ಇಖ್ರಾ ಅರೆಬಿಕ್ ಶಾಲೆ : ಗಣರಾಜ್ಯೋತ್ಸವ

ಮಂಗಳೂರು ನಗರದ ಕಂಕನಾಡಿಯ ಇಖ್ರಾ ಅರೆಬಿಕ್ ಶಾಲೆಯಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಹಾಗೂ ವಿಧಾನ ಸಭೆಯ ಪ್ರತಿಪಕ್ಷದ ಉಪನಾಯಕ ಯು.ಟಿ.ಖಾದರ್ ಅವರು ಧ್ವಜಾರೋಹಣ ನೆರವೇರಿಸಿದರು. ಭಾರತ ಸಂವಿಧಾನವು ಪ್ರತಿಯೊಬ್ಬರಿಗೂ ಗೌರವದಿಂದ ಬದುಕು ಅವಕಾಶವನ್ನು ಕಲ್ಪಿಸಿದೆ. ಎಲ್ಲಾ ಧರ್ಮೀಯರಿಗೂ ಧಾರ್ಮಿಕ ಸ್ವಾತಂತ್ರ್ಯವನ್ನು ಕಲ್ಪಿಸಿದೆ. ದೇಶದ ಕಾನೂನಿಗೆ ತಲೆಬಾಗಿ ಪ್ರತಿಯೊಬ್ಬರು ಸಂವಿಧಾನ ಮೌಲ್ಯಕ್ಕೆ ತಕ್ಕಂತೆ ಬದುಕು ರೂಪಿಸಬೇಕು ಎಂದು ಯು.ಟಿ.ಖಾದರ್ ಅವರು ಈ ಸಂದರ್ಭದಲ್ಲಿ ಹೇಳಿದರು.

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ವೀ ಫೋರ್ ನ್ಯೂಸ್ ಚಾನೆಲ್ ಸಂಪಾದಕ ತಾರಾನಾಥ್ ಗಟ್ಟಿ ಕಾಪಿಕಾಡ್ ಅವರು ಮಾತನಾಡಿ , ಈ ದೇಶದಲ್ಲಿ ಎಲ್ಲಾ ಧರ್ಮೀಯರಿಗೂ ಸಮಾಮವಾಗಿ ಬದುಕುವ ಅವಕಾಶವನ್ನು ಡಾ.ಬಿ.ಆರ್.ಅಂಬೇಡ್ಕರ್ ಅವರ ನೇತೃತ್ವದಲ್ಲಿ ರಚನೆಯಾದ ಸಂವಿಧಾನವು ಕಲ್ಪಿಸಿದೆ ಎಂದು ಹೇಳಿದರು.

ಇನ್ನೋರ್ವ ಮುಖ್ಯ ಅತಿಥಿ ಹಿರಿಯ ಪತ್ರಕರ್ತ ಆರೀಫ್ ಪಡುಬಿದ್ರಿ ಅವರು ಮಾತನಾಡಿ , ಭಾರತದ ಸಂವಿಧಾನವು ಜಗತ್ತಿನಲ್ಲಿಯೇ ಅತ್ಯಂತ ಶ್ರೇಷ್ಠವಾದ ಸಂವಿಧಾನ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಯೆನೆಪೋಯ ಮೆಡಿಕಲ್ ಕಾಲೇಜಿನ ವೈದ್ಯೆ ಡಾ.ನೈಸಾನ , ಬ್ಲಡ್ ಡೋನರ್ಸ್ ಬಳಗದ ಸಿದ್ದಿಕ್ ಮಂಜೇಶ್ವರ ಉಪಸ್ಥಿತರಿದ್ದರು.

ಶಿಕ್ಷಕ ಮಹಮ್ಮದ್ ಫರ್ಹಾನ್ ನದ್ವಿ ಸ್ವಾಗತಿಸಿದರು. ಇಖ್ರಾ ಅರೆಬಿಕ್ ಶಾಲೆಯ ಪ್ರಾಂಶುಪಾಲ ಮೌಲಾನಾ ಸಲೀಮ್ ನದ್ವಿ ವಂದಿಸಿದರು.ಸಭಾ ಕಾರ್ಯಕ್ರಮದ ಬಳಿಕ ರಕ್ತದಾನ ಶಿಬಿರ ನಡೆಯಿತು

Related Posts

Leave a Reply

Your email address will not be published.