Home Blog Left SidebarPage 366

ಕಾರ್ಕಳ: ಉರುಳಿಗೆ ಬಿದ್ದ ಚಿರತೆ – ಅರವಳಿಕೆ ಚುಚ್ಚು ಮದ್ದು ನೀಡಿ ಸೆರೆ

ಸಾಣೂರು ಗ್ರಾಮದ ಇಂದಿರಾನಗರ ಹಲ್ಲೆಕಿ ಪರಿಸರದಲ್ಲಿ ಚಿರತೆಯೊಂದು ಉರುಳಿಗೆ ಬಿದ್ದ ಘಟನೆ ನಡೆದಿದೆ. ರಾತ್ರಿ 9 ಗಂಟೆಗೆ ಬೈಕಿ ನಲ್ಲಿ ದಾರಿಯಲ್ಲಿ ಹೋಗುತಿದ್ದ ಮೆಸ್ಕಾಂ ಇಲಾಖೆಯ ದೇವಣ್ಣ ರಾವ್ ಮತ್ತು ಸಾಣೂರು ಪಂಚಾಯತ್ ಸದಸ್ಯ ಪ್ರಕಾಶ್ ರಾವ್ ಇಬ್ಬರು ಚಿರತೆ ಘರ್ಜಿಸುವ ಸದ್ದನು ಕೇಳಿ ವೀಕ್ಷಿಸಿದಾಗ ಚಿರತೆ ಉರುಳಿಗೆ ಬಿದ್ದಿರುವುದು ಕಂಡು ಬಂದಿದೆ. ತಕ್ಷಣ ಕಾರ್ಕಳ

ಕಾರ್ಕಳ: ಕಾಂಗ್ರೆಸ್ ಪಕ್ಷದಿಂದ ಶಾಸಕ ಸುನೀಲ್ ಕುಮಾರ್ ವಿರುದ್ಧ ಪ್ರತಿಭಟನೆ

ಕಾರ್ಕಳ : ಪರಶುರಾಮ ನಕಲಿ ಮೂರ್ತಿ ಹಾಗೂ ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಯನ್ನು ಗುಜುರಿಗೆ ಹಾಕಿ ಅವ್ಯವಹಾರ ವೆಸಗಿದ್ದಾರೆ. ಅದರ ಮೂಲಕ ಬಿಜೆಪಿ ಸರಕಾರದ ಕರ್ಮಕಾಂಡಗಳು ಹೊರಗೆ ಬರುತ್ತಿವೆ ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದರು. ಅವರು ಕಾರ್ಕಳ ಬೈಲೂರಿನ ಪರಶುರಾಮ ಥೀಮ್ ಪಾರ್ಕ್ ಬಳಿಯ ಮೈದಾನದಲ್ಲಿ ಶಾಸಕ ಸುನೀಲ್ ಕುಮಾರ್ ವಿರುದ್ಧ ನಡೆದ ಕಾಂಗ್ರೆಸ್ ಪಕ್ಷದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು. ಸಕ್ಕರೆ ಕಾರ್ಖಾನೆ ಹಗರಣ ದಲ್ಲಿ 15 ಕೋಟಿ, ನಕಲಿ

