ರೈತರಿಗೆ ಬೆಳೆವಿಮೆ ಕುರಿತು ವಿವಿಧ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರ ಸಭೆ
ರೈತರಿಗೆ ಬೆಲೆ ವಿಮೆ ಹಣ ಜಮಾ ಕಡಿಮೆ ಪಾವತಿಯ ಕುರಿತು ಬಿಜೆಪಿ ಸತ್ಯಶೋಧನಾ ಸಮಿತಿಯಿಂದ ಮಾಜಿ ಶಾಸಕರಾದ ಸಂಜೀವ ಮಠಂದೂರು ರವರು ಸುಳ್ಯ ವಿಧಾನಸಭಾ ಕ್ಷೇತ್ರದ ಕಡಬ ಹಾಗೂ ಸುಳ್ಯ ತಾಲೂಕಿನ ವಿವಿಧ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರ ಸಭೆ ನಡೆಸಿ, ತೋಟಗಾರಿಕಾ ಇಲಾಖೆಯ ನಿರ್ಲಕ್ಷದಿಂದ ರೈತರಿಗೆ ಆದ ಅನ್ಯಾಯದ ಕುರಿತು ಗ್ರಾಮ ಮಟ್ಟದಿಂದ ಸಂಗ್ರಹಿಸಿದ ಮಾಹಿತಿಯನ್ನು, ಬೆಳಗಾವಿ ಅಧಿವೇಶನದಲ್ಲಿ ರೈತರ ಬೆಲೆ ವಿಮೆ ಪಾವತಿ ವಿಳಂಬ ಹಾಗೂ ತಾರತಮ್ಯದ ವಿರುದ್ಧ ಬಿಜೆಪಿ ನಾಯಕರು ಗ್ರಾಮ ಮಟ್ಟದ ವರದಿಯನ್ನು ಅಧಿವೇಶನದಲ್ಲಿ ಪ್ರಸ್ತಾಪಿಸಿ ಸರಕಾರದ ಗಮನಕ್ಕೆ ತರಲಾಗುವುದು.

ಈ ಸಂದರ್ಭದಲ್ಲಿ ಸುಳ್ಯ ಬಿಜೆಪಿ ಮಂಡಲದ ಅಧ್ಯಕ್ಷ ವೆಂಕಟ್ ವಳಲಂಬೆ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಹರೀಶ್ ಕಂಜಿಪಿಲಿ,ಸಹಕಾರ ಭಾರತಿ ಅಧ್ಯಕ್ಷ ಸೋಮಶೇಖರ್ ಕೂಜುಗೋಡು,ಎ ವಿ ತೀರ್ಥರಾಮ ಕ್ಯಾಂಪ್ಕೋ ನಿರ್ದೇಶಕರು ಉಪಸ್ಥಿತರಿದ್ದರು


















