ಅಖಿಲ ಭಾರತ ಅಂತರ್ ವಿವಿ ಮಹಿಳಾ ಬಾಲ್‌ಬ್ಯಾಡ್ಮಿಂಟನ್ : ಮಂಗಳೂರು ವಿವಿ ರನ್ನರ್ ಅಪ್

ಮೂಡುಬಿದಿರೆ: ತಮಿಳುನಾಡಿನ ಕಾರೈಕುಡಿಯ ಅಲಗಪ್ಪ ವಿವಿ ಆಶ್ರಯದಲ್ಲಿ ನಡೆದ ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ಮಹಿಳಾ ಬಾಲ್‌ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಮಂಗಳೂರು ವಿವಿ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದು, ತಂಡದ 10 ಜನ ಆಟಗಾರ್ತಿಯರ ಪೈಕಿ ನಾಯಕಿ ಸಹನಾ ಎಚ್. ಎಂ ಸೇರಿದಂತೆ 9 ಕ್ರೀಡಾಪಟುಗಳು ಮೂಡಬಿದಿರೆಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳಾಗಿದ್ದರು.
ಕ್ವಾಟರ್‌ಫೈನಲ್ ಪಂದ್ಯಾಟದಲ್ಲಿ ಮಂಗಳೂರು ವಿವಿಯು ತಮಿಳುನಾಡಿನ ಯೂನಿವರ್ಸಿಟಿ ಆಫ್ ಮದ್ರಾಸ್ ತಂಡವನ್ನು 35-23, 35-29 ನೇರ ಸೆಟ್‌ನಲ್ಲಿ ಸೋಲಿಸಿ 18ನೇ ಬಾರಿಗೆ ಲೀಗ್ ಹಂತಕ್ಕೆ ಆಯ್ಕೆಯಾಗಿತ್ತು.
ಲೀಗ್ ಹಂತದಲ್ಲಿ ತಮಿಳುನಾಡಿನ ಮಧುರೈಯ ಕಾಮರಾಜ್ ವಿವಿ ತಂಡವನ್ನು 35-15, 35-26 ಅಂತರಗಳಿAದ, ಮಹಾತ್ಮಾ ಗಾಂಧಿ ವಿವಿಯನ್ನು 35-18, 35-14 ನೇರ ಅಂತರಗಳಿAದ ಸೋಲಿಸಿ ಫೈನಲ್ ಪ್ರವೇಶಿಸಿತು. ಅಂತಿಮ ಸುತ್ತಿನಲ್ಲಿ ತಮಿಳುನಾಡಿನ ಅಣ್ಣಾ ವಿವಿಯೊಂದಿಗಿನ ರೋಚಕ ಪಂದ್ಯಾಟದಲ್ಲಿ ರನ್ನರ್ ಅಪ್ ಸ್ಥಾನ ಗಳಿಸುವಲ್ಲಿ ಯಶಸ್ವಿಯಾಯಿತು. ವಿಜೇತ ತಂಡವನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಅಭಿನಂದಿಸಿದ್ದಾರೆ.

Related Posts

Leave a Reply

Your email address will not be published.