Home ಕರಾವಳಿ Archive by category ಮಂಗಳೂರು (Page 18)

ಕರಾವಳಿ ಜಿಲ್ಲೆಯಾದ್ಯಂತ “ರಾಪಟ” ಅದ್ಧೂರಿ ಬಿಡುಗಡೆ

ಮಂಗಳೂರು: ಬೊಳ್ಳಿ ಮೂವೀಸ್ ಹಾಗೂ ಅವಿಕಾ ಪ್ರೊಡಕ್ಷನ್ಸ್ ನಿರ್ಮಾಣದ ತೆಲಿಕೆದ ಬೊಳ್ಳಿ ಡಾ. ದೇವದಾಸ್ ಕಾಪಿಕಾಡ್ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು, ಅರ್ಜುನ್ ಕಾಪಿಕಾಡ್ ನಿರ್ದೇಶನದ ಚೊಚ್ಚಲ ಸಿನಿಮಾ ರಾಪಟ ಶುಕ್ರವಾರ ಮುಂಜಾನೆ ಕರಾಳಿಯಾದ್ಯಂತ ಅದ್ಧೂರಿಯಾಗಿ ಬಿಡುಗಡೆಗೊಂಡಿತು. ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತಾಡಿದ ಡಾ.

Mangaluru ; ಪಂಚಾಯತ್ ಮಟ್ಟದ ಪುಸ್ತಕ ದಾಖಲೆ ಇಡುವವರಿಂದ ಪ್ರತಿಭಟನೆ

ಮಂಗಳೂರಿನ ಗಡಿಯಾರ ಗೋಪುರದ ಎದುರು ಪಂಚಾಯತ್ ಮಟ್ಟದ ಬುಕ್ ಕೀಪಿಂಗ್ ಕೆಲಸ ಮಾಡುವ ಮಹಿಳೆಯರು ಸಿಪಿಎಂ ಸಂಘಟನೆಯ ಮೂಲಕ ಪ್ರತಿಭಟನೆ ಮಾಡಿದರು. ಸಿಪಿಎಂ ನಾಯಕ ಸುನಿಲ್ ಕುಮಾರ್ ಬಜಾಲ್ ಅವರು ಹೋರಾಟದ ಅಗತ್ಯದ ಬಗೆಗೆ ಮಾತನಾಡಿದರು. ಬುಕ್ ಕೀಪಿಂಗ್ ಮಹಿಳೆಯರಿಗೆ ಪಂಚಾಯತ್ ಮಟ್ಟದಿಂದ ಮೂರರಿಂದ ಐದು ಸಾವಿರ ಮಾತ್ರ ಸಂಬಳ ಕೊಡುತ್ತಿದ್ದಾರೆ. ಇದು ಕೆಲವರ ಸಾರಿಗೆ ವೆಚ್ಚ ಕೂಡ ಆಗುವುದಿಲ್ಲ. ಕನಿಷ್ಠ ಹತ್ತು ಸಾವಿರ ಸಂಬಳ ಕೊಡತಕ್ಕದ್ದು ಎಂದು ಪ್ರತಿಭಟನಾಕಾರರು ಒತ್ತಾಯ

ಖ್ಯಾತ ಗಾಯಕ ಪದ್ಮಶ್ರೀ ಪುರಸ್ಕೃತ ಪಂಡಿತ್ ವೆಂಕಟೇಶ್ ಕುಮಾರ್ ಅವರಿಗೆ “ಡಾ. ಕದ್ರಿ ಗೋಪಾಲನಾಥ್ ಜೀವಮಾನ ಸಾಧನೆ ಪ್ರಶಸ್ತಿ 2023”

