Home Articles posted by v4news (Page 85)

ತುಳು ಭವನದಲ್ಲಿ ತುಳು ಹಾಗೂ ಕನ್ನಡ ಚಲನಚಿತ್ರ ನಟನಾ ತರಗತಿ ಉದ್ಘಾಟನೆ

ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಸಹಭಾಗಿತ್ವದಲ್ಲಿ ಲೆನ್ಸ್ ಕ್ಯಾಪ್ ಪಿಕ್ಚರ್ಸ್ ನಡೆಸುವ ತುಳು ಹಾಗೂ ಕನ್ನಡ ಚಲನಚಿತ್ರ ನಟನಾ ತರಗತಿ ಸೆ.5ರಂದು ತುಳು ಭವನದಲ್ಲಿ ಉದ್ಘಾಟನೆಗೊಳ್ಳಲಿದೆ. ಮಂಗಳೂರಿನ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದ ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷ ದಯಾನಂದ ಕತ್ತಲ್‍ಸಾರ್, ತುಳು ಹಾಗೂ ಕನ್ನಡ ಭಾಷೆಯಲ್ಲಿ

ಕಲ್ಲಿಕೋಟೆಯಿಂದ ನೇಪಾಳಕ್ಕೆ ಬೈಕ್ ಯಾತ್ರೆ

ಉಳ್ಳಾಲ: ಡಬ್ಬದಲ್ಲಿ ಹಣವನ್ನು ಕೂಡಿಟ್ಟು, ಸಮಾಜಕ್ಕೆ ಸೌಹಾರ್ದದ ಸಂದೇಶ ಹಾಗೂ ಸಾಯುವ ಮುನ್ನ ಅನಿಸಿದ್ದನ್ನು ಸಾಧಿಸು ಅನ್ನುವ ಉದ್ದೇಶವನ್ನು ಮುಂದಿಟ್ಟು ಕೇರಳದ ಹವ್ಯಾಸಿ ಬೈಕ್ ರೈಡರ್‍ಗಳ ಒಂಭತ್ತು ಮಂದಿಯ ತಂಡ ಕಲ್ಲಿಕೋಟೆಯಿಂದ – ನೇಪಾಳ ಪ್ರವಾಸವನ್ನು ಆರಂಭಿಸಿದೆ. ಆ.27 ರಂದು ಪ್ರವಾಸವನ್ನು ಆರಂಭಿಸಿದ ತಂಡ ಇಂದು ದೇರಳಕಟ್ಟೆಯನ್ನು ತಲುಪಿದೆ. ಅಲ್ಲಿಂದ ಐದು ಬೈಕುಗಳಲ್ಲಿ ಪ್ರವಾಸ ಮುಂದುವರಿಸಿದ ತಂಡ ಇಂದು ಗೋಕರ್ಣ ತಲುಪಿ ಅಲ್ಲೇ ಉಳಿಯಲಿದೆ.

ಮಂಗಳೂರಿನಲ್ಲಿ ವಿಶ್ವಹಿಂದು ಪರಿಷತ್, ದುರ್ಗಾವಾಹಿನಿ ವತಿಯಿಂದ ಪ್ರತಿಭಟನೆ

ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಕಾಲೇಜು ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿ ಲೈಂಗಿಕ ಹಲ್ಲೆ ನಡೆಸಿದ್ದ ಆರೋಪಿಗಳನ್ನು ಬಂಧಿಸಿದ್ದು ಉಳಿದ ಆರೋಪಿಗಳನ್ನು ಶೀಘ್ರವಾಗಿ ಬಂಧಿಸಿ ಅವರಿಗೆ ಕಠಿಣ ಶಿಕ್ಷೆಯನ್ನು ನೀಡಬೇಕು ಹಾಗೂ ಮಹಿಳೆಯರಿಗೆ ರಕ್ಷಣೆಯನ್ನು ನೀಡಬೇಕೆಂದು ಸರಕಾರವನ್ನು ಒತ್ತಾಯಿಸಿ ದುರ್ಗಾವಾಹಿನಿ ವತಿಯಿಂದ ಪ್ರತಿಭಟನೆ ನಡೆಸಿದರು. ಕದ್ರಿ ಮಲ್ಲಿಕಟ್ಟೆ ವೃತ್ತದ ಬಳಿ ಪ್ಲೆಕಾರ್ಡ್ ಹಿಡಿದು ಪ್ರತಿಭಟನೆ ನಡೆಸಿದರು. ಎಲ್ಲಾ

