Home Posts tagged #putturu

ಬೆಳ್ಳಾರೆಗೆ ನೂತನ ಪಿಎಸೈ ಆಗಿ ಸುಹಾಸ್ , ಸುಬ್ರಹ್ಮಣ್ಯಕ್ಕೆ ಮಂಜುನಾಥ್ ವರ್ಗಾವಣೆ.

ಪುತ್ತೂರು: ಬೆಳ್ಳಾರೆಯಲ್ಲಿ ಎಸೈ ಆಗಿದ್ದ ರುಕ್ಮ ನಾಯ್ಕ್ , ಸುಬ್ರಹ್ಮಣ್ಯ ಎಸೈ ಆಗಿದ್ದ ಜಂಬೂರಾಜ್ ಮಹಾಜನ್ ಅವರನ್ನು ಐಜಿಪಿ ಕಚೇರಿಗೆ ವರ್ಗಾವಣೆ ಮಾಡಲಾಗಿದೆ. ಸುಳ್ಯ ಸರ್ಕಲ್ ವ್ಯಾಪ್ತಿಯ ಬೆಳ್ಳಾರೆ ಹಾಗೂ ಸುಬ್ರಹ್ಮಣ್ಯ ಪೆÇಲೀಸ್ ಠಾಣೆಗಳಿಗೆ ನೂತನವಾಗಿ ಪೆÇಲೀಸ್ ಉಪನಿರೀಕ್ಷಕರನ್ನು ನೇಮಕ ಗೊಳಿಸಿ ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರೇ ಆದೇಶಿಸಿದ್ದಾರೆ.

ವಿಟ್ಲ: ಕೆಟ್ಟು ನಿಂತ ಅಡುಗೆ ಎಣ್ಣೆ ಸಾಗಾಟದ ಟ್ಯಾಂಕರ್ , ಕಿಲೋಮೀಟರ್ ಸಾಲು ನಿಂತ ವಾಹನಗಳು

ವಿಟ್ಲ: ಇಲ್ಲಿನ ಸೂರಿಕುಮೇರು ಜಂಕ್ಷನ್ ಬಳಿ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ನಡೆಯುವಲ್ಲಿ ರಸ್ತೆಯ ಮಧ್ಯೆ ಅಡುಗೆ ಎಣ್ಣೆ ಸಾಗಾಟದ ಟ್ಯಾಂಕರ್ ಕೆಟ್ಟು ನಿಂತಿದ್ದರ ಪರಿಣಾಮ ರಸ್ತೆ ಸಂಚಾರದಲ್ಲಿ ವ್ಯತ್ಯಯ ಉಂಟಾಗಿ ಕಿಲೋಮೀಟರ್ ಗಟ್ಟಲೆ ವಾಹನಗಳು ಸಾಲಾಗಿ ನಿಂತಿದೆ,ಸ್ಥಳದಲ್ಲಿ ಪೋಲಿಸರು ಮತ್ತು ಸೂರಿಕುಮೇರು ಪರಿಸರದ ಯುವಕರು ವಾಹನಗಳ ಸಂಚಾರಕ್ಕೆ ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸುತ್ತಿದ್ಸಾರೆ

ಪುತ್ತೂರು : ಓಮ್ನಿ ಕಾರು ಮತ್ತು ದ್ವಿಚಕ್ರ ವಾಹನ ನಡುವೆ ಅಪಘಾತ , ದ್ವಿಚಕ್ರ ವಾಹನ ಸವಾರನಿಗೆ ಗಾಯ

