ಉಳ್ಳಾಲ : ಪಿಕಪ್ ವಾಹನವೊಂದು ಹಠಾತ್ ಬ್ರೇಕ್ ಹಾಕಿದ ಪರಿಣಾಮ ಅದರ ಹಿಂಬದಿಗೆ ಗುದ್ದಿದ ಸ್ಬಿಫ್ಟ್ ಕಾರಿಗೆ ಅದರ ಹಿಂದುಗಡೆಯಿದ್ದ ಗೂಡ್ಸ್ ಲಾರಿ ಢಿಕ್ಕಿ ಹೊಡೆದು ಎರಡು ವಾಹನಗಳ ನಡುವೆ ಸಿಲುಕಿದ ಕಾರು ಅಪ್ಪಚ್ಚಿಯಾದ ಘಟನೆ ತೊಕ್ಕೊಟ್ಟು ಜಂಕ್ಷನ್ನಿನಲ್ಲಿ ಸಂಭವಿಸಿದೆ. ದೇರಳಕಟ್ಟೆ ಕಡೆಯಿಂದ ಕೆಲಸ ಮುಗಿಸಿ ಮಂಗಳೂರಿನತ್ತ ಮೂವರು ಯುವತಿಯರಿದ್ದ ಕಾರು ತೆರಳುವಾಗ ,
Year: 2024
ಸಸ್ಪೆನ್ಸ್, ಥ್ರಿಲ್ಲರ್, ಆಕ್ಷನ್ ಬೇಸ್ಡ್ ಸಿನಿಮಾ `ಕ್ಲಾಂತ ಕರಾವಳಿಯ ಸಿನಿಮಾ ಮಂದಿರದಲ್ಲಿ ಫೆ.2ರಂದು ಬಿಡುಗಡೆ ಕಾಣಲಿದೆ. ಚಿತ್ರದ ಬಹುತೇಕ ಭಾಗ ಕರಾವಳಿಯಲ್ಲಿಯೇ ಚಿತ್ರೀಸಲಾಗಿದೆ ಎಂದು ಚಿತ್ರದ ನಿರ್ದೇಶಕ ವೈಭವ್ ಪ್ರಶಾಂತ್ ಹೇಳಿದರು.ಮಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತುಳುನಾಡಿನ ಮಣ್ಣಿನ ಮಹಿಮೆ, ಆಚಾರ ವಿಚಾರ,
ಮಾರ್ಚ್ 10ರಂದು ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ರಜತ ಮಹೋತ್ಸವದ ಪೂರ್ವಭಾವಿ ಸಭೆಯು ಚಿಕ್ಕಮಂಗಳೂರು ನಾರಾಯಣ ಗುರು ಸಮಾಜ ಸೇವಾ ಸಂಘದಲ್ಲಿ ಅಧ್ಯಕ್ಷರಾದ ಗುಣಶೇಖರ್ ಪೂಜಾರಿಯವರ ನೇತೃತ್ವದಲ್ಲಿ ಜನವರಿ 22ರಂದು ನಡೆಯಿತು. ಈ ಸಂದರ್ಭದಲ್ಲಿ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷರಾದ ಡಾ। ರಾಜಶೇಖರ್ ಕೋಟ್ಯಾನ್,ಉಪಾಧ್ಯಕ್ಷರಾದ ಹರೀಶ್ ಸಾಲ್ಯಾನ್,ಮಹಾಮಂಡಲದ
