Home Blog Left SidebarPage 6

ಸುಳ್ಯ: ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣ-ಪ್ರಮುಖ ಆರೋಪಿ ಮುಸ್ತಾಫ ಪೈಚಾರ್ NIA ಬಲೆಗೆ

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಎನ್‌ಐಎ ತಂಡ ಮೂವರನ್ನು ಸಕಲೇಶಪುರ ತಾಲೂಕಿನ ಆನೆಮಹಲ್‌ನಲ್ಲಿ ವಶಕ್ಕೆ ಪಡೆದಿದ್ದಾರೆ. ಬಂಧಿತರನ್ನು ಸುಳ್ಯ ಮೂಲದ ಮುಸ್ತಫಾ ಪೈಚಾರ್, ಸೋಮವಾರಪೇಟೆ ಮೂಲದ ಇಲ್ಯಾಸ್ ಹಾಗೂ ಸಿರಾಜ್ ಎಂದು ಗುರುತಿಸಲಾಗಿದೆ. ಪ್ರವೀಣ್ ನೆಟ್ಟಾರು ಪ್ರಕರಣದ ನಾಲ್ಕನೇ ಆರೋಪಿ ಎಂದು ಗುರುತಿಸಲಾಗಿದ್ದ ಮುಸ್ತಫಾ ಪೈಚಾರ್ ಹಾಗೂ ಇಲ್ಯಾಸ್

ಮಂಗಳೂರು : SSLC ಫಲಿತಾಂಶ – ಬಿ.ಜಿ.ಎಸ್. ವಿದ್ಯಾರ್ಥಿ ಮಹಿತ್ ಕುಮಾರ್ ಗೆ 607 ಅಂಕ

ಮಂಗಳೂರು : ಕಾವೂರಿನ ಬಿ.ಜಿ.ಎಸ್. ಹೈಸ್ಕೂಲ್ ವಿದ್ಯಾರ್ಥಿ ಮಹಿತ್ ಕುಮಾರ್ ಈ ಬಾರಿಯ SSLC ಪರೀಕ್ಷೆಯಲ್ಲಿ 607 ಅಂಕ ಪಡೆದು 97.12 % ದಾಖಲೆಯ ಸಾಧನೆ ಮಾಡಿದ್ದಾನೆ. ‌ ಬಿ.ಜಿ.ಎಸ್. ಶಾಲೆಯ ಗರಿಷ್ಠ ಅಂಕ ಪಡೆದ ಟಾಪರ್ ವಿದ್ಯಾರ್ಥಿಯಾಗಿರುವ ಮಹಿತ್ ಕುಮಾರ್ ಅವರು ಭಾಸ್ಕರ್ ಗಟ್ಟಿ ಕೌಡೂರು ಹಾಗೂ ಸೌಮ್ಯ ಗಟ್ಟಿ ನಡಾರ್ ಇವರ ಪುತ್ರ. ಗರಿಷ್ಠ ಅಂಕದೊಂದಿಗೆ ಶಾಲೆಗೆ ಕೀರ್ತಿ ತಂದ ಸಾಧನೆ ಮಾಡಿದ ಮಹಿತ್ ಅವರನ್ನು ಶಾಲಾಡಳಿತ ಮಂಡಳಿ ಅಭಿನಂದಿಸಿದೆ.

ಬ್ರಹ್ಮಾವರ: ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ “ಮೇಕಪ್ ಅಂಡ್ ಹೇರ್ ಸ್ಟೈಲ್” ಕಾರ್ಯಾಗಾರ

ಫ್ಯಾಶನ್ ಉದ್ಯಮವು ಜನಪ್ರಿಯತೆಯನ್ನು ಗಳಿಸಿದೆ. ಫ್ಯಾಶನ್ ವಿನ್ಯಾಸದಲ್ಲಿ ವೃತ್ತಿ ಜೀವನದಲ್ಲಿ ಉತ್ತಮವಾದಂತಹ ಆಯ್ಕೆಯಾಗಿರುತ್ತದೆ ಇಂತಹ ಉತ್ತಮ ದೃಷ್ಟಿಕೋನ ಹೊಂದಿರುವ ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಇಲ್ಲಿನ ಫ್ಯಾಶನ್ ಡಿಸೈನ್ ವಿಭಾಗದ ವತಿಯಿಂದ” ಮೇಕಪ್ ಅಂಡ್ ಹೇರ್ ಸ್ಟೈಲ್” ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಕುಮಾರಿ ಆಶಿಕಾ ಫೌಂಡರ್ ಶಿಯಾ ಮೇಕ್ ಓವರ್ ಬೆಂಗಳೂರು ಇವರು ಆಗಮಿಸಿ

ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಗೆ ಎಸ್ ಎಲ್ ಸಿ ಯಲ್ಲಿ ಶೇಕಡಾ 100 ಫಲಿತಾಂಶ

ಶಾಲಾ ಶಿಕ್ಷಣ ಇಲಾಖೆಯು ನಡೆಸಿದ 2023-24 ನೇ ಶೈಕ್ಷಣಿಕ ಸಾಲಿನ ಎಸ್ ಎಸ್ ಎಲ್ ಸಿ‌ ವಾರ್ಷಿಕ ಪರೀಕ್ಷೆಯ ಫಲಿತಾಂಶವು ಪ್ರಕಟಗೊಂಡಿದ್ದು, ಬಂಟ್ವಾಳ ತಾಲೂಕಿನ ಮಾಣಿ, ಪೆರಾಜೆ ವಿದ್ಯಾನಗರದ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯು ಶೇಕಡಾ100 ಫಲಿತಾಂಶವನ್ನು ಪಡೆದುಕೊಂಡಿದೆ. ಪರೀಕ್ಷೆಗೆ ಹಾಜರಾದ 68 ವಿದ್ಯಾರ್ಥಿಗಳಲ್ಲಿ 14 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ, 22 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಹಾಗೂ 32 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ

2023-24ನೇ ಸಾಲಿನ SSLC ಪರೀಕ್ಷಾ ಫಲಿತಾಂಶ ಪ್ರಕಟ – ಉಡುಪಿ ಪ್ರಥಮ, ದ.ಕ. ದ್ವಿತೀಯ

2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಇದೀಗ ಪ್ರಕಟವಾಗಿದ್ದು, ಶೇ. 73.4 ಮಂದಿ ತೇರ್ಗಡೆಯಾಗಿದ್ದಾರೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಬೆಂಗಳೂರಿನ ಮಲ್ಲೇಶ್ವರಂನ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿತು. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧ್ಯಕ್ಷೆ ಮಂಜುಶ್ರೀ ಹಾಗೂ ನಿರ್ದೇಶಕ ಗೋಪಾಲಕೃಷ್ಣ ಸುದ್ದಿಗೋಷ್ಠಿ ನಡೆಸಿ ಫಲಿತಾಂಶದ ಮಾಹಿತಿ ನೀಡಿದರು. ಈ ಬಾರಿಯ ಫಲಿತಾಂಶ

ಬಂಟ್ವಾಳ: ರಸ್ತೆ ಬದಿಯೇ ಡಂಪಿಂಗ್ ಯಾರ್ಡ್: ಸಾರ್ವಜನಿಕ ಸ್ಥಳದಲ್ಲಿ ಕಸ ಎಸೆದು ಅನಾಗರಿಕ ಪ್ರವೃತ್ತಿ

