Home Blog Left SidebarPage 949

ಉಡುಪಿಯ ಮಲಬಾರ್ ಗೋಲ್ಡ್& ಡೈಮಂಡ್ಸ್ ಸಂಸ್ಥೆಗೆ ಜೆಡಿಎಸ್‌ನಿಂದ ಅಭಿನಂದನಾ ಪತ್ರ

ಉಡುಪಿಯ ಮಲಬಾರ್ ಗೋಲ್ಡ್ & ಡೈಮಂಡ್ಸ್, ಮಲಬಾರ್ ಚಾರಿಟೇಬಲ್ ಟ್ರಸ್ಟ್ ಮೂಲಕ ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ಉಡುಪಿ ಜಿಲ್ಲೆಯಾದ್ಯಂತ ರೇಷನ್ ಕಿಟ್, ಔಷಧ ವಿತರಣೆ ಮಾಡಿ ಬಡವರ ಸಂಕಷ್ಟಕ್ಕೆ ಸ್ಪಂದಿಸಿದ್ದಾರೆ. ಅವರ ಮಹಾನ್ ಕಾರ್ಯವನ್ನು ಪರಿಗಣಿಸಿ ಉಡುಪಿ ಜಿಲ್ಲಾ ಜೆಡಿಎಸ್ ವತಿಯಿಂದ ಅಭಿನಂದನಾ ಪತ್ರ ನೀಡಿ ಗೌರವಿಸಿದೆ. ಲಾಕ್‌ಡೌನ್ ಸಂದರ್ಭದಲ್ಲಿ ಉಡುಪಿ

ಆಗಸ್ಟ್ 9ರಂದು ಮಧ್ಯಾಹ್ನ 3.30ಕ್ಕೆ ಎಸ್‌ ಎಸ್‌ ಎಲ್‌ ಸಿ ಪರೀಕ್ಷೆ ಫಲಿತಾಂಶ ಪ್ರಕಟ:ಸಚಿವ ಬಿ.ಸಿ.ನಾಗೇಶ್

2020-21 ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆಗಸ್ಟ್ 9ರಂದು ಮಧ್ಯಾಹ್ನ 3.30ಕ್ಕೆ ಪ್ರಕಟಿಸೋದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಘೋಷಿಸಿದ್ದಾರೆ. ಈ ಕುರಿತಂತೆ ಸುದ್ದಿಗಾರರಿಗೆ ಮಾಹಿತಿ ನೀಡಿರುವಂತ ಅವರು, ಜುಲೈ.19 ಮತ್ತು 22ರಂದು ನಡೆದಿದ್ದ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶವನ್ನು ಆಗಸ್ಟ್ 9ರ ಸೋಮವಾರದ ಮಧ್ಯಾಹ್ನ 3.30ಕ್ಕೆ ಅಧಿಕೃತವಾಗಿ ಪ್ರಕಟಿಸೋದಾಗಿ ತಿಳಿಸಿದರು. ಕೊರೋನಾ ಭೀತಿಯ ನಡುವೆಯೂ ಈ ಬಾರಿ 8.72ಲಕ್ಷ

ನವೀನ್ ಪಟ್ನಾಯಕ್ – ಹಾಕಿ ಕ್ರೀಡೆಯ ರಿಯಲ್ ಹಿರೋ

ಒಲಿಂಪಿಕ್ಸ್ ಹಾಕಿ ಪಂದ್ಯದಲ್ಲಿ ಭಾರತದ ಪುರಷರ ತಂಡ 41 ವರ್ಷಗಳ ಬಳಿಕ ಪದಕ ಗೆದ್ದಿದೆ. ಮಹಿಳಾ ಹಾಕಿ ತಂಡ ಕಂಚಿನ ಪದಕ ಗೆಲ್ಲುವ ಸಾಧ್ಯತೆಯ ನಡುವೆ ಕೊನೆ ಗಳಿಗೆಯಲ್ಲಿ ವೀರೋಚಿತ ಸೋಲೊಪ್ಪಿದರೂ ವನಿತೆಯರು ಭಾರತದ ಮಹಿಳಾ ಹಾಕಿಗೆ ಹೊಸದೊಂದು ಸಂಭ್ರಮವನ್ನು ತಂದಿದ್ದಾರೆ. `ಗೆಲುವಿಗೆ ನೂರು ವಾರಿಸುದಾರರು` ಎಂಬಂತೆ ಭಾರತದ ಹಾಕಿ ತಂಡದ ಸಾಧನೆಗೂ ಈಗ ಹಲವು ವಾರಿಸುದಾರರು. ಈ ರೀತಿಯ ವಿದ್ಯಾಮಾನಗಳು ಯಾವುದೇ ಕ್ಷೇತ್ರದ ಗೆಲವಿನ ಸಂದರ್ಭದಲ್ಲೂ ಸಾಮಾನ್ಯ. ಆದರೆ

