Home Archive by category ಮನರಂಜನೆ (Page 4)

ಸುಳ್ಯ: ಮಂಡೆಕೋಲು ಶಾಲೆಯಲ್ಲಿ ‘ಯಕ್ಷಧ್ರುವ -ಯಕ್ಷಶಿಕ್ಷಣ’ ಯಕ್ಷಗಾನ ಶಿಕ್ಷಣ ಅಭಿಯಾನಕ್ಕೆ ಚಾಲನೆ

ಸುಳ್ಯ:ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‌ ಮಂಗಳೂರು ವತಿಯಿಂದ ಯಕ್ಷಗಾನ ಶಿಕ್ಷಣ ಅಭಿಯಾನ ‘ಯಕ್ಷಧ್ರುವ- ಯಕ್ಷ ಶಿಕ್ಷಣ’ ಕಾರ್ಯಕ್ರಮ ಮಂಡೆಕೋಲು ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉದ್ಘಾಟನೆಗೊಂಡಿತು.ಯಕ್ಷಧ್ರುವ ಪಟ್ಲ ಫೌಂಡೇಶನ್ ವತಿಯಿಂದ ಮಂಡೆಕೋಲು ಶಾಲಾ ವಿದ್ಯಾರ್ಥಿಗಳಿಗೆ ಪ್ರತಿ ವಾರ ಯಕ್ಷಗಾನ ತರಬೇತಿ ನಡೆಯಲಿದೆ. ಹಿರಿಯ ಯಕ್ಷಗಾನ ಕಲಾವಿದ

ಮಂಗಳೂರು : ತುಳು ನಾಟಕ ಕಾರ್ಯಾಗಾರ ಉದ್ಘಾಟನೆ

ಮಂಗಳೂರು : ತುಳು ನಾಟಕ ಪರಂಪರೆಯಲ್ಲಿ ಶಿಕ್ಷಕರ ಹಾಗೂ ಶಿಕ್ಷಣ ಸಂಸ್ಥೆಗಳ ಪಾತ್ರ ಮಹತ್ತರವಾಗಿತ್ತು ಎಂದು ಹಿರಿಯ ನಿರ್ದೇಶಕ ತಮ್ಮ ಲಕ್ಷ್ಮಣ ಅವರು ಹೇಳಿದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ನಗರದ ಪಡೀಲ್ ಅಮೃತ ಕಾಲೇಜ್ ಸಹಯೋಗದಲ್ಲಿ ಆಯೋಜಿಸಲಾದ ತುಳು ನಾಟಕ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಶತಮಾನಗಳ ಹಿಂದೆಯೇ ಪಂಜೆ ಮಂಗೇಶರಾಯರ ಕಾರಣದಿಂದಾಗಿ ಶಾಲೆಗಳಲ್ಲಿ ನಾಟಕ ಆರಂಭವಾಗಿತ್ತು ಎಂಬ ವಿಚಾರವನ್ನು ತಮ್ಮ ಲಕ್ಷಣ ಅವರು ಈ ಸಂದರ್ಭದಲ್ಲಿ

ಶ್ರೀ ಬೆಳ್ಳಾಡಿ ಅಶೋಕ್ ಶೆಟ್ಟಿಯವರಿಂದ ಯಕ್ಷದ್ರುವ ಪಟ್ಲ ದಶಮಾನೋತ್ಸವಕ್ಕೆ 25 ಲಕ್ಷ ರೂಪಾಯಿ ದೇಣಿಗೆ

ಉಳ್ತೂರು ಮೋಹನ್ ದಾಸ್ ಶೆಟ್ಟಿಯವರ ವಿಶೇಷ ಮನವಿಯ ಮೇರೆಗೆ ನಮ್ಮ ಟ್ರಸ್ಟಿನ ಅಧ್ಯಕ್ಷರಾದ ಶ್ರೀ ಪಟ್ಲ ಸತೀಶ್ ಶೆಟ್ಟಿಯವರ ಆಪ್ತ ಅಭಿಮಾನಿಗಳಾದ ಶೈಕ್ಷಣಿಕ,ಧಾರ್ಮಿಕ, ಪ್ರಾಮಾಣಿಕ,ಸಾಮಾಜಿಕ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಅದೆಷ್ಟೋ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯದಲ್ಲಿ ಮತ್ತು ಅಶಕ್ತರಿಗೆ ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತಾ ಬಂದಿರುವ ಪ್ರಸಿದ್ಧ ಉದ್ಯಮಿ ಮೆರಿಟ್ & ಅರ್ಜುನ್ ಹಾಸ್ಪಿಟಲ್ ಸರ್ವಿಸಸ್ ಪ್ರೈ. ಲಿ ನ ಮಾಲೀಕರಾದ ಗೌರವಾನ್ವಿತ

