ಬಂಟ್ವಾಳ: ಬಿ.ಸಿ.ರೋಡು ಅಡ್ಡಹೊಳೆ ಚತುಷ್ಫಥ ಹೆದ್ದಾರಿ ಕಾಮಗಾರಿಯ ಪ್ರಗತಿಯನ್ನು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಾಣಿ, ಸೂರಿಕುಮೇರು, ಕಲ್ಲಡ್ಕ, ಮೆಲ್ಕಾರ್, ನೆಹರುನಗರದಲ್ಲಿ ಅಭಿವೃದ್ದಿ ಕಾಮಗಾರಿಯ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಎಂಜಿನಿಯರ್ ಹಾಗೂ ಗುತ್ತಿಗೆ ಸಂಸ್ಥೆ ಕೆಎನ್‌ಆರ್‌ಸಿಯ ಅಧಿಕಾರಿಗಳೊಂದಿಗೆ
ಕಡಬದ ಸೈಂಟ್ ಆನ್ಸ್ ಶಾಲೆಯಲ್ಲಿ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಸಿದ್ಧತೆಗೊಳಿಸಲು ಕಲಿಕಾ ಬಲವರ್ಧನೆ ಹಾಗೂ ವೃತ್ತಿ ಮಾರ್ಗದರ್ಶನ ಶಿಬಿರವನ್ನು ಆಯೋಜಿಸಲಾಗಿತ್ತು. ಪುತ್ತೂರು ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವಂಟ ಅಶೋಕ್ ರಾಯನ್ ಕ್ರಾಸ್ತ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಹೇಗೆ ತಯಾರಿಯಾಗಬೇಕು, ಓದುವ ವಿಧಾನ ಹಾಗೂ ಗುರಿ ಸಾಧನೆ ಯಾವ ರೀತಿ ಮಾಡಬಹುದು ಎಂದು ಮಾರ್ಗದರ್ಶನ ನೀಡಿದರು.ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ
ಉದ್ಯಾವರ ಗುಡ್ಡೆ ಅಂಗಡಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಇಂದು ನಸುಕಿನ ವೇಳೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಈಚರ್ ಲಾರಿ ಹೊತ್ತಿ ಉರಿದಿದ್ದು ಬೈಕ್ ಸವಾರ ಮೃತಪಟ್ಟ ಬಗ್ಗೆ ವರದಿಯಾಗಿದೆ. ಮೃತರನ್ನು ಬೈಕ್ ಸವಾರ ಕೊರಂಗ್ರಪಾಡಿ ನಿವಾಸಿ ಅವಿನಾಶ್ ಆಚಾರ್ಯ( 19 ) ಎಂದು ಗುರುತಿಸಲಾಗಿದೆ. ಗುಜರಾತ್ ಕಡೆಯಿಂದ ಕೇರಳ ಕಡೆಗೆ ಬರುತ್ತಿದ್ದ ಈಚರ್ ಲಾರಿ ಎದುರಿನಲ್ಲಿ ಹೋಗುತ್ತಿದ್ದ ಬೈಕಿಗೆ ಡಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ರಸ್ತೆಗೆ ಬಿದ್ದು ಗಂಭೀರವಾಗಿ
