ಫಾದರ್ ಮುಲ್ಲರ್ ಚಾರಿಟೇಬಲ್ ಇನ್‌ಸ್ಟಿಟ್ಯೂಷನ್‌ನ ಮಾಜಿ ನಿರ್ದೇಶಕ ರೆ. ರೆವ್. ಬ್ಯಾಪ್ಟಿಸ್ಟ್ ಮೆನೆಜಸ್ ನಿಧನ
ಫಾದರ್ ಮುಲ್ಲರ್ ಚಾರಿಟೇಬಲ್ ಇನ್‌ಸ್ಟಿಟ್ಯೂಷನ್‌ನ ಮಾಜಿ ನಿರ್ದೇಶಕ ರೆ. ರೆವ್. ಬ್ಯಾಪ್ಟಿಸ್ಟ್ ಮೆನೆಜಸ್ ಅವರು ಬುಧವಾರ ನಿಧನರಾದರು.
ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾಗಿ, ಅಗ್ರಾರ್‌ನ ಮೋಸ್ಟ್ ಹೋಲಿ ರಿಡೀಮರ್ ಚರ್ಚ್‌ನಲ್ಲಿ ಸಹಾಯಕ ಪ್ಯಾರಿಷ್ ಪಾದ್ರಿಯಾಗಿ, ಮಂಗಳೂರಿನ ಸೇಂಟ್ ಆಂಟೋನಿ ಚಾರಿಟೇಬಲ್ ಸಂಸ್ಥೆಗಳಲ್ಲಿ ಸಹಾಯಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದ ಬ್ಯಾಪ್ಟಿಸ್ಟ್ ಮೆನೆಜಸ್ ಅವರು ೧೯೭೭ರಲ್ಲಿ ರೋಮ್‌ನಲ್ಲಿ ನೈತಿಕ ಥಿಯಾಲಜಿ ಮತ್ತು 1982ರಲ್ಲಿ ಅವರ ಡಾಕ್ಟರೇಟ್ ಅಧ್ಯಯನವನ್ನು ಪೂರ್ಣಗೊಳಿಸಿದ ನಂತರ ಬೆಂಗಳೂರಿನ ಸೇಂಟ್ ಪೀಟರ್ಸ್ ಪಾಂಟಿಫಿಕಲ್ ಸೆಮಿನರಿಯಲ್ಲಿ 1994 ರವರೆಗೆ ಸೇವೆ ಸಲ್ಲಿಸಿದ್ದರು.
ಮಂಗಳೂರು ಜೆಪ್ಪುವಿನ ಸೇಂಟ್ ಜೋಸೆಫ್ ಇಂಟರ್-ಡಯೋಸಿಸನ್ ಸೆಮಿನರಿಯಲ್ಲಿ ಆಡಳಿತಾಧಿಕಾರಿಯಾಗಿ, 1997 ರಿಂದ ೨೦೦೭ರವರೆಗೆ ೧೦ ವರ್ಷಗಳ ಕಾಲ ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ನಿರ್ದೇಶಕರಾಗಿ, ಉಡುಪಿ ಡಯಾಸಿಸ್ನ ಎಪಿಸ್ಕೋಪಲ್ ವಿಕಾರ್ ಆಗಿ, ಉಡುಪಿಯ ಹೊಸ ಡಯಾಸಿಸ್‌ನ ಮೊದಲ ವಿಕಾರ್ ಜನರಲ್ ಆಗಿ ಗಮನಾರ್ಹ ಸೇವೆ ಸಲ್ಲಿಸಿದ್ದರು.
ಬ್ಯಾಪ್ಟಿಸ್ಟ್ ಮೆನೆಜಸ್ ಅವರ ನಿಧನಕ್ಕೆ ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ಪರವಾಗಿ ಆಡಳಿತ ಮಂಡಳಿ, ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಸಂತಾಪ ಸಲ್ಲಿಸಿದ್ದಾರೆ.