ಉಡುಪಿಯಲ್ಲಿ ಸರಳವಾಗಿ ಶ್ರೀಕೃಷ್ಣ ಜನ್ಮಾಷ್ಠಮಿ

ಉಡುಪಿಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮ ಮನೆ ಮಾಡಿದೆ.ಶ್ರೀ ಕೃಷ್ಣ ಮಠದಲ್ಲಿ ಕೊವಿಡ್ ನಿಯಮಾವಳಿ ಅನುಸರಿಸಿ ಸರಳವಾಗಿ ಜನ್ಮಾಷ್ಟಮಿ ಅಚರಿಸಲಾಯಿತು. ಪರ್ಯಾಯ ಶ್ರೀಪಾದರಿಂದ ಶ್ರೀ ಕೃಷ್ಣ ದೇವರನ್ನು ವಿಶೇಷವಾಗಿ ಅಲಂಕರಿಸಿ, ತುಳಸಿ ಅರ್ಚನೆಯನ್ನು ಮಾಡಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಪರ್ಯಾಯ ಶ್ರೀ ಈಶ ಪ್ರಿಯರು, ಅದಮಾರು ಹಿರಿಯ ಶ್ರೀ ಗಳಾದ ವಿಶ್ವ ಪ್ರಿಯ ಶ್ರೀಪಾದರು, ಕೃಷ್ಣಪುರ ಮಠದ ವಿದ್ಯಾ ಸಾಗರ ಶ್ರೀಪಾದರು, ಕಾಣಿಯೂರು ಮಠದ ವಿಶ್ವ ವಲ್ಲಭ ಶ್ರೀ

ಪುತ್ತೂರು ನಗರಸಭೆ ಅಧ್ಯಕ್ಷರಿಗೆ ಪೌರ ಕಾರ್ಮಿಕರಿಂದ ಹುಟ್ಟುಹಬ್ಬದ ಶುಭ ಹಾರೈಕೆ

ಪುತ್ತೂರು: ಸ್ವಚ್ಚ ಪುತ್ತೂರು, ಸುಂದರ ಪುತ್ತೂರಿಗೆ ಆದತ್ಯೆಯ ಗುರಿ ಹೊಂದಿರುವ ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್ ಅವರ 57 ನೇ ಹುಟ್ಟು ಹಬ್ಬದ ಅಂಗವಾಗಿ ನಗರಸಭೆ ಪೌರ ಕಾರ್ಮಿಕರು ತಮ್ಮ ಕಾಯಕಕ್ಕೆ ಹೊರಡುವ ಮುಂದೆ ನಗರಸಭೆ ಅಧ್ಯಕ್ಷರಿಗೆ ಹೂ ಗುಚ್ಚಗಳನ್ನು ನೀಡುವ ಮೂಲಕ ಹುಟ್ಟುಹಬ್ಬದ ಶುಭಾಶಯಗಳನ್ನು ನೀಡಿದರು. ಇದೇ ಸಂದರ್ಭದಲ್ಲಿ ಪೌರ ಕಾರ್ಮಿಕರೊಂದಿಗೆ ಚಹಾ ಸವಿದು, ಉಪಹಾರ ಮಾಡಿದರು. ನಗರಸಭೆ ಅಧ್ಯಕ್ಷರು ಪ್ರತಿ ದಿನ ಬೆಳಿಗ್ಗೆ ದ್ವಿಚಕ್ರ ವಾಹನದಲ್ಲಿ ಒಂದು

ಕೋರಮಂಗಲದಲ್ಲಿ ಭೀಕರ ಅಪಘಾತ: ಏಳು ಮಂದಿ ಮೃತ್ಯು

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಾರೊಂದು ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ ತಮಿಳುನಾಡಿನ ಹೊಸೂರು ಶಾಸಕ ವೈ ಪ್ರಕಾಶ್ ಅವರ ಪುತ್ರ, ಭಾವಿ ಸೊಸೆ ಸಹಿತ ಏಳು ಮಂದಿ ಮೃತಪಟ್ಟಿರುವ ದುರ್ಘಟನೆ ತಡರಾತ್ರಿ 1:30ರ ಸುಮಾರಿಗೆ ನಡೆದಿದೆ. ಹೊಸೂರು ಶಾಸಕ ವೈ.ಪ್ರಕಾಶ್ ಅವರ ಪುತ್ರ ಕರುಣಾಸಾಗರ್, ಭಾವಿ ಸೊಸೆ ಬಿಂದೂ(28), ಕೇರಳ ಮೂಲದ ಅಕ್ಷಯ್ ಗೋಯಲ್, ಇಶಿತಾ(21), ಧನುಷಾ(21), ಹುಬ್ಬಳ್ಳಿಯ ರೋಹಿತ್ ಹಾಗೂ ಹರ್ಯಾಣ ಮೂಲದ ಉತ್ಸವ್ ಮೃತಪಟ್ಟವರು

ಕೆಟ್ಟು ನಿಂತಿದ್ದ ಲಾರಿಗೆ ಪಿಕಪ್ ಡಿಕ್ಕಿ: ದುರಸ್ಥಿ ಮಾಡುತ್ತಿದ್ದ ಇಬ್ಬರು ಸ್ಥಳದಲ್ಲಿ ಸಾವು- ಓರ್ವ ಗಂಭೀರ

ಪುತ್ತೂರು; ರಾಷ್ಟ್ರೀಯ ಹೆದ್ದಾರಿ 75ರ ಬಜತ್ತೂರು ಗ್ರಾಮದ ಬೆದ್ರೋಡಿ ಎಂಬಲ್ಲಿ ರಸ್ತೆ ಪಕ್ಕ ಕೆಟ್ಟು ನಿಂತಿದ್ದ ಲಾರಿಯೊಂದಕ್ಕೆ ಪಿಕಪ್ ಡಿಕ್ಕಿ ಹೊಡೆದ ಪರಿಣಾಮ ಲಾರಿಯ ದುರಸ್ಥಿ ಕೆಲಸ ಮಾಡುತ್ತಿದ್ದ ಮೂವರ ಪೈಕಿ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟು ಓರ್ವ ಗಂಭೀರವಾಗಿ ಗಾಯಗೊಂಡ ಘಟನೆ ಸೋಮವಾರ ಸಂಜೆ ನಡೆದಿದೆ. ಮೃತ ಪಟ್ಟ ಓರ್ವನನ್ನು ಮಧು (36) ಎಂದು ಹೇಳಲಾಗಿದೆ. ಈತ ಶಿವಮೊಗ್ಗ ಜಿಲ್ಲೆಯ ನಿವಾಸಿ ಎಂದು ತಿಳಿದುಬಂದಿದೆ. ಬೆಂಗಳೂರಿನಲ್ಲಿ ಮೆಕಾನಿಕ್ ಆಗಿರುವ

ಅವಳಿ ನಗರಕ್ಕೆ ಮೂಲ ಸೌಕರ್ಯ ಕಲ್ಪಿಸದ ಬಿಜೆಪಿಗೆ ಈ ಬಾರಿ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ : ರಕ್ಷಾ ರಾಮಯ್ಯ

ಹುಬ್ಬಳ್ಳಿ: ಹುಬ್ಬಳ್ಳಿ – ಧಾರವಾಡ ಅವಳಿ ನಗರ ಮೂಲಭೂತ ಸೌಕರ್ಯದಲ್ಲಿ ರಾಜ್ಯದಲ್ಲಿಯೇ ಅತ್ಯಂತ ಪರಮ ನಿರ್ಲಕ್ಷ್ಯಕ್ಕೆ ಒಳಗಾದ ಪ್ರದೇಶವಾಗಿದ್ದು, ಆಡಳಿತ ನಡೆಸಿದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಪ್ರಮುಖರು ಸಮಸ್ಯೆ ಬಗೆಹರಿಸುವಲ್ಲಿ ವಿಫಲರಾಗಿದ್ದಾರೆ ಎಂದು ಪ್ರದೇಶ ಯುವ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್. ರಕ್ಷಾ ರಾಮಯ್ಯ ಆರೋಪಿಸಿದ್ದಾರೆ. ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ದ್ರುವನಾರಾಯಣ್ ಅವರ ಜತೆ

ಬಾಣಸವಾಡಿಯಲ್ಲಿ  ಜಮಿಂದಾರ್ ಮೈತ್ರಕೋಸರ್ಜಿಕಲ್ ಐ ಸೆಂಟರ್:  ಮೊದಲ ದಿನ 100 ಮಂದಿಗೆ ಉಚಿತ ಕಣ್ಣಿನ ಪರೀಕ್ಷೆ ಮೂಲಕ ಶುಭಾರಂಭ

ಬೆಂಗಳೂರು: ಅತ್ಯಾಧುನಿಕ ಕಣ್ಣಿನ ಶಸ್ತ್ರ ಚಿಕಿತ್ಸೆ ಸೇರಿದಂತೆ ಎಲ್ಲಾ ರೀತಿಯ ದೃಷ್ಟಿದೋಷಗಳಿಗೆ ಅತ್ಯಂತ ನಿಖರವಾಗಿ ಪರಿಹಾರ ಒದಗಿಸುವ ಜಮಿಂದಾರ್ ಮೈಕ್ರೋಸರ್ಜಿಕಲ್ ಐ ಸೆಂಟರ್ ಬೆಂಗಳೂರಿನ ಬಾಣಸವಾಡಿಯಲ್ಲಿ ತನ್ನ  3ನೇ ಕೇಂದ್ರ ಆರಂಭಿಸಿದೆ. ಜಮಿಂದಾರ್ ಮೈಕ್ರೋಸರ್ಜಿಕಲ್ ಕೇಂದ್ರವನ್ನು ಬಿಬಿಎಂಪಿ ಮಾಜಿ ಆಡಳಿತ ಪಕ್ಷದ ನಾಯಕ ಬಿ. ಪದ್ಮನಾಭ ರೆಡ್ಡಿ ಶುಭಾರಂಭ ಮಾಡಿದರು. ಈ ಸಂದರ್ಭದಲ್ಲಿ 100 ECHS ಕಾರ್ಡ್ ದಾರರಿಗೆ ಉಚಿತ ಕಣ್ಣು ಪರೀಕ್ಷೆ ಮಾಡಲಾಗಿದೆ. ಡಾ.

ಧಾರ್ಮಿಕ ಆಚರಣೆಯ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಮುಖ್ಯ: ಸಚಿವ ವಿ. ಸುನೀಲ್ ಕುಮಾರ್

ಕುಂದಾಪುರ: ಕೊರೋನಾ ಹರಡುವಿಕೆ ತಡೆಗಟ್ಟಲು ಕೇಂದ್ರ ಸರಕಾರವು ರಾಜ್ಯ ಸರಕಾರಕ್ಕೆ ಒಂದಷ್ಟು ಮಾರ್ಗಸೂಚಿಗಳನ್ನು ಕಳುಹಿಸಿದೆ. ಧಾರ್ಮಿಕ ಆಚರಣೆಯನ್ನು ನಡೆಸುವ ಬಗ್ಗೆ ಸರಕಾರಕ್ಕೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಆದರೆ ಆಚರಣೆಯ ಜತೆಗೆ ನಮ್ಮೆಲ್ಲರ ಆರೋಗ್ಯ ಕಾಪಾಡಿಕೊಳ್ಳುವ ಅನಿವಾರ್ಯತೆಯಿದೆ. ಈ ನಿಟ್ಟಿನಲ್ಲಿ ಆಚರಣೆಗಳು ಎಷ್ಟು ವೈಭವವಾಗಿ ನಡೆಯಬೇಕು ಎನ್ನುವುದನ್ನು ಅರಿತು, ಪ್ರಧಾನಿಯವರು ತಿಳಿಸಿದಂತೆ ನಾವೇ ಸ್ವತಃ ಸ್ವಯಂ ನಿಯಂತ್ರಣ ಮಾಡಿಕೊಳ್ಳಬೇಕು. ಸರಕಾರದ