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತದ ನೀರಜ್ ಚೋಪ್ರಾಗೆ ಚಿನ್ನದ ಪದಕ

ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಮೊದಲ ಚೊಚ್ಚಲ ಚಿನ್ನದ ಪದಕ ಲಭಿಸಿದೆ. ಭಾರತದ ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಒಲಿಂಪಿಕ್ಸ್ ನಲ್ಲಿ  ಪುರುಷರ ಜಾವೆಲಿನ್ ಥ್ರೋ ಸ್ಪರ್ಧೆಯ ಫೈನಲ್ ನಲ್ಲಿ ಅತ್ಯಮೋಘ ಪ್ರದರ್ಶನ ನೀಡಿ ಚಿನ್ನದ ಪದಕ ಜಯಿಸಿ ಇತಿಹಾಸ ನಿರ್ಮಿಸಿದ್ದಾರೆ.ಚೋಪ್ರಾ ತನ್ನ ಎರಡನೇ ಪ್ರಯತ್ನದಲ್ಲಿ 87.58 ಮೀ.ದೂರಕ್ಕೆ ಜಾವೆಲಿನ್ ಎಸೆದಿದ್ದು, ಇದು ಫೈನಲ್ ನಲ್ಲಿ ಅವರ ಶ್ರೇಷ್ಠ ಪ್ರದರ್ಶನವಾಗಿತ್ತು.  ಮೊದಲ ಪ್ರಯತ್ನದಲ್ಲಿ

ಟೋಕಿಯೋ ಒಲಿಂಪಿಕ್ಸ್: ಕುಸ್ತಿಪಟು ಬಜರಂಗ್ ಪೂನಿಯಾಗೆ ಕಂಚಿನ ಪದಕ

ಭಾರತದ ಕುಸ್ತಿಪಟು ಬಜರಂಗ್ ಪೂನಿಯಾ, ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಇಂದು ನಡೆದ ಪುರುಷರ 65 ಕೆಜಿ ಫ್ರೀಸ್ಟೈಲ್ ಕುಸ್ತಿಯ ಕಂಚಿನ ಪದಕಕ್ಕಾಗಿನ ಹೋರಾಟದಲ್ಲಿ ಭಾರತದ ಪೈಲ್ವಾನ ಬಜರಂಗ್ ಪೂನಿಯಾ, ಕಜಕಿಸ್ತಾನದ ದೌಲತ್ ನಿಯಾಜ್‌ಬೆಕೋವ್ ವಿರುದ್ಧ 8-0 ಗೆಲುವು ದಾಖಲಿಸಿದರು. ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಜಯಿಸುವ ಭರವಸೆಯಾಗಿದ್ದ ಬಜರಂಗ್ ಪೂನಿಯಾ, ಗಾಯದ ಸಮಸ್ಯೆಯಿಂದಾಗಿ ಹಿನ್ನಡೆ ಅನುಭವಿಸಿದರು. ಆದರೂ ದೇಶಕ್ಕಾಗಿ ಕಂಚಿನ ಪದಕ