ಮೂಡುಬಿದಿರೆ: ಇಂಟರ್‌ನ್ಯಾಷನಲ್ ಫ್ಲೋರ್ ಬಾಲ್ ಫೆಡರೇಶನ್ ಹಾಗೂ ಫ್ಲೋರ್ ಬಾಲ್ ಅಸೋಸಿಯೇಷನ್ ತಮಿಳುನಾಡು ಮತ್ತು ಫಿಟ್ ಇಂಡಿಯಾ ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಜ.25-28 ವರೆಗೆ ನಡೆದ 17ನೇ ರಾಷ್ಟ್ರೀಯ ಫ್ಲೋರ್ ಬಾಲ್ ಚಾಂಪಿಯನ್ ಶಿಫ್ 2023-24ರಲ್ಲಿ ಕರ್ನಾಟಕ ತಂಡವು ಜಯಗಳಿಸಿದ್ದು, ಈ ತಂಡದಲ್ಲಿ ಎಡಪದವು ಸ್ವಾಮಿ ವಿವೇಕಾನಂದ ಪ.ಪೂ ಕಾಲೇಜಿನ ನಾಲ್ವರು
ದಕ್ಷಿಣ ಕನ್ನಡ ಜಿಲ್ಲಾಡಳಿತವು ಜಿಲ್ಲೆಯ ಎಲ್ಲ ಸುಡುಮದ್ದು ತಯಾರಿಕಾ ಘಟಕಗಳನ್ನು ಮುಂದಿನ ಆದೇಶದವರೆಗೆ ಅಮಾನತಿನಲ್ಲಿ ಇಟ್ಟಿದೆ. ಬೆಳ್ತಂಗಡಿ ತಾಲೂಕಿನ ಕುಕ್ಕೇಡಿ ಕುಡ್ತ್ಯಾರುನಲ್ಲಿ ಸುಡುಮದ್ದು ತಯಾರಿಕಾ ಘಟಕದಲ್ಲಿ ಸ್ಫೋಟ ಸಂಭವಿಸಿ ಸಾವು ನೋವು ಸಂಭವಿಸಿರುವುದು ಇದಕ್ಕೆ ಕಾರಣ. 2008ರ ಸ್ಫೋಟಕ ಕಾಯ್ದೆಯ ನಿಯಮಾವಳಿ ಪ್ರಕಾರ ಈ ತಾತ್ಕಾಲಿಕ ಸುಡುಮದ್ದು ತಯಾರಿಕೆ
ಮೂಡುಬಿದಿರೆ: ಗುಜರಾತಿನ ಆಲಹಾಬಾದ್ ನಲ್ಲಿ ಫೆ. 16-18 ರಿಂದ ನಡೆಯುವ ರಾಷ್ಟ್ರೀಯ ಜ್ಯೂನಿಯರ್ ಅಥ್ಲೆಟಿಕ್ಸ್ ಗೆ ಎಡಪದವು ಸ್ವಾಮಿ ವಿವೇಕಾನಂದ ಪ್ರೌಢಶಾಲೆಯ 9 ನೇ ತರಗತಿಯ ವಿದ್ಯಾರ್ಥಿನಿ ರಕ್ಷಿತಾ ಆಯ್ಕೆಯಾಗಿದ್ದಾರೆ.2023-24 ನೇ ಸಾಲಿನಲ್ಲಿ ಪುತ್ತೂರಿನಲ್ಲಿ ನಡೆದ ರಾಜ್ಯಮಟ್ಟದ 17ವರ್ಷ ವಯೋಮಿತಿ ಶಾಲಾ ಅಥ್ಲೆಟಿಕ್ಸ್ ಸ್ಪರ್ಧೆಯಲ್ಲಿ ಎತ್ತರ ಜಿಗಿತದಲ್ಲಿ
ಜಪಾನೀಸ್ ಎನ್‍ಸೆಫಲೈಟಿಸ್ ವೈರಸ್ ಎಂಬ ವೈರಾಣುವಿನಿಂದ ಈ ರೋಗ ಹರಡುತ್ತದೆ. ಮೊದಲ ಬಾರಿ ಈ ರೋಗ ಜಪಾನಿನಲ್ಲಿ 1871ರಲ್ಲಿ ಕಂಡು ಬಂದ ಕಾರಣ ಈ ಜ್ವರಕ್ಕೆ ಜಪಾನೀಸ್ ಎನ್‍ಸೆಫಲೈಟಿಸ್ ಎಂದು ನಾಮಕರಣ ಮಾಡಲಾಯಿತು. ಸಾಮಾನ್ಯವಾಗಿ ಹಂದಿಗಳಲ್ಲಿ ಕಂಡು ಬರುವ (ಕೆಲವೊಂದು ಪ್ರಬೇಧದ ಹಕ್ಕಿಗಳಲ್ಲಿಯೂ ಕಂಡು ಬರುತ್ತದೆ) ಈ ವೈರಾಣು, ಹಂದಿಗಳಿಗೆ ಯಾವುದೇ
