ಬೆಳ್ತಂಗಡಿ: ಕೆಲವು ದಿನಗಳಿಂದ ತಾಲೂಕಿನಾದ್ಯಂತ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ನರಸಿಂಹಗಡ ಕೋಟೆ (ಗಡಾಯಿಕಲ್ಲು), ಕಡಮಗುಂಡಿ, ಬೊಳ್ಳೆ, ಮತ್ತು ಬಂಡಾಜೆ ಜಲಪಾತ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರಿಗೆ ಮುಂದಿನ ಆದೇಶದ ವರೆಗೆ ಪ್ರವೇಶವನ್ನು ನಿಷೇದಿಸಿದ ಬೆಳ್ತಂಗಡಿ ವನ್ಯಜೀವಿ ವಿಭಾಗ ಆದೇಶ ಮಾಡಿದೆ. ಜಲಪಾತ ಪ್ರದೇಶದ ಸುತ್ತಮುತ್ತ ತೀರಾ ಕಡಿದಾದ ಕಲ್ಲು
ಭಾರೀ ಮಳೆಯ ಪರಿಣಾಮದಿಂದ ಪೆರುವಾಜೆಯ ಮುಂಡಾಜೆ ಎಂಬಲ್ಲಿ ಗುಡ್ಡ ಕುಸಿತಗೊಂಡು ೨೦ಕ್ಕೂ ಅಧಿಕ ಮನೆಗಳಿಗೆ ಸಂಪರ್ಕ ಕಡಿತಗೊಂಡಿದೆ. ಧಾರಾಕರಾವಾಗಿ ಸುರಿದ ಮಳೆಯಿಂದಾಗಿ ಸುಮಾರು100 ಮೀಟರ್ ದೂರದಷ್ಟು ಗುಡ್ಡ ಕುಸಿದು ಗ್ರಾಮ ಪಂಚಾಯತ್ ರಸ್ತೆಯ ಮೇಲೆ ಬಿದ್ದು 15 ಪ.ಜಾ ಕುಟುಂಬಗಳಿಗೆ ಮತ್ತು 5 ಇತರೆ ಮನೆಗಳಿಗೆ ಸಂಪೂರ್ಣವಾಗಿ ಸಂಪರ್ಕ ಕಡಿತಗೊಂಡಿದೆ. ಸ್ಥಳಕ್ಕೆ ಸುಳ್ಯ ತಾಲೂಕಿನ ತಹಶೀಲ್ದಾರಾದ ಮಂಜುಳಾ ಭೇಟಿ ನೀಡಿ ಪರಿಶೀಲಿಸಿದರು. ಇದೇ ಸಂದರ್ಭದಲ್ಲಿ ಕಂದಾಯ
ಮೂಡುಬಿದಿರೆ : ಕಳೆದ ಎರಡು ದಿನಗಳ ಹಿಂದೆ ವಾಲ್ಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಜೋಗೊಟ್ಟು ಎಂಬಲ್ಲಿ ಆನೆಗುಡ್ಡೆಯ ಗುರುಪ್ರಸಾದ್ ಕಾಲು ಜಾರಿ ನೀರಿಗೆ ಬಿದ್ದು ಕೊಚ್ಚಿಕೊಂಡು ಹೋಗಿದ್ದು ಇನ್ನೂ ಪತ್ತೆಯಾಗದ ಹಿನ್ನೆಲೆಯಲ್ಲಿ ಈಜು ತಜ್ಞ ಈಶ್ವರ್ ಮಲ್ಪೆ ಅವರನ್ನು ಕರೆಸಿಕೊಂಡಿದ್ದು ಅವರು ನೀರಿಗಿಳಿದು ಹುಡುಕಾಟವನ್ನು ಆರಂಭಿಸಿದ್ದಾರೆ. ಜೋಗೊಟ್ಟು ಬಳಿಯ ಪಡ್ಡಾಯಿಮಜಲು ಎಂಬಲ್ಲಿರುವ ಅಣೆಕಟ್ಟಿನಲ್ಲಿ ನೀರು ತುಂಬಿಕೊಂಡಿತ್ತು ಅದರ ಹಲಗೆಯನ್ನು ತೆಗೆಯಲೆಂದು
