ಜಾಂಬೂರಿಗೆ ಮೆರಗು ನೀಡಲಿರುವ ಕೃಷಿ ,ವಿಜ್ಞಾನ ಮೇಳ

ಮೂಡುಬಿದಿರೆ: ದೇಶಿಯ ಸಂಸ್ಕೃತಿಯನ್ನು ಆಳ್ವಾಸ್ ನುಡಿಸಿರಿ, ವಿರಾಸತ್ ಮುಖೇನ ಕಳೆದ ಎರಡುವರೆ ದಶಕಗಳಲ್ಲಿ ಸಾದರಪಡಿಸಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಈ ಬಾರಿ ಒಂದು ವಾರಗಳ ಅಂತಾರಾಷ್ಟ್ರೀಯ ಸ್ಕೌಟ್‍ಗೈಡ್ಸ್ ಸಾಂಸ್ಕೃತಿಕ ಜಾಂಬೂರಿಯನ್ನು ಆಯೋಜಿಸುತ್ತಿದೆ. ಈ ಬಾರಿ ಜಾಂಬೂರಿಗೆ ವಿಶೇಷವಾಗಿ ಕೃಷಿ ಮತ್ತು ವಿಜ್ಞಾನ ಮೇಳಗಳು ವಿಶೇಷ ಮೆರುಗು ನೀಡಲಿದೆ.

ಕೃಷಿ ಮಹತ್ವವನ್ನು ಬಿಂಬಿಸುವ ನಿಟ್ಟಿನಲ್ಲಿ ಜಾಂಬೂರಿಯಂದು ಆಳ್ವಾಸ್ ಆವರಣದ ಸುಮಾರು 12 ಎಕರೆ ಪ್ರದೇಶದ ಮೈದಾನದಲ್ಲಿ ಕೃಷಿ ಮೇಳ ಆಯೋಜನೆಗೊಂಡಿದೆ. ಸುಮಾರು 40 ಬಗೆಯ ತರಕಾರಿ, 550 ವಿಧದ ಸಾಂಪ್ರದಾಯಿಕ ಭತ್ತ, ವಿದೇಶಿ ಲೆಟಿಸ್ , ಬ್ರುಕೋಲಿ ಸೊಪ್ಪು, ಝುಚಿನಿ, ವಿದೇಶಿ ಪಂಪ್ ಕಿನ್, 6 ಬಗೆಯ ಸೋರೆ ಕಾಯಿ ತಳಿ, 70 ವಿಧದ ಬಾಳೆ ಹಣ್ಣು, ಸುಮಾರು 700 ದೇಶೀಯ ಭತ್ತದ ತಳಿಗಳು, ಸಿರಿ ಧಾನ್ಯ, ಎಣ್ಣೆ ಕಾಳುಗಳು, 40 ಬಗೆಯ ಪುರಾತನ ಸಾಂಪ್ರದಾಯಿಕ ಗೆಡ್ಡೆ ಗೆಣಸುಗಳನ್ನು ಬೆಳೆಯಲಾಗಿದೆ. 150 ಕ್ಕೂ ಅಧಿಕ ತೆಂಗಿನ ಕಾಯಿ ಕಲಾಕೃತಿಗಳು ಕಾಣ ಸಿಗಲಿದೆ. 200 ಬಗೆಯ ಆಯುರ್ವೇದಿಕ್ ಔಷಧ ಭರಿತ ಹಣ್ಣು ಮತ್ತು ಕಾಯಿ, 20 ಬಗೆಯ ಅಡಿಕೆಗಳು, 110 ಬಗೆಯ ವಿದೇಶಿ ಹಣ್ಣುಗಳು, 40 ಬಗೆಯ ವಿದೇಶಿ ತರಕಾರಿಗಳು, ವಿವಿಧ ಬಗೆಯ ಧಾನ್ಯ, ದೇಶದ ವಿವಿಧ ರಾಜ್ಯದ ವಿವಿಧ ಬಗೆಯ ತರಕಾರಿಗಳು, ಚೈನೀಸ್ ಕಾಲಿಫ್ಲವರ್, 100 ಬಗೆಯ ಅಕ್ಕಿ, ತರಕಾರಿ ಮತ್ತು ಹಣ್ಣುಗಳಲ್ಲಿ ಕರಾವಳಿ ಸಂಸ್ಕೃತಿ ಪ್ರತಿಬಿಂಬಿಸುವ ಕಲಾಕೃತಿ ಹೀಗೆ ಹತ್ತು ಹಲವಾರು ಬಗೆಯ ಕೃಷಿ ಜಗತ್ತು ಕೃಷಿ ಮೇಳದಲ್ಲಿ ರಾರಾಜಿಸಲಿದೆ.

