ಬಂಟ್ವಾಳ : ಶಾಲಾ ಮಕ್ಕಳ ಕಿಡ್ನಾಪ್ ಯತ್ನ? : ಸೂಕ್ತ ತನಿಖೆಗೆ ವಿಶ್ವ ಹಿಂದೂ ಪರಿಷದ್ ಬಜರಂಗದಳ ಬಂಟ್ವಾಳ ವತಿಯಿಂದ ಮನವಿ

ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಗ್ರಾಮದ ಅಜಿಲಮೊಗರು ದ.ಕ.ಜಿ.ಪ.ಹಿ.ಪ್ರಾ ಶಾಲೆ ಕುಟ್ಟಿಕಳ ಶಾಲೆಯ ಮಕ್ಕಳನ್ನು ಅಪಹರಣ ಮಾಡಲು ವಿಫಲಯತ್ನ ಮಾಡಿದವರನ್ನು ತಕ್ಷಣ ಪತ್ತೆ ಹಚ್ಚಿ ಸೂಕ್ತ ತನಿಖೆ ನಡೆಸಲು ವಿಶ್ವ ಹಿಂದೂ ಪರಿಷದ್ ಬಜರಂಗದಳ ಬಂಟ್ವಾಳ ವತಿಯಿಂದ ಬಂಟ್ವಾಳ ಗ್ರಾಮಾಂತರ ಠಾಣೆಗೆ ಮನವಿಯನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ಬಜರಂಗದಳ ಜಿಲ್ಲಾ ಸಹಸಂಚಾಲಕ್ ಗುರುರಾಜ್ ಬಂಟ್ವಾಳ್, ವಿಶ್ವ ಹಿಂದೂ ಪರಿಷದ್ ಪ್ರಖಂಡ ಅಧ್ಯಕ್ಷರಾದ ಪ್ರಸಾದ್ ಕುಮಾರ್ ರೈ, ಪ್ರಖಂಡ ಕಾರ್ಯದರ್ಶಿ ದೀಪಕ್ ಅಜೆಕಳ, ಬಜರಂಗದಳ ಪ್ರಖಂಡ ಸಹಸಂಚಾಲಕ್ ಸಂತೋಷ್ ಸರಪಾಡಿ, ಕಿರಣ್ ಕಾಪಿಕಾಡ್ ಉಪಸ್ಥಿತರಿದ್ದರು