ಪುತ್ತೂರು ತಾಲ್ಲೂಕು ಬಪ್ಪಳಿಗೆಯ ಬಲ್ನಾಡ್ ರಸ್ತೆಯಲ್ಲಿ ಓಮ್ನಿ ಕಾರು ಮತ್ತು ಆಕ್ಟಿವಾ ನಡುವೆ ಅಪಘಾತ- ಆಕ್ಟಿವಾ ಸವಾರನಿಗೆ ಗಾಯ.ಪುತ್ತೂರು ತಾಲೂಕಿನ ಬಪ್ಪಳಿಗೆಯ ಬಲ್ನಾಡ್ ಸಂಪರ್ಕ ರಸ್ತೆಯಲ್ಲಿ ಓಮ್ನಿ ಕಾರು ಮತ್ತು ಆಕ್ಟಿವಾ ನಡುವೆ ಡಿಕ್ಕಿ ಸಂಭವಿಸಿದ ಘಟನೆ ನಡೆದಿದೆ. ಬಲ್ನಾಡ್ ಕಡೆಯಿಂದ ಪುತ್ತೂರು ಕಡೆಗೆ ಬರುತ್ತಿದ್ದ ಓಮ್ನಿ ಕಾರು, ಪುತ್ತೂರು ಕಡೆಯಿಂದ ಬರುತ್ತಿದ್ದ ರಿಕ್ಷಾ ಒಂದನ್ನು ಹಿಂದಿಕ್ಕುವ ಭರದಲ್ಲಿದ್ದ ಆಕ್ಟಿವಾಗೆ ದಿಕ್ಕಿಯಾಗಿದೆ. ಘಟನೆಯಿಂದ

ಏಕಬಳಕೆಯ ಪ್ಲಾಸ್ಟಿಕ್ ನಿಷೇಧ ಕಾನೂನು ಜಾರಿ , ಪುತ್ತೂರಿನ ನಗರಸಭೆಯ ವಾರ್ಡ್ ಸದಸ್ಯರು ಸಹಕಾರ ನೀಡಬೇಕು : ಅಧ್ಯಕ್ಷ ಕೆ. ಜೀವಂಧರ್ ಜೈನ್ ಮನವಿ

ಪುತ್ತೂರು: ಕೇಂದ್ರ ಹಾಗೂ ರಾಜ್ಯ ಸರಕಾರಗಳು ಏಕ ಬಳಕೆ ಪ್ಲಾಸ್ಟಿಕ್ ನಿಷೇಧ ಕಾನೂನನ್ನು ಕಟ್ಟುನಿಟ್ಟಿನ ಜಾರಿಗೆ ಮುಂದಾಗಿದ್ದಾರೆ. ಜು.1 ರಿಂದಲೇ ಇದರ ಅನುಷ್ಠಾನಕ್ಕೆ ಮಾರ್ಗಸೂಚಿ ಬಿಡುಗಡೆಯಾಗಿದ್ದು, ಜಾಗೃತಿ ಹಾಗೂ ಪಾಲನೆಯಲ್ಲಿ ನಗರಸಭೆಯ ಎಲ್ಲಾ ವಾರ್ಡಗಳ ಸದಸ್ಯರು ಸಹಕಾರ ನೀಡಬೇಕು ಎಂದು ಪುತ್ತೂರು ನಗರಸಭಾ ಅಧ್ಯಕ್ಷ ಕೆ. ಜೀವಂಧರ್ ಜೈನ್ ಮನವಿ ಮಾಡಿದ್ದಾರೆ. ನಗರಸಭಾ ಸಾಮಾನ್ಯ ಸಭೆಯು ಜೀವಂಧರ್ ಜೈನ್ ಅಧ್ಯಕ್ಷತೆಯಲ್ಲಿ ನಡೆಯಿತು. 2016ರಲ್ಲಿ ಏಕ ಬಳಕೆ

