Home Blog Left SidebarPage 496

ಕಾಲು ಸೇತುವೆ ನಿರ್ಮಿಸಿ ಹಳ್ಳಿ ಮನಸ್ಸುಗಳನ್ನು ಬೆಸೆದ ಯುವ ತೇಜಸ್ಸು ತಂಡ

     ಸುಳ್ಯ ತಾಲೂಕಿನ ನಾರ್ಣಕಜೆಯ “ಯುವ ತೇಜಸ್ಸು” ಯುವಕರ ತಂಡವೊಂದು ಸುಮಾರು 20ಕ್ಕೂ ಹೆಚ್ಚು ಮನೆಗಳ ಸಂಪರ್ಕಿಸಬೇಕಾದ ರಸ್ತೆಯಲ್ಲಿ ಕಬ್ಬಿಣದ ಶಾಶ್ವತ ಕಾಲುಸಂಕ ನಿರ್ಮಿಸಿಕೊಡುವುದರ ಮೂಲಕ ಆ ಹಳ್ಳಿ ಜನರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ. ನಾರ್ಣಕಜೆಯಿಂದ ಪೈಲಾರು ಕಡೆ ಸಂಪರ್ಕಿಸಬಹುದಾದ ರಸ್ತೆಯಲ್ಲಿ ಅಡ್ಡಲಾಗಿ ಹೊಳೆ ಹರಿದು ಹೋಗುವ ಕಾರಣ ಈ

ನಿಟ್ಟೆ ಕ್ಷೇಮದಲ್ಲಿ ಮದ್ಯವರ್ಜನ ಶಿಬಿರದ ಉದ್ಘಾಟನೆ

ಉಳ್ಳಾಲ: ದಾನ ಧರ್ಮದ ಸೇತುವೆಯನ್ನು ಕಟ್ಟಿ, ಸಂಪತ್ತು ಸೌಭಾಗ್ಯದ ಐರಾವತವನ್ನು ಈ ಧರೆಗಿಳಿಸಿ ಎಲ್ಲರೂ ಅವರ ಕರ್ತವ್ಯ, ದಾನ, ವಸತಿ, ಆರೊಗ್ಯ, ವಿದ್ಯೆ, ಈ ಪಂಚಮೂಲ ಅವಶ್ಯಕತೆಗೆ ಪೂರಕವಾಗಿ ನೆಮ್ಮದಿಯ ಜೀವನ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುವ ಎಂದು ರಾಜ್ಯ ಸಭಾಸದಸ್ಯ, ಧರ್ಮಸ್ಥಳ ಶ್ರೀ ಕ್ಷೇತ್ರದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ ಹೇಳಿದರು. ನಿಟ್ಟೆ ವಿಶ್ವವಿದ್ಯಾಲಯ ಕಾಲೇಜಿನ ಕ್ಷೇಮ ಸಭಾಂಗಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ,ಜಿಲ್ಲಾ

ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರಿಗೆ ಅಭಿನಂದನೆ

ಬೈಂದೂರು ಶಾಸಕರಾದ ಗುರುರಾಜ್ ಗಂಟೆಹೊಳೆ ಅವರಿಗೆ ಅಭಿನಂದನಾ ಕಾರ್ಯಕ್ರಮ ಹಾಗೂ ಶಕ್ತಿ ಕೇಂದ್ರ ಕಾರ್ಯಕರ್ತರ ಸಭೆ ಮರವಂತೆ ಸಾಧನ ಸಭಾಭವನದಲ್ಲಿ ನಡೆಯಿತು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಾಸಕರು ಮರವಂತೆ ಎನ್ನುವುದು ಬಿಜೆಪಿಯ ಭದ್ರಕೋಟೆ ಹಾಗೂ ನನ್ನನ್ನು ಅತಿ ಹೆಚ್ಚು ಮತದಿಂದ ಗೆಲ್ಲಿಸುವಲ್ಲಿ ಮರವಂತೆ ಕಾರ್ಯಕರ್ತರು ಶ್ರಮಿಸಿದ್ದಾರೆ.. ಈ ಕಾರಣದಿಂದ ಅತಿ ಹೆಚ್ಚು ಮತದಿಂದ ಗೆಲ್ಲಲು ಸಾಧ್ಯವಾಯಿತು ಎಂದು ಹೇಳಿದರು. ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷರಾದ

ಪ್ರಧಾನಿ ನರೇಂದ್ರ ಮೋದಿಯಿಂದ ನೂತನ ಸಂಸತ್ ಭವನ ಲೋಕಾರ್ಪಣೆ

ಪ್ರಧಾನಿ ನರೇಂದ್ರ ಮೋದಿ ಅವರು ಇಂದು ನೂತನ ಸಂಸತ್ ಭವನವನ್ನು ಲೋಕಾರ್ಪಣೆಗೊಳಿಸಿದರು. ಉದ್ಘಾಟನೆಗೂ ಮುನ್ನ ಅವರು ಹೋಮ, ಪೂಜೆಗಳನ್ನು ನೆರವೇರಿಸಿದರು. ಅಧೀನಂ ಸ್ವಾಮೀಜಿಗಳಿಂದ ‘ಸೆಂಗೋಲ್’ ಸ್ವೀಕರಿಸಿದ ಮೋದಿ, ಅದನ್ನು ಸಂಸತ್ ಭವನದ ಒಳಗೆ ಪ್ರತಿಷ್ಠಾಪಿಸಿದರು. ಬಳಿಕ ಸರ್ವ ಧರ್ಮ ಪ್ರಾರ್ಥನ ಸಮಾರಂಭದಲ್ಲಿ ಅವರು ಭಾಗಿಯಾದರು. ಎಲ್ಲ ಧಾರ್ಮಿಕ ವಿಧಿ ವಿಧಾನಗಳು ಪೂರ್ಣಗೊಂಡ ನಂತರ ನರೇಂದ್ರ ಮೋದಿ ಅವರು, ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರೊಂದಿಗೆ ಸಂಸತ್ ಭವನವನ್ನು

ಮೂಡುಬಿದಿರೆ ಪ್ರೆಸ್ ಕ್ಲಬ್ ಅಧ್ಯಕ್ಷರಾಗಿ ಯಶೋಧರ್ , ಕಾರ್ಯದರ್ಶಿ ಪ್ರೇಮಶ್ರೀ ಕಲ್ಲಬೆಟ್ಟು ಆಯ್ಕೆ

ಮೂಡುಬಿದಿರೆ : ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಪ್ರೆಸ್ ಕ್ಲಬ್ ಮೂಡುಬಿದಿರೆ ಇದರ ನೂತನ ಅಧ್ಯಕ್ಷರಾಗಿ ವಿಜಯವಾಣಿ ಪತ್ರಿಕೆಯ ಪ್ರತಿನಿಧಿ ಯಶೋಧರ ವಿ. ಬಂಗೇರ, ಕಾರ್ಯದರ್ಶಿಯಾಗಿ ವಿ4 ನ್ಯೂಸ್ ಹಾಗೂ ಸಂಯುಕ್ತ ಕರ್ನಾಟಕ ಪತ್ರಿಕೆಯ ವರದಿಗಾರ್ತಿ ಪ್ರೇಮಶ್ರೀ ಕಲ್ಲಬೆಟ್ಟು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಶನಿವಾರ ಪ್ರೆಸ್ ಕ್ಲಬ್ ನಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಉಪಾಧ್ಯಕ್ಷರಾಗಿ ವಿಜಯ ಕರ್ನಾಟಕ ಪ್ರತಿನಿಧಿ