ಕುರುಂಜಿ ವೆಂಕಟ್ರಮಣ ಗೌಡ ಪಾಲಿಟೆಕ್ನಿಕ್ ನ ಕಛೇರಿಯಲ್ಲಿ ಬೆರಳಚ್ಚುಗಾರರಾಗಿ ಸೇವೆ ಸಲ್ಲಿಸುತ್ತಿದ್ದು ಮೇ 31ರಂದು ನಿವೃತ್ತಿ ಗೊಂಡ ಯಶಸ್ವತಿ ಎಂ.ಎಸ್ ಇವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು. ಪ್ರಾಂಶುಪಾಲರ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಎ.ಓ.ಎಲ್.ಇ ಕಮಿಟಿ “ಬಿ”ಯ ಪ್ರಧಾನ ಕಾರ್ಯದರ್ಶಿ ಡಾ. ಜ್ಯೋತಿ ಆರ್.ಪ್ರಸಾದ್ ನಿವೃತ್ತರನ್ನು ಆಡಳಿತ ಮಂಡಳಿ ಹಾಗೂ ಸಂಸ್ಥೆಯ ವತಿಯಿಂದ ಸನ್ಮಾನಿಸಿ ಶುಭ ಹಾರೈಸಿದರು.ಕಾಲೇಜಿನ ಪ್ರಾಂಶುಪಾಲ ಅಣ್ಣಯ್ಯ ಕೆ
ಶ್ರೀ ರಾಮಕ್ಷತ್ರಿಯ ಸಂಘ ಶ್ರೀ ಸೀತಾರಾಮಚಂದ್ರ ದೇವಸ್ಥಾನ ಬೈಂದೂರು ಶ್ರೀ ಸೀತಾರಾಮಚಂದ್ರ ಕಲ್ಯಾಣೋತ್ಸವ ಸಂಭ್ರಮದಲ್ಲಿ ನಡೆಯಿತು. ಬೆಳಿಗ್ಗೆ ದೇವತಾ ಪ್ರಾರ್ಥನೆ ಕರ್ಮಾರಂಭ ಧ್ವಜಾರೋಹಣ ಮತ್ತು ವಿವಿಧ ವಾದ್ಯಘೋಷಗಳೊಂದಿಗೆ ದಿಬ್ಬಣ ಎದುರುಗೊಳ್ಳುವಿಕೆ, ವಧು ನಿರೀಕ್ಷಣೆ, ಅರಶಿಣ ಕುಂಕುಮ ಸಮರ್ಪಣೆ, ತಾಳಿ ಕಟ್ಟುವುದು, ಧಾರೆ ಎರೆಯುವುದು, ಚಿನ್ನಾಭರಣ ಮತ್ತು ಕಪ್ಪ ಕಾಣಿಕೆ ಸಮರ್ಪಣೆ, ಅಷ್ಟಾವಧಾನ ಸೇವೆ, ಪ್ರಸನ್ನ ಪೂಜೆ ಮೊದಲಾದ ಧಾರ್ಮಿಕ ಹಾಗೂ ಪೂರ್ವಾಹ್ನ
ಮೂಡುಬಿದಿರೆ : ದರೋಡೆ ಮಾಡಲು ಸಂಚು ರೂಪಿಸಿದ್ದ ಐವರ ಗುಂಪಲ್ಲಿ ಇಬ್ಬರನ್ನು ಮೂಡುಬಿದಿರೆ ಪೊಲೀಸರು ಗುರುವಾರ ರಾತ್ರಿ ಬಡಗ ಮಿಜಾರಿನ ಬೆಳ್ಳೆಚ್ಚಾರಿನಲ್ಲಿ ಬಂಧಿಸಿದ್ದಾರೆ. ಮೂಡುಬಿದಿರೆ ಮಾರ್ಪಾಡಿ ಗ್ರಾಮ ಸುಭಾಸ್ ನಗರದ ಜಗದೀಶ( 29), ಬೆಳ್ತಂಗಡಿ ತಾಲೂಕು ಹೊಸಂಗಡಿ ಗ್ರಾಮದ ಅಂಗರಕರಿಯ ನಿವಾಸಿ ಪ್ರಶಾಂತ್(27) ಬಂಧಿತ ಆರೋಪಿಗಳು.ಮೂಡುಬಿದಿರೆ ಪೊಲೀಸ್ ಉಪನಿರೀಕ್ಷಕಿ ಪ್ರತಿಭಾ ಕೆ.ಸಿ ಹಾಗೂ ಪೊಲೀಸ್ ಸಿಬ್ಬಂದಿಗಳು ವಿದ್ಯಾಗಿರಿಲ್ಲಿ ರೌಂಡ್ಸ್ ನಡೆಸುತ್ತಿದ್ದ
ಮೂಡುಬಿದಿರೆ : ತಾಲೂಕಿನ ವಾಲ್ಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಜೋಗೊಟ್ಟು ಎಂಬಲ್ಲಿ ವ್ಯಕ್ತಿಯೋವ೯ರು ಕಾಲು ಜಾರಿ ನೀರಿಗೆ ಬಿದ್ದ ಘಟನೆ ನಡೆದಿದೆ.ವಾಲ್ಪಾಡಿಯ ಆನೆಗುಡ್ಡೆ ಬಳಿಯ ಶ್ರೀನಿವಾಸ್ ಭಟ್ ಎಂಬವರ ಪುತ್ರ ಗುರುಪ್ರಸಾದ್ ಭಟ್ (36ವ) ನೀರಿಗೆ ಬಿದ್ದವರು.ಜೋಗೊಟ್ಟು ಬಳಿಯ ಪಡ್ಡಾಯಿಮಜಲು ಎಂಬಲ್ಲಿರುವ ಅಣೆಕಟ್ಟಿನಲ್ಲಿ ನೀರು ತುಂಬಿಕೊಂಡಿತ್ತು ಇದರಲ್ಲಿ ಸಿಲುಕಿಕೊಂಡಿರುವ ಕಸವನ್ನು ತೆಗೆಯಲೆಂದು ಬದಿಗೆ ಇಳಿದ ಸಂದಭ೯ದಲ್ಲಿ ಕಾಲು ಜಾರಿ ನೀರಿಗೆ ಬಿದ್ದು
