Home ಕರಾವಳಿ Archive by category ಮಂಗಳೂರು (Page 206)

ಸಿಐಎಸ್‌ಎಫ್ ಏಕತಾ ಸೈಕಲ್ ರ್‍ಯಾಲಿ: ಪಣಂಬೂರಿನಲ್ಲಿ ಸೈಕಲ್ ರ್‍ಯಾಲಿಗೆ ಸ್ವಾಗತ

75 ನೇ ಸ್ವಾತಂತ್ರ್ಯ ಸಂಭ್ರಮವನ್ನು ಆಚರಿಸಿಕೊಳ್ಳುತ್ತಿದ್ದು, ರಾಷ್ಟ್ರೀಯ ಏಕತಾ ದಿವಸದ ಅಂಗವಾಗಿ ದೇಶದ ಕೇಂದ್ರೀಯ ಕೈಗಾರಿಕಾ ಭದ್ರತಾ ದಳದ ಯೋಧರು ಕೇರಳದ ತಿರುವನಂತಪುರದಿಂದ ಗುಜರಾತ್‌ನ ಕೇವಾಡಿಯವರೆಗೆ ಸೈಕಲ್ ರ್‍ಯಾಲಿ ಹಮ್ಮಿಕೊಂಡಿದ್ದು, ದಕ್ಷಿಣ ಕನ್ನಡ ಜಿಲ್ಲೆಗೆ ಪ್ರವೇಶಿಸಿತು. ನಿರತ ಯೋಧರನ್ನು ಮಂಗಳೂರಿನ ಕುದುರೆಮುಖ ಕಬ್ಬಿಣ ಅದಿರು ಕಾರ್ಖಾನೆಯ ಮತ್ತು

ಹೆಚ್‌ಡಿಕೆ ಒಂದು ವಾರ ಶಾಖೆಗೆ ಬಂದು ಆರ್‌ಎಸ್‌ಎಸ್ ಬಗ್ಗೆ ತಿಳಿದುಕೊಳ್ಳಲಿ: ನಳಿನ್ ಕುಮಾರ್ ಕಟೀಲ್

ಮಂಗಳೂರು: ಮಾಜಿ ಮುಖ್ಯ ಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರು ಮೊದಲು ಒಂದು ವಾರ ಶಾಖೆಗೆ ಬಂದು ಆರ್‌ಎಸ್‌ಎಸ್ ಬಗ್ಗೆ ತಿಳಿದುಕೊಳ್ಳಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ. ಇತ್ತೀಚೆಗೆ ಕುಮಾರಸ್ವಾಮಿ ಅವರು ಆರ್‌ಎಸ್‌ಎಸ್ ಬಗ್ಗೆ ನೀಡಿದ ಹೇಳಿಕೆಗೆ ನಗರದಲ್ಲಿಂದು ಸುದ್ದಿಗಾರರಿಗೆ ಪ್ರತಿಕ್ರೀಯೆ ನೀಡಿದರು. ಕಾಮಲೆ ರೋಗಿಗೆ ಜಗತ್ತೆಲ್ಲ ಹಳದಿಯಾಗಿ ಕಾಣುವಂತೆ ಕುಮಾರಸ್ವಾಮಿ ಆರ್‌ಎಸ್‌ಎಸ್ ಬಗ್ಗೆ ಹೇಳಿಕೆ ನೀಡುತ್ತಿದ್ದಾರೆ.

ತೊಕ್ಕೊಟ್ಟಿನಿಂದ ಕೊಣಾಜೆಗೆ ಮುಖ್ಯ ರಸ್ತೆಯನ್ನು ಸರಿಪಡಿಸುವಂತೆ ಒತ್ತಾಯಿಸಿ DYFI ನೇತ್ರತ್ವದಲ್ಲಿ ರಸ್ತೆ ತಡೆ ಪ್ರತಿಭಟನಾ ಪ್ರದರ್ಶನ