ವಿವಿಧ ಬಗೆಯ ತರಕಾರಿಗಳ ಜತೆಗೆ ವಿವಿಧ ಬಗೆಯ ಆಕರ್ಷಣೀಯ ಹೂವುಗಳು- ಗುಲಾಬಿ, ಸೂರ್ಯಕಾಂತಿ, ಜೀನ್ಯಾ, ಡೇಲಾ, ಚೆಂಡುಹೂವು, ಹಾಗು ಇನ್ನಿತರ ಹೂವುಗಳನ್ನು ಬೆಳೆಸಲಾಗಿದೆ. ಸುಮಾರು 4 ತಿಂಗಳಿನಿಂದಲೂ 25ಕ್ಕೂ ಅಧಿಕ ಮಂದಿ ಕೃಷಿಮೇಳಕ್ಕಾಗಿ ಶ್ರಮಿಸಿದ್ದಾರೆ. ದಿನಕ್ಕೆರಡು ಬಾರಿ ನೀರು, ವಾತಾವರಣಕ್ಕೆ ಸರಿಯಾದ ಪೆÇೀಷಣೆಗಳು ನಡೆಯುತ್ತಲೇ ಇದೆ. ಕೃಷಿ ಮೇಳದ ಪ್ರದರ್ಶನ ಹಾಗೂ ಮಾರಾಟ ಸುಮಾರು 600 ಮಳಿಗೆಗಳಲ್ಲಿ ನಡೆಯಲಿದ್ದು, ಯಂತ್ರೋಪಕರಣಗಳು, ನರ್ಸರಿ, ಕೃಷಿಗೆ ಪೂರಕವಾದ ಗುಡಿ ಕೈಗಾರಿಕೆ, ಮಡಿಕೆ ತಯಾರಿಕೆ, ಅಡಿಕೆ ಸುಲಿಯುವ ಯಂತ್ರ, ಕರಕುಶಲ ವಸ್ತುಗಳು, ಬುಟ್ಟಿ ತಾಯಾರಿಕಾ ವಸ್ತುಗಳು, ಇನ್ನು ಅನೇಕ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಇರಲಿವೆ.

ವಿಜ್ಞಾನ ಮೇಳ: ಜಾಂಬೂರಿಯಲ್ಲಿ ಭಾಗವಹಿಸುವ ಎಲ್ಲಾ ಸ್ಕೌಟ್-ಗೈಡ್ ವಿದ್ಯಾರ್ಥಿಗಳಿಗೆ ಪೆÇೀಷಕರಿಗೆ ವಿಜ್ಞಾನದ ಲೋಕವನ್ನು ಪರಿಚಯಿಸುವ, ವೈಜ್ಞಾನಿಕ ಚಿಂತನೆಯನ್ನು ಬೆಳೆಸಲು, ವೈಜ್ಞಾನಿಕ ಆವಿಷ್ಕಾರಗಳ ಹೊಳಹು ನೀಡಲು ಹಾಗೂ ವೈಜ್ಞಾನಿಕ ಶಿಕ್ಷಣ ಮತ್ತು ಸಮುದಾಯದ ಬಹುಮುಖಿ ಬೆಳವಣಿಗೆಗೆ ವಿಜ್ಞಾನವನ್ನು ಉಪಯೋಗಿಸುವ ಸಾಧ್ಯತೆಗಳನ್ನೂ ಪ್ರಸ್ತುತ ಪಡಿಸುವ ಉದ್ದೇಶದೊಂದಿಗೆ ಬೃಹತ್ ವಿಜ್ಞಾನ ಮೇಳವನ್ನು ಆಯೋಜಿಸಲಾಗಿದೆ. ಈ ವಿಜ್ಞಾನ ಮೇಳದಲ್ಲಿ ಒಟ್ಟು 11 ವಿವಿಧ ವಿಭಾಗಗಳಿದ್ದು, ಪ್ರತೀ ವಿಭಾಗವು ಕಲಿಕೆಯ ಸಾಧ್ಯತೆಗಳನ್ನು ತೆರೆದಿಡಲಿದೆ. ಪ್ರಾಥಮಿಕ, ಪ್ರೌಢ ಮತ್ತು ಪದವಿಪೂರ್ವ ವಿದ್ಯಾರ್ಥಿಗಳ ವಿಜ್ಞಾನ ಪ್ರಾತ್ಯಕ್ಷಿಕೆಗಳ ವಿಭಾಗ. ಕಾಲೇಜು ವಿದ್ಯಾರ್ಥಿಗಳ ಆವಿಷ್ಕಾರಗಳ ಪ್ರಾತ್ಯಕ್ಷಿಕೆ ಮತ್ತು ಸ್ಪರ್ಧಾ ವಿಭಾಗ, ಇಂಜಿನಿಯರಿಂಗ್ ವಿದ್ಯಾರ್ಥಿಗಳ ಆವಿಷ್ಕಾರಗಳ ಪ್ರಾತ್ಯಕ್ಷಿಕೆ, ವೈದ್ಯ ವಿಜ್ಞಾನ ಮತ್ತು ವಿವಿಧ ವೈದ್ಯಕೀಯ ಸಲಕರಣೆಗಳು ಹಾಗು ವೈದ್ಯಕೀಯ ಉಪಕ್ರಮಗಳ ಪ್ರಾತ್ಯಕ್ಷಿಕೆ, ವಿವಿಧ ಕೈಗಾರಿಕಾ ಯಂತ್ರೋಪಕರಣಗಳ ಪ್ರಾತ್ಯಕ್ಷಿಕೆ, ರಾಷ್ಟ್ರೀಯ ಮಟ್ಟದ ವಿಜ್ಞಾನ ಸಂಶೋಧನಾ ಕೇಂದ್ರಗಳ ಆವಿಷ್ಕಾರಗಳ ಪರಿಚಯಾತ್ಮಕ ಪ್ರಾತ್ಯಕ್ಷಿಕೆ,

