ನಾಗರಿಕರಿಗಾಗಿ ಸರಕಾರಿ ಸೇವಾ ಸೌಲಭ್ಯಗಳ ಜನಸ್ಪಂದನಾ ಕಾರ್ಯಕ್ರಮ

ಪಚ್ಚನಾಡಿ, ಕಾವೂರು, ಕದ್ರಿಪದವು, ದೇರೆಬೈಲು, ತಿರುವೈಲ್, ಕುಡುಪು ಸೇರಿಸಿ 6 ವಾರ್ಡ್ ಗಳ ನಾಗರಿಕರಿಗಾಗಿ ಸರಕಾರಿ ಸೇವಾ ಸೌಲಭ್ಯಗಳ ಜನಸ್ಪಂದನಾ ಕಾರ್ಯಕ್ರಮಕ್ಕೆ ಶಾಸಕರಾದ ಡಾ.ಭರತ್ ಶೆಟ್ಟಿ ಚಾಲನೆ ನೀಡಿದರು. 1200 ರಷ್ಟು ನಾಗರಿಕರು ಭಾಗವಹಿಸಿದ, 30 ಕ್ಕೂ ಹೆಚ್ಚು ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದ ಜನಸ್ಪಂದನಾ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಅರ್ಹ ಫಲಾನುಭವಿಗಳಿಗೆ ವಾಹನ, ಸರಕಾರದ ಹಲವು ಯೋಜನೆಗಳ ಸಹಾಯಧನದ ಚೆಕ್ ವಿತರಣೆ, ಮನೆ ಮಂಜೂರಾತಿ ಪತ್ರ, ಹಕ್ಕುಪತ್ರ, ಅಭಾ ಕಾರ್ಡ್ ಸಹಿತ ಜನಸಾಮಾನ್ಯರಲ್ಲಿ ಮಾಹಿತಿಯ ಕೊರತೆ ಇರುವ ಸರಕಾರದ ಅನೇಕ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಶಾಸಕರಾದ ಡಾ.ಭರತ್ ಶೆಟ್ಟಿಯವರ ಜನಸ್ಪಂದನಾ ಕಾರ್ಯಕ್ರಮ ಯಶಸ್ವಿಯಾಯಿತು.

ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯರಾದ ಪ್ರತಾಪಸಿಂಹ ನಾಯಕ್, ತಹಶೀಲ್ದಾರ್ ಪುಟ್ಟರಾಜು, ಮಹಾನಗರ ಪಾಲಿಕೆ ಮೇಯರ್ ಜಯಾನಂದ ಅಂಚನ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಹೇಮಲತಾ ರಘು ಸಾಲ್ಯಾನ್, ಪಾಲಿಕೆ ಸದಸ್ಯರಾದ ಸಂಗೀತಾ ಆರ್ ನಾಯಕ್, ಗಾಯತ್ರಿ ರಾವ್,ರಂಜಿನಿ ಕೋಟ್ಯಾನ್, ಭಾಸ್ಕರ್ ಮೊಯ್ಲಿ ವಿವಿಧ ಇಲಾಖೆಯ ಅಧಿಕಾರಿಗಳು, ಕಾರ್ಯಕರ್ತರು ಜೊತೆಗಿದ್ದರು.

Related Posts

Leave a Reply

Your email address will not be published.