಾಜು, ಅ್ಯನಿ, ಸಿನ್ಸಿ, ಮೇರಿ ಎಂಬುವರು ಕೆನಡಕ್ಕೆ ತೆರಳುವ ಮಗನನ್ನು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಿಟ್ಟು ಬರುವ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ.

ಬಂಟ್ವಾಳ: ಫಲ್ಗುಣಿ ನದಿಗೆ ಹಾರಿ ಮಹಿಳೆ ಆತ್ಮಹತ್ಯೆ

ಬಂಟ್ವಾಳ: ಮಹಿಳೆಯೊಬ್ಬರು ಸಂಗಬೆಟ್ಟು ಸಮೀಪದ ಪುಚ್ಚಮೊಗರು ಎಂಬಲ್ಲಿ ಫಲ್ಗುಣಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಹಣ ದ್ವಿಗುಣಗೊಳಿಸುವ ಆಪ್ ನಲ್ಲಿ ರೂ. 21 ಲಕ್ಷ ಹೂಡಿಕೆ ಮಾಡಿ, ಹಣ ಕಳೆದುಕೊಂಡಿದ್ದರು. ಈ ಬಗ್ಗೆ ಪೊಲೀಸ್ ಠಾಣೆಗೂ ದೂರು ನೀಡಿದ್ದರು. ಕುಕ್ಕಿಪಾಡಿ ಗ್ರಾಮದ ಏರೋಡಿಯ ಜಾನ್ ಸಂತೋಷ್ ಡಿಸೋಜ ಅವರ ಪತ್ನಿ ವೀಟಾ ಮರಿನಾ ಡಿಸೋಜ (32)

ಕಡಬ : ಓಮ್ನಿ-ಕ್ರೆಟಾ ಕಾರು ಡಿಕ್ಕಿ; ಓಮ್ನಿ ಚಾಲಕ ಮೃತ್ಯು, 8 ಮಂದಿ ಗಂಭೀರ ಗಾಯ

ಓಮ್ನಿ ಹಾಗೂ ಕ್ರೆಟಾ ಕಾರು ಢಿಕ್ಕಿಯಾದ ಪರಿಣಾಮ ಓರ್ವ ಮೃತಪಟ್ಟು, ಓಮ್ನಿಯಲ್ಲಿದ್ದ 8 ಮಂದಿ ಗಂಭೀರ ಗಾಯಗೊಂಡ ಘಟನೆ ಧರ್ಮಸ್ಥಳ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಮರ್ಧಾಳ ಸಮೀಪದ ಡಿ.23ರ ಶನಿವಾರ ಮಧ್ಯಾಹ್ನ ನಡೆದಿದೆ. ಓಮ್ನಿ ಚಲಾಯಿಸುತ್ತಿದ್ದ ಸೋಮವಾರ ಪೇಟೆಯ ಚೌಡ್ಲು ಗ್ರಾಮದ ಕೆಂಚುಮನೆ ನಿವಾಸಿ ರವಿ (53) ಆಸ್ಪತ್ರೆಗೆ ಸಾಗಿಸುವ ಹಾದಿಯಲ್ಲಿ

ಮಂಜೇಶ್ವರ: ಸ್ನೇಹಾಲಯದಲ್ಲಿ ನಿವಾಸಿಗಳು ಮತ್ತು ಸಿಬ್ಬಂದಿಗಳಿಂದ ಹಬ್ಬದ ಸಂಭ್ರಮ

ಮಾನಸಿಕ ಆರೋಗ್ಯ ಸಮಸ್ಯೆಗಳಿರುವ ವ್ಯಕ್ತಿಗಳನ್ನು ನೋಡಿಕೊಳ್ಳುವ ಪ್ರಮುಖ ಸಂಸ್ಥೆಯಾದ ಸ್ನೇಹಾಲಯ ಮಾನಸಿಕ-ಸಾಮಾಜಿಕ ಪುನರ್ವಸತಿ ಕೇಂದ್ರವು ಡಿಸೆಂಬರ್ 21 ರಂದು ತನ್ನ ನಿವಾಸಿಗಳಿಗೆ ಕ್ರಿಸ್‌ಮಸ್ ಆಚರಣೆಯನ್ನು ಏರ್ಪಡಿಸಿತ್ತು. ನಿವಾಸಿಗಳು ಮತ್ತು ಸಿಬ್ಬಂದಿ ವರ್ಣರಂಜಿತ ಹಬ್ಬದ ಚಟುವಟಿಕೆಗಳಲ್ಲಿ ಭಾಗವಹಿಸಿದ್ದರು. ಸಿಬ್ಬಂದಿ ಮತ್ತು ನಿವಾಸಿಗಳು ಪ್ರದರ್ಶಿಸಿದ