ಬಂಟ್ವಾಳ ತಾಲೂಕಿನ ಬಹುತೇಕ ಭಾಗಗಳಲ್ಲಿ ರಸ್ತೆ ಇಕ್ಕೆಲಗಳು, ಇಳಿಜಾರು ಗುಂಡಿಗಳು ಕಸ ಎಸೆಯುವ ತಾಣಗಳಾಗುತ್ತಿದೆ. ಕೊಳೆಯುವ ವಸ್ತುಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ವಾಹನಗಳಲ್ಲಿ ಬಂದು ಸಾರ್ವಜನಿಕ ಸ್ಥಳದಲ್ಲಿ ಎಸೆದು ಹೋಗುವ ಅನಾಗರಿಕ ಪ್ರವೃತ್ತಿ ಹೆಚ್ಚಾಗುತ್ತಿದೆ. ಮನೆ, ಅಂಗಡಿಗಳ ತ್ಯಾಜ್ಯಗಳು ರಸ್ತೆ ಬದಿಗಳಲ್ಲಿ ಎಸೆಯುತ್ತಿರುವ ಪರಿಣಾಮ ಸುತ್ತಮುತ್ತಲ ಪ್ರದೇಶ ದುರ್ವಾಸನೆ ಬೀರುತ್ತಿದೆ. ಜನರಲ್ಲಿ ಸ್ವಚ್ಚತೆಯ ಪರಿಕಲ್ಪನೆ ಕೇವಲ ಅಕ್ಟೋಬರ್ 2ರ ಸ್ವಚ್ಛತಾ

ಬಂಟ್ವಾಳ: ಕಾಮಾಜೆ ಸರ್ಕಾರಿ ಕಾಲೇಜಿನತ್ತ ವಿದ್ಯಾರ್ಥಿಗಳನ್ನು ಸೆಳೆಯಲು ಕಾರಿನಲ್ಲಿ ಸ್ಟಿಕ್ಕರ್ ಬರಹ

ಬಿ.ಸಿ.ರೋಡಿನ ಕಾಮಾಜೆಯಲ್ಲಿರುವ ಸರಕಾರಿ ಪದವಿ ಕಾಲೇಜಿನ ಉಪನ್ಯಾಸಕಿ ವೇದಶ್ರೀ ನಿಡ್ಯ ಅವರು ತನ್ನ ಸ್ವಂತ ಕಾರಿನಲ್ಲಿ ಹೀಗೊಂದು ಸ್ಟಿಕ್ಕರ್ ಬರಹವನ್ನು ಹಾಕಿಸಿಕೊಂಡು ಗಮನ ಸೆಳೆದಿದ್ದಾರೆ. ಜನರು ತಮ್ಮ ಸ್ವಂತ ವಾಹನಗಳಲ್ಲಿ ತಮ್ಮ ಇಷ್ಟದ ದೇವರ ಹೆಸರು, ಮಕ್ಕಳ ಹೆಸರು ಅಥವಾ ಇಷ್ಟದ ವಾಕ್ಯಗಳನ್ನು ಸ್ಟಿಕರ್ ಮೂಲಕ ಬರೆಸುವುದು ಸಾಮಾನ್ಯ. ಆದರೆ ಉಪನ್ಯಾಸಕಿ ವೇದಶ್ರೀ ಅವರು ತನ್ನ ವೇಗನ್ ಆರ್ ಕಾರಿನ ಹಿಂಭಾಗ ಹಾಗೂ ಮುಂಭಾಗದಲ್ಲಿ ತಾನು ಕರ್ತವ್ಯ ನಿರ್ವಹಿಸುತ್ತಿರುವ

ಥಾಲೆಸೇಮಿಯಾ ಜಾಗ್ರತಿ ದಿನ…ಮೇ 8

ಥಾಲೆಸೇಮಿಯಾ ಜಾಗ್ರತಿ ದಿನ…ಮೇ ೮ ಥಾಲೆಸೇಮಿಯಾ ಎಂಬ ರೋಗ ರಕ್ತ ಸಂಬಂಧಿ ವಂಶವಾಹಕ ಖಾಯಿಲೆಯಾಗಿದ್ದು, ರೋಗಿಗಳಲ್ಲಿ ರಕ್ತದಲ್ಲಿರುವ ಆಮ್ಲಜನಕವನ್ನು ಜೀವಕೋಶಗಳಿಗೆ ತಲುಪಿಸುವ ‘ಹಿಮೋಗ್ಲೋಬಿನ್’ ಎಂಬ ಪ್ರೋಟಿನ್ ಸರಿಯಾಗಿ ಕಾರ್ಯನಿರ್ವವಹಿಸುದಿಲ್ಲ. ಈ ಹಿಮೋಗ್ಲೋಬಿನ್‍ನ ರಚನೆಯಲ್ಲಿ ಉಂಟಾಗುವ ದೋಷದಿಂದಾಗಿ ಅಸಹಜವಾದ ಹಿಮೋಗ್ಲೋಬಿನ್ ತನ್ನ ಕಾರ್ಯಕ್ಷಮತೆಯನ್ನು ಕಳೆದುಕೊಂಡು ರೋಗಲಕ್ಷಣಗಳಿಗೆ ಕಾರಣವಾಗುತ್ತದೆ. ಈ ಕಾರಣದಿಂದಲೇ ಈ ಖಾಯಿಲೆಯಿಂದ ಬಳಲುತ್ತಿರುವವರು