ಮೇ.24ರಂದು ರೋಹನ್ ಕಾರ್ಪೊರೇಷನ್ ಅರ್ಪಿಸುವ ರೆಡ್ ಎಫ್‌ಎಂ ತುಳು ಫಿಲ್ಮ್ ಅವಾರ್ಡ್ಸ್ ಕಾರ್ಯಕ್ರಮ

ಮಂಗಳೂರು: ರೋಹನ್ ಕಾರ್ಪೊರೇಷನ್ ಪ್ರಸ್ತುತಪಡಿಸುವ ರೆಡ್ ಎಫ್‌ಎಂ ತುಳು ಫಿಲ್ಮ್ ಅವಾರ್ಡ್ಸ್ ಕಾರ್ಯಕ್ರಮವು ಮೇ.24ರಂದು ಸಂಜೆ 5.30ಕ್ಕೆ ನಗರದ ಫಿಝಾ ಬೈ ನೆಕ್ಸಸ್ ಮಾಲ್‌ನಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಸಂಸದ ಕ್ಯಾ. ಬ್ರಿಜೇಶ್ ಚೌಟ, ಶಾಸಕರಾದ ವೇದವ್ಯಾಸ ಕಾಮತ್, ಡಾ.ಭರತ್ ಶೆಟ್ಟಿ, ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜ, ಮಂಜುನಾಥ ಭಂಡಾರಿ, ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್, ರೋಹನ್ ಕಾರ್ಪೊರೇಷನ್ ಆಡಳಿತ ನಿರ್ದೇಶಕ ರೋಹನ್ ಮೊಂತೇರೋ, ಪಾಲೇಮಾರ್

ಕಾರ್ಕಳ : ಎ.20ರಂದು ಚೈತನ್ಯ ಕಲಾವಿದರು ಬೈಲೂರು ತಂಡದ ವತಿಯಿಂದ ‘ಅಷ್ಟಮಿ ಶತ ಸಂಭ್ರಮ’ ಕಾರ್ಯಕ್ರಮ

ಚೈತನ್ಯ ಕಲಾವಿದರು ಬೈಲೂರು ತಂಡದ ವತಿಯಿಂದ ‘ಅಷ್ಟಮಿ ಶತ ಸಂಭ್ರಮ’ ಕಾರ್ಯಕ್ರಮ ಎ.20ರಂದು ಸಂಜೆ 5ರಿಂದ 10 ಗಂಟೆಗೆ ಬೈಲೂರು ಬಸ್ ಸ್ಟ್ಯಾಂಡ್ ಹತ್ತಿರ ಸೌಂದರ್ಯ ಕಾಂಪ್ಲೆಕ್ಸ್ ಬಳಿ ಜರಗಲಿದೆ ಎಂದು ತಂಡದ ಪ್ರವರ್ತಕ ಪ್ರಸನ್ನ ಶೆಟ್ಟಿ ಬೈಲೂರು ತಿಳಿಸಿದರು.ತನ್ನ ರಚನೆ, ನಿರ್ದೇಶನದಲ್ಲಿ ಇದು 10ನೇ ನಾಟಕವಾಗಿದ್ದು, ಅತೀ ಕಡಿಮೆ ಅವಧಿಯಲ್ಲಿ ಅಷ್ಟಮಿ ನಾಟಕ 100 ಪ್ರದರ್ಶನವನ್ನು ಪೂರೈಸಿದ್ದು, 115ನೇ ಪ್ರದರ್ಶನವರೆಗೂ ಬುಕ್ಕಿಂಗ್ ಪಡೆದುಕೊಂಡಿದೆ. ಜಿಲ್ಲೆ

