ಮೂಗಜ್ಜನ ಕೋಳಿ ಅರೆ ಭಾಷಾ ಚಿತ್ರ : ನವೀನ್ ಡಿ. ಪಡೀಲ್‍ಗೆ ಉತ್ತಮ ನಟ ಪ್ರಶಸ್ತಿ
ಹುಬ್ಬಳ್ಳಿಯಲ್ಲಿ ನಡೆದ ಕರ್ನಾಟಕ ಅಂತರರಾಷ್ಟ್ರ ಚಲನಚಿತ್ರ ಅಕಾಡೆಮಿ ಯೋಜಿತ ಅಂತರರಾಷ್ಟ್ರ ಚಲನಚಿತ್ರೋತ್ಸವದಲ್ಲಿ ಮೂಗಜ್ಜನ ಕೋಳಿ ಚಿತ್ರದ ನಟನೆಗಾಗಿ ಕುಸಲ್ದರಸೆ ನವೀನ್ ಡಿ. ಪಡೀಲ್ ಅವರು ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ಜೀಟಿಗೆ ಚಿತ್ರದ ಬಳಿಕ ಸಂತೋಷ್ ಮಾಡ ನಿರ್ದೇಶಿಸಿದ ಅರೆ ಭಾಷೆಯ ಚಿತ್ರ ಮೂಗಜ್ಜನ ಕೋಳಿ. ಇದರಲ್ಲಿ ನವೀನ್ ಪಡೀಲ್ ಅವರು ಮೂಗಜ್ಜನ ಪಾತ್ರ ವಹಿಸಿದ್ದಾರೆ. ಕೋಳಿಗಳ ವಿಷಯದಲ್ಲಿ ಜೀವ ಇಟ್ಟಿರುವ ಮಾತೇ ಇಲ್ಲದ ಒರಟು ಮುದುಕನ ಪಾತ್ರದಲ್ಲಿ ನವೀನ್ ಪಡೀಲ್ ಅಭಿನಯಿಸಿದ್ದಾರೆ. ವಿನೀತ್ ವಟ್ಟಂಕುಳತ್‍ರ ಕತೆಯನ್ನು ನಮ್ಮ ಕನಸು ಪ್ರೊಡಕ್ಷನ್‍ನಡಿ ನಿರ್ಮಿಸಲಾಗಿದೆ.