Home Blog Left SidebarPage 203

ಬಿ.ಸಿ. ರೋಡ್‌ನಲ್ಲಿ ರಕ್ತನಿಧಿ ಸೆಂಟರ್ ಲೋಕಾರ್ಪಣೆ

ಬಂಟ್ವಾಳ: ರೋಟರಿಕ್ಲಬ್ ಬಂಟ್ವಾಳ ಬಿ.ಸಿ.ರೋಡಿಗೆ ಸಮೀಪದ ಗೂಡಿನಬಳಿಯಲ್ಲಿರುವ ಕ್ಲಬ್‌ನ ಕಟ್ಟಡದಲ್ಲಿ ಸುಮಾರು ೮೫ ಲಕ್ಷ ರೂ. ವೆಚ್ಚದಲ್ಲಿ ಅನುಷ್ಠಾನಕ್ಕೆ ತಂದಿರುವ ರಕ್ತನಿಧಿ ಸೆಂಟರ್ ಲೋಕಾರ್ಪಣೆ ಗೊಂಡಿತು.ಬಂಟ್ವಾಳ ತಾಲೂಕಿನ ಬಹು ಕಾಲದ ಬೇಡಿಕೆಯೊಂದು ಈಡೇರಿದೆ. ರೋಟರಿ ಜಿಲ್ಲಾ ೩೧೮೧ ರ ಗವರ್ನರ್ ಎಚ್. ಆರ್.ಕೇಶವ ಅವರು ಉದ್ಘಾಟಿಸಿ, ಬಂಟ್ವಾಳ ರೋಟರಿ ಕ್ಲಬ್‌ನ

ಸ್ಕೂಟರ್ ಗೆ ಅಡ್ಡ ಬಂದ ದನ, ಹಾರಿ ಹೋಯ್ತು ಯುವಕನ ಪ್ರಾಣ!!

ಸುರತ್ಕಲ್: ಸ್ಕೂಟರ್ ಗೆ ದನ ಅಡ್ಡ ಬಂದ ಪರಿಣಾಮ ಸ್ಕೂಟರ್ ಸ್ಕಿಡ್ ಆಗಿ ಯುವಕ ರಸ್ತೆಗೆಸೆಯಲ್ಪಟ್ಟು ದಾರುಣ ಸಾವನ್ನಪ್ಪಿದ ಘಟನೆ ಆದಿತ್ಯವಾರ ಸಂಜೆ ಪಣಂಬೂರು ಬಳಿಯ ರಾಷ್ಟೀಯ ಹೆದ್ದಾರಿಯಲ್ಲಿ ನಡೆದಿದೆ. ಕುಳಾಯಿ ನಿವಾಸಿ ಉಜ್ವಲ್(26) ಸಾವನ್ನಪ್ಪಿದ ದುರ್ದೈವಿ.ಮಂಗಳೂರು ಉತ್ತರ ಸಂಚಾರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

128ನೇ ರಕ್ತದಾನ ಶಿಬಿರ:ಫರಂಗಿಪೇಟೆಯ ಸೇವಾಂಜಲಿ ಸಭಾಗೃಹದಲ್ಲಿ ಕಾರ್ಯಕ್ರಮ

ಬಂಟ್ವಾಳ: ರಕ್ತದಾನ ಮಾಡುವುದರಿಂದ ನಮ್ಮ ಉಸಿರು ನಿಂತರೂ ಮತ್ತೊಬ್ಬರ ದೇಹದಲ್ಲಿ ನಿರಂತರವಾಗಿ ನಮ್ಮ ರಕ್ತ ಹರಿದಾಡುತ್ತಿರುತ್ತದೆ. ಹೆಚ್ಚು ಹೆಚ್ಚು ಜನರು ರಕ್ತ ನೀಡಿದಾಗ ರಕ್ತದ ಕೊರತೆ ಬಗೆ ಹರಿಯಲಿದೆ. ರಕ್ತದಾನಕ್ಕಿಂತ ದೊಡ್ಡ ದಾನವಿಲ್ಲ, ರಕ್ತ ಅನೇಕ ಜನರಿಗೆ ಅಗತ್ಯವಿದೆ ಎಂದು ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ ಇದರ ದ.ಕ. ಜಿಲ್ಲಾ ಕೋಶಾಧಿಕಾರಿ ಕೆ. ಮೋಹನ್ ಶೆಟ್ಟಿ ಹೇಳಿದರು. ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ಇದರ ಆಶ್ರಯದಲ್ಲಿ ಇಂಡಿಯನ್ ರೆಡ್ ಕ್ರಾಸ್