ಅಂತರಾಷ್ಟ್ರೀಯ ಖ್ಯಾತಿಯ ಸ್ಯಾಕ್ಸೋಫೋನ್ ಕಲಾವಿದರಾದ ಪದ್ಮಶ್ರೀ ಪುರಸ್ಕೃತ ಡಾ.ಕದ್ರಿ ಗೋಪಾಲನಾಥ್ ರವರ ಹೆಸರಿನಲ್ಲಿ ನಡೆಯುತ್ತಿರುವ “ಡಾ. ಕದ್ರಿ ಗೋಪಾಲನಾಥ್ ಅಕಾಡೆಮಿ ಫಾರ್ ಆರ್ಟ್ಸ್ (ರಿ)” ವತಿಯಿಂದ ದಿನಾಂಕ : 23.12.2023 ರಂದು ” ಕದ್ರಿ ಸಂಗೀತ ಸೌರಭ 2023″ ಕಾರ್ಯಕ್ರಮವನ್ನು ಡಾ. ಬಿ.ಆರ್. ಅಂಬೇಡ್ಕರ್ ಭವನ, ಉರ್ವ ಸ್ಟೋರ್ಸ್, ಮಂಗಳೂರು ಇಲ್ಲಿ ಆಯೋಜನೆ ಮಾಡಲಾಗಿದೆ. ಅಂದು ಬೆಳಗ್ಗಿನಿಂದ ಉದಯೋನ್ಮುಖ ಕಲಾವಿದರಿಗೆ ವೇದಿಕೆ,

ಮಂಗಳೂರು: ಡಿ.24 ಮತ್ತು 25 ರಂದು ಕೃಷ್ಣಾಪುರದಲ್ಲಿ ಕ್ರಿಕೆಟ್ ಗ್ರೂಪ್ ಹಬ್ಬ

ಕ್ರಿಕೆಟ್ ಗ್ರೂಪ್‌ನ 6ನೇ ವಾರ್ಷಿಕೋತ್ಸವದ ಅಂಗವಾಗಿ ಕ್ರಿಕೆಟ್ ಗ್ರೂಪ್ ಹಬ್ಬ ಎನ್ನುವ ಲೀಗ್ ಮಾದರಿಯ ಪಂದ್ಯಾಕೂಟವು ಡಿ.24 ಮತ್ತು 25 ರಂದು ಕೃಷ್ಣಾಪುರ ಶಾಲಾ ಮೈದಾನದಲ್ಲಿ ನಡೆಯಲಿದೆ. ಈ ಪಂದ್ಯಾಟದಲ್ಲಿ ಬಿಎಂಆರ್ ಸ್ಟ್ರೈಕರ್‍ಸ್, ರೂಫ್‌ಟೆಕ್, ಕೆಕೆಆರ್ ಕೃಷ್ಣಾಪುರ, ಟ್ರೆಸ್ಕಾನ್, ಜಿ ಗೈಸ್, ಟೀಮ್, ಫಿಫ್ತ್ ಲೆವೆಲ್ ಹೀಗೆ 6 ಮಾಲಕರ ತಂಡದ ಕ್ರಿಕೆಟ್ ಗ್ರೂಪಿನ ಸದಸ್ಯರಿಗೆ ಮಾತ್ರ ಅವಕಾಶವಿದ್ದು, ಪಂದ್ಯಾಟದಲ್ಲಿ ಮ್ಯಾನ್ ಆಫ್ ದ ಮ್ಯಾಚ್, ಮ್ಯಾನ್ ಆಫ್

ಸಾವಿರಾರು ಕಟ್ಟಡ ಕಾರ್ಮಿಕರಿಂದ ಕಲ್ಯಾಣ ಮಂಡಳಿ ಮುತ್ತಿಗೆ

ಶೈಕ್ಷಣಿಕ ಸಹಾಯಧನ ಕಡಿತ ವಿರೋಧಿಸಿ ಹಾಗೂ ವೈದ್ಯಕೀಯ ತಪಾಸಣೆ ಯೋಜನೆ ಕೈಬಿಡಲು ಒತ್ತಾಯಿಸಿ ಬುಧವಾರ ನೂರಾರು ಕಟ್ಟಡ ಕಾರ್ಮಿಕರು ಕಲ್ಯಾಣ ಮಂಡಳಿಯ ಪ್ರಧಾನ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ‘ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ’ಯು ನೋಂದಾಯಿತ ಕಟ್ಟಡ ಕಾರ್ಮಿಕರ ಇಬ್ಬರು ಮಕ್ಕಳಿಗೆ ಶೈಕ್ಷಣಿಕ ಸಹಾಯಧನ ನೀಡುವ ಕಲಿಕಾ ಭಾಗ್ಯ ಯೋಜನೆಯನ್ನು ದುರ್ಬಲಗೊಳಿಸಿರುವುದು ನೋವಿನ ಸಂಗತಿ. ಶೈಕ್ಷಣಿಕ ಸಹಾಯಧನವನ್ನು ಶೇಕಡ

