ಅರೆಬಾಸೆ ಗ್ರಾಮೋತ್ಸವ -2026

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಹಾಗೂ ಮಡಪ್ಪಾಡಿಯ ಗ್ರಾಮ ಗೌಡ ಸಮಿತಿ ಮತ್ತು ಗೌಡ ಮಹಿಳಾ ಘಟಕಗಳ ಜಂಟಿ ಆಶ್ರಯದಲ್ಲಿ ಒಂದು ದಿನದ ‘ಅರೆಬಾಸೆ ಗ್ರಾಮೋತ್ಸವ –2026’ ಕಾರ್ಯಕ್ರಮವು ಮಾರ್ಚ್ 8ರಂದು ಜರುಗಲಿದೆ. ಅಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಗೋಳ್ಯಾಡಿ ತಮ್ಮಪ್ಪ ಗೌಡ ರಂಗಮಂದಿರದಲ್ಲಿ ‘ಅರೆಬಾಸೆ ಒಳ್ಸೊಮ… ಅರೆಬಾಸೆ ಬೆಳ್ಸೊಮ..’ ಎಂಬ ಆಶಯದೊಂದಿಗೆ ಪೂರ್ವಾಹ್ನ ಗಂಟೆ 9.30ರಿಂದ ಜರುಗಲಿರುವ ಕಾರ್ಯಕ್ರಮವನ್ನು ಅರೆಭಾಷೆ ಅಕಾಡೆಮಿಯ ಪೂರ್ವಾಧ್ಯಕ್ಷರಾದ ಪಿ.ಸಿ. ಜಯರಾಮ ಉದ್ಘಾಟಿಸಲಿದ್ದು ಅರೆಭಾಷೆ ಅಕಾಡೆಮಿಯ ಅಧ್ಯಕ್ಷರಾದ ಸದಾನಂದ ಮಾವಜಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ದ.ಕ. ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ, ಮಡಪ್ಪಾಡಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ವಿನಯ್ ಮುಳುಗಾಡು, ದ.ಕ. ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ವೆಂಕಟ್ ದಂಬೆಕೋಡಿ, ವಳಲಂಬೆಯ ಶ್ರೀ ಶಂಖಪಾಲ ಸುಬ್ಯಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮಿತ್ರದೇವ ಮಡಪ್ಪಾಡಿ, ಸುಳ್ಯ ತಾಲೂಕು ಗೌಡರ ಯುವ ಸೇವಾ ಸಂಘದ ಅಧ್ಯಕ್ಸ ಪಿ.ಎಸ್. ಗಂಗಾಧರ್ ಮತ್ತು ಮಡಪ್ಪಾಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ಸದಾನಂದ ಬಲ್ಕಜೆ ಆಗಮಿಸಲಿದ್ದಾರೆ.

ಆರಂಭದಲ್ಲಿ ಪೂರ್ವಾಹ್ನ ಗಂಟೆ 9.30ಕ್ಕೆ ಮಡಪ್ಪಾಡಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷರಾದ ನಿತ್ಯಾನಂದ ಬಳ್ಳಡ್ಕರವರು ವಿವಿಧ ಸಾಂಸ್ಕೃತಿಕ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಕೃಷಿ ಮತ್ತು ಕೃಷಿ ಸಂಬಂಧಿಸಿದ ಕೌಶಲ್ಯಮಯ ಕೆಲಸಗಳಾದ ಬುಟ್ಟಿ ಹೆಣೆಯುದು, ಗೆರಸೆ ತಯಾರಿ,ತೆಂಗಿನ ಗರಿಗಳಿಂದ ವಿವಿಧ ಬಗೆಯ ಪರಿಕರಗಳನ್ನು ತಯಾರಿಸುವುದು ಹಾಗೂ ಅರೆಭಾಸಿಕರು ತಮ್ಮ ದಿನನಿತ್ಯದ ಕೆಲಸಕ್ಕೆ ಉಪಯೋಗಿಸುತ್ತಿದ್ದ ಪರಿಕರಗಳ ಪ್ರಾತ್ಯಕ್ಷಿಕೆಗಳನ್ನು ಪ್ರಗತಿಪರ ಕೃಷಿಕರಾದ ಕೇಪಣ್ಣ ಗೌಡ ಅಂಬೆಕಲ್ಲು ಉದ್ಘಾಟಿಸಲಿದ್ದಾರೆ. ಪೂರ್ವಾಹ್ನ ಗಂಟೆ 11ರಿಂದ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಖ್ಯಾತ ಹಾಡುಗಾರರಿಂದ ಅರೆಬಾಸೆ ಪದ್ಯ ಗೊಂಚ್ಲ್‍ (ಆರ್ಕೆಸ್ಟ್ರಾ), ಕುಣಿತ ಮತ್ತು ವಿವಿಧ ಸ್ಪರ್ಧೆಗಳು ನಡೆಯಲಿವೆ.