ಪಾವೂರಿನಲ್ಲಿ ಕಾಂಕ್ರೀಟ್ ರಸ್ತೆಯ ಉದ್ಘಾಟನೆ

ಉಳ್ಳಾಲ: ಮಂಗಳೂರು ನಗರದಲ್ಲಿರುವಂತಹ ಸೌಕರ್ಯಗಳನ್ನು ಕ್ಷೇತ್ರದ ಅತ್ಯಂತ ಹಿಂದುಳಿದ ಪ್ರದೇಶಕ್ಕೆ ಮಾಡಿಕೊಡುವುದೇ ನನ್ನ ಕಲ್ಪನೆ , ಅದರಂತೆ ಪಾವೂರು ಗ್ರಾಮದ ಚಿತ್ರಣ ಮುಂದಿನ 10 ವರ್ಷಗಳಲ್ಲೇ ಬದಲಾವಣೆಯಾಗಲಿದೆ ಎಂದು ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್ ಹೇಳಿದರು. ಪಾವೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೋಡಾರ್ ಸೈಟ್ ಹಾಗೂ ಒಂದನೇ ವಾರ್ಡಿಗೆ ಶಾಸಕರ ಅನುದಾನದಲ್ಲಿ ನಿರ್ಮಿಸಲಾದ ಕಾಂಕ್ರೀಟ್ ರಸ್ತೆಯನ್ನು ಉದ್ಘಾಟಿಸಿ ಮಾತನಾಡಿದರು.ಪೋಡಾರು ಭಾಗದಲ್ಲಿ ಹಿಂದೆ

ಪಡುಬಿದ್ರಿ : ಅವೈಜ್ಞಾನಿಕ ಹೆದ್ದಾರಿ ಕಾಮಗಾರಿಗೆ ನಿರಂತರ ಅಪಘಾತ: ಕಾರು ಪಲ್ಟಿ, ಪ್ರಾಣಾಪಾಯದಿಂದ ಪಾರಾದ ಪ್ರಯಾಣಿಕರು

ರಾಷ್ಟ್ರೀಯ ಹೆದ್ದಾರಿ 66 ರ ಪಡುಬಿದ್ರಿ-ಎರ್ಮಾಳು ಗಡಿಭಾಗ ಸೇತುವೆ ಪ್ರದೇಶದಲ್ಲಿನ ಅವೈಜ್ಞಾನಿಕ ಕಾಮಗಾರಿಯ ಫಲವಾಗಿ ವಾಹನಗಳು ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗುತ್ತಿದ್ದು, ಅಮಾಯಕರು ಪ್ರಾಣ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಮಳೆ ನೀರು ಹೆದ್ದಾರಿಯಲ್ಲೇ ಶೇಕರಣೆಗೊಳ್ಳುತ್ತಿದ್ದು ಅದರ ಮೇಲಿಂದ ಚಲಿಸುವ ವಾಹನಗಳು ನಿಯಂತ್ರಣ ಕಳೆದುಕೊಂಡು ಡಿವೈಡರ್ ಏರಿ ಪಲ್ಟಿಯಾಗುತ್ತಿದೆ. ಕಳೆದ ರಾತ್ರಿಯೂ ಬೆಂಗಳೂರು ನೋಂದಾಣಿ ಸಂಖ್ಯೆಯ ಭಟ್ಕಳ ಮೂಲದ ವ್ಯಕ್ತಿಗೆ ಸೇರಿದ

