Home Blog Left SidebarPage 723

ಉರ್ವ : ಗೋಡೆ ಕುಸಿತ ಕಾರ್ಮಿಕ ಸಾವು

ಬಿ.ನಾರಾಯಣ ನಾಯಕ್ ಎಂಬುವರ ಮನೆಯ ಸಮೀಪ ಒಂದು ವಾರದಿಂದ ಚರಂಡಿ ನಿರ್ಮಾಣ ಕಾಮಗಾರಿ ನಡೆಯುತ್ತಿತ್ತು. ಆವರಣ ಗೋಡೆ ಕುಸಿಯುವ ಸಾಧ್ಯತೆಯನ್ನು ಮನೆಯ ಮಾಲೀಕರು ಗುತ್ತಿಗೆದಾರರ ಗಮನಕ್ಕೆ ತಂದಿದ್ದರೂ ಮುಂಜಾಗ್ರತಾ ಕ್ರಮ ಕೈಗೊಳ್ಳದೆ ಕಾಮಗಾರಿ ಮುಂದುವರಿಸಲಾಗಿತ್ತು ಎನ್ನಲಾಗಿದೆ. ಗುರುವಾರ ಬೆಳಿಗ್ಗೆ ಐವರು ಕಾರ್ಮಿಕರು ಕೆಲಸ ಮಾಡುತ್ತಿದ್ದಾಗ ಈರಪ್ಪ ಅವರ ಮೇಲೆ ಗೋಡೆ

ಮೂಡುಬಿದಿರೆ : ಕೋಟಿ ಕಂಠ ಗಾಯನ

ಮೂಡುಬಿದಿರೆ : ಭಾರತೀಯ ಜನತಾ ಪಾರ್ಟಿ ಮೂಡುಬಿದಿರೆ ಮಂಡಲ ಇದರ ವತಿಯಿಂದ ಒಂಟಿಕಟ್ಟೆಯ ಕಡಲಕೆರೆಯಲ್ಲಿರುವ ಕೋಟಿ-ಚೆನ್ನಯ ಗುತ್ತಿಗೆ ಮನೆಯ ಶೈಲಿಯ ವೇದಿಕೆಯಲ್ಲಿ ಕೋಟಿ ಕಂಠ ಗಾಯನ ನಡೆಯಿತು. ಕಡಲಕೆರೆ ಶಾಲೆಯ ವಿದ್ಯಾರ್ಥಿಗಳು ಮತ್ತು ಬಿಜೆಪಿ ಪಕ್ಷದ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ 5 ಹಾಡುಗಳನ್ನು ಹಾಡಿದರು. ಬಿಜೆಪಿಯ ಜಿಲ್ಲಾ ಉಪಾಧ್ಯಕ್ಷ ಈಶ್ವರ ಕಟೀಲ್ , ಜಿಲ್ಲಾ ಜಿಲ್ಲಾ ಕಾರ್ಯದರ್ಶಿ ಕಸ್ತೂರಿ ಪಂಜ, ಬಿಜೆಪಿ ಮಂಡಲದ ಅಧ್ಯಕ್ಷ ಸುನೀಲ್ ಆಳ್ವ,

ಸುರತ್ಕಲ್ ಅಕ್ರಮ ಟೋಲ್‍ಗೇಟ್ ವಿರುದ್ಧ ಮತ್ತೆ ಹೋರಾಟ : ಸಮಾನ ಮನಸ್ಕ ಸಂಘಟನೆಗಳಿಂದ ಹಗಲು-ರಾತ್ರಿ ಧರಣಿ

