ಬೆಳ್ತಂಗಡಿ : ನೀರಿನಲ್ಲಿ ಮುಳುಗಿ ವ್ಯಕ್ತಿ ಮೃತ್ಯು

ಬೆಳ್ತಂಗಡಿ ತಾಲೂಕಿನಲ್ಲಿ ವ್ಯಕ್ತಿಯೊಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ.ತಾಲೂಕಿನ ನೆರಿಯ ಗ್ರಾಮದ ಮುನ್ನೂರು ಎಕ್ರೆ ಎಂಬಲ್ಲಿ ಸ್ನೇಹಿತರೊಂದಿಗೆ ಮೀನು ಹಿಡಿಯಲು ಹೋದ ಸಂದರ್ಭದಲ್ಲಿ ಕಾಲು ಜಾರಿ ನೀರಿಗೆ ಬಿದ್ದು ಈಜು ಬಾರದೆಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಬಂದಿದೆ ಇವರು ಮೂಲತಃ ಮೂಡಿಗೆರೆ ನಿವಾಸಿಯಾಗಿದ್ದು ಮದುವೆಯಾಗಿ ನೆರಿಯದಲ್ಲಿ ಹಲವಾರು ವರ್ಷದಿಂದ ವಾಸವಾಗಿದ್ದಾರೆ. ಈ ಬಗ್ಗೆ ಮೃತರ ಮನೆಯವರು ದೂರು ನೀಡಿದ್ದು .ಧರ್ಮಸ್ಥಳದ ಪೊಲೀಸರು ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