ಪುತ್ತೂರು : ಕೋಟಿ ಚೆನ್ನಯ ಕಂಬಳ ಆಮಂತ್ರಣ ಪತ್ರಿಕೆ ಬಿಡುಗಡೆ

ಪುತ್ತೂರು: ಇತಿಹಾಸ ಪ್ರಸಿದ್ಧವಾಗಿರುವ ಪುತ್ತೂರಿನ 32ನೇ ವರ್ಷದ ಹೊನಲು ಬೆಳಕಿನ ಕೋಟಿ ಚೆನ್ನಯ ಜೋಡುಕರೆ ಕಂಬಳವು ಮಾ.1ರಂದು ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಳದ ಎದುರಿನ ದೇವರಮಾರು ಗದ್ದೆಯಲ್ಲಿ ನಡೆಯಲಿದ್ದು, ಕಂಬಳವನ್ನು ಉತ್ತಮವಾಗಿ ನಡೆಸುವಲ್ಲಿ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಎನ್.ಚಂದ್ರಹಾಸ ಶೆಟ್ಟಿ ಹೇಳಿದರು. ಅವರು ಶನಿವಾರ ಪುತ್ತೂರು ದೇವಳದ ವಠಾರದಲ್ಲಿ ಕಂಬಳದ ಆಮಂತ್ರಣ ಪತ್ರಿಕೆಯನ್ನು

ಮಂಗಳೂರು: ನಾಳೆಯಿಂದ ಮಂಗಳೂರಿನಲ್ಲಿ ಐಸ್ ಕ್ರೀಮ್ ಪರ್ಬ-2025

ಮಂಗಳೂರು: ನಗರದ ಪಾಂಡೇಶ್ವರದಲ್ಲಿರುವ ಫಿಝಾ ಬೈ ನೆಕ್ಸಸ್ ಮಾಲ್ ಮತ್ತು ಮಂಗಳೂರಿನ ಪ್ರಸಿದ್ಧ ಟ್ರೈ ತಿಂಡಿ ಇನ್ಸ್ಟಾಗ್ರಾಮ್ ಪೇಜ್ ಸಹಭಾಗಿತ್ವದಲ್ಲಿ ಫೆಬ್ರವರಿ 7, 8 ಮತ್ತು 9ರಂದು 3 ದಿನಗಳ ಐಸ್ ಕ್ರೀಮ್ ಪರ್ಬವನ್ನು ಅಯೋಜಿಸಲಾಗಿದೆ. 2ನೇ ಆವ್ರತ್ತಿಯ ಐಸ್ ಕ್ರೀಮ್ ಪರ್ಬ ಇದಾಗಿದ್ದು ಮೂರೂ ದಿನ ಕೂಡ ಬೆಳಗ್ಗೆ 11ರಿಂದ ರಾತ್ರಿ 9 ರವರೆಗೆ ನಡೆಯಲಿದೆ ಎಂದು ಕಾರ್ಯಕ್ರಮದ ಆಯೋಜಕರಾದ ಕಿರಣ್ ಶೆಣೈ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು. ಮಂಗಳೂರನ್ನು ಐಸ್

ಧರ್ಮಸ್ಥಳ ಗ್ರಾ.ಯೋ.ವತಿಯಿಂದ ‘ವಾತ್ಸಲ್ಯ’ ಮನೆ ಹಸ್ತಾಂತರ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್, ಮೂಡುಬಿದಿರೆ ವತಿಯಿಂದ ವಾಲ್ಪಾಡಿ ಗ್ರಾಮದ ಶ್ರೀಮತಿ ಬಿಜಿಲು ಎಂಬವರಿಗೆ ನಿರ್ಮಿಸಲಾದ ‘ವಾತ್ಸಲ್ಯ’ ಮನೆ ಹಸ್ತಾಂತರ ಕಾರ್ಯಕ್ರಮವು ನಡೆಯಿತು. ಯೋಜನೆಯ ಟ್ರಸ್ಟಿ,ಶಿರ್ತಾಡಿ ಶಿಮುಂಜೆಗುತ್ತು ಸಂಪತ್ ಸಾಮ್ರಾಜ್ಯ ಅವರು ದೀಪ ಬೆಳಗಿಸಿ ಉದ್ಘಾಟಿಸಿ ‘ ಸಮಾಜದಲ್ಲಿ ಹಿಂದುಳಿದವರಿಗೆ,ಅಶಕ್ತರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಹಾಗೂ

ಮಂಗಳೂರು : ಮಾಸ್ಟರ್ ಚೆಫ್ ವಿನ್ನರ್ ಮಹಮ್ಮದ್ ಆಶಿಕ್‍ರಿಂದ ಲೈವ್ ಕುಕ್ಕಿಂಗ್ ಶೋ

ಸ್ಪಾರ್ಕಲ್ ಇವೆಂಟ್ಸ್ ಆಂಡ್ ಡೆಕೋರ್ಸ್, ಸಿಟಿ ಸೆಂಟರ್ ಮಂಗಳೂರು, ಸುಮಯ್ಯ ಶೇಖ್ ಸಂಯೋಜನೆಯ, ಎರೊಡೈನಾಮಿಕ್ ಮತ್ತು ಮೋತಿಶಾಮ್ ಸಹಯೋಗದೊಂದಿಗೆ “ಫೀಸ್ಟ್ ಯುವರ್ ಐಸ್” ವಿತ್ ಮಾಸ್ಟರ್ ಚೆಫ್ ವಿನ್ನರ್ ಮಹಮ್ಮದ್ ಆಶಿಕ್ ಕಾರ್ಯಕ್ರಮವು ಮಂಗಳೂರಿನ ಸಿಟಿ ಸೆಂಟರ್ ಮಾಲ್ ನಲ್ಲಿ ನೆರವೇರಿತು. ಕಾರ್ಯಕ್ರಮದಲ್ಲಿ ಮಾಸ್ಟರ್ ಚೆಫ್ ವಿನ್ನರ್ ಮಹಮ್ಮದ್ ಆಶಿಕ್ ಅವರಿಗೆ ಗೌರವ ಸನ್ಮಾನ ನಡೆಯಿತು… ಈ ವೇಳೆ ಮಾಸ್ಟರ್ ಚೆಫ್ ವಿನ್ನರ್ ಮಹಮ್ಮದ್ ಆಶಿಕ್ ಅವರಿಂದ ಮೊಟ್ಟ

ಭರದಿಂದ ಸಾಗುತ್ತಿದೆ “90 ಎಮ್ ಎಲ್” ಚಿತ್ರೀಕರಣ

ಕೋಸ್ಟಲ್ ವುಡ್ ನಲ್ಲಿ ಶೀರ್ಷಿಕೆಯಿಂದಲೇ ಗಮನ ಸೆಳೆದಿರುವ 90 ಎಮ್ ಎಲ್ ಸಿನಿಮಾದ ಚಿತ್ರೀಕರಣದ ಕೆಲಸವು ಭರದಿಂದ ಸಾಗುತ್ತಿದೆ. ಡಿ ಡಿ ಪ್ರೊಡಕ್ಷನ್ ಲಾಂಛನದಲ್ಲಿ ನಿರ್ಮಿಸಲಾಗುತ್ತಿರುವ ಈ ಸಿನಿಮಾದ ಒಟ್ಟು ಕಥಾಹಂದರವು ಉತ್ತಮ ಸಂದೇಶ, ಕೌಟುಂಬಿಕ ಮನೋರಂಜನೆ, ಪ್ರೀತಿ ಪ್ರೇಮ, ಸುಂದರ ಹಾಡುಗಳು, ಹಾಸ್ಯದೊಂದಿಗೆ ಸಾಕಷ್ಟು ಅಚ್ಚರಿಗಳನ್ನು ಕೂಡಾ ಒಳಗೊಂಡಿದೆ. ಡೋಲ್ಪಿ ಡಿ ಸೋಜ ನಿರ್ಮಾಪಕರಾಗಿರುವ, ರಂಜಿತ್ ಸಿ ಬಜಾಲ್ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ವಿನೀತ್