ಉಪರಾಷ್ಟ್ರಪತಿ ಧನಕರ್ ರಾಜೀನಾಮೆ ಅಂಗೀಕಾರ

ಉಪರಾಷ್ಟ್ರಪತಿ ಜಗದೀಪ್ ದನ್ಕರ್ ನೀಡಿದ ರಾಜೀನಾಮೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸ್ವೀಕರಿಸಿದ್ದಾರೆ.
ಹುದ್ದೆ ಬಿಟ್ಟ ದನ್ಕರ್ ಅವರನ್ನು ಈ ಸಂದರ್ಭದಲ್ಲಿ ಭೇಟಿ ಮಾಡಿದ ಪ್ರಧಾನಿ ಮೋದಿಯವರು ಆರೋಗ್ಯ ಬೇಗ ಸುಧಾರಿಸಲಿ ಎಂದು ಹಾರೈಸಿದರು. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಈ ಸಂದರ್ಭದಲ್ಲಿ ಹಾಜರಿದ್ದರು.
೭೪ರ ಪ್ರಾಯದ ದನ್ಕರ್ ಅವರು ಆರೋಗ್ಯ ಸಮಸ್ಯೆ ಕಾರಣವನ್ನು ಮುಂದಿಟ್ಟು ರಾಷ್ಟ್ರಪತಿಗಳಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದರು. ೨೦೨೨ರ ಆಗಸ್ಟ್‌ನಲ್ಲಿ ಉಪರಾಷ್ಟ್ರಪತಿಯಾಗಿ ಆಯ್ಕೆಯಾದ ಅವರಿಗೆ 2027ರ ಆಗಸ್ಟ್‌ವರೆಗೆ ಹುದ್ದೆಯಲ್ಲಿರಲು ಅವಕಾಶ ಇತ್ತು. ಇನ್ನು ಆರು ತಿಂಗಳ ಒಳಗೆ ಹೊಸ ರಾಷ್ಟ್ರಪತಿಯ ಆಯ್ಕೆ ನಡೆಯಬೇಕಾಗಿದೆ. ರಾಜ್ಯ ಸಭೆಯಲ್ಲಿ ಉಪ ಸಭಾಪತಿ ಅವರ ಕರ್ತವ್ಯ ನಿರ್ವಹಿಸುವರು.

Related Posts

Leave a Reply

Your email address will not be published.