ಮುಂಬೈಯಲ್ಲಿ ನವರಾತ್ರಿ ವಿಶೇಷ ನಾಟ್ಯಾಯನ

ಮೂಡುಬಿದಿರೆ: ಭಗವದ್ಗೀತೆ, ಸಂಗೀತ, ನೃತ್ಯ, ನಾಟಕ, ಸಂಸ್ಕೃತಿ, ಶಿಕ್ಷಣ ಗಳ ವಿಶಿಷ್ಟ ಸಮ್ಮೇಳನದ ನಾಟ್ಯಾಯನ ಕಾರ್ಯಕ್ರಮ ನೀಡುತ್ತಿರುವ ಮೂಡುಬಿದಿರೆಯಅಯನಾ. ವಿ. ರಮಣ್ ಅನನ್ಯ- ಅದ್ಭುತ ಕಲಾವಿದೆ. ಅಸಾಧಾರಣ ಸ್ಮರಣ ಶಕ್ತಿ, ಪರಿಣಾಮಕಾರಿ ಅಭಿನಯದ ಅದ್ಭುತ ಸಾಧನೆ ಮಾಡಿದ ಕಲಾವಿದೆ. ಈಕೆಗೆ ರಾಷ್ಟçಮಟ್ಟದ ಪ್ರಶಸ್ತಿಗಳು ಲಭಿಸಲಿ ಎಂದು ಮುಂಬೈ ಶ್ರೀಗಾಂದೇವಿ ಅಂಬಿಕಾ ಶ್ರೀ ಆದಿನಾಥೇಶ್ವರ ಶ್ರೀಮಹಾಗಣಪತಿ ದೇವಸ್ಥಾನದ ಪ್ರಧಾನ ಅರ್ಚಕ ಪೆರಣ0ಕಿಲ ಹರಿದಾಸ್ ಭಟ್ ಹೇಳಿದ್ದಾರೆ.

ಡಾ.ಸುಗುಣೇ0ದ್ರ ತೀರ್ಥ ಶ್ರೀಪಾದರ ಮಾರ್ಗದರ್ಶನದಲ್ಲಿ ಮುಂಬೈ ಶ್ರೀಗಾಂದೇವಿ ಕ್ಷೇತ್ರದಲ್ಲಿ ನಡೆದ ನವರಾತ್ರಿ ವಿಶೇಷ – ನಾಟ್ಯಾಯನ, ಕೋಟಿ ಗೀತಾ ಲೇಖನ ಯಜ್ಞ ನೋಂದಣಿ ಅಭಿಯಾನದಲ್ಲಿ ಭಾಗವಹಿಸಿದರು ಮಾತನಾಡುತ್ತಿದ್ದರು .ಇಂಡಿಯನ್ ಓವರ್ಸೀಸ್ ಬ್ಯಾಂಕ್‌ನ ಪೂರ್ವ ಅಧ್ಯಕ್ಷ ಡಾ.ಎಂ ನರೇಂದ್ರ ಅವರು ಕಲಾವಿದೆ ಅಯನಾ ಅವರನ್ನು ಸನ್ಮಾನಿಸಿದರು.ಅಯನಾ ಅವರ ತಾಯಿ ಡಾ.ಮೂಕಾಂಬಿಕ.ಜಿ.ಎಸ್- ತಂದೆ, ಗೀತಾ ಪ್ರಚಾರಕ ಕೆ. ವಿ. ರಮಣ್ ಆಚಾರ್ಯ ದಂಪತಿಯನ್ನು ಗೌರವಿಸಲಾಯಿತು. ಮಹಾರಾಷ್ಟç ಕನ್ನಡಿಗ ಕಲಾವಿದರ ಪರಿಷತ್‌ನ ರಾಜ್ಯಾಧ್ಯಕ್ಷ ಸುರೇಂದ್ರ ಕುಮಾರ್ ಹೆಗ್ಡೆ ಅಭಿನಂದನಾ ನುಡಿಗಳನ್ನಾಡಿದರು.

ಕೆನರಾ ರೊಬೋಕೋ ಮ್ಯೂಚುವಲ್ ಫಂಡ್‌ನ ನಿವೃತ್ತ ಸಹಾಯಕ ಪ್ರಬಂಧಕಿ ಅನಿತಾ ಅಶೋಕ್ ಶೆಣೈ, ಅಮ್ರೀತಾ ರಾಯ್, ಕ್ಷೇತ್ರದ ಆಡಳಿತ ಮೊಕೇಸರ ಹರಿದಾಸ್ ಗೋಪಾಲ್ ಶೆಟ್ಟಿ , ಶ್ರೀ ಪುತ್ತಿಗೆ ಮಠದ ರಾಧಾಕೃಷ್ಣ ಆಚಾರ್ಯ , ಪ್ರಚಾರಕಿ ಸುಜಾತಾ ಶೆಟ್ಟಿ ಉಪಸ್ಥಿತರಿದ್ದರು. ಕಲಾ ಸಂಘಟಕಪದ್ಮನಾಭ ಸಸಿಹಿತ್ತಿಲು ನಿರೂಪಿಸಿದರು. ಗೀತಾ ಲೇಖನ ಯಜ್ಞದ ಹೊತ್ತಿಗೆಗಳನ್ನು ವಿತರಿಸಲಾಯಿತು.
ಕೆ. ವಿ. ರಮಣ್ ನಿರ್ದೇಶನದಲ್ಲಿ ಅಗ್ನಿ ದಿವ್ಯದ ಹುಡುಗಿ ಏಕ ವ್ಯಕ್ತಿ ನಾಟಕ ಪ್ರದರ್ಶನಗೊಂಡಿತು.

Related Posts

Leave a Reply

Your email address will not be published.