ಉಳ್ಳಾಲ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಉಳ್ಳಾಲ ತಾಲೂಕು ಘಟಕದ ಉದ್ಘಾಟನಾ ಸಮಾರಂಭ ಆ.27 ರಂದು ಭಾನುವಾರ ಸಂಜೆ 3.00 ಗಂಟೆಗೆ ತೊಕ್ಕೊಟ್ಟು ಅಂಬಿಕಾ ರೋಡಿನ ಗಟ್ಟಿ ಸಮಾಜ ಭವನದಲ್ಲಿ ನೆರವೇರಲಿದೆ ಎಂದು ಉಳ್ಳಾಲ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಸಂತ್ ಎನ್.ಕೊಣಾಜೆ ಹೇಳಿದ್ದಾರೆ. ಉಳ್ಳಾಲ ಪ್ರೆಸ್‍ಕ್ಲಬ್‍ನಲ್ಲಿ ಆಯೋಜಿಸಿದ
ಉಳ್ಳಾಲ: ಆಧಾರ್ ಕಾರ್ಡ್ ಇಲ್ಲದೆ ಸರಕಾರಿ ನರ್ಮ್ ಬಸ್‍ನಲ್ಲಿ ಪ್ರಯಾಣಿಸುತ್ತಿದ್ದ ಐವರು ಪ್ರಾಥಮಿಕ ಶಾಲಾ ವಿದ್ಯಾರ್ಥಿನಿಯರನ್ನ ಅರ್ಧ ದಾರಿಯಲ್ಲೇ ಇಳಿಸಿದ ಬಸ್ ನಿರ್ವಾಹಕನ್ನು ತರಾಟೆಗೆ ತೆಗೆದುಕೊಂಡ ಘಟನೆ ಕುಂಪಲದಲ್ಲಿ ನಡೆದಿದೆ. ಮಂಗಳೂರಿನಿಂದ ಕುಂಪಲ ನಡುವೆ ಓಡಾಟ ನಡೆಸುವ ಸರಕಾರಿ ನರ್ಮ್ ಬಸ್ಸಿನ ನಿರ್ವಾಹಕ ಹುಸೇನ್ ಸಾಬ್ ಐ ಹಳ್ಳೂರ ಎಂಬವರು ಎರಡನೇ ಮತ್ತು ಮೂರನೇ ತರಗತಿ ಓದುವ ಐದು ಮಂದಿ ವಿದ್ಯಾರ್ಥಿನಿಯರಲ್ಲಿ ಆಧಾರ್ ಕಾರ್ಡ್ ಇಲ್ಲದಕ್ಕೆ ನಿಮಗೆ
ಮಂಗಳೂರು ಪೂರ್ವ ವಲಯ ಬಸ್ಸು ಮಾಲಕರ ಒಕ್ಕೂಟದ ವತಿಯಿಂದ ಕರ್ನಾಟಕ ವಿಧಾನ ಸಭಾಧ್ಯಕ್ಷ ಯು. ಟಿ ಖಾದರ್ ವರವರಿಗೆ ಸನ್ಮಾನಿಸಲಾಯಿತು. ಪೂರ್ವ ವಲಯ ಬಸ್ಸು ಮಾಲಕರ ಒಕ್ಕೂಟದ ಅಧ್ಯಕ್ಷ ಅಝೀಝ್ ಪರ್ತಿಪ್ಪಾಡಿ ಮಾತನಾಡಿ, ಯು.ಟಿ ಖಾದರ್ ರವರು ಸರ್ವ ಧರ್ಮಿಯರಿಗೆ ಪ್ರೀತಿಪಾತ್ರರಾಗಿದ್ದು. ಸರ್ವರ ಮನ ಗೆಲುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಿದರು. ಪೂರ್ವ ವಲಯ ಬಸ್ಸು ಮಾಲಕರ ಒಕ್ಕೂಟದ ಗೌರವಾಧ್ಯಕ್ಷ ಹಾಜಿ ಎನ್.ಎಸ್ ಕರೀಂ, ಉಪಾಧ್ಯಕ್ಷ ಶಬರೀಶ್ ಶೆಟ್ಟಿ, ಕೋಶಾಧಿಕಾರಿ
ಮಂಗಳೂರು : ಮಿಲಾಗ್ರೆಸ್ ಪಿಯು ಕಾಲೇಜು, ಹಂಪನಕಟ್ಟೆಯಲ್ಲಿ 2023-24ನೇ ಶೈಕ್ಷಣಿಕ ವರ್ಷದ ವಿವಿಧ ಕ್ಲಬ್‌ಗಳು ಮತ್ತು ಸಂಘಗಳನ್ನು ಆಗಸ್ಟ್ 21 ರಂದು ಉದ್ಘಾಟಿಸಲಾಯಿತು. ಎಲ್ಲಾ ಕ್ಲಬ್ ಸದಸ್ಯರು, ಕೋ-ಆರ್ಡಿನೇಟರ್‌ಗಳು ಮತ್ತು ಇತರ ವಿದ್ಯಾರ್ಥಿಗಳು ಪಿಯು ಕಾಲೇಜು ಸಭಾಂಗಣದಲ್ಲಿ ಜಮಾಯಿಸಿದರು. ಮುಖ್ಯ ಅತಿಥಿ ಶ್ರೀ ಸಚೇತ್ ಸುವರ್ಣ ಇತಿಹಾಸ ಉಪನ್ಯಾಸಕರು, ಸರ್ಕಾರಿ ಪಿಯು ಕಾಲೇಜು, ಕಾವೂರು, ಪ್ರಾಂಶುಪಾಲ ಶ್ರೀ ಮೆಲ್ವಿನ್ ವಾಸ್,ಶ್ರೀ ಕಿರಣ್ ಡಿ ಸೋಜಾ ಇಂಗ್ಲಿಷ್