ಸರಸ್ವತೀ ವಿದ್ಯಾಲಯ ಪ್ರೌಢಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ನಡೆಯಿತು. ವಿದ್ಯಾರ್ಥಿಗಳನ್ನು ಆರತಿ ಬೆಳಗಿ ಸಿಹಿಯನ್ನು ನೀಡಿ ಸ್ವಾಗತಿಸಲಾಯಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿ ಹಿರಿಯರ ಆಶೀರ್ವಾದ ಪಡೆದುಕೊಂಡರು. ವೇದಿಕೆಯಲ್ಲಿ ಸಂಸ್ಥೆಯ ಸಂಚಾಲಕರಾದ ಶ್ರೀಮತಿ ಸವಿತಾಶಿವಸುಬ್ರಹ್ಮಣ್ಯ ಭಟ್ ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಮುಖ್ಯ ಗುರುಗಳಾದ ಶ್ರೀಮತಿ ಶೈಲಶ್ರೀ ರೈ ಎಸ್
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶ್ರೀ ದೇಗುಲಕ್ಕೆ ಆಗಮಿಸುವ ಭಕ್ತರಿಗೆ ಬೆಳಗ್ಗಿನ ಉಪಾಹಾರ ಪ್ರಸಾದದ ವ್ಯವಸ್ಥೆ ಯೋಜನೆ ಇಂದಿನಿಂದ ವಿದ್ಯುಕ್ತವಾಗಿ ಆರಂಭವಾಯಿತು. ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದ ಶ್ರೀಗಳಾದ ಡಾl ವಿದ್ಯಾಪ್ರಸನ್ನ ಶ್ರೀಗಳು ದೀಪ ಬೆಳಗಿಸಿ ಕಾರ್ಯಕ್ರಮ ಕ್ಕೆ ಚಾಲನೆ ನೀಡಿದರು. ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, . ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ,
ಕಡಬ: ಇಲ್ಲಿನ ಸೈಂಟ್ ಆನ್ಸ್ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲರಾದ ವಂದನೀಯ ಅಮಿತ್ ಪ್ರಕಾಶ್ ರೊಡ್ರಿಗಸ್ ಮತ್ತು ಸೈಂಟ್ ಜೋಕಿಮ್ಸ್ ಪ್ರಾಥಮಿಕ ವಿಭಾಗದ ಸಹ ಶಿಕ್ಷಕಿಯಾದ ಸಿ| ಗ್ರೇಟಾ ಮಸ್ಕರೇನಸ್ ರವರಿಗೆ ಬೀಳ್ಕೊಡುಗೆ ಸಮಾರಂಭ ಹಾಗೂ ಸೈಂಟ್ ಆನ್ಸ್ ಆಂಗ್ಲ ಮಾಧ್ಯಮ ಶಾಲೆಗೆ ನೂತನ ಪ್ರಾಂಶುಪಾಲರಾಗಿ ಆಗಮಿಸಿದ ವಂದನೀಯ ಸುನಿಲ್ ಪ್ರವೀಣ್ ಪಿಂಟೋ ರವರಿಗೆ ಪದಗ್ರಹಣ ಕಾರ್ಯಕ್ರಮವು ಸೈಂಟ್ ಜೋಕಿಮ್ಸ್ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ




























