Home Blog Left SidebarPage 8

ಎಂಸಿಸಿ ಬ್ಯಾಂಕಿನಲ್ಲಿ ಆಡಳಿತ ಮಂಡಳಿ ಮತ್ತು ಸಿಬ್ಬಂದಿಗೆ ನಾಯಕತ್ವ ಅಧಿವೇಶನ

ನಾಯಕತ್ವ ಸಾಮಥ್ರ್ಯಗಳನ್ನು ಬಲಪಡಿಸುವ ಮತ್ತು ಸಾಂಸ್ಥಿಕ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಉದ್ದೇಶದಿಂದ ಎಂ.ಸಿ.ಸಿ. ಬ್ಯಾಂಕ್ ಮಂಗಳೂರಿನಲ್ಲಿರುವ ತನ್ನ ಪ್ರಧಾನ ಕಚೇರಿಯಲ್ಲಿ ಫೆ.19ರಂದು “Speak, Lead and Connect”ಎಂಬ ಶೀರ್ಷಿಕೆಯಡಿ ನಾಯಕತ್ವ ಅಧಿವೇಶನವನ್ನು ಆಯೋಜಿಸಿತ್ತು. ಸಹಕಾರ ರತ್ನ ಶ್ರೀ ಅನಿಲ್ ಲೋಬೊ ಅವರು ಗಣ್ಯ ಅತಿಥಿಗಳನ್ನು ಪುಷ್ಪಗುಚ್ಛ ನೀಡಿ

ಮಂಗಳೂರು: ನೆಕ್ಸಾ ಮಾಂಡವಿ ಮೋಟಾರ್‍ಸ್‌ನಲ್ಲಿ ಮಾರುತಿ ಸುಝುಕಿಯ “ಇ ವಿಟಾರ” ಕಾರು ಮಾರುಕಟ್ಟೆಗೆ ಬಿಡುಗಡೆ

ಮಂಗಳೂರಿನ ಏರ್‌ಪೋರ್ಟ್ ರಸ್ತೆಯಲ್ಲಿರುವ ನೆಕ್ಸಾ ಮಾಂಡವೀ ಮೋಟಾರ್‍ಸ್‌ನಲ್ಲಿ ಮಾರುತಿ ಸುಝುಕಿಯ ಎಲೆಕ್ಟ್ರಿಕ್ ಕಾರು “ಇ ವಿಟಾರ” ಮಂಗಳೂರು ಮಾರುಕಟ್ಟೆಗೆ ಬಿಡುಗಡೆ ಸಮಾರಂಭ ನಡೆಯಿತು. ನಗರದ ಗಣ್ಯರು, ಉದ್ಯಮ ವಲಯದ ಪ್ರತಿನಿಧಿಗಳು ಮತ್ತು ವಾಹನ ಪ್ರಿಯರ ಸಮ್ಮುಖದಲ್ಲಿ ನಡೆದ ಈ ಮಹಾ ಅನಾವರಣ ಕಾರ್ಯಕ್ರಮವು ಅಂತರರಾಷ್ಟ್ರೀಯ ಮಟ್ಟದ ಲಾಂಚ್ ಸಮಾರಂಭವನ್ನು ನೆನಪಿಸುವಂತಿತ್ತು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಾ. ವಿಕ್ರಮ್ ಪೈ, ಸಮಿಟ್

ಶ್ರೀನಿವಾಸ ವಿಶ್ವವಿದ್ಯಾಲಯ ಮತ್ತು ಶ್ರೀನಿವಾಸ ಸಮೂಹ ಶಿಕ್ಷಣ ಸಂಸ್ಥೆಗಳ ಗೌರವಾನ್ವಿತ ಕುಲಾಧಿಪತಿ ಡಾ. ಸಿ.ಎ. ಎ. ರಾಘವೇಂದ್ರ ರಾವ್ ಅಸ್ತಂಗತ

