Home Archive by category ಆಳ್ವಾಸ್

ಮೂಡುಬಿದಿರೆ: ಕ್ರಾಸ್‌ಕಂಟ್ರಿ – ಆಳ್ವಾಸ್ ಸತತ 21ನೇ ವರ್ಷಗಳಿಂದ ಚಾಂಪಿಯನ್

ಮೂಡುಬಿದಿರೆ: ಬ್ರಹ್ಮಾವರದ ಎಸ್‌ಎಮ್‌ಎಸ್ ಕಾಲೇಜಿನಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾಲಯ ಅಂತರ ಕಾಲೇಜು ಕ್ರಾಸ್‌ಕಂಟ್ರಿ ಚಾಂಪಿಯನ್‌ಶಿಪ್‌ನ ಪುರುಷ ಹಾಗೂ ಮಹಿಳಾ ವಿಭಾಗಗಳೆರಡರಲ್ಲೂ ಚಾಂಪಿಯನ್ ಆಗಿ ಆಳ್ವಾಸ್ ಕಾಲೇಜು ಸತತ 21ನೇ ವರ್ಷ ಸಮಗ್ರ ಪ್ರಶಸ್ತಿ ಪಡೆದಿದೆ.ಪುರುಷರ ವಿಭಾಗದಲ್ಲಿ ಮೊದಲ 5 ಸ್ಥಾನಗಳನ್ನು ಆಳ್ವಾಸ್ ಕಾಲೇಜಿನ ಓಟಗಾರರು ಪಡೆದುಕೊಂಡಿದ್ದಾರೆ.

ಮೂಡುಬಿದಿರೆ: ದಕ್ಷಿಣ ಕನ್ನಡ ಜಿಲ್ಲೆಯ ಸಿಬಿಎಸ್‌ಇ ಮತ್ತು ಐಸಿಎಸ್‌ಇ ಶಾಲೆಗಳ ಗುಡ್ಡಗಾಡು ಓಟ ಸ್ಪರ್ಧೆ

ಮೂಡುಬಿದಿರೆ ಹಳೆಯಂಗಡಿಯ ಡಾ. ರಾಮಣ್ಣ ಶೆಟ್ಟಿ ಮೆಮೋರಿಯಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲೆಯ ಸಿಬಿಎಸ್‌ಇ ಮತ್ತು ಐಸಿಎಸ್‌ಇ ಶಾಲೆಗಳ ಗುಡ್ಡಗಾಡು ಓಟದ ಸ್ಪರ್ಧೆಯಲ್ಲಿ ಆಳ್ವಾಸ್ ಸೆಂಟ್ರಲ್ ಶಾಲೆಯ 14 ವರ್ಷ ವಯೋಮಿತಿಯ ಬಾಲಕರ ವಿಭಾಗದ 4ಕಿಮೀ ಓಟದಲ್ಲಿ ಓಂಕಾರ್ ಪ್ರಥಮ ಸ್ಥಾನ ಮತ್ತು ಪುನೀತ್ ಕುಮಾರ್ ತೃತೀಯ ಸ್ಥಾನ ಹಾಗೂ 17 ವರ್ಷ ವಯೋಮಿತಿಯ ಬಾಲಕಿಯರ ವಿಭಾಗದ 4ಕಿಮೀ ಓಟದಲ್ಲಿ ದಿಶಾ ಆರನೇ ಸ್ಥಾನ ಪಡೆದರು.ಆ ಮೂಲಕ 14 ಹಾಗೂ 17 ವರ್ಷ

ಕ್ಲಾಕ್ ಟವರ್ – ಸ್ಟೇಟ್‍ಬ್ಯಾಂಕ್ ದ್ವಿಮುಖ ಸಂಚಾರ : ಕೂಡಲೇ ವರದಿ ಸಲ್ಲಿಸಲು ಡಿಸಿ ಸೂಚನೆ

ನಗರದ ಕೇಂದ್ರಭಾಗ ಕ್ಲಾಕ್‍ಟವರ್‍ನಿಂದ ಸ್ಟೇಟ್‍ಬ್ಯಾಂಕ್‍ವರೆಗೆ ಏಕಮುಖ ವಾಹನ ಸಂಚಾರವನ್ನು ದ್ವಿಮುಖ ಸಂಚಾರವಾಗಿ ಮಾರ್ಪಡಿಸುವ ಬಗ್ಗೆ ಕೂಡಲೇ ವರದಿ ಸಲ್ಲಿಸಲು ಜಿಲ್ಲಾಧಿಕಾರಿ ಹೆಚ್.ವಿ ದರ್ಶನ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಪ್ರಜಾಸೌಧ ಸಭಾಂಗಣದಲ್ಲಿ ನಡೆದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹಿಂದೆ ದ್ವಿಮುಖ ವಾಹನ ಸಂಚಾರವಿದ್ದ ಈ ರಸ್ತೆಯನ್ನು ಏಕಮುಖ ಮಾಡಿರುವುದರಿಂದ

ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತ್ ನ ಪ್ರಶಸ್ತಿಗಳ ಘೋಷಣೆ

ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತ್ ಬೆಂಗಳೂರು ವತಿಯಿಂದ ಕೊಡಮಾಡುವ 2024 ನೇ ಸಾಲಿನ ರಾಜ್ಯ ಪ್ರಶಸ್ತಿಗಳು ಘೋಷಣೆಯಾಗಿದ್ದು,ಮೂಡಬಿದಿರೆಯ ವಿದ್ಯಾ ನಗರಿಯ ಹರಿಕಾರ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ರೂವಾರಿ ಡಾ ಮೋಹನ ಆಳ್ವರು ಪ್ರತಿಷ್ಠಿತ “ಜೀವಮಾನ ಸಾಧಕ” -2024” ಪ್ರಶಸ್ತಿಗೆ ಆಯ್ಕೆಯಾದರೆ, ಅಬ್ಬಕ್ಕನ ಕಲಾ ಗ್ಯಾಲರಿಯ ಸ್ಥಾಪಕರು, ವೃತ್ತಿಯಲ್ಲಿ ಉಪನ್ಯಾಸಕರು, ಪ್ರವೃತ್ತಿಯಲ್ಲಿ ಇತಿಹಾಸ, ಜಾನಪದ ತಜ್ಞರು ಹಾಗೂ ಹಲವು ವಿಚಾರಗಳಲ್ಲಿ ತಮ್ಮನ್ನು

ಮಂಗಳೂರು ವಿ ವಿ ಅಂತರ್ ಕಾಲೇಜು ಕುಸ್ತಿ ಪಂದ್ಯಾಟ ಆಳ್ವಾಸ್‌ ಗೆ ಸತತ 14 ನೇ ಬಾರಿ ಸಮಗ್ರ ಪ್ರಶಸ್ತಿ

ಮೂಡುಬಿದಿರೆ: ಡಾ.ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜು, ಕುಂದಾಪುರ ಇವರ ಆಶ್ರಯದಲ್ಲಿ ಜರುಗಿದ ಮಂಗಳೂರು ವಿ ವಿ ಮಟ್ಟದ ಅಂತರ್ ಕಾಲೇಜು ಕುಸ್ತಿ ಸ್ಪರ್ಧೆಯ ಪುರುಷ ಹಾಗೂ ಮಹಿಳೆಯರ ವಿಭಾಗದಲ್ಲಿ 14 ಚಿನ್ನ, 03 ಬೆಳ್ಳಿ ಹಾಗೂ 02 ಕಂಚಿನ ಪದಕದೊಂದಿಗೆ ಮೂಡುಬಿದಿರೆಯ ಆಳ್ವಾಸ್ ಕುಸ್ತಿಪಟುಗಳು ಸಮಗ್ರ ಪ್ರಶಸ್ತಿ ಪಡೆದುಕೊಂಡಿದ್ದಾರೆ.ಫಲಿತಾಂಶ : ಪುರುಷರ ವಿಭಾಗದಲ್ಲಿ : ನಿಖಿಲ್ – 61 ಕೆಜಿ ವಿಭಾಗದಲ್ಲಿ (ದ್ವಿತೀಯ), ಗುಡ್ಡಪ್ಪ – 61 ಕೆಜಿ ವಿಭಾಗದಲಿ (ತೃತೀಯ),

