ಮಂಗಳೂರು : ಪಾಂಡೆಶ್ವರ ಮಹಿಳಾ ಪೋಲಿಸ್ ಠಾಣೆಯ ASI ರಾಜೇಶ್ ಹೆಗ್ಡೆ ಹೃದಯಾಘಾತದಿಂದ ನಿಧನ

ಪಾಂಡೇಶ್ವರ ಮಹಿಳಾ ಠಾಣೆಯ ASI ರಾಜೇಶ್ ಹೆಗ್ಢೆಯವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಕಾಸರಗೋಡಿನ ಚಿತ್ತಾರಿ ನಿವಾಸಿಯಾಗಿದ್ದ ಅವರು ಉರ್ವಸ್ಟೋರ್ ಬಳಿ ಮನೆಮಾಡಿ ನೆಲೆಸಿದ್ದರು,1993 ಬ್ಯಾಚ್ ನಲ್ಲಿ ಪೋಲಿಸ್ ಇಲಾಖೆಗೆ ಸೆರ್ಪಡೆಗೊಂಡ ಅವರು ವಿಟ್ಲ ಠಾಣೆಯಲ್ಲಿ ಮೊದಲ ಕರ್ತವ್ಯ ವನ್ನು ನೆರೆವೆರಿಸಿದ್ದರು.
ಜನಸ್ನೇಹಿ ಪೋಲಿಸರಾಗಿದ್ದ ಅವರು 32 ವರ್ಷಗಳಿಂದ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು,ಅವರು ಮಡದಿ ,ಮಗ ಹಾಗೂ ಅಪಾರ ಬಂಧು ಮಿತ್ರರನ್ನು ಅಗಳಿದ್ದಾರೆ.