ಮಂಗಳೂರು: ಶ್ರೀನಿವಾಸ ವಿಶ್ವವಿದ್ಯಾಲಯ, ಶ್ರೀನಿವಾಸ ಸಮೂಹ ಶಿಕ್ಷಣ ಸಂಸ್ಥೆಗಳ, ಗೌರವಾನ್ವಿತ ಕುಲಾಧಿಪತಿ, ಎ. ಶಾಮರಾವ್ ಫೌಂಡೇಶನ್ ಅಧ್ಯಕ್ಷರು ಮತ್ತು ದೂರದೃಷ್ಟಿಯ ಧೀಮಂತ ನಾಯಕ ಡಾ. ಸಿ.ಎ. ಎ. ರಾಘವೇಂದ್ರ ರಾವ್ ಅವರು 17 ಫೆಬ್ರವರಿ 2026ರಂದು ಚೆನ್ನೈನಲ್ಲಿ 88ನೇ ವಯಸ್ಸಿನಲ್ಲಿ ಇಹಲೋಕವನ್ನು ಅಗಲಿದ್ದಾರೆ. 1937ರ ಅಕ್ಟೋಬರ್ 16ರಂದು ಉಡುಪಿ ಜಿಲ್ಲೆಯ ಅಡ್ಕ ಗ್ರಾಮದ ದಿ. ಶ್ರೀ ಎ. ಶಾಮರಾವ್ ಮತ್ತು ದಿ. ಶ್ರೀಮತಿ ಎ. ಇಂದಿರಮ್ಮ ದಂಪತಿಗೆ ಜನಿಸಿದ ಡಾ. ರಾವ್

ಐರ್ಲೆಂಡ್ ನಲ್ಲಿ ಕಡಬ ಯುವಕನ ನಿಗೂಢ ಸಾವು

ಕಡಬ: ಉದ್ಯೋಗಕ್ಕಾಗಿ ಐರ್ಲೆಂಡ್‌ಗೆ ತೆರಳಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಮೂಲದ ಯುವಕರೊಬ್ಬರು ತಮ್ಮ ನಿವಾಸದಲ್ಲೇ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಮೃತರನ್ನು ಕಡಬದ ಕುಟ್ರುಪಾಡಿ ಗ್ರಾಮದ ವಿಮಲಗಿರಿ ನಿವಾಸಿ ಸುನಿಲ್ ಅವರ ಪುತ್ರ ಸಾಂಜೋ ಸುನಿಲ್ (31) ಎಂದು ಗುರುತಿಸಲಾಗಿದೆ. ಇವರು ಐರ್ಲೆಂಡ್‌ನ ಡಬ್ಲಿನ್ ನಗರದ ಫಿಂಗ್ಲಾಸ್‌ನ ಚಾರ್ಲ್ಸ್ಟೌನ್ ಪ್ರದೇಶದಲ್ಲಿ ವಾಸವಾಗಿದ್ದರು. ಗುರುವಾರ ಸಾಂಜೋ ಸುನಿಲ್ ಅವರು ತಮ್ಮ ಮನೆಯಲ್ಲಿ ಶವವಾಗಿ

ಸೇವಾಭಾರತಿ ಕನ್ಯಾಡಿ ಹೊಸ ವಿಶ್ವಸ್ಥ ಮಂಡಳಿ ರಚನೆ – ಅಧ್ಯಕ್ಷರಾಗಿ ಕೆ.ವಿನಾಯಕ ರಾವ್ ಕನ್ಯಾಡಿ

ಕೊಕ್ಕಡ:2026 ರಿಂದ 2029ರ ಅವಧಿಗೆ ಹೊಸ ವಿಶ್ವಸ್ಥ ಮಂಡಳಿ ರಚನೆಯ ಕಾರ್ಯಕ್ರಮವನ್ನು ಮಂಗಳವಾರದಂದು ಸೌತಡ್ಕದಲ್ಲಿರುವ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರ ಪುನಶ್ಚೇತನ ಕೇಂದ್ರದಲ್ಲಿ ಸರಳವಾಗಿ ನಡೆಸಲಾಯಿತು. ಮುಂದಿನ ಮೂರು ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಕೆ.ವಿನಾಯಕ ರಾವ್ ಅವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಬಾಲಕೃಷ್ಣ, ಕೋಶಾಧಿಕಾರಿಯಾಗಿ ಜೈ ರಾಜ್ ಸಾಲ್ಯಾನ್ ಕಾನರ್ಪ, ಕಾರ್ಯದರ್ಶಿಯಾಗಿವಿಷ್ಣು ಪ್ರಸಾದ್ ತೆಂಕಿಲ್ಲಾಯ ಹಾಗೂ ಟ್ರಸ್ಟಿಗಳಾಗಿ