ಉಡುಪಿ : ರಾಷ್ಟ್ರೀಯ ಪೈಲೆಟ್ ದಿನ ಆಚರಣೆ

ರಾಷ್ಟ್ರೀಯ ಪೈಲೆಟ್ ದಿನವನ್ನು ಉಡುಪಿ ತಾಲೂಕು ಆರೋಗ್ಯಾಧಿಕಾರಿ ಡಾ. ವಾಸುದೇವ ನೇತೃತ್ವದಲ್ಲಿ ಉಡುಪಿ ನಗರದ ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿಯಲ್ಲಿ ಮೇ 26 ರಂದು ಆಚರಿಸಲಾಯಿತು.ಈ ಸಂದರ್ಭದಲ್ಲಿ ಇ.ಎಮ್.ಆರ್.ಐ ಗ್ರೀನ್ ಹೆಲ್ತ್ ಸರ್ವೀಸ್‌ನ ಅಧಿಕಾರಿಗಳಾದ ಜಿಲ್ಲಾ ವ್ಯವಸ್ಥಾಪಕರು, ಜಿಲ್ಲಾ ಅಧಿಕಾರಿಗಳು, ವಾಹನ ಉಸ್ತುವಾರಿ ಅಧಿಕಾರಿಗಳು ಹಾಗೂ ಜಿಲ್ಲೆಯ ಎಲ್ಲಾ ಚಾಲಕರು ಉಪಸ್ಥಿತರಿದ್ದರು.

ಆರಾಧ್ಯ ವಸ್ತ್ರಮಳಿಗೆ ಜೂನ್ 15ರವರೆಗೆ ವಿಶೇಷ ಆಫರ್

ಮಂಗಳೂರಿನ ಪ್ರಸಿದ್ಧ ವಸ್ತ್ರ ಮಳಿಗೆಯಾದ ಆರಾಧ್ಯ ಮಳಿಗೆಯಲ್ಲಿ ಶುಭ ಸಮಾರಂಭ ಹಾಗೂ ಹಬ್ಬಗಳ ಖರೀದಿಗಾಗಿ ಅಮೋಘ ಕೊಡುಗೆಗಳನ್ನು ನೀಡುತ್ತಿದ್ದಾರೆ. ನಗರದ ಕಾರ್ ಸ್ಟ್ರೀಟ್ ನಲ್ಲಿರುವ ಆರಾಧ್ಯ ವಸ್ತ್ರಮಳಿಗೆಯಲ್ಲಿ ವಿಶೇಷ ಆಫರ್ ಗಳನ್ನು ಘೋಷಿಸಿದ್ದಾರೆ. ವಿವಿಧ ವಿನ್ಯಾಸದ ಸಿಲ್ಕ್ ಸಾರೀಸ್, ಕಾಂಜಿವರಂ ಸಾರೀಸ್ ,ಫ್ಯಾನ್ಸಿ ಸಾರೀಸ್ ,ಬನಾರಸ್ ಸಿಲ್ಕ್ಸ್ ,ಹಾಗೂ ಕುರ್ತಿಸ್‍ಗಳಿಗೆ ಶೇ.15 ರಷ್ಟು ರಿಯಾಯಿತಿಯನ್ನು ಘೋಷಿಸಿದ್ದಾರೆ. ಈ ಆಫರ್ ಜೂನ್ 15ರ ವರೆಗೆ

ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ : ಹಿರಿಯರೆಡೆಗೆ ಸಾಹಿತ್ಯದ ನಡಿಗೆ

ಉಡುಪಿ ಜಿಲ್ಲೆ : ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ ಹಾಗೂ ಉಡುಪಿ ತಾಲೂಕು ಘಟಕದಿಂದ ಹಿರಿಯರೆಡೆಗೆ ಸಾಹಿತ್ಯದ ನಡಿಗೆ ಕಾರ್ಯಕ್ರಮ ಮಣಿಪಾಲದಲ್ಲಿ ಮೇ 26 ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಸರ್ಕಾರಿ ಕೆಲಸದಲ್ಲಿ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತ, ಕನ್ನಡ ನಾಡು ನುಡಿ ಸಂಸ್ಕೃತಿಗೆ ಅನನ್ಯ ಸೇವೆ ಸಲ್ಲಿಸಿದ 91 ವರ್ಷದ ಹಿರಿಯರಾದ ವಿಠಲ ರಾವ್ ಗಂಭೀರ್ ಅವರನ್ನು ಅವರ ಸ್ವಗೃಹ ಮಣಿಪಾಲದಲ್ಲಿ ಗೌರವಿಸಲಾಯಿತು. ಎಂಟು ವಿವಿಧ ವಾದ್ಯಗಳನ್ನು ನುಡಿಸಬಲ್ಲ

