ಕೊಕ್ಕಡ: ಹಳ್ಳಿಗೇರಿಯಲ್ಲಿ ಯುವಕನೊರ್ವ ನೇಣು ಬಿಗಿದು ಆತ್ಮಹತ್ಯೆ

ಕೊಕ್ಕಡ : ಕೊಕ್ಕಡ ಗ್ರಾಮದ ಹಳ್ಳಿಗೇರಿ ಎಂಬಲ್ಲಿ ಯುವಕನೊರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ಜ.2 ರಂದು ಮಧ್ಯಾಹ್ನ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಕೊಕ್ಕಡ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ನಿವೃತ್ತ ನೌಕರ ಕುಂಞಕಣ್ಣನ್ ಅವರ ಪುತ್ರ ಅಜಯ್ ಕುಮಾರ್(39) ಎಂದು ಗುರುತಿಸಲಾಗಿದೆ. ಮಧ್ಯಾಹ್ನ ಊಟದ ಬಳಿಕ ವಾಸದ ಮನೆಯಲ್ಲಿ ಇದ್ದ ಅಜಯ್, ಫ್ಯಾನ್‌ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಮೃತ ಅಜಯ್ ಅವರು ಕೆಲವು ಸಮಯಗಳ ಹಿಂದೆ ಸೌತಡ್ಕ ಅನ್ನಛತ್ರದಲ್ಲಿ ಕೆಲಸ ನಿರ್ವಹಿಸಿದ್ದರು. ನಂತರ ಸ್ವಂತ ಆಟೋ ರಿಕ್ಷಾವನ್ನು ಬಾಡಿಗೆಗೆ ಮಾಡುತ್ತಾ ಇದ್ದರು. ಆತ್ಮಹತ್ಯೆಗೆ ನಿಖರ ಕಾರಣ ಇನ್ನಷ್ಟೇ ತಿಳಿದುಬರಬೇಕಿದೆ.

ಮೃತರು ತಂದೆ, ತಾಯಿ ಹಾಗೂ ಸಹೋದರಿಯನ್ನು ಅಗಲಿದ್ದಾರೆ. ಘಟನೆ ಸಂಬಂಧ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Related Posts

Leave a Reply

Your email address will not be published.