ಮೂಡುಬಿದಿರೆಯಲ್ಲಿ ರಾಷ್ಟ್ರೀಯ ಮಟ್ಟದ ಭಾವೈಕ್ಯತಾ ಶಿಬಿರ ಆರಂಭ

ಮೂಡುಬಿದಿರೆ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಷ್ಟ್ರ ಸಂಸ್ಥೆ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಸಂಸ್ಥೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆ, ಸ್ಥಳೀಯ ಸಂಸ್ಥೆ ಮೂಡುಬಿದಿರೆ ಹಾಗೂ ಆಳ್ವಾಸ್ ಶಿಕ್ಷಣ ಸಂಸ್ಥೆಯ ಸಹಭಾಗಿತ್ವದಲ್ಲಿ ಕನ್ನಡ ಭವನದಲ್ಲಿ 5 ದಿನಗಳ ಕಾಲ ನಡೆಯುವ ರಾಷ್ಟ್ರಮಟ್ಟದ ರಾಷ್ಟ್ರೀಯ ಭಾವೈಕ್ಯತಾ ಶಿಬಿರವು ಗುರುವಾರ ಆರಂಭಗೊಂಡಿತು.

ಮಂಗಳೂರು ಪೊಲೀಸ್ ಉಪ ಆಯುಕ್ತರಾದ ನಜ್ಮಾ ಫರೂಕಿ ಶಿಬಿರವನ್ನು ಉದ್ಘಾಟಿಸಿ ಶುಭ ಹಾರೈಸಿದರು.

ಆಳ್ವಾಸ್ ಶಿಕ್ಷಣ ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ ಅವರು ಅಧ್ಯಕ್ಷತೆಯನ್ನು ವಹಿಸಿ ರಾಷ್ಟ್ರೀಯ ಭಾವೈಕ್ಯತಾ ಶಿಬಿರದ ಲೋಗೋವನ್ನು ಬಿಡುಗಡೆಗೊಳಿಸಿದರು.

ಭಾರತ್ ಸ್ಕೌಟ್ ಮತ್ತು ಗೈಡ್ ರಾಷ್ಟ್ರೀಯ ಸಂಸ್ಥೆಯ ಮತ್ತು ಶಿಬಿರದ ನಾಯಕರೂ ಆಗಿರುವ ಬಬ್ಲು ಗೋಸ್ವಾಮಿ, ಭಾರತ್ ಸ್ಕೌಟ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಸಂಸ್ಥೆಯ ರಾಜ್ಯ ಸಂಘಟನಾ ಆಯುಕ್ತ ಎಂ ಪ್ರಭಾಕರ್ ಭಟ್, ಭಾರತ್ ಸ್ಕೌಟ್ ಮತ್ತು ಗೈಡ್ಸ್ ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆಯ ಸ್ಕೌಟ್ ಆಯುಕ್ತ ಬಿ.ಮಹಮ್ಮದ್ ತುಂಬೆ, ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆಯ ಕಾರ್ಯದರ್ಶಿ ಪ್ರತಿಮ್ ಕುಮಾರ್ ಕೆ.ಎಸ್, ಶಿಬಿರ ಸಹಾಯಕರಾದ ಜನಾರ್ಧನ ಚಕ್ರವರ್ತಿ ಬೆಂಗಳೂರು ಉತ್ತರ, ರಾಷ್ಟ್ರೀಯ ತರಬೇತುದಾರ ನಾರಾಯಣನ್, ಹಾಸನ ಜಿಲ್ಲಾ ಸಹಾಯಕ ಆಯುಕ್ತರು ಡಾ.ನಾರಾಯಣ ಜಿ.ಡಿ, ದ. ಕ ಜಿಲ್ಲೆಯ ಕು.ದೀಪಿಕಾ, ವಿಶ್ವತ್, ನವೀನ್ ದಾವಣಗೆರೆ ಜಿ,ರಕ್ಷಿತ್ ಚಿಕ್ಕಮಗಳೂರು, ಶ್ರೀಕಾಂತ್ ಶರ್ಮ ರಾಜಸ್ಥಾನ, ಎ.ಎಸ್ ಭಾಟಿ ಹರಿಯಾಣ, ರಾಜ್ಯ ಸಹಾಯಕ ಸಂಘಟನಾ ಆಯುಕ್ತರು ಭರತ್ ರಾಜ್ ಕೆ ಉಪಸ್ಥಿತರಿದ್ದರು.

ರಾಜ್ಯ ಮುಖ್ಯ ಆಯುಕ್ತ ಶ್ರೀ ಪಿ ಜಿ ಆರ್ ಸಿಂಧ್ಯ ಅವರು ಆನ್ಲೈನ್ ಮೂಲಕ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ರಾಷ್ಟ್ರದ 09 ರಾಜ್ಯಗಳಾದ ಕರ್ನಾಟಕ 237,ಈಸ್ಟನ್ ರೈಲ್ವೆ 18,ಹರಿಯಾಣ 25,KVS 10,NVS 10,ಮಧ್ಯಪ್ರದೇಶ 16, ತಮಿಳುನಾಡು 10,ನಾರ್ತ್, ಸೆಂಟ್ರಲ್ ರೈಲ್ವೆ 13, ರಾಜಸ್ಥಾನ 06 ಒಟ್ಟು 345 ವಿದ್ಯಾರ್ಥಿಗಳು,15 ಶಿಬಿರ ಸಹಾಯಕರುಗಳು,12 ರೋವರ್ಸ್ ಹಾಗೂ 372 ಮಂದಿ ಸ್ವಯಂ ಸೇವಕರು ಭಾಗವಹಿಸಿರುತ್ತಾರೆ.

Related Posts

Leave a Reply

Your email address will not be published.