ಬ್ರಹ್ಮಾವರ ಠಾಣೆ : ಮುಟ್ಟುಗೋಲು ಹಾಕಿದ ದೋಣಿಗಳು – ಸಾಂಕ್ರಾಮಿಕ ರೋಗದ ಭೀತಿ

ಬ್ರಹ್ಮಾವರ ಪೊಲೀಸ್ ಠಾಣೆಯ ಬಳಿ 6 ವರ್ಷದಿಂದ ಅನಾಥವಾಗಿ ಬಿದ್ದ ಮರಳುಗಾರಿಕೆಗೆ ಬಳಸಲಾದ ಮುಟ್ಟುಗೋಲು ಹಾಕಲಾದ ದೋಣಿಗಳು ಇಲ್ಲಿನ ಪರಿಸರ ಸ್ವಾಸ್ಯ ಹಾಳುಮಾಡುವಂತಿದೆ. ಸೀತಾನದಿಯಲ್ಲಿ ಬ್ರಹ್ಮಾವರ ಬಳಿಯ ಹಂದಾಡಿ ಮರ್ಬು ಎನ್ನುವಲ್ಲಿ 6 ವರ್ಷದ ಹಿಂದೆ ಆಕ್ರಮ ಮರಳುಗಾರಿಕೆ ಬಳಸಲಾದ ದೋಣಿ ಎಂದು ಕುಂದಾಪುರ ಅಸಿಸ್ಟೆಂಟ್ ಕಮಿಷನರ್ ಭೂಭಾಲನ್ ನೇತೃತ್ವದಲ್ಲಿ 21 ದೋಣಿಗಳನ್ನು ಮುಟ್ಟುಗೋಲು ಹಾಕಿ ಬ್ರಹ್ಮಾವರ ಪೆÇಲೀಸ್ ಠಾಣೆ ಬಳಿ ಇರಿಸಲಾಗಿತ್ತು. 6 ವರ್ಷದಿಂದ ದೋಣಿಗಳು

ಬಂಟ್ವಾಳ :ನೇತ್ರಾವತಿ ನದಿ ಸೇತುವೆ ಕಾಮಗಾರಿ – ಫಿಲ್ಲರ್ ನಿರ್ಮಾಣ ಕಾರ್ಯ ಪೂರ್ಣ

ಬಂಟ್ವಾಳ : ನದಿಯಲ್ಲಿ ನೀರು ಕಡಿಮೆಯಾಗಿರುವ ಕಾರಣ ಪಾಣೆಮಂಗಳೂರಿನಲ್ಲಿ ನೇತ್ರಾವತಿ ನದಿಗೆ ನಿರ್ಮಾಣಗೊಳ್ಳುತ್ತಿರುವ ಸೇತುವೆ ಕಾಮಗಾರಿ ಸಾಂಗವಾಗಿ ಸಾಗುತ್ತಿದೆ. ಈಗಾಗಲೇ ಎಲ್ಲಾ ಫಿಲ್ಲರ್ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು ಎರಡು ಫಿಲ್ಲರ್‍ಗಳ ಮಧ್ಯೆ ಬೀಮ್ ಅಳವಡಿಸುವ ಕಾರ್ಯ ನಡೆಯುತ್ತಿದೆ. ಬಿ.ಸಿ.ರೋಡು ಅಡ್ಡಹೊಳೆ ಚತುಷ್ಪಥ ಹೆದ್ದಾರಿಯ ಭಾಗವಾಗಿ ಪಾಣೆಮಂಗಳೂರಿನಲ್ಲಿ ಹೊಸ ಸೇತುವೆ ಕಾಮಗಾರಿ ನಡೆಯುತ್ತಿದೆ. ನದಿಗೆ ಮಣ್ಣನ್ನು ತುಂಬಿ ಯಂತ್ರಗಳ ಮೂಲಕ