ಪ್ರಧಾನಿ ಮೋದಿ ‘ಮನ್ ಕಿ ಬಾತ್’: ಮತದಾರರಿಗೆ ಧನ್ಯವಾದ ಸಲ್ಲಿಸಿದ ಪ್ರಧಾನಿ

ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಚಲವಾದ ನಂಬಿಕೆಯನ್ನು ಇರಿಸಿದ್ದಕ್ಕಾಗಿ ನಾನು ದೇಶದ ಜನರಿಗೆ ಧನ್ಯವಾದಗಳನ್ನು ಹೇಳಲಿಚ್ಛಿಸುತ್ತೇನೆ. 2024ರ ಲೋಕಸಭೆ ಚುನಾವಣೆ ಜಗತ್ತಿನ ಅತಿ ದೊಡ್ಡ ಪ್ರಜಾತಂತ್ರದ ಹಬ್ಬವಾಗಿತ್ತು. 65 ಕೋಟಿಗೂ ಹೆಚ್ಚು ಮಂದಿ ಮತದಾನದ ಹಕ್ಕು ಚಲಾಯಿಸಿದ್ದಾರೆ. ಯಾವುದೇ ದೇಶದಲ್ಲಿ ಇಷ್ಟು ದೊಡ್ಡ ಚುನಾವಣೆ ನಡೆದಿಲ್ಲ. ಇದಕ್ಕಾಗಿ ಚುನಾವಣಾ ಆಯೋಗ ಮತ್ತು ಇದಕ್ಕೆ ಸಂಬಂಧಿಸಿದ ಪ್ರತಿಯೊಬ್ಬರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ

ದೆಹಲಿ:  ಸೇನಾಪಡೆ ಮತ್ತು ನೌಕಾಪಡೆಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಲಿರುವ ಇಬ್ಬರು ಸಹಪಾಠಿಗಳು

ದೇಶದ ಸೇನಾ ಇತಿಹಾಸದಲ್ಲೇ ಮೊದಲ ಬಾರಿಗೆ ಇಬ್ಬರು ಸಹಪಾಠಿಗಳು ಅಂದರೆ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಮತ್ತು ಅಡ್ಮಿರಲ್ ದಿನೇಶ್ ತ್ರಿಪಾಠಿ ಕ್ರಮವಾಗಿ ಭಾರತದ ಸೇನಾಪಡೆ ಹಾಗೂ ನೌಕಾಪಡೆಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಲಿದ್ದಾರೆ. ನೌಕಾಪಡೆಯ ಮುಖ್ಯ ಅಡ್ಮಿರಲ್ ದಿನೇಶ್ ತ್ರಿಪಾಠಿ ಹಾಗೂ ಸೇನಾಪಡೆಯ ನಿಯೋಜಿತ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಮಧ್ಯಪ್ರದೇಶದ ರೇವಾ ಪಟ್ಟಣದ ಸೈನಿಕಶಾಲೆಯಲ್ಲಿ ಓದಿದ್ದರು. 1970ರ ದಶಕದಲ್ಲಿ ಇವರು ಆ

ಉಳ್ಳಾಲ: ಭೂದಾಖಲೆಗಳ ನಿರ್ದೇಶಕರ ಕಚೇರಿ, ಉಳ್ಳಾಲ ತಾಲೂಕು ಸಹಾಯಕ ನಿರ್ದೇಶಕರ ಕಚೇರಿಗಳಿಗೆ ಲೋಕಾಯುಕ್ತ ದಾಳಿ