ವಿಶ್ವ ಲೂಪಸ್ (ಚರ್ಮ ಕ್ಷಯ) ದಿನ ಮೇ 10

ಸಿಸ್ಟಮಿಕ್ ಲೂಪಸ್ ಎರಿಥೆಮಾಟೋಸಸ್ ಎಂಬ ಹೆಸರಿನಿಂದ ಕರೆಯಲ್ಪಡುವ ‘ಲೂಪಸ್ ರೋಗ’ ಒಂದು ರೀತಿಯಲ್ಲಿ ವಿಶಿಷ್ಟ ರೋಗವಾಗಿದ್ದು ಹಲವಾರು ಅಂಗಾಂಗಗಳನ್ನು ಸದ್ದಿಲ್ಲದೆ ಕಾಡುತ್ತದೆ. ಇದೊಂದು ಸಾಂಕ್ರಾಮಿಕವಲ್ಲದ, ದೀರ್ಘಕಾಲಿಕ ಕಾಯಿಲೆಯಾಗಿದ್ದು, ಚರ್ಮ, ಕೀಲುಗಳು, ಮೂತ್ರಪಿಂಡಗಳು, ಹೃದಯ, ಶ್ವಾಸಕೋಶಗಳು, ರಕ್ತನಾಳಗಳು ಮತ್ತು ಮೆದುಳು ಸೇರಿದಂತೆ ದೇಹದ ಹಲವಾರು ಭಾಗಗಳ ಮೇಲೆ ದಾಳಿ ಮಾಡುತ್ತದೆ. ಇದೊಂದು ಅಟೋ ಇಮ್ಯೂನ್ ಅಂದರೆ ಸ್ವಯಂ ನಿರೋಧಕ ಕಾಯಿಲೆಯಾಗಿರುತ್ತದೆ. ಈ

ವಿಶ್ವ ರೆಡ್ ಕ್ರಾಸ್ ದಿನ – ಮೇ 8

ಜಗತ್ತಿನಾದ್ಯಂತ ಮೇ 8 ರಂದು “ವಿಶ್ವ ರೆಡ್ ಕ್ರಾಸ್ ದಿನ” ಎಂದು ಆಚರಿಸಲಾಗುತ್ತದೆ. ಮಾನವೀಯತೆಯಿಂದ ಶಾಂತಿಯ ಕಡೆಗೆ ಎಂಬ ಧ್ಯೇಯ ವಾಕ್ಯದೊಂದಿಗೆ ಕಾರ್ಯಾಚರಿಸುವ ವಿಶ್ವ ರೆಡ್ ಕ್ರಾಸ್ ಸಂಸ್ಥೆಯನ್ನು ಹುಟ್ಟು ಹಾಕಿದ ಮಹಾನ್ ವ್ಯಕ್ತಿ ಶ್ರೀ ಹೆನ್ರಿ ಡ್ಯೂನಾಂಟ್ ಇವರು ಹುಟ್ಟಿದ ದಿನ ಮೇ 8. 1859 ರ ಜೂನ್ 24 ರಂದು ‘ಸಲ್ಫರಿನೋ’ ಕದನ ದ ಗಾಯಳುಗಳ ಮನ ಕಲುಕುವ ದೃಶ್ಯವನ್ನು ಕಂಡ ಶ್ರೀ ಹೆನ್ರಿ ಡ್ಯೂನಾಂಟ್ ಜನರಿಂದ ಜನರಿಗೆ ನೆರವು [ PಇಔPಐಇ ಊಇಐPIಓಉ […]