ಮಂಗಳೂರು: ಸೆ.17ರಂದು ಪುಣೆ ಕುಲಾಲ ಸುಧಾರಕ ಸಂಘದ 45ನೇ ವಾರ್ಷಿಕ ಮಹಾಸಭೆ- ಸಾಂಸ್ಕ್ರತಿಕ ಕಾರ್ಯಕ್ರಮ ಮಂಗಳೂರು: ಪುಣೆ ಕುಲಾಲ ಸುಧಾರಕ ಸಂಘದ 45ನೇ ವಾರ್ಷಿಕ ಮಹಾಸಭೆಯು ಸೆ.17ರಂದು ಬೆಳಿಗ್ಗೆ 10ಗಂಟೆಗೆ ಪುಣೆಯ ಡಾ.ಶ್ಯಾಮ್‍ರಾವ್ ಕಲ್ಮಾಡಿ ಕನ್ನಡ ಹೈಸ್ಕೂಲ್‍ನಲ್ಲಿ ನಡೆಯಲಿದೆ. ಬೆಳಿಗ್ಗೆ ಸಾಂಸ್ಕ್ರತಿಕ ಕಾರ್ಯಕ್ರಮ, ಸಭಾ ಕಾರ್ಯಕ್ರಮ, ಲೆಕ್ಕಪತ್ರ ಮಂಡನೆ, ಗೌರವಾರ್ಪಣೆ, ಮಧ್ಯಾಹ್ನ ಭೋಜನ, ನಂತರ ನೆಲ್ಯಾಡಿ ವನಶ್ರೀ ಕಲಾವಿದರಿಂದ ಕುಸಾಲ್ದ
ಫಾದರ್ ಮುಲ್ಲರ್ ಚಾರಿಟೇಬಲ್ ಇನ್‌ಸ್ಟಿಟ್ಯೂಷನ್‌ನ ಮಾಜಿ ನಿರ್ದೇಶಕ ರೆ. ರೆವ್. ಬ್ಯಾಪ್ಟಿಸ್ಟ್ ಮೆನೆಜಸ್ ಅವರು ಬುಧವಾರ ನಿಧನರಾದರು. ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾಗಿ, ಅಗ್ರಾರ್‌ನ ಮೋಸ್ಟ್ ಹೋಲಿ ರಿಡೀಮರ್ ಚರ್ಚ್‌ನಲ್ಲಿ ಸಹಾಯಕ ಪ್ಯಾರಿಷ್ ಪಾದ್ರಿಯಾಗಿ, ಮಂಗಳೂರಿನ ಸೇಂಟ್ ಆಂಟೋನಿ ಚಾರಿಟೇಬಲ್ ಸಂಸ್ಥೆಗಳಲ್ಲಿ ಸಹಾಯಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದ ಬ್ಯಾಪ್ಟಿಸ್ಟ್ ಮೆನೆಜಸ್ ಅವರು ೧೯೭೭ರಲ್ಲಿ ರೋಮ್‌ನಲ್ಲಿ ನೈತಿಕ ಥಿಯಾಲಜಿ ಮತ್ತು 1982ರಲ್ಲಿ
ಪುತ್ತೂರು: ಯುವಕನೊರ್ವ ಯುವತಿಯ ಕುತ್ತಿಗೆಗೆ ಚೂರಿಯಿಂದ ಇರಿದು ಕೊಲೆಗೈದ ಘಟನೆ ಪುತ್ತೂರು ಮಹಿಳಾ ಪೊಲೀಸ್ ಠಾಣಾ ಬಳಿ ನಡೆದಿದೆ. ಬಂಟ್ವಾಳ ತಾಲೂಕಿನ ಅಳಿಕೆ ಗ್ರಾಮದ ಕುದ್ದುಪದವಿನ ವಿಜಯನ್ ಎಂಬವರ ಪುತ್ರಿ ಗೌರಿ ಎಂಬಾಕೆ ಚೂರಿ ಇರಿತದಿಂದ ಗಂಭೀರ ಗಾಯಗೊಂಡಿದ್ದು ತಕ್ಷಣ ಆಕೆಯನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ. ಪುತ್ತೂರು ಬಸ್ ನಿಲ್ದಾಣದಲ್ಲಿ ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಗ್ರಾಮದ ನೈಬೇಲು ನಿವಾಸಿ