ಉಳ್ಳಾಲ: ಭ್ರಷ್ಟಾಚಾರ, ಕರ್ತವ್ಯಲೋಪ, ಕಡತ ವಿಲೇವಾರಿಯಲ್ಲಿ ಹಿನ್ನೆಡೆ ದೂರುಗಳಿಗೆ ಸಂಬಂಧಿಸಿದಂತೆ ಲೋಕಾಯುಕ್ತ ಅಧಿಕಾರಿಗಳು ಮಂಗಳೂರು ಭೂದಾಖಲೆಗಳ ಉಪನಿರ್ದೇಶಕರ ಕಚೇರಿ,  ನಾಟೆಕಲ್‌ನಲ್ಲಿರುವ ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿ ಹಾಗೂ ಇಬ್ಬರು ಸರ್ವೇಯರ್‌ಗಳ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಕಡತಗಳನ್ನು ತನಿಖೆಗೆ ಪಡೆದುಕೊಂಡಿದ್ದಾರೆ. ಮಂಗಳೂರು ತಾಲೂಕು ಕಚೇರಿಯಲ್ಲಿರುವ ಭೂದಾಖಲೆಗಳ ಉಪನಿರ್ದೇಶಕರ ಕಚೇರಿ ಗೆ ಬೆಳಿಗ್ಗೆ ದಾಳಿ

ಮೂಡುಬಿದಿರೆ: ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿಯಾಗಿ  ಚಂದ್ರಶೇಖರ  ಪದೋನ್ನತಿ

ಮೂಡುಬಿದಿರೆ:  ಕಳೆದ 23 ವರ್ಷಗಳಿಂದ ಅಗ್ನಿಶಾಮಕ ದಳದಲ್ಲಿ ಚಾಲಕರಾಗಿದ್ದ ಮೂಡುಬಿದಿರೆ ತಾಲೂಕಿನ ಪಡುಮಾರ್ನಾಡು ಅಮನಬೆಟ್ಟುವಿನ ನಿವಾಸಿ ಚಂದ್ರಶೇಖರ ಅವರು ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿಯಾಗಿ ಪದೋನ್ನತಿಯನ್ನು ಹೊಂದಿದ್ದಾರೆ. 2001ರಲ್ಲಿ ಅಗ್ನಿಶಾಮಕ ಇಲಾಖೆಯಲ್ಲಿ ಸೇವೆಯನ್ನು ಆರಂಭಿಸಿದ್ದ ಅವರು ಬೆಳ್ತಂಗಡಿ, ಮೂಡುಬಿದಿರೆ ಮತ್ತು ಕಾರ್ಕಳದಲ್ಲಿ ಸೇವೆಯನ್ನು ಸಲ್ಲಿಸಿದ್ದರು.  ಇದೀಗ ಕಾರ್ಕಳದಲ್ಲಿ ಕರ್ತವ್ಯವನ್ನು ನಿರ್ವಹಿಸುತ್ತಿರುವ ಅವರು ಕಾರ್ಕಳ

ಉಪ್ಪಿನಂಗಡಿ: ಸಮುದಾಯ ಆರೋಗ್ಯ ಕೇಂದ್ರ,ಆರೋಗ್ಯ ರಕ್ಷಾ ಸಮಿತಿ ಸಭೆ

ಪುತ್ತೂರು: ಸಮುದಾಯ ಆರೋಗ್ಯ ಕೇಂದ್ರಗಳು ಜನ ಸ್ನೇಹಿಯಾಗುವ ಮೂಲಕ ಜನರಿಗೆ ಹತ್ತಿರವಾಗಬೇಕು, ಚಿಕಿತ್ಸೆಗೆ ಬರುವ ಪ್ರತೀಯೊಬ್ಬ ನಾಗರಿಕನಿಗೂ ಉತ್ತಮ ಸೇವೆ ಸಿಗಬೇಕು, ಯಾವುದೇ ಲೋಪ ದೋಷಗಳು ಬಾರದಂತೆ ಎಚ್ಚರವಹಿಸಬೇಕು  ಎಂದು ಶಾಸಕ ಅಶೋಕ್ ರೈ ಹೇಳಿದರು. ಅವರು ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯ ರಕ್ಷಾ ಸಮಿತಿ ಸಭೆಯಲ್ಲಿ ಮಾತನಾಡಿದರು. ಆರೋಗ್ಯ ಕೇಂದ್ರದಲ್ಲಿನ ಸಿಬಂದಿಗಳಿಗೆ ರಕ್ಷಾ ಸಮಿತಿಗೆಮಹತ್ತರವಾದ ಜವಾಬ್ದಾರಿ ಇದೆ. ಕೇಂದ್ರಕ್ಕೆ ಬರುವ