ಮಂಗಳೂರು ವಿಧಾನಸಭಾ ಕ್ಷೇತ್ರದ ತೊಕ್ಕೊಟ್ಟಿನಿಂದ ಕೋಣಾಜೆ ಗೆ ಸಂಪರ್ಕಿಸುವ ಮುಖ್ಯ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು ಇದನ್ನು ಖಂಡಿಸಿ DYFI ಉಳ್ಳಾಲ ವಲಯ ನೇತ್ರತ್ವದಲ್ಲಿ ಚೆಂಬುಗುಡ್ಡೆಯಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಲಾಯಿತು ಪ್ರತಿಭಟನೆ ಯನ್ನು ಉದ್ದೇಶಿಸಿ ಮಾತನಾಡಿದ ಡಿ ವೈ ಎಫ್ಐ ಜಿಲ್ಲಾ ಅಧ್ಯಕ್ಷರು B K ಇಮ್ತಿಯಾಜ್ ತೊಕ್ಕೋಟ್ಟಿನಿಂದ ಹಿಡಿದು ಚೆಂಬುಗುಡ್ಡೆ, ಬಬ್ಬುಕಟ್ಟೆ , ಕುತ್ತಾರ್ ಮತ್ತಿತ್ತರ ಪ್ರದೇಶದಲ್ಲಿ ಬಹು ದೊಡ್ಡ ಗುಂಡಿಗಳಿಂದ

ಶೂಟೌಟ್ ಪ್ರಕರಣದ ಸಮಗ್ರ ತನಿಖೆಗೆ ಡಿವೈಎಫ್ಐ ಆಗ್ರಹ

ನಿನ್ನೆ ಮಂಗಳೂರು ನಗರದ ಮೋರ್ಗನ್ಸ್ ಗೇಟ್ ಬಳಿಯ ವೈಷ್ಣವಿ ಎಕ್ಸ್‌ಪ್ರೆಸ್‌ ಕಾರ್ಗೋ ಸಂಸ್ಥೆಯ ಮಾಲಕ ರಾಜೇಶ್ ಪ್ರಭು ತನ್ನ ಕಾರ್ಮಿಕರ ಸಂಬಳದ ವಿಚಾರದಲ್ಲಿ ನಡೆದ ಮಾತಿನ ಚಕಮಕಿ ವೇಳೆ ತಾನು ಪಿಸ್ತೂಲಿನಿಂದ ಹಾರಿಸಿದ ಗುಂಡು ಆತನ ಪುತ್ರನಿಗೆ ತಗುಲಿದ ಪ್ರಕರಣವನ್ನು ನಗರದ ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ಸಮಗ್ರ ತನಿಖೆ ನಡೆಸಬೇಕೆಂದು ಡಿವೈಎಫ್ಐ ದ.ಕ ಜಿಲ್ಲಾ ಸಮಿತಿ ಆಗ್ರಹಿಸಿದೆ. ರಾಜೇಶ್ ಪ್ರಭು ಮಾಲಕತ್ವದ ವೈಷ್ಣವಿ ಎಕ್ಸ್‌ಪ್ರೆಸ್‌ ಕಾರ್ಗೋ ಸಂಸ್ಥೆಯಲ್ಲಿ

ರಿಗ್ ಮಾಲೀಕರ ಮತ್ತು ಕಂಟ್ರಾಕ್ಟ್‌ದಾರರ ಸಭೆ

ದಕ್ಷಿಣ ಕನ್ನಡ ಮತ್ತು ಉಡುಪಿ ರಿಗ್ ಮಾಲೀಕರ ಮತ್ತು ಕಂಟ್ರಾಕ್ಟ್ದಾರರ ಸಂಘ ರಿಜಿಸ್ಟರ್ಡ್ ಮಂಗಳೂರು ವತಿಯಿಂದ ತಮಿಳುನಾಡು ರಿಗ್ ಮಾಲೀಕರ ಸಂಘದ ಪ್ರತಿನಿಧಿಗಳ ಜೊತೆ ಇಂದು ಮಂಗಳೂರಿನಲ್ಲಿ ಸಭೆ ನಡೆದಿದೆ. ಸಭೆಯಲ್ಲಿ ಡ್ರಿಲ್ಲಿಂಗ್ ದರ ಹೆಚ್ಚಳದ ಕುರಿತಾಗಿ ಚರ್ಚಿಸಿ, ಹೆಚ್ಚಾಗಿರುವ ಇಂಧನ ಬೆಲೆಗೆ ಅನುಗುಣವಾಗಿ ಡ್ರಿಲ್ಲಿಂಗ್ ದರವನ್ನು ನಿಗಧಿಪಡಿಲಾಗಿದೆ. ಒಂದು ಅಡಿ ಡ್ರಿಲ್ಲಿಂಗ್‌ಗೆ ಈ ಮೊದಲು 115 ರೂಪಾಯಿ ಇತ್ತು, ಈಗ ಈ ದರ 130 ಆಗಿದ್ದು, ಇದ್ರ ಜೊತೆಗೆ