ಸಂಜೆ ಗಂಟೆ 4ರಿಂದ ಸದಾನಂದ ಮಾವಜಿಯವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿ ಬೆಳ್ತಂಗಡಿಯ ಪ್ರಸನ್ನ ಕಾಲೇಜಿನ ಉಪನ್ಯಾಸಕಿ ಶ್ರೀಮತಿ ಸುಶ್ಮಿತಾ ಆದಿತ್ಯ ಚಿದ್ಗಲ್ ಸಮಾರೋಪ ಮಾತುಗಳನ್ನಾಡಲಿದ್ದಾರೆ. ಮುಖ್ಯ ಅತಿಥಿಯವರಾಗಿ ಸುಳ್ಯ ತಾಲೂಕು ಗೌಡರ ಯುವ ಸೇವಾ ಸಂಘದ ಸ್ಥಾಪಕಾಧ್ಯಕ್ಷ ನಿತ್ಯಾನಂದ ಮುಂಡೋಡಿ, ದ.ಕ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಹರೀಶ್ ಕಂಜಿಪಿಲಿ, ಗೌಡರ ಯುವ ಸೇವಾ ಸಂಘದ ಪೂರ್ವಾಧ್ಯಕ್ಷ ದಿನೇಶ್ ಮಡಪ್ಪಾಡಿ, ಮಡಪ್ಪಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಶ್ರೀಮತಿ ಉಷಾ ಜಯರಾಮ, ಮಡಪ್ಪಾಡಿಯ ಸ.ಹಿ.ಪ್ರಾ. ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯ ಕುಶಾಲಪ್ಪ ಪಾರೆಪ್ಪಾಡಿ ಮತ್ತು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ ದಿನೇಶ್ ಹಾಲೆಮಜಲು ಭಾಗವಹಿಸಲಿದ್ದಾರೆ.
ಸ್ವರ್ಗಸ್ತರಾದವರಿಗೆ ಸ್ವರ್ಗ ಸಂಧಿಸುವುದು, ಮುದುವೆಯಲ್ಲಿ ವಧುವನ್ನು ವರನಿಗೆ ವಹಿಸಿಕೊಡುವುದು, ದೈವಕ್ಕೆ ಬಿನ್ನೆ ಮಾಡಿಕೊಳ್ಳುದು ಮತ್ತು ಅರೆಭಾಷೆ ರಸಪ್ರಶ್ನೆ ಸ್ಪರ್ಧೆಗೆ ಮುಕ್ತ ಅವಕಾಶವಿರುತ್ತದೆ . ಅರೆಭಾಷೆ ಸಿನೆಮಾ “ಕೋಲ” ಪ್ರದರ್ಶನ ಗೊಳ್ಳಲಿದೆ. ಖ್ಯಾತ ಕಲಾವಿದರಿಂದ ಅರೆಭಾಷೆ ಯಕ್ಷಗಾನ ‘’ಭಸ್ಮಾಸುರ ಮೋಹಿನಿ ಯಕ್ಷಗಾನ“ನಡೆಯಲಿದೆ
ಸನ್ಮಾನಗಳು
ಮಡಪ್ಪಾಡಿ ಗ್ರಾಮದೊಳಗಿರುವ, ವಿವಾಹವಾಗಿ 50 ವರ್ಷಗಳು ಪೂರ್ತಿಯಾಗಿರುವ ದಂಪತಿಗಳಿಗೆ ವಿಶೇಷ ಗೌರವ ಸನ್ಮಾನವಿದೆ. ಜೊತೆಗೆ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನವೂ ನಡೆಯಲಿದ್ದು ಮಾಯಿಪ್ಪನಮನೆ ಲಕ್ಷ್ಮಣ ಗೌಡ (ಸಾಹಿತ್ಯ), ಡಾ. ಹರಿಣಾಕ್ಷಿ ಸೀತಾರಾಮ ಕೇವಳ (ಸಂಶೋಧನೆ), ತಾರಾನಾಥ ಅಂಬೆಕಲ್ಲು (ಯಕ್ಷಗಾನ) ಮತ್ತು ಶ್ರೀಮತಿ ಶಿವಮ್ಮ ಬಲ್ಕಜೆ (ಹೆರಿಗೆ ಮತ್ತು ನಾಟಿವೈದ್ಯ) ಸನ್ಮಾನ ಸ್ವೀಕರಿಸಲಿದ್ದಾರೆ.

ಮಡಪ್ಪಾಡಿ ಗ್ರಾಮದ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸಬೇಕೆಂದು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಸದಾನಂದ ಮಾವಜಿ ಹಾಗೂ ಸದಸ್ಯ ಸಂಚಾಲಕರಾದ ಶ್ರೀಮತಿ ಲತಾ ಪ್ರಸಾದ್ ಕುದ್ಪಾಜೆ ಕೋರಿಕೊಂಡಿದ್ದಾರೆ.

Related Posts

Leave a Reply

Your email address will not be published.