ಉಳ್ಳಾಲ: ನೇತ್ರಾವತಿ ಹೊಸಸೇತುವೆಯಲ್ಲಿ ಸರಣಿ ಅಪಘಾತ

ಉಳ್ಳಾಲ: ಲಾರಿಯೊಂದು ಕೆಟ್ಟು ನಿಂತ ಪರಿಣಾಮ ಆರು ವಾಹನಗಳ ನಡುವೆ ಸರಣಿ ಅಪಘಾತ ಸಂಭವಿಸಿದ ಘಟನೆ ನೇತ್ರಾವತಿ ನದಿಯ ಹೊಸಸೇತುವೆಯಲ್ಲಿ ಸಂಭವಿಸಿದೆ. ಅಕಾಲಿಕವಾಗಿ ಸುರಿದ ಮಳೆಯಿಂದ ವಾಹನಗಳು ಒಂದರ ಹಿಂದೆಯಂತೆ ಅಪ್ಪಳಿಸಿರುವುದಾಗಿ ತಿಳಿದುಬಂದಿದೆ. ಮಂಗಳೂರಿನಿಂದ ತೊಕ್ಕೊಟ್ಟು ಕಡೆಗೆ ತೆರಳುತ್ತಿದ್ದ ಲಾರಿ ಸೇತುವೆ ಮಧ್ಯಭಾಗದಲ್ಲಿ ಕೆಟ್ಟು ನಿಂತಿದೆ. ಇದೇ ವೇಳೆ ಭಾರೀ ಮಳೆ ಆರಂಭವಾಗಿತ್ತು. ನಿಯಂತ್ರಣ ಕಳೆದುಕೊಂಡ ಆಲ್ಟೋ ಕಾರು ಲಾರಿ ಹಿಂಬದಿಗೆ ಢಿಕ್ಕಿ ಹೊಡೆದಿದೆ.

ವಾಮಂಜೂರು: ಸಿಡಿಲು ಬಡಿದು ಮನೆಗೆ ಹಾನಿ

ಮಂಗಳೂರು: ನಗರ ಹೊರವಲಯದ ವಾಮಂಜೂರು ಅಮೃತ ನಗರದಲ್ಲಿ ಸಿಡಿಲು ಬಡಿದು ಮನೆಗೆ ಹಾನಿಯಾದ ಘಟನೆ ನಡೆದಿದೆ.ಗೋಪಾಲ ಪೂಜಾರಿ ಎಂಬವರ ಮನೆಗೆ ಸಿಡಿಲು ಬಡಿದಿದೆ ಎಂದು ತಿಳಿದು ಬಂದಿದೆ. ಸಿಡಿಲು ಬಡಿದ ಪರಿಣಾಮ ಮನೆಯ ವಿದ್ಯುತ್ ಉಪಕರಣಗಳಿಗೆ ಹಾನಿಯಾಗಿದೆ. ಶಾರ್ಟ್ ಸರ್ಕ್ಯುಟ್‍ನಿಂದ ಸ್ವಿಚ್ ಬೋರ್ಡ್ ಹಾಗೂ ಮೀಟರ್ ಬಾಕ್ಸ್ ಗೆ ಹಾನಿಯಾಗಿದೆ. ಮನೆಯಲ್ಲಿದ್ದ ಮಹಿಳೆ ಹಾಗೂ 5 ವರ್ಷದ ಮಗುವಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂದರ್ಭ ಮನೆಯಲ್ಲಿ

ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘದ 9 ನೇ ನೂತನ ಹವಾನಿಯಂತ್ರಿತ ಶಾಖೆ

108 ವರ್ಷ ಇತಿಹಾಸದ ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘದ ಮಟಪಾಡಿಯ 9 ನೇ ನೂತನ ಹವಾನಿಯಂತ್ರಿತ ಶಾಖೆ ಮತ್ತು ನವರತ್ನ ಮಿನಿ ಸಭಾಂಗಣದ ಉದ್ಘಾಟನೆ ಜರುಗಿತು. ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಡಾ| ಎಂ.ಎನ್.ರಾಜೇಂದ್ರ ಕುಮಾರ್ ಅವರು ನೂತನÀ ಶಾಖೆಯನ್ನು ಉದ್ಘಾಟಿಸಿ ಮಾತನಾಡಿ, ಸಹಕಾರಿ ಸಂಸ್ಥೆಗಳು ಸರಕಾರದ ಯಾವೂದೇ ಸೌಲಭ್ಯವನ್ನು ಬಯಸದೆ ಜನರಿಂದ ಜನರಿಗಾಗಿ ಎನ್ನುವ ದ್ಯೇಯದಲ್ಲಿ ಜನರ ವಿಸ್ವಾಸಗಳಿಸಿ ಇಂದು ರಾಷ್ಟ್ರೀಕೃತ ಬ್ಯಾಂಕ್ ಗಳಿಗೆ ಸರಿ