ಕೇರಳ ಗಡಿಭಾಗದಿಂದ ಬರುವವರ ಮೇಲೆ ನಿಗಾ ಇರಿಸಿ: ಮಂಡೆಕೋಲಿನಲ್ಲಿ ಸಚಿವ ಎಸ್ ಅಂಗಾರ

ಸುಳ್ಯ: ಕೇರಳದಿಂದ ಕರ್ನಾಟಕಕ್ಕೆ ಬರುವವರು ಚೆಕ್‌ಪೋಸ್ಟ್ ಬಿಟ್ಟು ಇತರ ಕಾಲುದಾರಿಗಳಲ್ಲಿ ಆಗಮಿಸುತ್ತಿದ್ದು, ಇಂತವರ ಮೇಲೆ ಹೆಚ್ಚು ನಿಗಾ ಇರಿಸಬೇಕೆಂದು ಸಚಿವ ಎಸ್ ಅಂಗಾರ ತಿಳಿಸಿದ್ದಾರೆ.  ಅವರು ಮಂಡೆಕೋಲು ಗ್ರಾಮದಲ್ಲಿ ಕೋವಿಡ್ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ತುರ್ತು ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಇತರ ತಾಲೂಕುಗಳೊಂದಿಗೆ ಸುಳ್ಯವನ್ನು ಹೋಲಿಸಿದರೆ, ಸುಳ್ಯದಲ್ಲಿ ಕೋವಿಡ್ ಪಾಸಿಟಿವಿಟಿ ದರ ಹೆಚ್ಚಾಗಿದ್ದು ಇದಕ್ಕೆ ಇಲ್ಲಿನ ಜನರು ನೆರೆಯ ಕಾಸರಗೋಡು

ಆಗಸ್ಟ್ 9 – ಕಾರ್ಪೋರೇಟ್ ಕಂಪೆನಿಗಳ ವಿರುದ್ಧ ದೇಶವ್ಯಾಪಿ ಪ್ರತಿಭಟನೆ

ಕ್ವಿಟ್ ಇಂಡಿಯಾ ಚಳುವಳಿಯ ಸವಿನೆನಪಿನಲ್ಲಿ,ದೇಶದ ಸಂಪತ್ತನ್ನು ಲೂಟಿ ಹೊಡೆಯುತ್ತಿರುವ ಕಾರ್ಪೋರೇಟ್ ಕಂಪೆನಿಗಳ ವಿರುದ್ಧ ಹಾಗೂ ಕೇಂದ್ರ ಸರ್ಕಾರದ ರೈತ ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ, ಆಗಸ್ಟ್ 9 ರಂದು ದೇಶವ್ಯಾಪಿ ಪ್ರತಿಭಟನೆ ಜರುಗಲಿದ್ದು,ಅಂದು ಬೆಳಿಗ್ಗೆ 10 ಗಂಟೆಗೆ ನಗರದ ಕ್ಲಾಕ್ ಟವರ್ ಬಳಿಯಲ್ಲಿ ಪ್ರತಿಭಟನಾ ಪ್ರದರ್ಶನ ಜರುಗಲಿದೆ ಎಂದು ರೈತ ಕಾರ್ಮಿಕ ಸಂಘಟನೆಗಳಾದ CITU – AIKS ಜಂಟಿ ಹೇಳಿಕೆಯೊಂದರಲ್ಲಿ ತಿಳಿಸಿದೆ. ಕೃಷಿ  ರಂಗದ

ಸಚಿವ ಸುನೀಲ್ ಕುಮಾರ್ ಅವರನ್ನು ಆಭಿನಂದಿಸಿದ ಕೆಎಂಎಫ್‌ನ ಅಧ್ಯಕ್ಷ ರವಿರಾಜ್ ಹೆಗ್ಡೆ

ರಾಜ್ಯದ ನೂತನ ಸಚಿವರಾಗಿ ಆಯ್ಕೆಗೊಂಡಿರುವ ಕಾರ್ಕಳ ಕ್ಷೇತ್ರದ ವಿ.ಸುನೀಲ್ ಕುಮಾರ್ ರವರನ್ನು ದಕ್ಷಿಣ ಕನ್ನಡ ಹಾಲು ಒಕ್ಕೂಟದ ಅಧ್ಯಕ್ಷರಾದ ರವಿರಾಜ್ ಹೆಗ್ಡೆರವರು ಹೂಗುಚ್ಛ ನೀಡಿ ಅಭಿನಂದಿಸಿದರು. ಇಂಧನ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಇನ್ನಷ್ಟು ಅಭಿವೃದ್ಧಿ ಕೆಲಸಗಳನ್ನು ಕೈಗೊಂಡು ಉತ್ತಮವಾಗಿ ಕಾರ್ಯ ನಿರ್ವಹಿಸಿ ಎಂದು ಶುಭ ಹಾರೈಸಿದರು.