ಕಾಡಮಲ್ಲಿಗೆ ಖ್ಯಾತಿಯ : ಬೆಳ್ಳಾರೆ ವಿಶ್ವನಾಥ ರೈ ಇನ್ನಿಲ್ಲ

ಬೆಳ್ಳಾರೆ ಸುಬ್ಬಯ್ಯ ರೈ ಮತ್ತು ಮಂಜಕ್ಕೆ ಇವರ ನಾಲ್ವರು ಮಕ್ಕಳಲ್ಲಿ ವಿಶ್ವನಾಥ ರೈ ಒಬ್ಬರು ಇವರು 28-2-1949 ರಲ್ಲಿ ಬೆಳ್ಳಾರೆಯಲ್ಲಿ ಜನಿಸಿದರು ಶಿಕ್ಷಣ 2 ನೇ ತರಗತಿ ಇಬ್ಬರು ಅಕ್ಕಂದಿರು ಒಬ್ಬಾಕೆ ತಂಗಿ. ಅಚ್ಚುತ ಮಣಿಯಾಣಿ ಯವರಿಂದ ಯಕ್ಷ ನಾಟ್ಯಾಭ್ಯಾಸ ಮಾಡಿ ತನ್ನ 9ನೇ ವರ್ಷ ಪ್ರಾಯದಲ್ಲಿ ರಂಗಪ್ರವೇಶ ಮಾಡಿದರು ರಾಜನ್ ಅಯ್ಯರ್ ಮತ್ತು ಕೇಶವ ಮಾಸ್ತರ್ ಅವರಿಂದ ಭರತನಾಟ್ಯವನ್ನೂ ಅಭ್ಯಾಸ ಮಾಡಿದರು. ಬಾಲಕನಿದ್ದಾಗಲೇ ತನ್ನ ಅಭಿನಯಕ್ಕೆ ಮಾಸ್ಟರ್ ಹಿರಣ್ಣಯ್ಯರಿಂದ

ಪುತ್ತೂರು: ಹೆಬ್ಬಾವನ್ನು ಕೊಂದು ಕಟ್ಟಿ ಹಾಕಿದ ಪ್ರಕರಣ: ಇಬ್ಬರ ಬಂಧನ

ಪುತ್ತೂರು ತಾಲೂಕು ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿ ಯಲ್ಲಿರುವ ಗ್ರಾಮ ಅರಣ್ಯ ಸಮಿತಿ ಕಟ್ಟಡದ ಬಾಗಿಲಿಗೆ ಹೆಬ್ಬಾವನ್ನು ಕೊಂದು ಕಟ್ಟಿ ಹಾಕಿದ ಪ್ರಕರಣ ಪತ್ತೆ ಹಚ್ಚಿ ಪುತ್ತೂರು ಅರಣ್ಯ ಇಲಾಖೆ ಸಿಬ್ಬಂದಿಗಳು ತಕ್ಷೀರು ದಾಖಲಿಸಿದ್ದಾರೆ. ಆರೋಪಿಗಳಾದ ಕೊಳ್ತಿಗೆ ಗ್ರಾಮದ ಶೇಡಿಗುರಿ ವಾಸಿ ಧನಂಜಯ(38 ವರ್ಷ) ಮತ್ತು ಜಯ(38 ವರ್ಷ) ರವರನ್ನು ಅರಣ್ಯ ಇಲಾಖೆ ಅಧಿಕಾರಿ ಗಳು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯವು ಆರೋಪಿಗಳಿಗೆ ಜುಲೈ 15 ರವರೆಗೆ

ಮೌಲಾನಾ ಅಝಾದ್ ಮಾದರಿ ಶಾಲಾ ಕಟ್ಟಡ ಉದ್ಘಾಟನೆ : ಅಲ್ಪಸಂಖ್ಯಾತರ ಶಿಕ್ಷಣಕ್ಕೆ ಮಹತ್ವ ನೀಡುವ ನಿಟ್ಟಿನಲ್ಲಿ ಕ್ರಮ ಮಾದರಿ ಶಾಲೆ

ಶಿಕ್ಷಣ ಎಂಬುದು ಬದುಕಿಗೆ ಬೆಳಕು ನೀಡುವ ಕ್ಷೇತ್ರವಾಗಿದೆ. ಅಲ್ಪ ಸಂಖ್ಯಾತರ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವ ಉದ್ದೇಶದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರವು ಮೌಲಾನಾ ಅಝಾದ್‍ನಂತಹ ಮಾದರಿ ಶಾಲೆಗಳನ್ನು ಸ್ಥಾಪಿಸಿ ಮುನ್ನಡೆಸುತ್ತಿದೆ ಎಂದು ರಾಜ್ಯ ಬಂದರು, ಮೀನುಗಾರಿಕೆ ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್. ಅಂಗಾರ ಹೇಳಿದರು , ಪುತ್ತೂರು ನಗರದ ಪಡೀಲ್‍ನಲ್ಲಿ ರೂ. 2.35 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾದ ಮೌಲಾನಾ ಆಝಾದ್ ಮಾದರಿ

