ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಎನ್ ಡಿ ಆರ್ ಎಫ್(NDRF) 10th ಬೆಟಾಲಿಯನ್ ವತಿಯಿಂದ ವಿಶೇಷ ತರಬೇತಿ ಕಾರ್ಯಗಾರ

ಉಡುಪಿ:ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ವತಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಉಡುಪಿ ಜಿಲ್ಲೆ ಇದರ ಉಡುಪಿ ಕಾಪು ಬ್ರಹ್ಮಾವರ ಶೌರ್ಯ ವಿಪತ್ತು ನಿರ್ವಹಣಾ ತಾಲೂಕು ಸಮಿತಿಯ ಸ್ವಯಂಸೇವಕರಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಎನ್ ಡಿ ಆರ್ ಎಫ್ (NDRF) 10th ಬೆಟಾಲಿಯನ್ ವತಿಯಿಂದ ವಿಶೇಷ ತರಬೇತಿ ಕಾರ್ಯಗಾರವನ್ನು ಕರಾವಳಿ ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ಶ್ರೀ ಆನಂದ ಸುವರ್ಣರವರು ಉದ್ಘಾಟಿಸಿದರು.
ಉದ್ಘಾಟಿಸಿ ಮಾತನಾಡಿದ ಅವರು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪರಮಪೂಜ್ಯ ಡಾ. ಡಿ ವೀರೇಂದ್ರ ಹೆಗ್ಗಡೆಯವರ ನಾಲ್ಕು ದಶಕಗಳಿಂದ ಸಮಾಜಮುಖಿ ಸೇವೆಯನ್ನು ಯೋಜನೆಯ ಮುಖಾಂತರ ನಡೆಸುತ್ತಿದ್ದಾರೆ, “ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ”ಎನ್ನುವ ಭಗವದ್ಗೀತೆಯ ಮಾತಿನಂತೆ ಇಂದು ಕಳೆದ ಐದು ವರ್ಷಗಳಿಂದ ರಾಜ್ಯದಲ್ಲಿ 10,000 ಶೌರ್ಯ ಸ್ವಯಂಸೇವಕರು ಯಾವುದೇ ಪ್ರತಿಫಲಪೇಕ್ಷೆ ಇಲ್ಲದೆ ಸೇವೆ ಮಾಡುತ್ತಿರುವುದು ಹೆಮ್ಮೆಯ ವಿಚಾರ.. ಪರಿಪೂರ್ಣವಾದ ಫಲವನ್ನು ಭಗವಂತನು ನೀಡುತ್ತಾನೆ ಎಂದರು.

ಎನ್ ಡಿ ಆರ್ ಎಫ್ (NDRF) ನಿರೀಕ್ಷಕರಾದ ಶ್ರೀ ಅಜಯ್ ಕುಮಾರ್ ರವರು ಮಾತನಾಡುತ್ತಾ ಧರ್ಮಸ್ಥಳದ ಪೂಜ್ಯರ ಶೌರ್ಯ ವಿಪತ್ತು ಸ್ವಯಂಸೇವಕರು ರಾಜ್ಯದಲ್ಲಿಯೇ ಮತ್ತು ದೇಶದಲ್ಲಿಯೇ ಮಾದರಿ ಸ್ವಯಂಸೇವಕರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಉಡುಪಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಯಾದ ಶ್ರೀ ರವಿ ಅವರು ಮಾತನಾಡುತ್ತಾ ನಾವು ಜಿಲ್ಲಾಡಳಿತದ ವತಿಯಿಂದ ಯಾವುದೇ ತರಬೇತಿಯನ್ನು ಆಯೋಜಿಸಿದರು ಪ್ರಪ್ರಥಮವಾಗಿ ಧರ್ಮಸ್ಥಳದ ಶೌರ್ಯ ಸ್ವಯಂ ಸೇವಕರಿಗೆ ಆದ್ಯತೆಯನ್ನು ನೀಡುತ್ತಿದ್ದೇವೆ ಯಾಕೆಂದರೆ ಪ್ರಾಮಾಣಿಕ ಸೇವೆ ನೀಡುವುದರಲ್ಲಿ ಶೌರ್ಯ ಸ್ವಯಂಸೇವಕರು ಮೊದಲಿಗರು ಎಂದರು.

ಆಪ್ತಮಿತ್ರ ಮಾಸ್ಟರ್ ತರಬೇತುದಾರರಾದ ರೋಹನ್ ಎಸ್ ಸುವರ್ಣ ರವರು ನೀರಿನಲ್ಲಿ ವಿಪತ್ತುಗಳು ಸಂಭವಿಸಿದಾಗ ರಕ್ಷಣಾ ಕಾರ್ಯ ಹೇಗಿರಬೇಕೆಂದು ಮಾಹಿತಿ ನೀಡಿದರು.
ನಿರೀಕ್ಷಕ ಅಜೇಯ್ ಕುಮಾರ್ ಹಾಗೂ ಉಪ ನಿರೀಕ್ಷಕ ಮುನಿ ಕೃಷ್ಣರವರ ತಂಡದಿಂದ ಶೌರ್ಯ ಸ್ವಯಂ ಸೇವಕರಿಗೆ ವಿಪತ್ತು ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮ,ಪ್ರಥಮ ಚಿಕಿತ್ಸೆ , ಅವಘಡಗಳು ಮತ್ತು ರಕ್ಷಣಾ ಸಂದರ್ಭದಲ್ಲಿ ಪಾಲಿಸಬೇಕಾದ ಸರಿಯಾದ ಕ್ರಮಗಳ ಕುರಿತು ಸವಿವರವಾದ ಪ್ರಾತ್ಯಕ್ಷಿತೆ ಮೂಲಕ ತರಬೇತಿಯನ್ನು ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ನಿರ್ದೇಶಕರಾದ ಶ್ರೀ ನಾಗರಾಜ ಶೆಟ್ಟಿ, ಶೌರ್ಯ ಕಾರ್ಯಕ್ರಮದ ಯೋಜನಾಧಿಕಾರಿಗಳಾದ ಶ್ರೀ ಕಿಶೋರ್ ಕುಮಾರ್ ಉಪಸಿತರಿದ್ದರು.

ಉಡುಪಿ,ಕಾಪು, ಬ್ರಹ್ಮಾವರ ತಾಲೂಕಿನ 130 ಸ್ವಯಂಸೇವಕರು ತರಬೇತಿ ಕಾರ್ಯಗಾರದಲ್ಲಿ ಭಾಗವಹಿಸಿದ್ದರು.

ತರಬೇತಿ ಕಾರ್ಯಗಾರವನ್ನು ಶೌರ್ಯ ಸ್ವಯಂಸೇವಕರಾದ ಶ್ರೀಮತಿ ನೇತ್ರಾವತಿಯವರು ಪ್ರಾರ್ಥಿಸಿ, ಶೌರ್ಯ ಕಾರ್ಯಕ್ರಮಗಳ ಯೋಜನಾಧಿಕಾರಿಗಳಾದ ಶ್ರೀ ಜೈವಂತ್ ಪಟಗಾರ ಸ್ವಾಗತಿಸಿ, ಜನಜಾಗೃತಿ ಮೇಲ್ವಿಚಾರಕರಾದ ಶ್ರೀನಿತೇಶ್ ಕೆ ವಂದಿಸಿ , ಜನಜಾಗೃತಿ ಯೋಜನಾಧಿಕಾರಿಗಳಾದ ಶ್ರೀ ಗಣೇಶ್ ಆಚಾರ್ಯರವರು ನಿರ್ವಹಿಸಿದರು.

Related Posts

Leave a Reply

Your email address will not be published.