ಗೂಢಚಾರಿಕೆ ಉಪಗ್ರಹ ಮೇಲೇರಿಸಿದ ದಕ್ಷಿಣ ಕೊರಿಯಾ
ಇತ್ತೀಚೆಗೆ ಉತ್ತರ ಕೊರಿಯಾವು ಗೂಢಚಾರಿಕೆ ಸಂಬಂಧದ ಉಪಗ್ರಹವನ್ನು ಹಾರಿಸಿದ ಬೆನ್ನಿಗೇ ದಕ್ಷಿಣ ಕೊರಿಯಾ ಸಹ ಅದಕ್ಕೆ ಸಂವಾದಿಯಾಗಿ ಗೂಢಚಾರಿಕೆ ಉಪಗ್ರಹವನ್ನು ಕಕ್ಷೆಗೇರಿಸಿತು. ಕ್ಯಾಲಿಫೋರ್ನಿಯಾದ ವ್ಯಾಂಡೆನ್‍ಬರ್ಗ್ ಬಾಹ್ಯಾಕಾಶ ಬೇಸ್ ಕೇಂದ್ರದಲ್ಲಿ ಸ್ಪೇಸ್ ಎಕ್ಸ್ ಫಾಲ್ಕನ್ 9 ರಾಕೆಟ್ ಬಳಸಿ ಈ ಉಪಗ್ರಹವನ್ನು ಕಕ್ಷೆಗೆ ಏರಿಸಲಾಯಿತು. ಈ ವಾರದ ಆರಂಭದಲ್ಲಿ ಗಗನಕ್ಕಟ್ಟಲು ಯೋಜಿಸಲಾಗಿತ್ತು. ಹವಾಮಾನದ ವೈಪರೀತ್ಯದ ಕಾರಣ ವಾರದ ಕೊನೆಯಲ್ಲಿ ಆಕಾಶ ಕಾಣಿಸಲಾಗಿದೆ.
ಮಲಿಗ್‍ಯಾಂಗ್ 1 ಎಂಬ ಗೂಢಚಾರಿಕೆ ಉಪಗ್ರಹವನ್ನು ಮೇಲೇರಿಸಿರುವ ಉತ್ತರ ಕೊರಿಯಾ ಅದರಿಂದ ಈಗಾಗಲೇ ಲೋಕದ ನಾನಾ ಮೂಲೆಯ ಫೋಟೋ ಪಡೆಯುತ್ತಿರುವುದಾಗಿ ಘೋಷಿಸಿದೆ.ಅಮೆರಿಕದ ಸಹಾಯದಿಂದ ಅದಕ್ಕೆ ಪ್ರತಿಯಾಗಿ ಗೂಢಚಾರಿಕೆ ಉಪಗ್ರಹ ಹಾರಿಸಿರುವ ದಕ್ಷಿಣ ಕೊರಿಯಾವು, ನಮ್ಮ ರಕ್ಷಣಾ ಇಲಾಖೆಯು ಇದರ ಹತೋಟಿ ಕೇಂದ್ರವನ್ನು ಸಜ್ಜುಗೊಳಿಸಿದೆ ಎಂದು ಹೇಳಿಕೆ ನೀಡಿದೆ.