ಮಂಜೇಶ್ವರ ಕುಳೂರು ಸಂತಡ್ಕದ ಶ್ರೀ ಅರಸು ಸಂಕಲ ದೈವ ಕ್ಷೇತ್ರ ಶ್ರೀ ಕ್ಷೇತ್ರ ಸಂತಡ್ಕ ಮಾಡದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ವಾರ್ಷಿಕ ಜಾತ್ರಾ ಮಹೋತ್ಸವವು ಜ.19ರಿಂದ ಜ.24ರವರೆಗೆ ನಡೆಯಲಿದೆ. ಜ.19ರಿಂದ ಜ.22ರವರೆಗೆ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ಜ.23, 24ರಂದುವಾರ್ಷಿಕ ಜಾತ್ರಾ ಮಹೋತ್ಸವವು ನಡೆಯಲಿದೆ. ಜ.16ರಂದು ಗೊನೆಮುಹೂರ್ತ, ಜ.19ರಂದು ಹೊರೆಕಾಣೀಕೆ ಮೆರವಣಿಗೆ, ಧಾರ್ಮಿಕ ಸಭೆ, ಸ್ಥಳೀಯ ಪ್ರತಿಭೆಗಳಿಂದ ನೃತ್ಯ ವೈಭವ
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು ಮನೆ ಮನೆಯಲ್ಲಿ ತುಳು ಪುಸ್ತಕಗಳ ಗ್ರಂಥಾಲಯ ಆರಂಭಿಸುವ ಉದ್ದೇಶದಿಂದ ‘ಇಲ್ಲಗೊಂಜಿ ಗೇನೊದ ಬಂಡಾರ’ ಅಭಿಯಾನ ಆರಂಭಿಸಿದೆ.ಈ ಅಭಿಯಾನಕ್ಕೆ ಶನಿವಾರ (ಜ.11) ಬೆಳಿಗ್ಗೆ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರ ಪುತ್ತೂರಿನ ಕೋಡಿಂಬಾಡಿಯ ಮನೆಯಲ್ಲಿ ಚಾಲನೆ ನೀಡಲಾಗುವುದು.ತುಳು ಅಕಾಡೆಮಿ ಪ್ರಕಟಿಸಿರುವ ಕೃತಿಗಳು ಹಾಗೂ ಅಕಾಡೆಮಿಯ ಮಾರಾಟ ವಿಭಾಗದಲ್ಲಿರುವ ಇತರ ತುಳು ಕೃತಿಗಳನ್ನು ಈ ಸಂದರ್ಭದಲ್ಲಿ ಶಾಸಕರಿಗೆ ನಿಗದಿತ
ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಕೋಲಾರ ಜಿಲ್ಲೆಯ ಕೆಜಿಎಫ್ ಪ್ರೌಢ ಶಾಲೆಯಲ್ಲಿ ನಡೆದ ಪ್ರಾಥಮಿಕ ಶಾಲಾ ಬಾಲಕಿಯರ ವಿಭಾಗದ ತ್ರೋಬಾಲ್ ಪಂದ್ಯಾಟದಲ್ಲಿ ಪುತ್ತೂರು ದರ್ಬೆಯ ಬೆಥನಿ ಆಂಗ್ಲ ಮಾಧ್ಯಮ ಶಾಲೆಯ ಬಾಲಕಿಯರು ದ್ವಿತೀಯ ಸ್ಥಾನ ವನ್ನು ಪಡೆದುಕೊಂಡಿರುತ್ತಾರೆ. ತಂಡದಲ್ಲಿ ಆದ್ಯ ಕೆ, ಶಾನ್ವಿ ಪ್ರೀಷ್ಮ, ಫಾತಿಮಾತ್ ಮುನವರ, ಫಾತಿಮಾತ್ ಝುಲ್ಫ, ನಿರೀಕ್ಷಾ H ಶೆಟ್ಟಿ , ಸ್ನಿಗ್ಧ, ಆಯಿಷಾತ್ ಹಿಬಾ ಉತ್ತಮ ಪ್ರದರ್ಶನ ವನ್ನು ನೀಡಿ ಗೆಲುವಿಗೆ ಪಾತ್ರರಾದರು. ಹಿಬಾ ಉತ್ತಮ
ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇಯ ದಶಮಾನೋತ್ಸವ ಕಾರ್ಯಕ್ರಮವು 2025 ಜೂನ್ 29 ರಂದು ದುಬೈ ಯ ಶೇಖ್ ರಾಶೀದ್ ಆಡಿಟೋರಿಯಂ ನಲ್ಲಿ ಜರಗಲಿದ್ದು “ದುಬೈ ಯಕ್ಷೋತ್ಸವ -2025” ಕಾರ್ಯಕ್ರಮದ ಪೂರ್ವ ತಯಾರಿ ಶುಭಾರಂಭ ಪ್ರಯುಕ್ತ ಮುಹೂರ್ತ ಪೂಜಾ ಸಮಾರಂಭವು ಇತ್ತೀಚೆಗೆ ನಗರದ ಫಾರ್ಚೂನ್ ಪ್ಲಾಝದ ಬಾಂಕ್ವೆಟ್ ಸಭಾಂಗಣದಲ್ಲಿ ೫ರಂದು ನಡೆಯಿತು. ಶ್ರೀಯುತ ಲಕ್ಷ್ಮಿಕಾಂತ್ ಭಟ್ ಮತ್ತು ಸಂತೋಷ್ ರಾವ್ ರವರ ಪೌರೋಹಿತ್ಯದಲ್ಲಿ ವಿವಿಧ ವೈದಿಕ ಆಚರಣೆ ಮತ್ತು ಸಭಾ
