Home Blog Left SidebarPage 518

ಕುಂದಾಪುರ: ಬಿಜೆಪಿ ಅಭ್ಯರ್ಥಿ ಕಿರಣ್ ಕುಮಾರ್ ಕೊಡ್ಗಿ ಬಾರಕೂರಿನಲ್ಲಿ ಮತಯಾಚನೆ

ಕುಂದಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಿರಣ ಕುಮಾರ್ ಕೊಡ್ಗಿ  ಕ್ಷೇತ್ರದ ದಕ್ಷಿಣ ಭಾಗದ ತುತ್ತ ತುದಿ ಬಾರಕೂರು ಭಾಗದಲ್ಲಿ ಮತಯಾಚನೆ ಮಾಡಿದರು.   ಪ್ರಥಮವಾಗಿ ರಂಗನಕೆರೆ ಶೆಟ್ಟಿಗಾರ್ ಇಂಡಸ್ಟ್ರೀಸ್‌ನ ಮಾಲಕ ಶ್ರೀನಿವಾಸ ಶೆಟ್ಟಿಗಾರರವರನ್ನು  ಬೇಟಿ ನೀಡಿ ಇಲ್ಲಿನ ನೂರಾರು ಕಾರ್ಮಿಕರಲ್ಲಿ ಬೆಂಬಲಿಸುವಂತೆ ಮತಯಾಚನೆ ಮಾಡಿದರು.ಬಳಿಕ

ಇಂದು ಸಂಜೆ ಹೆಚ್‌ಡಿಕೆ ನೇತೃತ್ವದಲ್ಲಿ ಕೃಷ್ಣಾಪುರದಲ್ಲಿ ಜೆಡಿಎಸ್ ಸಾರ್ವಜನಿಕ ಸಭೆ

ಮೂಡುಬಿದಿರೆ : ಮೂಡುಬಿದಿರೆ ಮತ್ತು ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಗಳ ಪರವಾಗಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರು ಇಂದು ಸಂಜೆ 6 ಗಂಟೆಗೆ ಕೃಷ್ಣಾಪುರದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದು ಜೆಡಿಎಸ್ ಅಭ್ಯರ್ಥಿ ಡಾ. ಅಮರಶ್ರೀ ಶೆಟ್ಟಿ ಹೇಳಿದರು. ಮೂಡುಬಿದಿರೆ ವಿಧಾನ ಸಭಾ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸುತ್ತಿದ್ದು ಈಗಾಗಲೇ ೩೫ ಸಾವಿರ ಮನೆಗಳನ್ನು ಭೇಟಿಯಾಗಿದ್ದೇನೆ. ಯಾವುದೇ ರಾಜಕೀಯ

ಚುನಾವಣೆಗೆ ಮೂಡುಬಿದಿರೆ ಕ್ಷೇತ್ರದಲ್ಲಿ ಸಿದ್ಧತೆ ಪೂರ್ಣ: ಚುನಾವಣಾಧಿಕಾರಿ ಮಹೇಶ್ಚಂದ್ರ

ಮೂಡುಬಿದಿರೆ: ಮೂಡುಬಿದಿರೆ ವಿಧಾನಸಭಾ ಕ್ಷೇತ್ರದಲ್ಲಿ ಮೇ.10ರಂದು ನಡೆಯುವ ವಿಧಾನಸಭೆಗೆ ಸಕಲ ಸಿದ್ಧತೆಯನ್ನು ಮಾಡಲಾಗಿದೆ. ಕ್ಷೇತ್ರದಲ್ಲಿ ಒಟ್ಟು 221 ಮತಗಟ್ಟೆಗಳಲ್ಲಿ 103 ಮತಗಟ್ಟೆಗಳಿಗೆ ವೆಬ್‌ಕಾಸ್ಟ್ ಅಳವಡಿಸಲಾಗಿದೆ. ಚುನಾವಣಾ ಸಿಬ್ಬಂದಿಗಳಿಗೆ ಸಹಿತ 62 ವಾಹನಗಳನ್ನು ಸಜ್ಜುಗೊಳಿಸಲಾಗಿದೆ ಎಂದು ಚುನಾವಣಾಧಿಕಾರಿ ಮಹೇಶ್ಚಂದ್ರ ಹೇಳಿದರು. ಶನಿವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು. ಈ ಕ್ಷೇತ್ರದಲ್ಲಿ ಮತಗಟ್ಟೆ 166ರ ಪೆರ್ಮುದೆ