ಮೂಡುಬಿದಿರೆ ಪ್ರೆಸ್ ಕ್ಲಬ್ ನ ಮಾಜಿ ಅಧ್ಯಕ್ಷ ವೇಣುಗೋಪಾಲ್ ನಿಧನ

ಮೂಡುಬಿದಿರೆ: ವಕೀಲ, ಪತ್ರಕರ್ತ, ಮೂಡುಬಿದಿರೆ ಪ್ರೆಸ್ ಕ್ಲಬ್ ನ ಮಾಜಿ ಅಧ್ಯಕ್ಷ ವೇಣುಗೋಪಾಲ ಕೋಟ್ಯಾನ್ (30ವ) ಹೃದಯಾಘಾತದಿಂದ ಸೋಮವಾರ ನಿಧನರಾಗಿದ್ದಾರೆ. ಸಚ್ಚರಿಪೇಟೆ ಪೆರೂರು ನಿವಾಸಿ ಆನಂದ- ವನಜಾ ದಂಪತಿಯ ಪುತ್ರ ವೇಣುಗೋಪಾಲ್ ಅವರು ಕಳೆದ 11 ವರ್ಷಗಳಿಂದ ಜಯಕಿರಣ ಪತ್ರಿಕೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಜತೆಗೆ ವಕೀಲ ವೃತ್ತಿಯನ್ನು ಮಾಡುತ್ತಿದ್ದರು. ಮೂರು ಬಾರಿ ಮೂಡುಬಿದಿರೆ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿದ್ದ ಅವರು ಮೂಡುಬಿದಿರೆ

ಮಂಗಳೂರು: ತನಿಷ್ಕ್ ಜ್ಯುವೆಲ್ಲರಿಯಲ್ಲಿ ದಸರಾ ಹಬ್ಬದ ಪ್ರಯುಕ್ತ ಗ್ರಾಹಕರಿಗೆ ವಿಶೇಷ ಆಫರ್

ಮಂಗಳೂರಿನ ಜ್ಯೋತಿ ಸರ್ಕಲ್‌ನಲ್ಲಿರುವ ಪ್ರತಿಷ್ಠಿತ ಚಿನ್ನಾಭರಣ ಮಳಿಗೆಯಾದ ತನಿಷ್ಕ್ ಜ್ಯುವೆಲ್ಲರಿಯಲ್ಲಿ ದಸರಾ ಹಬ್ಬದ ಪ್ರಯುಕ್ತ ಗ್ರಾಹಕರಿಗೆ ವಿಶೇಷ ಆಫರ್‌ಗಳನ್ನು ನೀಡಲಾಗುತ್ತಿದೆ. ಈ ಪ್ರಯುಕ್ತ ಗ್ರಾಹಕರೆಲ್ಲರೂ ಸೇರಿ ಹಬ್ಬದ ಆಚರಣೆಯನ್ನು ದೀಪ ಬೆಳಗಿಸುವ ಮೂಲಕ ಮೂಲಕ ಉದ್ಘಾಟಿಸಿ, ನಂತರ ದರೋಹ ಎಂಬ ಹೊಸ ಆಭರಣವನ್ನು ಬಿಡುಗಡೆಗೊಳಿಸಿದರು. ಈ ವಿಶೇಷ ರಿಯಾಯಿತಿಯು ಅ.15 ರಿಂದ ನ.12ರ ವರೆಗೆ ನಡೆಯಲಿದ್ದು, 25% ನಷ್ಟು ಚಿನ್ನದ ಮೇಕಿಂಗ್ ದರದಲ್ಲಿ ರಿಯಾಯಿತಿ