ಸುರತ್ಕಲ್ ಟೋಲ್ ಗೇಟ್ ಅಕ್ರಮವಾಗಿದ್ದು, ಅದನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ನೇತೃತ್ವದಲ್ಲಿ ಸಮಾನಮನಸ್ಕ ಸಂಘಟನೆಗಳು ನಡೆಸಲುದ್ದೇಶಿಸಿರುವ ಅನಿರ್ದಿಷ್ಟಾವಧಿ ಹಗಲು-ರಾತ್ರಿ ಧರಣಿ ಇಂದು ಆರಂಭಗೊಂಡಿದೆ. ಟೋಲ್ ಗೇಟ್ ಪರಿಸರದಲ್ಲಿ ಧರಣಿ ಕುಳಿತಿರುವ ಹೋರಾಟಗಾರರು, ಭರವಸೆಗಳು ಬೇಡ, ಟೋಲ್ ನಿಲ್ಲಿಸಿ ಎಂದು ಒತ್ತಾಯಿಸುತ್ತಿದ್ದರಲ್ಲದೆ, ಅಕ್ರಮ ಟೋಲ್ ಗೇಟ್ ತೆರವು ಆಗುವವರೆಗೆ ಅನಿರ್ದಿಷ್ಟಾವಧಿ ಮುಂದುವರಿಯಲಿದೆ ಎಂದು

ಶಾಸಕ ವೇದವ್ಯಾಸ ಕಾಮತ್ ನೇತೃತ್ವದಲ್ಲಿ 50 ಬೋಟ್ ಗಳ ಕಡಲಯಾನದಲ್ಲಿ ಮೊಳಗಿತು ಕೋಟಿ ಕಂಠ ಗಾಯನ

ಮಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕನ್ನಡ ರಾಜ್ಯೋತ್ಸವದ ಅಂಗವಾಗಿ ರಾಜ್ಯಾದ್ಯಂತ ಹಮ್ಮಿಕೊಂಡಿರುವ ಕೋಟಿ ಕಂಠ ಗಾಯನವು ಮಂಗಳೂರು ನಗರದಲ್ಲಿ ಕೂಡ ಅರ್ಥಪೂರ್ಣವಾಗಿ ನಡೆಯಿತು.ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ.ವೇದವ್ಯಾಸ ಕಾಮತ್ ಅವರ ನೇತೃತ್ವದಲ್ಲಿ ಅರಬ್ಬಿಸಮುದ್ರದ ಅಲೆಗಳ ನಿನಾದದಲ್ಲಿ 50ರಷ್ಟು ಬೋಟ್ ಗಳ ಒಂದೂವರೆ ತಾಸಿನ ಕಡಲಯಾನದಲ್ಲಿ ಕೋಟಿ ಕಂಠ ಗಾಯನ ಸೊಗಸಾಗಿ ಮೂಡಿ ಬಂತು. ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಅವರ ಮುಂದಾಳತ್ವದಲ್ಲಿ

ಬೈಂದೂರು: ಕೋಟಿ ಕಂಠ ಗಾಯನ

ಬೈಂದೂರು : ಇತಿಹಾಸ ಪ್ರಸಿದ್ಧ ಪ್ರವಾಸಿ ತಾಣ ತ್ರಾಸಿ ಮರವಂತೆ ಬೀಚ್ ನಲ್ಲಿ ಕೋಟಿ ಕಂಠ ಗಾಯನ ಶುಕ್ರವಾರ ಕಾರ್ಯಕ್ರಮ ಶಾಸಕ ಬಿ,ಎಮ್ ಸುಕುಮಾರ್ ಶೆಟ್ಟಿ ಮುಂದಾಳತ್ವದಲ್ಲಿ ಕಾರ್ಯಕ್ರಮ ಜರಗಿತು. ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕನ್ನಡ ನೆಲದ ಸಂಸ್ಕೃತಿ ಮತ್ತು ಭಾಷೆಯನ್ನು ಕೋಟಿ ಕಂಠ ಗಾಯನದ ಮೂಲಕ ರಾಜ್ಯ ಹಾಗೂವಿಶ್ವಾದ್ಯಂತ ಆಚರಿಸಲಾಗುತ್ತಿದೆ ನಾಡು ಜಲ, ನೆಲದ , ಸಂಸ್ಕೃತಿಯನ್ನು ಗೌರವಿಸುವುದು ಪ್ರತಿ ಯೊಬ್ಬರ ಕರ್ತವ್ಯ ಎಂದು ಬೈಂದೂರು ಕ್ಷೇತ್ರದ ಶಾಸಕ ಬಿಎಂ