ಪುತ್ತೂರು: ಸರ್ಕಾರಿ ಆಸ್ಪತ್ರೆಯಲ್ಲಿ ಶಾರ್ಟ್‌ಸಕ್ಯೂಟ್ ಅವಘಡ

ಪುತ್ತೂರು ಸರಕಾರಿ ಸಾರ್ವಜನಿಕ ಆಸ್ಪತ್ರೆಯ ಐಸಿಯುವಿನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಕಾಣಿಸಿಕೊಂಡ ಘಟನೆ ಡಿ.22ರ ತಡ ರಾತ್ರಿ ನಡೆದಿದ್ದು ಅದೃಷ್ಟವಶಾತ್ ಹೆಚ್ಚಿನ ಅನಾಹುತವೊಂದು ತಪ್ಪಿದೆ. ಆಸ್ಪತ್ರೆಯ ಐಸಿಯು ವಿಭಾಗದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿ ದಟ್ಟ ಹೊಗೆ ಕಾಣಿಸಿಕೊಂಡ ತಕ್ಷಣವೇ ಆಸ್ಪತ್ರೆಯ ಸಿಬ್ಬಂದಿಗಳು ಮತ್ತು ಭದ್ರತಾ

ಮೂಲ್ಕಿ: ನಗರೋತ್ಥಾನ ಯೋಜನೆಯಡಿ ಕಚೇರಿ ಕಟ್ಟಡ ಶಂಕುಸ್ಥಾಪನೆ

ಮುಲ್ಕಿ ನಗರೋತ್ಧಾನ ಯೋಜನೆಯಡಿ ಸುಮಾರು 50 ಲಕ್ಷ ವೆಚ್ಚದ ವಿಶೇಷ ಅನುದಾನದಲ್ಲಿ ಮುಲ್ಕಿ ನಗರ ಪಂಚಾಯತ್ ನೂತನ  ಕಛೇರಿ ಕಟ್ಟಡದ ಶಂಕುಸ್ದಾಪನೆ ಕಾರ್ಯಕ್ರಮವನ್ನು ರಾಜ್ಯ ಆರೋಗ್ಯ. ಸಚಿವ ಹಾಗೂ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ನೆರವೇರಿಸಿದರು. ಈ ಸಂದರ್ಭ ಮಾತನಾಡಿ, ಸರಕಾರವು ರಾಜ್ಯದಲ್ಲಿ ಶಿಸ್ತು ಬದ್ದ ಹಾಗೂ ಪಾರದರ್ಶಕ ಆಡಳಿತದೊಂದಿಗೆ ಅಭಿವೃದ್ಧಿ

ಬಜ್ಪೆ: ಮಾದಕ ವಸ್ತು ಮಾರಾಟ, ಮೂವರ ಬಂಧನ

ಬೈಕ್‌ನಲ್ಲಿ ಮಾದಕವಸ್ತು ಸಾಗಾಟ ಮಾಡುತ್ತಿದ್ದ ಮೂವರನ್ನು ಬಜಪೆ ಪೊಲೀಸರು ಬಂಧಿಸಿದ್ದಾರೆ. ಸುರತ್ಕಲ್‌ನ ಹೊಸಬೆಟ್ಟು ಈಶ್ವರನಗರ ನಿವಾಸಿ ಅಣ್ಣಪ್ಪಸ್ವಾಮಿ ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ  ಬಡಜೇ  ನಿವಾಸಿ ಮೊಹಮ್ಮದ್ ಜುನೈದ್  ಹಾಗೂ ಹೊಸಬೆಟ್ಟು ವಿನ ಪಡ್ಡಾಯಿ ನಿವಾಸಿ ಎಂ.ಕೆ ಆಕಾಶ ಬಂಧಿತರು. ಬಜಪೆ ಪೊಲೀಸ್ ಠಾಣೆಯ ಪಿಎಸ್ ಐ ಗುರಪ್ಪ