ಛಾಯಾಚಿತ್ರಗಳ ಮೂಲಕ ಇತಿಹಾಸಕಟ್ಟುವ ಕೆಲಸ : ಡಾ.ತುಕರಾಮ ಪೂಜಾರಿ

ಮಂಗಳೂರು : ಛಾಯಚಿತ್ರಗಳ ಮೂಲಕ ಇತಿಹಾಸವನ್ನು ಕಟ್ಟಿಕೊಡುವ ಅಪೂರ್ವ ಕೆಲಸವನ್ನು ಮಾಡಲು ಸಾಧ್ಯವಿದೆ ,ಇಂತಹ ಪರಿಶ್ರಮ ಸಾರ್ವಕಾಲಿಕ ದಾಖಲೆಯಾಗಿ ಉಳಿಯಲಿದೆ ಎಂದು ರಾಣಿ ಅಬ್ಬಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ.ತುಕರಾಮ ಪೂಜಾರಿ ಹೇಳಿದರು.ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ವತಿಯಿಂದ ಸ್ಕೂಲ್ ಆಫ್ ಸೋಶಿಯಲ್ ವರ್ಕ್ಸ್ ರೋಶನಿ ನಿಲಯ ಆಶ್ರಯದಲ್ಲಿ ನಡೆದ ‘ಛಾಯಾ ಲೋಕ’ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು . ಈ‌ ನಿಟ್ಟಿನಲ್ಲಿ

ಸಂಗಮ ತುಳು ದ್ರಾವಿಡಕ್ಕೆ ಸಾಕ್ಷಿಯಲ್ಲ

ಸಂಗಮ ಮತ್ತು ಮಂಗಲ ಬೆರೆತ ಊರುಗಳೆಲ್ಲ ನದಿ ತೊರೆಗಳ ಕೂಡು ಸ್ಥಳಗಳಾಗಿವೆ. ಕೋರಮಂಗಲ, ಪಾಣೆಮಂಗಳೂರು, ನೆಲಮಂಗಲಗಳೂ ಅದಕ್ಕೆ ಹೊರತಲ್ಲ. ಆದರೆ ಕೂಡಲ ದ್ರಾವಿಡ ನುಡಿ ಎನಿಸಿದವುಗಳಲ್ಲ. ಕುಡಲ ಕುಡ್ಲ ಯಾವುದು ಸರಿ ಎಂಬ ಪ್ರಶ್ನೆ ಸಹಜ. ಇವು ಎರಡೂ ಸರಿಯಾದರೂ ಅವು ಮೂಲ ಅಲ್ಲ.ಕೂಡು ಅಲ> ಕೂಡಾಲ> ಕೂಡಲ> ಕುಡಲ> ಕುಡ್ಲ > ಎಂಬ ದಾರಿಯಲ್ಲಿ ಇದು ಬಂದಿದೆ. ಇಲ್ಲಿ ಅಲ ಎಂದರೆ ನೀರಿನ ಹೆಜ್ಜೆ. ಎರಡು ನೀರಿನ ಹೆಜ್ಜೆಗಳು ಸೇರುವ ಸ್ಥಳವೇ ಕೂಡಲ.ತೆಂಕಣ

ಮಂಗಳೂರು: ‘ಸುರತ್ಕಲ್ ವೃತ್ತ, ಗಣೇಶಪುರ ರಸ್ತೆಗೆ ಕ್ಯಾ | ಪ್ರಾಂಜಲ್ ನಾಮಕರಣಕ್ಕೆ ಸತ್ಯಜಿತ್ ಸುರತ್ಕಲ್ ಆಗ್ರಹ

ಉಗ್ರರೊಂದಿಗೆ ನಡೆದ ಕಾಳಗದಲ್ಲಿ ಹುತಾತ್ಮರಾದ ಕ್ಯಾ | ಪ್ರಾಂಜಲ್ ಹೆಸರು ಚಿರಸ್ಥಾಯಿಯಾಗಲು ಸುರತ್ಕಲ್ ವೃತ್ತ ಹಾಗೂ ಗಣೇಶಪುರ – ಸುರತ್ಕಲ್ ರಸ್ತೆಗೆ ಅವರ ಹೆಸರಿಡಬೇಕು ಮತ್ತು ಅವರ ಪುತ್ತಳಿ ಸ್ಥಾಪಿಸಬೇಕು ಎಂದು ರಾಷ್ಟ್ರಭಕ್ತ ನಾಗರಿಕ ವೇದಿಕೆಯ ಸತ್ಯಜಿತ್ ಸುರತ್ಕಲ್ ಸರಕಾರವನ್ನು ಆಗ್ರಹಿಸಿದರು. ಕಾಶ್ಮೀರದ ರಜರಿಯಲ್ಲಿ ಸೇನಾಪಡೆಗಳು ಉಗ್ರರ ವಿರುದ್ಧ ಕಾರ್ಯ ಚರಣೆಯಲ್ಲಿ ಹುತಾತ್ಮರಾದ ಐವರು ಯೋಧರಿಗೆ ಸುರತ್ಕಲ್ ಜಂಕ್ಷನ್‍ನಲ್ಲಿ ಆಯೋಜಿಸಲಾದ