ಕಾಪು: ಗುರ್ಮೆ ಸುರೇಶ್ ಶೆಟ್ಟಿ ಅವರಿಂದ ಸಂಪಿಗೆ ನಗರದಲ್ಲಿ ಮತಯಾಚನೆ

ಕಾಪು ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯಾಗಿರುವ ಗುರ್ಮೆ ಸುರೇಶ್ ಶೆಟ್ಟಿಯವರು ಇಂದು ಉದ್ಯಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ 10ನೇ ವಾರ್ಡ್ ಸಂಪಿಗೆ ನಗರ ಪ್ರದೇಶದಲ್ಲಿ ಭರ್ಜರಿ ಮಾತಾಯಾಚನೆ ಮಾಡಲಾಯಿತು. ಈ ಸಂದರ್ಭದಲ್ಲಿ ಸಭೆಯನ್ನು ಉದ್ದೇಶಿ ಮಾತನಾಡಿದ ಕರ್ನಾಟಕ ವಿಧಾನ ಪರಿಷತ್ ಸದಸ್ಯರಾದ ಕೋಟ ಶ್ರೀನಿವಾಸ್ ಪೂಜಾರಿಯವರು,ಬಿಲ್ಲವ ಸಮಾಜದ ಏಳಿಗೆಗಾಗಿ ಬಿಜೆಪಿ ಸರ್ಕಾರವು ಹಲವಾರು ಅನುದಾನಗಳನ್ನು ನೀಡಿದೆ, ಮೀನುಗಾರರಿಗೆ ಹಾಗೂ ಮೀನುಗಾರಿಕ

ಕಾಪು: ಗುರ್ಮೆ ಸುರೇಶ್ ಶೆಟ್ಟಿಯವರು ಮಣಿಪಾಲ್  ಯುಟಿಲಿಟಿ ಟೆಕ್ನಾಲಜಿ ಲಿಮಿಟೆಡ್ ಗೆ ಭೇಟಿ ನೀಡಿ ಮತಯಾಚನೆ

ಕಾಪು ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯಾಗಿರುವ ಗುರ್ಮೆ ಸುರೇಶ್ ಶೆಟ್ಟಿಯವರು ಇಂದು ಬಡಗಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಶಿವಳ್ಳಿ ಪ್ರದೇಶದ  ಮಣಿಪಾಲ್  ಯುಟಿಲಿಟಿ ಟೆಕ್ನಾಲಜಿ ಲಿಮಿಟೆಡ್ ಗೆ ಭೇಟಿ ನೀಡಿ ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ,ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಉಪೇಂದ್ರ ನಾಯಕ್,ಬಡಗಬೆಟ್ಟು ಮಹಾಶಕ್ತಿ ಕೇಂದ್ರ ಅಧ್ಯಕ್ಷರು ಸಂದೀಪ್ ಶೆಟ್ಟಿ, ಬಿಜೆಪಿ ಪ್ರಮುಖರು ಸಂತೋಷ್ ಬೊಲ್ಜೆ, ನಜಿರ್ ಶೇಕ್,ಪ್ರವೀಣ್