ನೆಲ್ಯಾಡಿ:ಪೆರಿಯಶಾಂತಿ ಲಾರಿಗಳ ಡಿಕ್ಕಿ-ಚಾಲಕನಿಗೆ ಗಾಯ

ನೆಲ್ಯಾಡಿ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಪೆರಿಯಶಾಂತಿ ಎಂಬಲ್ಲಿ ಚಲಿಸುತ್ತಿದ್ದ ಲಾರಿಗೆ ಹಿಂಬದಿಯಿಂದ ಬಂದ ಇನ್ನೊಂದು ಲಾರಿ ಡಿಕ್ಕಿಯಾಗಿ, ಚಾಲಕ ಗಾಯಗೊಂಡ ಘಟನೆ ಮಂಗಳವಾರದಂದು ರಾತ್ರಿ ನಡೆದಿದೆ. ಹಾಸನ ನಿವಾಸಿ ಹೆಚ್.ಎಸ್.ಪರಮೇಶ ಎಂಬವರು ಅಶೋಕ್ ಲೈಲೇಂಡ್ ಲಾರಿಯಲ್ಲಿ ಮಂಗಳೂರಿನ ಕಿನ್ನಿಗೋಳಿಯಿಂದ ಸುಣ್ಣ ತುಂಬಿಸಿಕೊಂಡು ಸಕಲೇಶಪುರಕ್ಕೆ ರಾಷ್ಠೀಯ ಹೆದ್ದಾರಿ 75ರಲ್ಲಿ ಹೋಗುತ್ತಿದ್ದವರು ಕೌಕ್ರಾಡಿ ಗ್ರಾಮದ

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ; ಸಮತಾ ಸೈನಿಕ ದಳದಿಂದ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ

ಉಡುಪಿ: ಅಂಬೇಡ್ಕ‌ರ್ ಆವಾಜ್ ಯೋಜನೆಯಲ್ಲಿ ಮನೆ ನಿರ್ಮಾಣಕ್ಕೆ 9 ಲಕ್ಷ, ಬಸವ ಇಂದಿರಾ ಆವಾಜ್ ಯೋಜನೆಯಡಿಯಲ್ಲಿ 5 ಲಕ್ಷ ಸಹಾಯಧನ ನೀಡುವಂತೆ ಒತ್ತಾಯಿಸಿ, ಬ್ರಹ್ಮಾವರದ ಹನೇಹಳ್ಳಿ ಕೃಷ್ಣ ಶೂಟೌಟ್ ಪ್ರಕರಣವನ್ನು ಸಿಓಡಿ ತನಿಖೆಗೆ ಒಪ್ಪಿಸುವಂತೆ ಆಗ್ರಹಿಸಿ ಸಮತಾ ಸೈನಿಕ ದಳದ ವತಿಯಿಂದ ಉಡುಪಿಯಲ್ಲಿ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಯಿತು.ಉಡುಪಿಯ ಅಜ್ಜರಕಾಡು ಹುತಾತ್ಮ ಸ್ಮಾರಕದ ಬಳಿಯಿಂದ ಕಪ್ಪು ಪಟ್ಟಿ ಧರಿಸಿ ಕಾಲ್ನಡಿಗೆ ಮೂಲಕ ಕಾಂಗ್ರೆಸ್‌ ಕಚೇರಿಗೆ ತೆರಳಿದ

