ಮಂಗಳೂರಿನ ಬಂಟರಯಾನೆ ನಾಡವರ ಮಾತೃಸಂಘದ ವತಿಯಿಂದ ನಡೆಸಲ್ಪಡುವ ಶ್ರೀ ರಾಮಕೃಷ್ಣ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 2023-24ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಹಾಜರಾದ 59 ವಿದ್ಯಾರ್ಥಿಗಳಲ್ಲಿ 14 ವಿಶಿಷ್ಟ ಶ್ರೇಣಿ, 33 ಪ್ರಥಮ ಶ್ರೇಣಿ, 10 ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಶೇಕಡಾ 97 ಫಲಿತಾಂಶದೊಂದಿಗೆ ಶಾಲೆಯು A ಶ್ರೇಣಿಯನ್ನು ಪಡೆದುಕೊಂಡಿದೆ. ಶಾಲೆಯ
ಮೂಡುಬಿದಿರೆ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರೋಟರಿ ಎಜುಕೇಶನ್ ಸೊಸೈಟಿ ಆಡಳಿತಕ್ಕೊಳಪಟ್ಟ ರೋಟರಿ ಆಂಗ್ಲ ಮಾಧ್ಯಮ ಶಾಲೆಯು ಶೇ.100 ಫಲಿತಾಂಶವನ್ನು ದಾಖಲಿಸಿದೆ. ಪರೀಕ್ಷೆಗೆ ಹಾಜರಾದ ಎಲ್ಲಾ 112 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, 41 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ, 67 ವಿದ್ಯಾರ್ಥಿಗಳು ಪ್ರಥಮ ದರ್ಜೆ, ಮೂವರು ವಿದ್ಯಾರ್ಥಿಗಳು ದ್ವಿತೀಯ ದರ್ಜೆ ಹಾಗೂ ಒರ್ವ ವಿದ್ಯಾರ್ಥಿ ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಸಂಚಿತಾ ಎಸ್. ಸುವರ್ಣ 613
ಪಡುಬಿದ್ರಿ: ಕಳೆದ ಎರಡು ದಿನದ ಹಿಂದೆ ನಾಪತ್ತೆಯಾದ ಪಲಿಮಾರು ಗುಂಡಿ ನಿವಾಸಿ ವ್ಯಕ್ತಿಯ ಶವ ಪಕ್ಕದ ಕೆಸರು ತುಂಬಿದ ಹಳ್ಳವೊಂದರಲ್ಲಿ ಪತ್ತೆಯಾಗಿದೆ.ಮೃತರು ಪಲಿಮಾರು ಗುಂಡಿ ನಿವಾಸಿ, ಮುಂಬೈ ಮಹಾ ನಗರದಲ್ಲಿ ವಾಸವಿದ್ದ ಆನಂದ ಪೂಜಾರಿ(51), ಊರಿನ ಮನೆಯಲ್ಲಿ ಕುಟುಂಬದ ದೈವದ ಧಾರ್ಮಿಕ ಕಾರ್ಯಕ್ರಮವಿದ್ದು ಅದರಲ್ಲಿ ಪಾಲ್ಗೊಂಡಿದ್ದ ಇವರು ರಾತ್ರಿ ಸುಮಾರು ಹನ್ನೆರಡರ ಸುಮಾರಿಗೆ ಪಕ್ಕದ ಮನೆಯ ಅಂಗಳದಲ್ಲಿ ನಡೆದು ಹೋಗುವುದನ್ನು ಆ ಮನೆ ಮಂದಿ ನೋಡಿದ್ದರು. ಅಲ್ಲಿಂದ