ಗುರುಪುರ ‌ಸೇತುವೆಯಿಂದ ನದಿಗೆ ಹಾರಿದ ಯುವಕ : ಪೊಲೀಸರಿಂದ ಶೋಧ ಕಾರ್ಯಾಚರಣೆ

ಅರುಣ್ ಕುಮಾರ್ ಅ.27ರಂದು ಸಂಜೆ 7ಗಂಟೆ ಸುಮಾರಿಗೆ ಫಲ್ಗುಣಿ ನದಿಗೆ ಹಾರಿದ್ದರು‌. ಇಂದು ಬೆಳಗ್ಗಿನಿಂದ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದು ಈವರೆಗೆ ಅವರು ಪತ್ತೆಯಾಗಿಲ್ಲ. ಅರುಣ್ ಕುಮಾರ್ ವಿವಾಹಿತರಾಗಿದ್ದು, ಒಂದು ಮಗು ಕೂಡಾ ಇದೆ. ಅವರು ನದಿಗೆ ಹಾರಿರುವುದಕ್ಕೆ ಕಾರಣ ಇನ್ನೂ ತಿಳಿದು ಬಂದಿಲ್ಲ. ಈ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿರತ ಸಾಹಿತ್ಯ ಸಂಪದ ಬೆಳ್ಳಿಹೆಜ್ಜೆ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ

ಬಂಟ್ವಾಳ: ತುಂಬೆ ಕಡೆಗೋಳಿಯ ನಿರತ ಸಾಹಿತ್ಯ ಸಂಪದ ರಜತ ಸಂಭ್ರಮ ಆಚರಿಸಿಕೊಳ್ಳುತ್ತಿದೆ. ನ.6ರಂದು ಮಧ್ಯಾಹ್ನದಿಂದ ಸಂಭ್ರಮಾಚರಣೆ ಕಾರ್ಯಕ್ರಮಗಳು ನಡೆಯಲಿದ್ದು, ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಬಿ.ಸಿ.ರೋಡಿನ ಕೈಕುಂಜೆ ಕನ್ನಡ ಭವನದಲ್ಲಿ ನಡೆಯಿತು. ನ.6ರಂದು ಬಿ.ಸಿ.ರೋಡಿನ ಕನ್ನಡ ಭವನದಲ್ಲಿ ಮಧ್ಯಾಹ್ನ 2ರಿಂದ ಬೆಳ್ಳಿಹೆಜ್ಜೆ ಕಾರ್ಯಕ್ರಮ ನಡೆಯಲಿದ್ದು, ಪೆÇ್ರ.ತುಕಾರಾಮ ಪೂಜಾರಿ ಚಾಲನೆ ನೀಡಲಿದ್ದಾರೆ. ಈ ಸಂದರ್ಭ ನಿರತ ಪ್ರಶಸ್ತಿಯನ್ನು ಹಿರಿಯ

ಕಡಬ ; ದಲಿತ ಮಹಿಳೆಯ ಮಾನಭಂಗ ಯತ್ನ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು : ರಾಕೇಶ್ ರೈ ಕೆಡೆಂಜಿ