Mangaluru – 3D Tiger Face Mode ಹುಲಿವೇಷಕ್ಕೆ ಹೈಲೆಟ್ ಆಯ್ತು 3ಡಿ ಟೈಗರ್ ಫೇಸ್ ಮೌಲ್ಡ್

ದಸರಾ ಬಂತೆಂದರೆ ಎಲ್ಲೆಡೆ ಸಂಭ್ರಮದ ವಾತಾವರಣ…. ಅದರಲ್ಲೂ ಕರಾವಳಿಯಲ್ಲಿ ಹುಲಿವೇಷದ್ದೇ ಕಾರುಬಾರು, ಹುಲಿವೇಷಕ್ಕೆ ಹೈಲೆಟ್ ಆಗಿರುವುದು ಹುಲಿಮುಖದ ಆಕಾರ….ಅದಕ್ಕಾಗಿಯೇ ಮಂಗಳೂರಿನ ಯುವಕನೋರ್ವ 3ಡಿ ಟೈಗರ್ ಫೇಸ್ ಮೌಲ್ಡ್ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಹಾಗಾದ್ರೆ ಆತ ಯಾರು ಎನ್ನುವ ಕುತೂಹಲ ನಿಮ್ಮಲ್ಲಿದ್ರೆ. ಈ ಸ್ಟೋರಿ ನೋಡಿ.. ಇವ್ರ ಹೆಸರು ಅನಿಲ್ ಕುಮಾರ್, ಮಂಗಳೂರಿನ ಕೋಡಿಕಲ್ ನಿವಾಸಿಯಾಗಿರುವ ಇವರು ಬೈಕಂಪಾಡಿಯ ಪ್ರೈಮಸಿ ಕಂಪನಿಯಲ್ಲಿ ಗ್ರಾಫಿಕ್ಸ್

ಸುಳ್ಯ: ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ

ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಕಲೆಕ್ಷನ್ ಕೇಂದ್ರವಾಗಿದೆ. ಬರಕ್ಕೆ ತುತ್ತಾಗಿರುವ ರೈತರಿಗೆ ಪರಿಹಾರ ನೀಡಿಲ್ಲ. ತುಷ್ಟೀಕರಣದಲ್ಲಿ ಸರ್ಕಾರ ಮುಳುಗಿದೆ. ಇತ್ಯಾದಿ ಕಾಂಗ್ರೆಸ್ ಸರ್ಕಾರದ ವೈಫಲ್ಯವನ್ನು ಖಂಡಿಸಿ ಬಿಜೆಪಿ ವತಿಯಿಂದ ಸುಳ್ಯದಲ್ಲಿ ಪ್ರತಿಭಟನೆ ನಡೆಸಿದರು. ಸುಳ್ಯದ ತಾಲೂಕು ಕಚೇರಿ ಮುಂಭಾಗದಲ್ಲಿ ಬಿಜೆಪಿ ಮುಖಂಡರು ಪ್ರತಿಭಟನೆ ನಡೆಸಿದರು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ಮುಖಂಡರು, ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ.

ಸಾಮರಸ್ಯ ಸಾರಿದ ಮಂಗಳೂರು ದಸರಾ : ಬಿಷಪ್ ಲಾರೆನ್ಸ್ ಮುಕುಝಿ

ಒಂದೇ ಜಾತಿ ಒಂದೇ ಮತ ಒಂದೇ ದೇವರು ಜಗತ್ತಿಗೆ ಪರಿಚಯಿಸಿದ ಬ್ರಹ್ಮಶ್ರೀ ನಾರಾಯಣಗುರುಗಳಂತಹ ಮಹಾಪುರುಷರ ಸಿದ್ಧಾಂತ ಇಂದಿನ ಸಮಾಜಕ್ಕೆ ಅಗತ್ಯ. ನಾವೆಲ್ಲರೂ ದೇವರ ಮಕ್ಕಳು. ಕುದ್ರೋಳಿ ಕ್ಷೇತ್ರದಲ್ಲಿ ಜಾತಿ ಮತ ಬೇಧವಿಲ್ಲದೆ ನಡೆಯುತ್ತಿರುವ ಉತ್ಸವ ಮಾದರಿ ಎಂದು ಸಿರೋ-ಮಲಬಾರ್ ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಬಿಷಪ್ ಲಾರೆನ್ಸ್ ಮುಕುಝಿ ಹೇಳಿದರು. ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನಡೆಯುತ್ತಿರುವ ಐತಿಹಾಸಿಕ ದಸರಾ ಮಹೋತ್ಸವದಲ್ಲಿ ಸೋಮವಾರ