ಅ.9ರಂದು ಕನ್ನಡಸೇನೆ ಕರ್ನಾಟಕ ದ.ಕ ಜಿಲ್ಲಾ ಕಚೇರಿ ಉದ್ಘಾಟನೆ

ಕನ್ನಡ ನಾಡು ನುಡಿ,ಜಲ ಸಂರಕ್ಷಣೆ, ಸ್ಥಳೀಯರಿಗೆ ಉದ್ಯೋಗ ಮತ್ತಿತರ ನ್ಯಾಯಯುತ ಬೇಡಿಕೆಗೆಹೋರಾಟ ನಡೆಸುತ್ತಾ ಬರುತ್ತಿರುವ ಕನ್ನಡ ಸೇನೆ ಕರ್ನಾಟಕ ಇದರ ದಕ್ಷಿಣಕನ್ನಡ ಜಿಲ್ಲಾ ಕಚೇರಿ” ಉದ್ಘಾಟನೆ ಸಮಾರಂಭ ಅ.9ರಂದು ಬೆಳಗ್ಗೆ 11.೦೦ ಗಂಟೆಗೆ ಕೂಳೂರಿನ ವ್ಯವಸಾಯ ಸೇವಾ ಸಹಕಾರಿ ಸಭಾಂಗಣದಲ್ಲಿ ಜರಗಲಿದೆ ಎಂದು ಕನ್ನಡ ಸೇನೆ ದ.ಕ ಜಿಲ್ಲಾ ಕಾರ್ಯಾಧ್ಯಕ್ಷ ಗುರುಚಂದ್ರ ಹೆಗ್ಡೆ ಗಂಗಾರಿ ಕೂಳೂರು ಸುದ್ದಿಗೋಷ್ಟಿಯಲ್ಲಿ ತಿಳಿಸಿದರು ಉದ್ಘಾಟನೆಯನ್ನು ಆಳ್ವಾಸ್ ಶಿಕ್ಷಣ

ಅಕ್ಟೋಬರ್ 10 ರಂದು ಕಲ್ಕೂರ ಪ್ರತಿಷ್ಠಾನದಿಂದ ಕಾರಂತ ಹುಟ್ಟುಹಬ್ಬ

ಕಲ್ಕೂರ ಪ್ರತಿಷ್ಟಾನವು ವರ್ಷಂಪ್ರತಿಯಂತೆ ಅಕ್ಟೋಬರ್ 1೦ರಂದು ಕಡಲತೀರದ ಭಾರ್ಗವರೆಂದೇ ಪ್ರಸಿದ್ಧರಾಗಿರುವ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಕೋಟ ಶಿವರಾಮ ಕಾರಂತರ ಹುಟ್ಟುಹಬ್ಬವನ್ನು ಆಚರಿಸಲಿದ್ದೇವೆ. ಕೊಡಿಯಾಲ್ ಗುತ್ತುವಿನ ಪತ್ತುಮುಡಿ ಸಭಾ ಭವನದಲ್ಲಿ ಕಾರ್ಯಕ್ರಮ ಜರುಗಲಿದ್ದು, ಈ ವರ್ಷದ ಕಾರಂತ ಪ್ರಶಸ್ತಿಯನ್ನು ಖ್ಯಾತ ವಾರಪತ್ರಿಕೆ ತರಂಗದ ವ್ಯವಸ್ಥಾಪಕ ಸಂಪಾದಕರಾದ ಡಾ. ಸಂಧ್ಯಾ ಎಸ್. ಪೈ ಅವರಿಗೆ ನೀಡಿ ಗೌರವಿಸಲಾಗುವುದು ಎಂದು ಕಲ್ಕೂರ ಪ್ರತಿಷ್ಠಾನದ

ಬೆಳ್ತಂಗಡಿಯಲ್ಲಿ ಭಾರೀ ಮಳೆಯ ಅವಾಂತರ

ಬೆಳ್ತಂಗಡಿಯಲ್ಲಿ ಬಾರೀ ಮಳೆಯಿಂದಾಗಿ ರಸ್ತೆಯೆಲ್ಲ ಚರಂಡಿಯಂತಾಗಿದೆ,ತಾಲೂಕಿನ ಕೊಕ್ಕಡ ಪೇಟೆಯಲ್ಲಿ ಸುರಿದ ಭಾರಿ ಮಳೆಗೆ ಚರಂಡಿಯಿಲ್ಲದೆ ರಸ್ತೆಯಲ್ಲೇ ನೀರು ಹೋಗುವಂತಾಗಿದೆ. ರಸ್ತೆಯ ಎರಡೂ ಬದಿಯ ಜಾಗಗಳನ್ನು ಕೆಲವು ವ್ಯಕ್ತಿಗಳು ಚರಂಡಿ ಮುಚ್ಚಿ ಅದನ್ನು ಆಕ್ರಮಿಸಿ ಕಂಡಿರುವುದೇ ಇದಕ್ಕೆ ಕಾರಣವಾಗಿದೆ. ಕೊಕ್ಕಡ ಗ್ರಾಮ ಪಂಚಾಯತ್ ಎದುರಿನಲ್ಲೇ ಅಷ್ಟೊಂದು ನೀರು ರಸ್ತೆಯಲ್ಲೇ ಹೋದರೂ ಪಂಚಾಯತ್ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ. ಇದರ ಬಗ್ಗೆ ಸಾರ್ವಜನಿಕರು