ಕಾಸರಗೋಡಿನ ಮಧೂರು ಶ್ರೀ ಮದನಂತೇಶ್ವರ ಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಬ್ರಹ್ಮಕಲಶ ಹಾಗೂ ಮೂಡಪ್ಪ ಸೇವೆಯ ಪೂರ್ವಭಾವಿಯಾಗಿ ಜ.19ರಂದು ಸಂಜೆ 3 ಗಂಟೆಗೆ ಸ್ವಯಂ ಸೇವಕರ ಬೃಹತ್ ಸಮಾವೇಶವು ನಡೆಯಲಿದೆ. ಶ್ರೀ ಮದನಂತೇಶ್ವರ ಸಿದ್ಧಿ ವಿನಾಯಕ ದೇವಸ್ಥಾನದ ಪರಿಸರದಲ್ಲಿ ಸ್ವಯಂ ಸೇವಕರ ಬೃಹತ್ ಸಮಾವೇಶ ನಡೆಯಲಿದೆ. ಉತ್ಸವದ ಸಂದರ್ಭದಲ್ಲಿ ಸ್ವಯಂ ಸೇವಕರಾಗಿ ಕೆಲಸ ಮಾಡಲಿಚ್ಚಿಸುವ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿ ಮಧೂರು ಶ್ರೀ ಮದನಂತೇಶ್ವರ ಸಿದ್ಧಿ
ತಿರುಪತಿಯ ಪ್ರಸಿದ್ಧ ವೆಂಕಟೇಶ್ವರ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ದರ್ಶನ ಟಿಕೆಟ್ ಪಡೆಯಲು ಸೇರಿದ್ದ ಭಕ್ತರ ಸಮೂಹದಲ್ಲಿ ಉಂಟಾದ ನೂಕು ನುಗ್ಗಲು ಮತ್ತು ಕಾಲ್ತುಳಿತದಲ್ಲಿ ಮೃತಪಟ್ಟವರ ಸಂಖ್ಯೆ ಆರಕ್ಕೇರಿದೆ. ಬುಧವಾರ ಸಂಜೆ ನಡೆದ ಈ ದುರಂತದಲ್ಲಿ ನೂರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ವಿಷ್ಣು ನಿವಾಸಮ್, ಶ್ರೀನಿವಾಸಂ ಮತ್ತು ಪದ್ಮಾವತಿ ಪಾರ್ಕ್ ಸೇರಿದಂತೆ ವಿವಿಧ ಕೇಂದ್ರಗಳಲ್ಲಿ ರಾತ್ರಿ 8 ಗಂಟೆಯ ಸುಮಾರಿಗೆ ತಿರುಮಲ ತಿರುಪತಿ ದೇವಸ್ಥಾನ ಅಧಿಕಾರಿಗಳು
ಕಡಬ : ವಿದ್ಯುತ್ ಶಾರ್ಟ್ ಸಕ್ಯೂಟ್‌ನಿಂದ ಮನೆಯ ಅಮೂಲ್ಯ ವಸ್ತುಗಳು ಸುಟ್ಟು ಹೋದ ಘಟನೆ ಆಲಂಕಾರಿನಲ್ಲಿ ನಡೆದಿದೆ. ಆಲಂಕಾರು ಗ್ರಾಮದ ನೆಕ್ಕಿಲಾಡಿ ವಿನೋದಾ ಅವರ ಮನೆ ಬೆಂಕಿಗೆ ಆಹುತಿಯಾಗಿದೆ. ಮನೆ ಒಳಗಡೆಯಿದ್ದ ವಿದ್ಯುತ್ ಉಪಕರಣಗಳು, ಬಟ್ಟೆ ಸೇರಿದಂತೆ ಚಿನ್ನದ ಒಡವೆಗಳು ಬೆಂಕಿಗೆ ಆಹುತಿಯಾಗಿದೆ. ಪತಿ ಮೃತಪಟ್ಟ ಬಳಿಕ ವಿನೋದಾ ಇಬ್ಬರು ಮಕ್ಕಳೊಂದಿಗೆ ಚಿಕ್ಕದೊಂದು ಹಂಚಿನ ಮನೆಯಲ್ಲಿ ವಾಸಿಸುತಿದ್ದರು. ಮಕ್ಕಳು ತಮ್ಮ ಶಾಲೆಯ ವಾರ್ಷಿಕೋತ್ಸವಕ್ಕೆ ತೆರಳಿದ್ದರು.




