ಕಡಬ ತಾಲೂಕಿನ ದೋಳ್ಪಾಡಿ ಗ್ರಾಮದ ದೋಳ್ಪಾಡಿ ಗ್ರಾಮದ ಕಟ್ಟ ಎಂಬಲ್ಲಿ ಬಟ್ಟೆ ವ್ಯಾಪಾರಿಗಳ ಸೋಗಿನಲ್ಲಿ ಬಂದ ಇಬ್ಬರು ದಲಿತ ಮಹಿಳೆಯ ಮಾನಭಂಗ ಯತ್ನ ಮಾಡಿರುವ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು, ವಿರೋಧ ಪಕ್ಷಗಳು ಆರೋಪಿಗಳಿಗೆ ಬೆಂಬಲ ನೀಡುವುದನ್ನು ನಿಲ್ಲಿಸಬೇಕು ಎಂದು ಸುಳ್ಯ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಮಂಡಲ ಸಮಿತಿ ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ ಹೇಳಿದರು. ಕಡಬದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ಒಂಟಿ ಮಹಿಳೆ ಮನೆಯಲ್ಲಿ ಒಬ್ಬರೇ

ಪುತ್ತೂರು : ಕಾಮಧೇನು ಗೋ ಶಾಲೆ ಪ್ರಾರಂಭೋತ್ಸವ

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕಾಮಧೇನು ಗೋ ಶಾಲೆ ಪ್ರಾರಂಭೋತ್ಸವ ಮತ್ತು ಗೋ ಪೂಜೆ ಕಾರ್ಯಕ್ರಮ ನಡೆಯಿತು. ಬೆಳಿಗ್ಗೆ ಗಣಪತಿ ಹೋಮ ಸಂಜೆ ಗೋ ಪೂಜೆ ನಡೆಯಿತು. ದೇವಳದ ಪ್ರಧಾನ ಅರ್ಚಕ ವೇ ಮೂ ವಿ.ಎಸ್ ಭಟ್ ಅವರ ನೇತೃತ್ವದಲ್ಲಿ ಗೋ ಪೂಜೆ ನಡೆಯಿತು. ಗೋವುಗಳನ್ನು ಶೃಂಗರಿಸಿ. ಗಂಧ ಪ್ರಸಾದವನ್ನು ಹಚ್ಚಿ, ಅದಕ್ಕೆ ದೋಸೆ, ಅವಲಕ್ಕಿ, ಬಾಳೆ ಹಣ್ಣುಗಳನ್ನು ನೀಡಲಾಯಿತು. ಗೋ ಪೂಜೆ ಸಭಾ ಕಾರ್ಯಕ್ರಮದಲ್ಲಿ ಗೋ ಸಮರ್ಪಣೆ

ಮಂಗಳೂರು : ಬಸ್ಸಿನ ಓವರ್ ಟೇಕ್ ಭರದಲ್ಲಿ ಮೊಟ್ಟೆ ಸಾಗಾಟ ವಾಹನಕ್ಕೆ ಡಿಕ್ಕಿ,

ಮಂಗಳೂರು: ಬಸ್ಸೊಂದು ಓವರ್ ಟೇಕ್ ಮಾಡುವ ಭರದಲ್ಲಿ ನಿಲ್ಲಿಸಿದ್ದ ಮೊಟ್ಟೆ ಸಾಗಾಟದ ವಾಹನಕ್ಕೆ ಡಿಕ್ಕಿ ಹೊಡೆದ ಘಟನೆ ವೆಲೆನ್ಸಿಯಾದಲ್ಲಿ ನಡೆದಿದೆ. ಮಂಗಳಾದೇವಿ ಕಡೆಯಿಂದ ಬರುತ್ತಿದ್ದ ಎರಡು ಬಸ್ ಗಳು ವೆಲೆನ್ಸಿಯಾದ ಸರ್ಕಲ್ ಬಳಿ ತಲುಪಿದಾಗ ಬಸ್ ಓವರ್ ಟೇಕ್ ಮಾಡಲು ಮುಂದಾಗಿದೆ. ಪರಿಣಾಮ ಚಾಲಕನ ನಿಯಂತ್ರಣ ಕಳೆದುಕೊಂಡಿದ್ದು, ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಮೊಟ್ಟೆ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಬಸ್, ಮೊಟ್ಟೆ ಸಾಗಾಟದ ವಾಹನ ಡಿಕ್ಕಿ ಹೊಡೆದ ಪರಿಣಾಮ