ಕಲ್ಕೂರ ಪ್ರತಿಷ್ಠಾನದಿಂದ ಕಾರಂತ ಹುಟ್ಟುಹಬ್ಬ:ಡಾ. ಸಂಧ್ಯಾ ಎಸ್. ಪೈ ಅವರಿಗೆ ಕಾರಂತ ಪ್ರಶಸ್ತಿ ಪ್ರದಾನ

ಕಲ್ಕೂರ ಪ್ರತಿಷ್ಟಾನವು ವರ್ಷಂಪ್ರತಿಯಂತೆ ಅಕ್ಟೋಬರ್ 10ರಂದು ಕಡಲತೀರದ ಭಾರ್ಗವರೆಂದೇ ಪ್ರಸಿದ್ಧರಾಗಿರುವ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಕೋಟ ಶಿವರಾಮ ಕಾರಂತರ ಹುಟ್ಟುಹಬ್ಬವನ್ನು ಆಚರಿಸಲಿದ್ದೇವೆ. ಕೊಡಿಯಾಲ್ ಗುತ್ತುವಿನ ಪತ್ತುಮುಡಿ ಸಭಾ ಭವನದಲ್ಲಿ ಕಾರ್ಯಕ್ರಮ ಜರುಗಲಿದ್ದು, ಈ ವರ್ಷದ ಕಾರಂತ ಪ್ರಶಸ್ತಿಯನ್ನು ಖ್ಯಾತ ವಾರಪತ್ರಿಕೆ ತರಂಗದ ವ್ಯವಸ್ಥಾಪಕ ಸಂಪಾದಕರಾದ ಡಾ. ಸಂಧ್ಯಾ ಎಸ್. ಪೈ ಅವರಿಗೆ ನೀಡಿ ಗೌರವಿಸಲಾಗುವುದು ಎಂದು ಕಲ್ಕೂರ ಪ್ರತಿಷ್ಠಾನದ

ಮೋರ್ಗನ್ಸ್‌ಗೇಟ್‌ನಲ್ಲಿ ಹಾಡಹಗಲೇ ಶೂಟೌಟ್

ನಗರದ ಮೋರ್ಗನ್ ಗೇಟ್ ಬಳಿ ಶೂಟೌಟ್ ನಡೆದಿದ್ದು, ಉದ್ಯಮಿಯೊಬ್ಬರು ಹಾರಿಸಿದ ಗುಂಡು ತನ್ನ ಮಗನಿಗೇ ಆಕಸ್ಮಿಕವಾಗಿ ಬಿದ್ದು ಅವಾಂತರಕ್ಕೆ ಕಾರಣವಾಗಿದೆ. ವೈಷ್ಣವಿ ಎಕ್ಸ್ ಪ್ರೆಸ್ ಕಾರ್ಗೋ ಪ್ರೈ. ಲಿ. ಇದರ ಮೋರ್ಗನ್ ಗೇಟ್ ಕಚೇರಿಯಲ್ಲಿ ಘಟನೆ ನಡೆದಿದೆ. ಸಂಸ್ಥೆಯ ಮಾಲಕ ರಾಜೇಶ್ ಪ್ರಭು ಬಳಿ ಕೆಲಸದವರೊಬ್ಬರ ಜಟಾಪಟಿ ನಡೆದಿದೆ ಎನ್ನಲಾಗಿದೆ. ರಾಜೇಶ್ ಪ್ರಭು ಸಿಟ್ಟಿನಿಂದ ತನ್ನ ಪಿಸ್ತೂಲ್ ತೆಗೆದು ಗುಂಡು ಹಾರಿಸಿದ್ದು ಅದು ತಪ್ಪಿ ತನ್ನ ಮಗನ ಮೇಲೆ ಬಿದ್ದಿದೆ. ಕಚೇರಿ