ಡಿ.17ರಂದು ಬೆಂಗ್ರೆಯಲ್ಲಿ ಬೃಹತ್ ಸ್ವಚ್ಛತಾ ಕಾರ್ಯಕ್ರಮ

ಬೆಂಗ್ರೆ ವಿದ್ಯಾರ್ಥಿ ಸಂಘ ಯುವಕ ಮಂಡಲದ ಅಮೃತ ಮಹೋತ್ಸವದ ಅಂಗವಾಗಿ ಬೆಂಗ್ರೆ ಪರಿಸದಲ್ಲಿ ಬೃಹತ್ ಸ್ವಚ್ಛತಾ ಕಾರ್ಯಕ್ರಮವನ್ನು ಡಿಸೆಂಬರ್ 17ರಂದು ಹಮ್ಮಿಕೊಳ್ಳಲಾಗಿದೆ ಎಂದು ಮಹಾಜನ ಸಂಘ ಬೆಂಗ್ರೆಯ ಅಧ್ಯಕ್ಷರು ಮತ್ತು ಬೆಂಗ್ರೆ ವಿದ್ಯಾರ್ಥಿ ಸಂಘ ಯುವಕ ಮಂಡಲದ ಅಧ್ಯಕ್ಷರಾದ ಚೇತನ್ ಬೆಂಗ್ರೆ ತಿಳಿಸಿದರು. ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡ ಬಳಿಕ ವಿ4 ನ್ಯೂಸ್‍ಗೆ ಮಾಹಿತಿ ನೀಡಿದರು. ಇತ್ತೀಚಿನ ದಿನಗಳಲ್ಲಿ ನದಿಗಳಿಗೆ ಕಸ

ಕ್ಯಾಪ್ಟನ್ ಪ್ರಾಂಜಲ್ ಬಲಿದಾನ ವ್ಯರ್ಥ ವಾಗದಿರಲಿ….ಡಾ ಚೂಂತಾರು

ದೇಶದ ರಕ್ಷಣೆಗಾಗಿ ತನ್ನ ಜೀವವನ್ನೇ ಪಣಕ್ಕಿಟ್ಟು ಹೋರಾಡಿ ಹುತಾತ್ಮರಾದ ಶ್ರೀ ಕ್ಯಾಪ್ಟನ್ ಪ್ರಾಂಜಲ್ ಅವರು ನಮ್ಮ ಯುವ ಪೀಳಿಗೆಗೆ ಮಾದರಿ. ಅವರ ತ್ಯಾಗ ಮತ್ತು ಬಲಿದಾನ ವ್ಯರ್ಥ ವಾಗದಿರಲಿ. ಭಯೋತ್ಪಾದನೆ ಮತ್ತು ಹಿಂಸಾಚಾರ ವನ್ನು ಬೇರು ಸಮೇತ ಕಿತ್ತು ಹಾಕಿ ಅಗಲಿದ ಕ್ಯಾಪ್ಟನ್ ಪ್ರಾಂಜಲ್ ಅವರ ಆತ್ಮಕ್ಕೆ ಶಾಂತಿ ಸಿಗುವಂತೆ ಮಾಡುವ ಗುರುತರ ಜವಾಬ್ದಾರಿ ನಮ್ಮ ಮೇಲಿದೆ. ನಾವೆಲ್ಲಾ ನಮ್ಮ ಜಾತಿ ಮತ ಧರ್ಮ ಎಂದು ಕಚ್ಚಾಡದೆ, ದೇಶದ ಆಂತರಿಕ ಭದ್ರತೆ ಮತ್ತು ಶಾಂತಿ ಹಾಗೂ