ವಿವಿಧ ವೈಜ್ಞಾನಿಕ ಶಿಕ್ಷಣ ಕೇಂದ್ರಗಳಿಗೆ ತಂಡಗಳಾಗಿ ಭೇಟಿ ನೀಡುವ ಕಾರ್ಯಕ್ರಮ, ವಿವಿಧ ವೈಜ್ಞಾನಿಕ ಕ್ಲಬ್ ಗಳ ಆಕರ್ಷಕ ಪ್ರಾತ್ಯಕ್ಷಿಕೆಗಳು, ವಿವಿಧ ಸರ್ಕಾರಿ ಇಲಾಖೆಗಳ ಯೋಜನೆ ಮತ್ತು ವೈಜ್ಞಾನಿಕ ತಂತ್ರಗಾರಿಕೆಗಳ ಪ್ರಧರ್ಶನ, ದೇಶದ ವಿವಿಧ ಸಾಂಪ್ರದಾಯಿಕ ಹಾಗೂ ವೈಜ್ಞಾನಿಕ ಆಟಿಕೆಗಳ ಪ್ರದರ್ಶನ ಹಾಗೂ ಗಣಕ ವಿಜ್ಞಾನ ಆಧಾರಿತ ಐಡಿಯಾಥಾನ್- ಹಾಕಥಾನ್‍ಗಳು ವಿಜ್ಞಾನ ಮೇಳದಲ್ಲಿರಲಿವೆ. ವಿಜ್ಞಾನ ಮೇಳದಲ್ಲಿ ಇಸ್ರೋ, ಐಐಎಸ್ಸಿ, ಡಿಆರ್‍ಡಿಒ, ಸಿತಾರ್ ಇತ್ಯಾದಿ ಸಂಸ್ಥೆಗಳಿಂದ ವಿಜ್ಞಾನಿಗಳು ಆಗಮಿಸಲಿದ್ದು, ಅವರೊಂದಿಗೆ ಸಂವಾದಕ್ಕೂ ಅವಕಾಶವಿದೆ. ವೈಜ್ಞಾನಿಕ ಉಪಕರಣಗಳನ್ನು ಪ್ರದರ್ಶಿಸಲಾಗುವುದು. ಸಿಪಿಸಿಆರ್ ಐ, ಕೃಷಿ ಸಂಶೋಧನಾ ಕೇಂದ್ರಗಳು ಭಾಗವಹಿಸಲಿದ್ದಾರೆ.

Related Posts

Leave a Reply

Your email address will not be published.