ಉಡುಪಿ: ಬೈಕ್ ಅಪಘಾತದಲ್ಲಿ ಸಿಟಿಬಸ್ ಚಾಲಕ ಮೃತ್ಯು

ಉಡುಪಿ: ಕಳೆದ ರಾತ್ರಿ ಉಡುಪಿಯ ಅಂಬಾಗಿಲು- ಪೆರಂಪಳ್ಳಿ ಮುಖ್ಯ ರಸ್ತೆಯಲ್ಲಿ ನಡೆದ ಬೈಕ್ ಅಪಘಾತದಲ್ಲಿ ಸಿಟಿಬಸ್ ಚಾಲಕ ಮೃತಪಟ್ಟ ಘಟನೆ ನಡೆದಿದೆ. ಮೃತಪಟ್ಟ ಬಸ್ ಚಾಲಕ ಸಂದೀಪ್ ಎಂದು ತಿಳಿದುಬಂದಿದೆ. ಇವರು ಉಡುಪಿ ಸಿಟಿ ಬಸ್ ನಲ್ಲಿ ಚಾಲಕರಾಗಿದ್ದ ಇವರು, ಮೂಲತಃ ಸಾಗರ ತಾಲೂಕಿನವರು ಅವಿವಾಹಿತರೆಂದು ತಿಳಿದು ಬಂದಿದೆ.

ಪಡುಬಿದ್ರಿ: ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಪಂಚದೈವೀಕ ಸ್ಥಾನ ಅಭಿವೃದ್ಧಿಗೆ ಶಿಲಾನ್ಯಾಸ

ಪಡುಬಿದ್ರಿ:ಸಮಗ್ರ ಜೀರ್ಣೋದ್ಧಾರ ಗೊಳ್ಳುತ್ತಿರುವ ಪಡುಬಿದ್ರಿಯ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನಕ್ಕೆ ಸಂಬಂಧ ಪಟ್ಟಂತೆ ಪಂಚ ದೈವಗಳಿಗೆ ಪಡುಬಿದ್ರಿ ಗಣಪತಿ ಪ್ರೌಢಶಾಲಾ ಹಳೆ ವಿದ್ಯಾರ್ಥಿ ಸಂಘದ ಸಹಭಾಗಿತ್ವದಲ್ಲಿ ದೇಗುಲದ ಪುಷ್ಕರಣೀ ತಟದಲ್ಲಿ ನಿರ್ಮಿಸಲ್ಪಡುವ ಅಂದಾಜು 15 -20 ಲಕ್ಷ ರೂಪಾಯಿ ವೆಚ್ಚದ ನೂತನ ಗುಡಿಗಳ ಕಾಮಗಾರಿಯ ಶಿಲಾನ್ಯಾಸವು ಇಂದು ದಿನಾಂಕ 18 ಬುಧವಾರದಂದು ಜರಗಿತು.ಪಂಚದೈವೀಕ ಸ್ಥಾನದ ಶಿಲಾನ್ಯಾಸದ ಧಾರ್ಮಿಕ ವಿಧಿ ವಿಧಾನಗಳನ್ನು

ಮೀಟರ್ ರೀಡರ್ ಮೇಲೆ ನಾಯಿ ದಾಳಿ, ಕಿತ್ತು ಬಂದ ಕೈಯ ಮಾಂಸ

ಬಂಟ್ವಾಳ: ಕರ್ತವ್ಯದ ವೇಳೆ ಮೆಸ್ಕಾಂನ ಮೀಟರ್ ರೀಡರ್ ಒಬ್ಬರಿಗೆ ಸಾಕು ನಾಯಿಯೊಂದು ಕಚ್ಚಿ ಗಂಭೀರ ಗಾಯಗೊಳಿಸಿದ ಘಟನೆ ರಾಯಿ ಗ್ರಾಮದ ಕೈತ್ರೋಡಿ ಕ್ವಾಟ್ರಸ್‌ನಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ. ಇರಾ ಗ್ರಾಮದ ನಿವಾಸಿಯಾಗಿರುವ ಸಂಪತ್ ಆರ್. ಶೆಟ್ಟಿ ನಾಯಿ ಕಡಿತಕ್ಕೊಳಗಾಗಿದ್ದು ಕೈಗೆ ಗಂಭೀರ ಗಾಯಗೊಂಡ ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಸಂಪತ್ ಅವರು ಕೈತ್ರೋಡಿ ಕ್ವಾಟ್ರಸ್ ಬಳಿ ಮೀಟರ್ ರೀಡಿಂಗ್ ಮುಗಿಸಿ ಮುಖ್ಯ