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಎನ್‌ಐಎ ತಂಡ ಮೂವರನ್ನು ಸಕಲೇಶಪುರ ತಾಲೂಕಿನ ಆನೆಮಹಲ್‌ನಲ್ಲಿ ವಶಕ್ಕೆ ಪಡೆದಿದ್ದಾರೆ. ಬಂಧಿತರನ್ನು ಸುಳ್ಯ ಮೂಲದ ಮುಸ್ತಫಾ ಪೈಚಾರ್, ಸೋಮವಾರಪೇಟೆ ಮೂಲದ ಇಲ್ಯಾಸ್ ಹಾಗೂ ಸಿರಾಜ್ ಎಂದು ಗುರುತಿಸಲಾಗಿದೆ. ಪ್ರವೀಣ್ ನೆಟ್ಟಾರು ಪ್ರಕರಣದ ನಾಲ್ಕನೇ ಆರೋಪಿ ಎಂದು ಗುರುತಿಸಲಾಗಿದ್ದ ಮುಸ್ತಫಾ ಪೈಚಾರ್ ಹಾಗೂ ಇಲ್ಯಾಸ್ ಆನೆಮಹಲ್‌ನ ಸಿರಾಜ್ ಬಳಿ ಕೆಲಸಕ್ಕೆ ಸೇರಿದ್ದರು ಎನ್ನಲಾಗಿದ್ದು, ಆರೋಪಿಗಳಿಗೆ ಆಶ್ರಯ ನೀಡಿದ್ದ
ಮಂಗಳೂರು : ಕಾವೂರಿನ ಬಿ.ಜಿ.ಎಸ್. ಹೈಸ್ಕೂಲ್ ವಿದ್ಯಾರ್ಥಿ ಮಹಿತ್ ಕುಮಾರ್ ಈ ಬಾರಿಯ SSLC ಪರೀಕ್ಷೆಯಲ್ಲಿ 607 ಅಂಕ ಪಡೆದು 97.12 % ದಾಖಲೆಯ ಸಾಧನೆ ಮಾಡಿದ್ದಾನೆ. ಬಿ.ಜಿ.ಎಸ್. ಶಾಲೆಯ ಗರಿಷ್ಠ ಅಂಕ ಪಡೆದ ಟಾಪರ್ ವಿದ್ಯಾರ್ಥಿಯಾಗಿರುವ ಮಹಿತ್ ಕುಮಾರ್ ಅವರು ಭಾಸ್ಕರ್ ಗಟ್ಟಿ ಕೌಡೂರು ಹಾಗೂ ಸೌಮ್ಯ ಗಟ್ಟಿ ನಡಾರ್ ಇವರ ಪುತ್ರ. ಗರಿಷ್ಠ ಅಂಕದೊಂದಿಗೆ ಶಾಲೆಗೆ ಕೀರ್ತಿ ತಂದ ಸಾಧನೆ ಮಾಡಿದ ಮಹಿತ್ ಅವರನ್ನು ಶಾಲಾಡಳಿತ ಮಂಡಳಿ ಅಭಿನಂದಿಸಿದೆ.
ಫ್ಯಾಶನ್ ಉದ್ಯಮವು ಜನಪ್ರಿಯತೆಯನ್ನು ಗಳಿಸಿದೆ. ಫ್ಯಾಶನ್ ವಿನ್ಯಾಸದಲ್ಲಿ ವೃತ್ತಿ ಜೀವನದಲ್ಲಿ ಉತ್ತಮವಾದಂತಹ ಆಯ್ಕೆಯಾಗಿರುತ್ತದೆ ಇಂತಹ ಉತ್ತಮ ದೃಷ್ಟಿಕೋನ ಹೊಂದಿರುವ ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಇಲ್ಲಿನ ಫ್ಯಾಶನ್ ಡಿಸೈನ್ ವಿಭಾಗದ ವತಿಯಿಂದ” ಮೇಕಪ್ ಅಂಡ್ ಹೇರ್ ಸ್ಟೈಲ್” ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಕುಮಾರಿ ಆಶಿಕಾ ಫೌಂಡರ್ ಶಿಯಾ ಮೇಕ್ ಓವರ್ ಬೆಂಗಳೂರು ಇವರು ಆಗಮಿಸಿ
ಶಾಲಾ ಶಿಕ್ಷಣ ಇಲಾಖೆಯು ನಡೆಸಿದ 2023-24 ನೇ ಶೈಕ್ಷಣಿಕ ಸಾಲಿನ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶವು ಪ್ರಕಟಗೊಂಡಿದ್ದು, ಬಂಟ್ವಾಳ ತಾಲೂಕಿನ ಮಾಣಿ, ಪೆರಾಜೆ ವಿದ್ಯಾನಗರದ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯು ಶೇಕಡಾ100 ಫಲಿತಾಂಶವನ್ನು ಪಡೆದುಕೊಂಡಿದೆ. ಪರೀಕ್ಷೆಗೆ ಹಾಜರಾದ 68 ವಿದ್ಯಾರ್ಥಿಗಳಲ್ಲಿ 14 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ, 22 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಹಾಗೂ 32 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ
2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಇದೀಗ ಪ್ರಕಟವಾಗಿದ್ದು, ಶೇ. 73.4 ಮಂದಿ ತೇರ್ಗಡೆಯಾಗಿದ್ದಾರೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಬೆಂಗಳೂರಿನ ಮಲ್ಲೇಶ್ವರಂನ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿತು. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧ್ಯಕ್ಷೆ ಮಂಜುಶ್ರೀ ಹಾಗೂ ನಿರ್ದೇಶಕ ಗೋಪಾಲಕೃಷ್ಣ ಸುದ್ದಿಗೋಷ್ಠಿ ನಡೆಸಿ ಫಲಿತಾಂಶದ ಮಾಹಿತಿ ನೀಡಿದರು. ಈ ಬಾರಿಯ ಫಲಿತಾಂಶ
ಬಂಟ್ವಾಳ ತಾಲೂಕಿನ ಬಹುತೇಕ ಭಾಗಗಳಲ್ಲಿ ರಸ್ತೆ ಇಕ್ಕೆಲಗಳು, ಇಳಿಜಾರು ಗುಂಡಿಗಳು ಕಸ ಎಸೆಯುವ ತಾಣಗಳಾಗುತ್ತಿದೆ. ಕೊಳೆಯುವ ವಸ್ತುಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ವಾಹನಗಳಲ್ಲಿ ಬಂದು ಸಾರ್ವಜನಿಕ ಸ್ಥಳದಲ್ಲಿ ಎಸೆದು ಹೋಗುವ ಅನಾಗರಿಕ ಪ್ರವೃತ್ತಿ ಹೆಚ್ಚಾಗುತ್ತಿದೆ. ಮನೆ, ಅಂಗಡಿಗಳ ತ್ಯಾಜ್ಯಗಳು ರಸ್ತೆ ಬದಿಗಳಲ್ಲಿ ಎಸೆಯುತ್ತಿರುವ ಪರಿಣಾಮ ಸುತ್ತಮುತ್ತಲ ಪ್ರದೇಶ ದುರ್ವಾಸನೆ ಬೀರುತ್ತಿದೆ. ಜನರಲ್ಲಿ ಸ್ವಚ್ಚತೆಯ ಪರಿಕಲ್ಪನೆ ಕೇವಲ ಅಕ್ಟೋಬರ್ 2ರ ಸ್ವಚ್ಛತಾ
ಬಿ.ಸಿ.ರೋಡಿನ ಕಾಮಾಜೆಯಲ್ಲಿರುವ ಸರಕಾರಿ ಪದವಿ ಕಾಲೇಜಿನ ಉಪನ್ಯಾಸಕಿ ವೇದಶ್ರೀ ನಿಡ್ಯ ಅವರು ತನ್ನ ಸ್ವಂತ ಕಾರಿನಲ್ಲಿ ಹೀಗೊಂದು ಸ್ಟಿಕ್ಕರ್ ಬರಹವನ್ನು ಹಾಕಿಸಿಕೊಂಡು ಗಮನ ಸೆಳೆದಿದ್ದಾರೆ. ಜನರು ತಮ್ಮ ಸ್ವಂತ ವಾಹನಗಳಲ್ಲಿ ತಮ್ಮ ಇಷ್ಟದ ದೇವರ ಹೆಸರು, ಮಕ್ಕಳ ಹೆಸರು ಅಥವಾ ಇಷ್ಟದ ವಾಕ್ಯಗಳನ್ನು ಸ್ಟಿಕರ್ ಮೂಲಕ ಬರೆಸುವುದು ಸಾಮಾನ್ಯ. ಆದರೆ ಉಪನ್ಯಾಸಕಿ ವೇದಶ್ರೀ ಅವರು ತನ್ನ ವೇಗನ್ ಆರ್ ಕಾರಿನ ಹಿಂಭಾಗ ಹಾಗೂ ಮುಂಭಾಗದಲ್ಲಿ ತಾನು ಕರ್ತವ್ಯ ನಿರ್ವಹಿಸುತ್ತಿರುವ




