ಕಾಪು : ಮಣಿಪಾಲ್ ಟೆಕ್ನಾಲಜೀಸ್  ಲಿಮಿಟೆಡ್ ಯೂನಿಟ್  ನಲ್ಲಿ ಗುರ್ಮೆ ಸುರೇಶ್ ಶೆಟ್ಟಿ ಮತಯಾಚನೆ

ಕಾಪು ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯಾಗಿರುವ ಗುರ್ಮೆ ಸುರೇಶ್ ಶೆಟ್ಟಿಯವರು ಇಂದು ಮಣಿಪಾಲ್ ನಗರ ವ್ಯಾಪ್ತಿಯ  ಮಣಿಪಾಲ್ ಟೆಕ್ನಾಲಜೀಸ್ ಲಿಮಿಟೆಡ್ ಯೂನಿಟ್ lV ಗೆ ಭೇಟಿ ನೀಡಿ ಮಾತಾಯಾಚನೆ ಮಾಡಿದರು. ಈ ಸಂಧರ್ಭದಲ್ಲಿ ಮಾತನಾಡಿದ ಶ್ರೀ ಲಾಲಾಜಿ ಮೆಂಡನ್ ರವರು ನನ್ನ ಅಧಿಕಾರದ ಅವಧಿಯಲ್ಲಿ ಕಾಪು ಕ್ಷೇತ್ರಕ್ಕಾಗಿ ಹಗಲಿರುಳು ದುಡಿದಿದ್ದೇನೆ ಇನ್ನು ಈ ಜವಾಬ್ದಾರಿಯನ್ನು ಗುರ್ಮೆ ಸುರೇಶ್ ಶೆಟ್ಟಿಯವರು ಚೆನ್ನಾಗಿ ನಿಭಾಯಿಸಲಿದ್ದಾರೆ

ಕೊಲ್ಲುವ ಮನಸ್ಥಿತಿ ಇರುವ ವ್ಯಕ್ತಿ ಉಡುಪಿಯ ಶಾಸಕನಾಗಬಾರದು : ಕಾಂಗ್ರೆಸ್ ವಕ್ತಾರ ಸುಧೀರ್ ಕುಮಾರ್ ಮರೋಳಿ

” ಕೊಲ್ಲುವ ಮನಸ್ಥಿತಿ ಇರುವ ವ್ಯಕ್ತಿ ಉಡುಪಿಯ ಶಾಸಕನಾಗಬಾರದು. ಒಂಬತ್ತು ಪುಟಗಳ ಕ್ರಿಮಿನಲ್ ಕೇಸುಗಳ ವರದಿ ಇರುವ ವ್ಯಕ್ತಿ ಉಡುಪಿಯ ಶಾಸಕನಾಗಬಾರದು. ಪುಂಡಾಟಿಕೆಯಲ್ಲಿ ಮುಂಚೂಣಿಯಲ್ಲಿದ್ದ ವ್ಯಕ್ತಿ ಉಡುಪಿಯ ಶಾಸಕನಾಗುತ್ತಾನೆಂದರೆ ಅದು ಉಡುಪಿಯ ಸ್ವಾಭಿಮಾನದ ಪ್ರಶ್ನೆ.” ಎಂದು ಕಾಂಗ್ರೆಸ್ ವಕ್ತಾರ ಸುಧೀರ್ ಕುಮಾರ್ ಮರೋಳಿ ಹೇಳಿದ್ದಾರೆ. ಅವರು ನಿನ್ನೆ ಪರ್ಕಳದಲ್ಲಿ ಹಮ್ಮಿಕೊಂಡಿದ್ದ ರ್ಯಾಲಿ ಮತ್ತು ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಆಶಾ ತಿಮ್ಮಪ್ಪ ಪರ ಮತಯಾಚನೆಗೆ ಪುತ್ತೂರಿಗೆ ಬಂದಿಳಿದ ಯೋಗಿ‌ ಆದಿತ್ಯನಾಥ್‌

ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಪರ ಮತಯಾಚನೆಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪುತ್ತೂರಿಗೆ ಹೆಲಿಕಾಪ್ಟರ್ ಮೂಲಕ ನಗರದ ಹೊರವಲಯದ ಮೊಟ್ಟೆತ್ತಡ್ಕ ಹೆಲಿಪ್ಯಾಡ್‌ಗೆ ಆಗಮಿಸಿದ್ದಾರೆ. ಅಲ್ಲಿಂದ ವಾಹನದ ಮೂಲಕ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಆಗಮಿಸಲಿದ್ದಾರೆ. ಅಂಚೆ ಕಚೇರಿ ಬಳಿಯಿಂದ ಕೋರ್ಟ್ ರಸ್ತೆಯಾಗಿ ಸಾಗಿ ಕಿಲ್ಲೆ ಮೈದಾನದ ತನಕ ಜಾಥಾ ನಡೆಯಲಿದೆ.