ಪುತ್ತೂರು: ಪುತ್ತೂರು ಮಹಿಳಾ ಪೊಲೀಸ್ ಠಾಣಾ ಬಳಿ ಚೂರಿ ಇರಿತಗೊಂಡ ಯುವತಿ ಗಂಭೀರ ಗಾಯಗೊಂಡ ಹಿನ್ನಲೆಯಲ್ಲಿ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಪುತ್ತೂರು ಬಸ್ ನಿಲ್ದಾಣದಲ್ಲಿ ಯುವಕ ಮತ್ತು ಯುವತಿ ಮಧ್ಯೆ ಮಾತಿನಚಕಮಕಿ ನಡೆದಿದ್ದು ಕೊನೆಗೆ ಆಕೆ ಮಹಿಳಾ ಪೊಲೀಸ್ ಠಾಣೆಯ ಬಳಿ ಬಂದಾಗ ಬೈಕ್ ನಲ್ಲಿ ಬಂದ ಯುವಕ ಆಕೆಯ ಕತ್ತಿಗೆ ಚೂರಿಯಿಂದ ಇರಿದ್ದಿದ್ದಾನೆ ಎಂದು ತಿಳಿದು ಬಂದಿದೆ. ಯುವತಿಯನ್ನು ಕುದ್ದು ಪದವಿನ ವಿಜಯನ್ ಎಂಬವರ ಪುತ್ರಿ ಗೌರಿ ಎಂದು
ಮೂಡುಬಿದಿರೆ: 2023-24ನೇ ಸಾಲಿನ ಕಂಬಳ ಸೀಸನ್ ನ ಪೂರ್ವಭಾವಿಯಾಗಿ ಮೂಡುಬಿದಿರೆ ಕೋಟಿ-ಚೆನ್ನಯ ಜೋಡುಕರೆಯಲ್ಲಿ ಕುದಿ ಕಂಬಳ ಆರಂಭಗೊಂಡಿತು. ಉದ್ಯಮಿ, ಕೋಣಗಳ ಯಜಮಾನ ರಂಜಿತ್ ಪೂಜಾರಿ ಕರೆಯಲ್ಲಿ ದೀಪ ಬೆಳಗಿಸುವ ಮೂಲಕ ಕುದಿ ಕಂಬಳಕ್ಕೆ ಚಾಲನೆಯನ್ನು ನೀಡಿದರು. ಜಿಲ್ಲಾ ಕಂಬಳ ಸಮಿತಿಯ ಕಾರ್ಯದರ್ಶಿ ಸುರೇಶ್ ಕೆ.ಪೂಜಾರಿ ರೆಂಜಾಳ ಕಾರ್ಯ, ಪುರಸಭಾ ನಿರ್ಗಮನ ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜ ಪೂಜಾರಿ, ಬೆಳುವಾಯಿ ಗ್ರಾ.ಪಂ.ಸದಸ್ಯ ರಘು, ಕಂಬಳದ ಕೋಣಗಳ ಯಜಮಾನರುಗಳಾದ
ಬ್ರಹ್ಮಾವರ : ವಿಶ್ವಕ್ಕೆ ಅಚ್ಚರಿ ಮೂಡಿಸಿದ ಭಾರತದ ಚಂದ್ರಯಾನದ ಯಶಸ್ಸಿಗೆ ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ಸಂಭ್ರಮಾಚರಣೆ ನಡೆಸಿದ್ದಾರೆ.ಬ್ರಹ್ಮಾವರ ಫ್ರೆಂಡ್ಸ್ ಮತ್ತು ಡೈಮಂಡ್ ಜಿಮ್‍ನ ಸದಸ್ಯರು ಭಾರತದ ಹೆಮ್ಮೆಯ ವಿಜ್ಞಾನಿಗಳ ತಂಡದ ಶ್ರಮಕ್ಕೆ, ಇಸ್ರೋ ಸಂಸ್ಥೆಗೆ, ದೇಶದ ಪ್ರಧಾನಿ ನರೇಂದ್ರ ಮೋದಿಜೀಯವರಿಗೆ ಮತ್ತು ಭಾರತ ಮಾತೆಗೆ ಜೈ ಕಾರ ಹಾಕಿ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಈ ಸಂದರ್ಭದಲ್ಲಿ ತಂಡದ ದೇವಾನಂದ ನಾಯಕ್, ಅರ್ಜುನ ಪ್ರಭು, ಮಧುಸೂಧನ




























