ಮುರುಳ್ಯ ಅಲೆಕ್ಕಾಡಿ ಶಾಲಾ ವಠಾರದಲ್ಲಿ ಅಡಿಕೆ ಗಿಡ ನೆಡುವ ಕಾರ್ಯಕ್ರಮ

ಮುರುಳ್ಯ ಗ್ರಾಮದ ಅಲೆಕ್ಕಾಡಿ ಶಾಲ ವಠಾರದಲ್ಲಿ ಶಾಲೆಗೆ ಆರ್ಥಿಕ ಶಕ್ತಿ ತುಂಬುವ ಸಲುವಾಗಿ ಇಂದು ಅಡಿಕೆ ಗಿಡಗಳನ್ನು ನೆಡುವ ಕಾರ್ಯಕ್ರಮ ನಡೆಯಿತು. ಶಾಸಕರು ಸಸಿ ನಡುವ ಮೂಲಕ ಚಾಲನೆ ನೀಡಿದರು.


ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರ ಶಾಲೆಯ ಅಭಿವೃದ್ಧಿ ದೃಷ್ಟಿಯಿಂದ ಇದು ಒಳ್ಳೆಯ ಕಾರ್ಯ ಶಾಲೆಗೆ ಬೇಕಾದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಾಡಲು ಇದರಿಂದ ಮುಂದಿನ ದಿನಗಳಲ್ಲಿ ಪ್ರಯೋಜನವಾಗಲಿದೆ,ಇಂತಹ ಸ್ವಾವಲಂಬಿ ಯೋಜನೆಗಳನ್ನು ಇಲ್ಲಾ ಜಾಗ ಇರುವ ಶಾಲೆಗಳಲ್ಲಿ ಹಮ್ಮಿಕೊಂಡರೆ ಒಳ್ಳೆಯದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮಪಂಚಾಯತ್ ಅಧ್ಯಕ್ಷೆ ವನಿತಾ ಸುವರ್ಣ, ಉಪಾಧ್ಯಕ್ಷೆ ಜಾನಕಿ ಮುರುಳ್ಯ, ಪಂಚಾಯತ್ ಸದಸ್ಯರುಗಳು, ಶಾಲಾ SDMC ಅಧ್ಯಕ್ಷರು,ಸದಸ್ಯರು, ಶಾಲಾಮುಖ್ಯೊಪಾಧ್ಯಾಯರು, ಮಕ್ಕಳ ಪೋಷಕರು, ಶಾಲಾ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.

Related Posts

Leave a Reply

Your email address will not be published.