ಮೇ 7ರಂದು ಬಿ.ಸಿ ರೋಡ್‍ನ ಸೋನಾ ಟಿವಿಎಸ್‍ನಲ್ಲಿ ಟಿವಿಎಸ್ ರೋನಿನ್ ದ್ವಿಚಕ್ರ ವಾಹನ ಬಿಡುಗಡೆ

ಬಿ.ಸಿ. ರೋಡ್‍ನಲ್ಲಿ ಕಾರ್ಯಾಚರಿಸುತ್ತಿರುವ ಸೋನಾ ಟಿವಿಎಸ್ ಶೋರೂಂನಲ್ಲಿ ಅತ್ಯಾಧುನಿಕ ಶೈಲಿಯ ಟಿವಿಎಸ್ ರೋನಿನ್ ದ್ವಿಚಕ್ರ ವಾಹನ ಮೇ 7ರಂದು ಮಾರುಕಟ್ಟೆಗೆ ಬಿಡುಗಡೆಗೊಳ್ಳಲಿದೆ. ಪ್ರತಿಷ್ಠಿತ ಟಿವಿಎಸ್ ಕಂಪೆನಿಯ ದ್ವಿಚಕ್ರ ವಾಹನಗಳು ವಿವಿಧ ವಿನ್ಯಾಸ ಮತ್ತು ಆತ್ಯಾಕರ್ಷಕ ಶೈಲಿ ಹಾಗೂ ದ್ವಿಚಕ್ರ ಪ್ರೀಯರ ಮೆಚ್ಚುಗೆಗೆ ಪಾತ್ರವಾಗಿದೆ. ಇದೀಗ ಬಿ.ಸಿ ರೋಡ್‍ನಲ್ಲಿರುವ ಸೋನಾ ಟಿವಿಎಸ್ ಶೋರೂಂನಲ್ಲಿ ಟಿವಿಎಸ್ ರೋನಿನ್ ದ್ವಿಚಕ್ರ ವಾಹನ ಮೇ 7ರಂದು

ಕರ್ನಾಟಕಕ್ಕೆ ಡಬಲ್ ಎಂಜಿನ್‍ನ ಅಗತ್ಯವೇ ಇಲ್ಲ : ಮಂಗಳೂರಿನಲ್ಲಿ ಎಮ್‍ಎಲ್‍ಸಿ ಮಂಜುನಾಥ ಭಂಡಾರಿ ಹೇಳಿಕೆ

ಯಾವುದೇ ಒಂದು ಎಂಜಿನ್‍ಗೆ ಸಾಮಥ್ರ್ಯ ಇಲ್ಲದಿದ್ದರೆ ಅಥವಾ ಒಂದು ಎಂಜಿನ್ ದುರ್ಬಲವಾಗಿದ್ದರೆ ಮಾತ್ರ ಡಬಲ್ ಎಂಜಿನ್ ಬಳಕೆ ಆಗುತ್ತದೆ. ಆದರೆ ಬಿಜೆಪಿಯವರು ಡಬಲ್ ಎಂಜಿನ್ ಸರ್ಕಾರ ಬೇಕು ಎಂದು ಪ್ರಚಾರ ಮಾಡುತ್ತಿದ್ದಾರೆ. ಹಾಗಾದರೆ ಬಿಜೆಪಿ ಇರುವ ಮಣಿಪುರದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣ ಆಗಿದ್ದು, ಡಬಲ್ ಎಂಜಿನ್ ಸರ್ಕಾರ ಯಾಕೆ ವೈಫಲ್ಯವಾಯಿತು ಎಂದು ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಪ್ರಶ್ನಿಸಿದರು. ಅವರು ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