ಕಾಪು ಬಂಟರ ಸಂಘದ ಮಹಿಳಾ ವಿಭಾಗದ ಆಟಿಯ ನೆನಪು ಮತ್ತು ವಿದ್ಯಾರ್ಥಿ ಪುರಸ್ಕಾರ

ಕಾಪು ಬಂಟರ ಸಂಘದ ಮಹಾಸಭೆ ಹಾಗೂ ಮಹಿಳಾ ವಿಭಾಗದ ವಿಶಿಷ್ಠ ಮತ್ತು ಶಿಷ್ಠ ಕಾರ್ಯಕ್ರಮಗಳು 12 ಗ್ರಾಮ ಗಳ ಬಂಟ ಬಂಧುಗಳ ಸಮಾಗಮ ಮತ್ತು ಸಹಕಾರದೊಂದಿಗೆ ಕಾಪು ಲಕ್ಷ್ಮೀ ಜನಾರ್ದನ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಅನಿವಾಸಿ ಭಾರತೀಯ ಮಸ್ಕತ್ ಉದ್ಯೋಗಿ ಮಲ್ಲಾರ್ ಶಶಿಧರ ಶೆಟ್ರು ಮಾತನಾಡುತ್ತಾ ಆಟಿ ತಿಂಗಳು ಹಾಳಲ್ಲ ಅದು ನಮ್ಮ ಬಾಳು ಬೆಳಗಿಸುವ ತಿಂಗಳು ನಮ್ಮೆಲ್ಲ ಉದ್ಧಾರಕ್ಕೆ ಅದು ಹೆದ್ದಾರಿ ಎಂದರು.
ಮುಖ್ಯ ಅಭ್ಯಾಗತರಾಗಿ ಮುಂಬೈ ಉದ್ಯಮಿ ಉದಯ ಸುಂದರ ಶೆಟ್ರು ಶುಭ ಹಾರೈಸಿ ಇಂತಹ ಕಾರ್ಯ ಕ್ರಮಗಳಿಂದ ಕಿರಿಯರಿಗೆ ಸಂಸ್ಕೃತಿಯ ದರ್ಶನ ಮಾಡಿದಂತಾಗುತ್ತದೆ ಎಂದರು.
ಆಟಿ ತಿಂಗಳ ಬಗ್ಗೆ ಗೋವಿಂದ ದಾಸ ಕಾಲೇಜಿನ ಉಪನ್ಯಾಸಕಿ ಅಕ್ಷತಾ ಶೆಟ್ಟಿ ಸೋದಾಹರಣವಾಗಿ ಮಾತನಾಡಿದರು.
ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ಯಲ್ಲಿ 90% ಕ್ಕಿoತ ಹೆಚ್ಚಿನ ಅಂಕ ಪಡೆದ 12 ಗ್ರಾಮಗಳ ವಿದ್ಯಾರ್ಥಿಗಳಿಗೆ ದಿ. ರಾಧಾ ಸುಂದರ ಶೆಟ್ರ ಸ್ಮರಣೆಯಲ್ಲಿ ಮನೋಹರ ಎಸ್ ಶೆಟ್ರು ವಿದ್ಯಾರ್ಥಿ ವೇತನ ವಿತರಿಸಿ ಭವಿಷ್ಯವನ್ನು ಉಜ್ವಲ ಗೊಳಿಸಿ ಎಂದು ಆಶೀರ್ವದಸಿದರು.
ಎಸ್ ಎಸ್ ಎಲ್ ಸಿ ಯ ಮೊದಲ ಸ್ಥಾನಿಕೆ ರಿತಿಕ ಆರ್ ಶೆಟ್ಟಿ, ಮಜೂರು ಇವಳಿಗೆ ಡಾ| ಪ್ರಭಾಕರ್ ಶೆಟ್ಟಿ ಸ್ಮರಣೀಯ ಚಿನ್ನದ ಪದಕವನ್ನು ಡಾ|ಪ್ರಶಾಂತ್ ಶೆಟ್ಟಿ ಕಾಪು ನೀಡಿ ಅಭಿನಂದಿಸಿ ಮಾತನಾಡಿದರು.
ಕಾರ್ಯಕ್ರಮದ ಆಯೋಜಕಿ ಮಹಿಳಾ ಘಟಕದ ಸಂಚಾಲಕಿ ಜಯಲಕ್ಷ್ಮಿ ಸುರೇಶ್ ಶೆಟ್ಟಿ ಅಯೋಧ್ಯ, ಕಾಪು, ಸರ್ವರನ್ನು ಸ್ವಾಗತಿಸುತ್ತಾ ಆಟಿಯ ನೆನಪಿನ ಊಟದ ವಿವಿಧ ಖಾದ್ಯಗಳನ್ನು ಮನೆ ಮನೆಯಲ್ಲಿ ತಯಾರಿಸಿ ಬಾಯಿ ಚಪ್ಪರಿಸುವಂತೆ ಸವಿರುಚಿಯನ್ನು ಉಣಬಡಿಸಿದ ಸಹೋದರಿಯರಿಗೆ ಪುಷ್ಪ ನೀಡಿ ಅಭಿನಂದಿಸಿದರು.