ಕೆಲವರ ದಿನ ಆರಂಭವಾಗುವುದೇ ದಿನ ಪತ್ರಿಕೆಯನ್ನು ಓದುವ ಮೂಲಕ. ಕೈಯಲ್ಲಿ ಒಂದು ಕಪ್ ಕಾಫಿ ಅಥವಾ ಟೀ ಜೊತೆಗೆ ದಿನಪತ್ರಿಕೆಯಿದ್ದರೆ ಸುದ್ದಿಯನ್ನು ಓದುತ್ತಾ ಓದುಗರು ತಮ್ಮ ದಿನವನ್ನು ಆರಂಭಿಸುತ್ತಾರೆ. ರಾಜ್ಯ, ದೇಶ, ವಿದೇಶಗಳಲ್ಲಿ ನಡೆಯುವ ಸುದ್ದಿಗಳನ್ನು ಜನರಿಗೆ ತಲುಪಿಸುವ ದಿನ ಪತ್ರಿಕೆಗಳು ಇವತ್ತಿಗೂ ನಂಬಿಕೆಗೆ ಅರ್ಹವಾಗಿದೆ. ಹೀಗಾಗಿ ಪ್ರತಿ ವರ್ಷ ಜ. 29ರಂದು
ಆಸ್ಟ್ರೇಲಿಯಾ ಓಪನ್ ಟೆನ್ನಿಸ್‍ನಲ್ಲಿ 43ರ ಪ್ರಾಯದಲ್ಲಿ ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ ಜೊತೆಗೆ ಪುರುಷರ ಡಬಲ್ಸ್ ಗೆದ್ದು ರೋಹನ್ ಬೋಪಣ್ಣ ಸಾಧನೆ ಮಾಡಿದರು. ಅತಿ ಹಿರಿಯ ಗ್ರಾನ್‍ಸ್ಲಾಮ್ ವಿನ್ನರ್, ಅತಿ ಹಿರಿಯ ಟೆನ್ನಿಸ್ ಡಬಲ್ಸ್ ಒನ್ ಇತ್ಯಾದಿ ಸಾಧನೆ ಕರ್ನಾಟಕದ ಕೊಡವ ರೋಹನ್ ಬೋಪಣ್ಣ ಅವರದಾಯಿತು. ಭಾರತದ ಜಾಗತಿಕ ಗ್ರಾನ್‍ಸ್ಲಾಮ್
ಬಂಟ್ವಾಳ: ಬೆಂಕಿ ಅವಘಡಕ್ಕೆ ಸಿಕ್ಕಿ ದಂಪತಿ ಸುಟ್ಟು ಮೃತಪಟ್ಟ ಘಟನೆ ಬಂಟ್ವಾಳದ ಅಮ್ಟಾಡಿ ಗ್ರಾ.ಪಂ. ವ್ಯಾಪ್ತಿಯ ತುಂಡು ಪದವು ಎಂಬಲ್ಲಿ ನಡೆದಿದೆ. ಇಲ್ಲಿನ ನಿವಾಸಿ ಗಿಲ್ಬರ್ಟ್ ಕಾರ್ಲೋ ( 78) ಹಾಗೂ ಕ್ರಿಸ್ಟಿನಾ ಕಾರ್ಲೋ ( 70) ಮೃತಪಟ್ಟ ದುರ್ದೈವಿಗಳು. ಮನೆಯ ಪಕ್ಕ ಕಸ ಕಡ್ಡಿಗೆ ಹಾಕಿದ ಬೆಂಕಿ ವ್ಯಾಪಿಸಿ ಮನೆಯ ಸಮೀಪದ ಕಾಡನ್ನು ಆವರಿಸಿದ ವೇಳೆ ಅದನ್ನು




