ಸಹಕಾರಿ ಕ್ಷೇತ್ರದಲ್ಲಿ ರಂಗನಾಥ ಶೆಟ್ಟಿ ಸಾಧನೆ ಅನುಕರಣೀಯ: ಶ್ರೀ ಚಂದ್ರಶೇಖರ ಸ್ವಾಮೀಜಿ

ಮುಲ್ಕಿ:ಗ್ರಾಮೀಣ ಪ್ರದೇಶದ ಸಹಕಾರಿ ಕ್ಷೇತ್ರದಲ್ಲಿ ಜನಸೇವೆ ಮೂಲಕ ರಂಗನಾಥ ಶೆಟ್ಟಿಯವರ ಸಾಧನೆ ಅನುಕರಣೀಯ ಎಂದು ಬೆಂಗಳೂರಿನ ಅಂತರಾಷ್ಟ್ರೀಯ ವಾಸ್ತುತಜ್ಞ ಹಾಗೂ ವೈಜ್ಞಾನಿಕ ಜ್ಯೋತಿಷಿ ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ ಹೇಳಿದರು. ಅವರು ಮುಲ್ಕಿಯ ಶ್ರೀ ಚಂದ್ರಶೇಖರ ಸ್ವಾಮೀಜಿ ಆಶ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಪ್ರಕೋಷ್ಠದ ಸಂಚಾಲಕರಾಗಿ ಆಯ್ಕೆಯಾದ ಮುಲ್ಕಿ ವಿಜಯ ಸೊಸೈಟಿಯ ಅಧ್ಯಕ್ಷ ರಂಗನಾಥ ಶೆಟ್ಟಿಯವರನ್ನು ಗೌರವಿಸಿ ಮಾತನಾಡಿದರು.ಕಳೆದ ಹಲವಾರು

ರಾಜ್ಯ ಬಿಜೆಪಿ ಸರ್ಕಾರದಲ್ಲಿ ರೆಡ್ಡಿ ಜನಾಂಗದ  ನಿರ್ಲಕ್ಷ್ಯ: 2 ವರ್ಷಗಳಿಂದ ರಾಜಕೀಯ ಅಧಿಕಾರ ನೀಡದೇ ಇರುವುದಕ್ಕೆ ಆಕ್ರೋಶ 

ಬೆಂಗಳೂರು: ರಾಜ್ಯದ ರಾಜಕೀಯ, ಸಾಮಾಜಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಗಾಗಿ ಮಹತ್ವದ ಕೊಡುಗೆ ನೀಡಿರುವ ರೆಡ್ಡಿ ಜನಾಂಗಕ್ಕೆ ಸಚಿವ ಸಂಪುಟದಲ್ಲಿ ಸ್ಥಾನ ಮಾನ ಹಾಗೂ ರಾಜಕೀಯ ಅವಕಾಶಗಳನ್ನು ನೀಡದೇ ನಿರ್ಲಕ್ಷ್ಯ ವಹಿಸಿರುವ ಬಗ್ಗೆ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಕರ್ನಾಟಕ ರೆಡ್ಡಿ ಜನ ಸಂಘ ಬೃಹತ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿತು. ರಾಜ್ಯದ ಆರೂವರೆ ಕೋಟಿ ಜನಸಂಖ್ಯೆಯಲ್ಲಿ ರೆಡ್ಡಿ ಸಮುದಾಯ ಸುಮಾರು 60 ಲಕ್ಷಕ್ಕೂ ಹೆಚ್ಚಿದ್ದು, ಸಚಿವ ಸಂಪುಟದಲ್ಲಿ