ಸಂಘದ ಕಾರ್ಯದರ್ಶಿ ಯೋಗೇಶ್ ಶೆಟ್ಟಿ ಬಾಲಾಜಿ ಪ್ರಾಸ್ತಾವಿಕವಾಗಿ ಮಾತನಾಡಿ ಸಂಘದ ನಿರ್ದೇಶಕರ ಮತ್ತು ಯುವ ಬಂಟರ ಹಾಗೂ ಉತ್ಸಾಹಿ ಬಂಟ ಬಂಧುಗಳಿಗೆ ಊಟ ವಿತರಿಸುವ ವ್ಯವಸ್ಥೆಗೆ ಪ್ರಶಂಸೆ ಮಾಡಿದರು ಮತ್ತು ಸಂಘದ ಕಾರ್ಯ ಚಟುವಟಿಕೆಗಳ ವರದಿಯನ್ನು ವಾಚಿಸಿದರು.
ಸಭಾಧ್ಯಕ್ಷತೆಯನ್ನು ಪಿ .ರವಿರಾಜ್ ಶೆಟ್ಟಿ ವಹಿಸಿದ್ದರು,ಸಂಘದ ಜೊತೆ ಕೋಶಾಧಿಕಾರಿ ದಿವಾಕರ ಡಿ ಶೆಟ್ಟಿ ಕಳತ್ತೂರು ಲೆಕ್ಕಪತ್ರ ಮಂಡಿಸಿದರು, ಮಹಾಸಭೆಯಲ್ಲಿ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಸ್ವಾಗತಿಸಿ, ನಿರ್ಮಲ್ ಕುಮಾರ್ ಹೆಗ್ಡೆ ಕಾರ್ಯಕ್ರಮ ಸಂಯೋಜಿಸಿದರು. ಆಟಿಯ ನೆನಹೂ ಸಭಾ ಕಾರ್ಯಕ್ರಮದಲ್ಲಿ ಭಾನು ಶೆಟ್ಟಿ ಮತ್ತು ವಿನೋದ ಆರ್ ಶೆಟ್ಟಿ ಪ್ರಾರ್ಥಿಸಿದರು. ಕವಿತಾ ಶೆಟ್ಟಿ ಉಳಿಯಾರುಗೋಳಿ ಧನ್ಯವಾದ ಸಮರ್ಪಿಸಿದರು. ಕಳತ್ತೂರು ಸುಮಾ ಎನ್ ಶೆಟ್ಟಿ ಅತಿಥಿಗಳ ಪರಿಚಯ ಮಾಡಿದರು. ಪ್ರತಿಮಾ ವಿ ಶೆಟ್ಟಿ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ತುಳು ಒಗಟುಗಳ ಸ್ಪರ್ಧೆಯನ್ನು ಸಾರಿಕಾ ಶೆಟ್ಟಿ ನಡೆಸಿ ಅತ್ಯಂತ ಹರ್ಷೋಲ್ಲಾಸಗಳಿಂದ ನಡೆದ ಈ ಕಾರ್ಯಕ್ರಮದ ಊಟವಿತರಿಸುವ ವ್ಯವಸ್ಥೆಯ ಉಸ್ತುವಾರಿಯಾಗಿ ಶ್ರೀಕರ ಶೆಟ್ಟಿ ಕಲ್ಯಾ 12 ಗ್ರಾಮಗಳ ಯುವ ತಂಡದೊಂದಿಗೆ ಸಹಕರಿಸಿದರು. ಮಾಲಿನಿ ಶೆಟ್ಟಿ ಇನ್ನಂಜೆ ಹಾಗೂ ಅನಿತಾ ಶೆಟ್ಟಿ ಉಳಿಯಾರಗೋಳಿ ಸಭಾ ಕಾರ್ಯಕ್ರಮವನ್ನು ನಿರೂಪಿಸಿದರು. ಆಟಿ ಖಾದ್ಯಗಳ ಗ್ರಾಮವಾರು ಪಟ್ಟಿಯನ್ನು ಮಮತಾ ಶೆಟ್ಟಿ ವಾಚಿಸಿದರು. ಸ್ಥಾಪಕ ಮಹಿಳಾ ವಿಭಾಗದ ಸಂಚಾಲಕಿ ಶಾಂತಲತ ಎಸ್ ಶೆಟ್ಟಿ ಕಾರ್ಯಕ್ರಮಕ್ಕೆ ನಿರ್ದೇಶನ ನೀಡಿದರು.