ಪುತ್ತೂರಿನ ಕೃಷ್ಣನಗರ ಚರ್ಚ್ ಬಳಿಯ ಅಂಗಡಿಗಳಿಂದ ಕಳವು

ಪುತ್ತೂರು: ಪುತ್ತೂರು ಉಪ್ಪಿನಂಗಡಿ ರಸ್ತೆಯ ಕೃಷ್ಣನಗರ ಚರ್ಚ್ ಬಳಿಯ ಎರಡು ಅಂಗಡಿಗಳಿಗೆ ಕಳ್ಳರು ನುಗ್ಗಿದ ಘಟನೆ ಸೆ.23 ರಂದು ಬೆಳಕಿಗೆ ಬಂದಿದೆ. ಕೃಷ್ಣನಗರ ಬಳಿಯ ಗೋಪಾಲ ಎಂಬವರ ಅಂಗಡಿಗೆ ಕಳ್ಳರು ಪಕ್ಕದ ಮರ ಏರಿ ಶೀಟ್ ಜಾರಿಸಿ ಒಳನುಗ್ಗಿ ಅಂಗಡಿಯಲ್ಲಿ ದಾಸ್ತಾನಿದ್ದ 2 ಗೋಣಿ ಸಿಗರೇಟು ಪ್ಯಾಕೇಟ್ ಮತ್ತು ಗುಡ್ಕಾ ಹಾಗು ಡ್ರಾವರ್ ನಲ್ಲಿ ಇದ್ದ ಚಿಲ್ಲರೆ ಹಣವನ್ನು ಕಳವು ಮಾಡಿದ್ದಾರೆ. ಪಕ್ಕದ ಲತೀಫ್ ಎಂಬವರ ತರಕಾರಿ ಅಂಗಡಿಯ ರೋಲಿಂಗ್ ಶೆಟರ್ ಮೂಲಕ ಒಳನುಗ್ಗಿದ

ಪುತ್ತೂರು ಪಾಣಾಜೆ ರಸ್ತೆಯ ಚೆಲ್ಯಡ್ಕ ಸೇತುವೆ ಮುಳುಗಡೆ

ಪುತ್ತೂರು : ಪುತ್ತೂರು ಪರ್ಲಡ್ಕ ಪಾಣಾಜೆ ರಸ್ತೆಯ ಚೆಲ್ಯಡ್ಕ ಸೇತುವೆ ಈ ಮಳೆಗಾಲದ ಅವಧಿಯಲ್ಲಿ ಮೊದಲ ಬಾರಿಗೆ ಜು.15 ರಂದು ಮಧ್ಯಾಹ್ನ ವೇಳೆ ಮುಳುಗಡೆಯಾಗಿದೆ. ಬೆಳಿಗ್ಗೆಯಿಂದಲೇ ವಿಪರೀತ ಮಳೆ ಸುರಿಯುತ್ತಿದ್ದ ಕಾರಣ ಮುಳುಗು ಸೇತುವೆಯೆಂದು ಹೆಸರಾದ ಈ ಸೇತುವೆ ಮುಳುಗಡೆಯಾಗಿದ್ದು ಆ ರಸ್ತೆಯಲ್ಲಿ ಚಲಿಸ ಬೇಕಾದ ವಾಹನಗಳಿಗೆ ಅಡಚಣೆ ಉಂಟಾಗಿ ಸಮಸ್ಯೆಯಾಯಿತು.ಸುತ್ತುವರಿದು ಚಲಿಸ ಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು.