ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನ : ಎರಡು ತಿಂಗಳಲ್ಲಿ 15 ಕೋಟಿಗೂ ಮಿಕ್ಕಿ ಆದಾಯ
ಸುಬ್ರಹ್ಮಣ್ಯ ಜನವರಿ 21 : ದಕ್ಷಿಣ ಭಾರತದ ನಾಗರಾಧನೆಯ ಹೆಸರಾಂತ ಪುಣ್ಯಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ 2025 ನವಂಬರ್ ಹಾಗೂ ಡಿಸೆಂಬರ್ ನ ಎರಡು ತಿಂಗಳಲ್ಲಿ ಒಟ್ಟು 14 ಕೋಟಿ 77 ಲಕ್ಷದ 80,000 ರೂ. ಆದಾಯ ಬಂದಿರುತ್ತದೆ.
ನವೆಂಬರ್ ತಿಂಗಳಲ್ಲಿ ವಿವಿಧ ಸೇವೆಗಳಿಂದ 4,5621739 ಕೋಟಿರೂಪಾಯಿ ಹುಂಡಿಯಿಂದ 1,0976957 ಕೋಟಿ ರೂಪಾಯಿ ಹಾಗೂ ಅನ್ನದಾನ ನಿಧಿಯಿಂದ 8357769 ಲಕ್ಷ ರೂಪಾಯಿ ಆದಾಯ ಬಂದಿರುತ್ತದೆ. ಹಾಗೆಯೇ ಡಿಸೆಂಬರ್ ತಿಂಗಳ ವಿವಿಧ ಸೇವೆಗಳಿಂದ 5,3018923 ಕೋಟಿ ರೂಪಾಯಿ ಹುಂಡಿಯಿಂದ 1,9063518 ಕೋಟಿ ರೂಪಾಯಿ ಅನ್ನದಾನ ನಿಧಿಯಿಂದ 1,0741594 ಕೋಟಿ ರೂಪಾಯಿ ಆದಾಯ ಬಂದಿರುತ್ತದೆ. ಇದನ್ನು ಹೊರತುಪಡಿಸಿ ವಸತಿಗೃಹಗಳು ಹಾಗೂ ಇನ್ನಿತರ ಮೂಲಗಳಿಂದ ಬಂದ ಮೊಬಲಗು ಕೂಡ ಇರುತ್ತದೆ ಎಂದು ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗೊಂಡಿ ತಿಳಿಸಿದರು.


