Big Breaking: ಭಾರತದ ಹೆಮ್ಮೆಯ ಉದ್ಯಮಿ ರತನ್‌ ಟಾಟಾ ಇನ್ನಿಲ್ಲ

ಭಾರತದ ಹೆಮ್ಮೆಯ ಹಾಗೂ ಮಧ್ಯಮ ವರ್ಗದ ಪ್ರೀತಿಯ ರತನ್‌ ಟಾಟಾ ಅವರು ಇನ್ನಿಲ್ಲ. ರತನ್‌ಟಾಟಾ ಅವರು ಬುಧವಾರ ತಡರಾತ್ರಿ ಮೃತಪಟ್ಟಿದ್ದಾರೆ. ಅವರ ಆರೋಗ್ಯ ಗಂಭೀರವಾಗಿದೆ ಎಂದು ಬುಧವಾರ ಸಂಜೆಯಷ್ಟೇ ಸುದ್ದಿಯಾಗಿತ್ತು. ರಾತ್ರಿ ವೇಳೆಗೆ ಅವರು ನಮ್ಮನ್ನೆಲ್ಲ ಅಗಲಿದ್ದಾರೆ. ದೇಶದ ಪ್ರಮುಖ ಉದ್ಯಮಗಳಲ್ಲಿ ಒಂದಾಗಿರುವ ಹಾಗೂ ಭಾರತೀಯರೊಂದಿಗೆ ಆತ್ಮೀಯ ಒಡನಾಟವನ್ನು ಹೊಂದಿರುವ ಟಾಟಾ ಸನ್ಸ್‌ನ ಅಧ್ಯಕ್ಷರಾದ ರತನ್ ಟಾಟಾ ಅವರ ಆರೋಗ್ಯ ಗಂಭೀರವಾಗಿದೆ ಎನ್ನುವ ಸುದ್ದಿಯನ್ನೇ

ಮೂಡುಬಿದಿರೆ : ಪಿಯುಸಿ ಫಲಿತಾಂಶ : ಆಳ್ವಾಸ್ ಸಾರ್ವತ್ರಿಕ ದಾಖಲೆ

ಮೂಡುಬಿದಿರೆ : ಕರ್ನಾಟಕ ರಾಜ್ಯ ಪದವಿ ಪೂರ್ವ ಶಿಕ್ಷಣದ ಇತಿಹಾಸದಲ್ಲೇ ಆಳ್ವಾಸ್ ಪದವಿ ಪೂರ್ವ ಕಾಲೇಜಿನ 682 ವಿದ್ಯಾರ್ಥಿಗಳು 95% ಶೇಕಡಾಕ್ಕಿಂತ ಅಧಿಕ ಅಂಕವನ್ನು ಪಡೆದು ಹೊಸ ದಾಖಲೆ ನಿರ್ಮಿಸಿದ್ದಲ್ಲದೆ ರಾಜ್ಯದ ಟಾಪ್ ಟೆನ್ ರ್ಯಾಂಕ್ನಲ್ಲಿ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ ಒಟ್ಟು 45 ವಿದ್ಯಾರ್ಥಿಗಳು ಸ್ಥಾನವನ್ನು ಪಡೆಯುವ ಮೂಲಕ ಆಳ್ವಾಸ್ ಸಂಸ್ಥೆಯು ಶೈಕ್ಷಣಿಕ ಕ್ಷೇತ್ರದಲ್ಲಿ ಸಾರ್ವತ್ರಿಕ ದಾಖಲೆಯನ್ನು ನಿರ್ಮಿಸಿದೆ.ಪಿಯುಸಿಯಲ್ಲಿ ಫಲಿತಾಂಶದಲ್ಲಿ

ಮೂಡುಬಿದಿರೆಯಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ

ಮೂಡುಬಿದಿರೆ: ಇಲ್ಲಿನ ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಆಸ್ಪತ್ರೆ, ಯುವವಾಹಿನಿ (ರಿ) ಮೂಡುಬಿದಿರೆ ಘಟಕ, ಮಂಗಳೂರಿನ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ನೇತ್ರಾ ಜ್ಯೋತಿ ಚಾರಿಟೇಬಲ್ ಟ್ರಸ್ಟ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ( ಅಂದತ್ವ ವಿಭಾಗ) ಮಂಗಳೂರು ಇವುಗಳ ಜಂಟಿ ಆಶ್ರಯದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ ವಿದ್ಯಾಗಿರಿ ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಆಸ್ಪತ್ರೆ ಆವರಣದಲ್ಲಿ ನಡೆಯಿತು. ಯುವ ವಾಹಿನಿ (ರಿ)

ಮೂಡುಬಿದಿರೆ: ವಿರಾಸತ್ ನಲ್ಲಿ ಶ್ರೇಯಾ ಘೋಷಾಲ್ “ಭಾವ ಲಹರಿ”

ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ಆಳ್ವಾಸ್ ವಿರಾಸತ್ ನ ಮೂರನೇ ದಿನವಾಗಿರುವ ಶನಿವಾರದಂದು  ಭಾರತೀಯ ಚಿತ್ರರಂಗದ ಹಿನ್ನಲೆ ಗಾಯಕಿ, ಮೆಲೋಡಿ ಹಾಡುಗಳ ಮೂಲಕ ಗುರುತಿಸಿಕೊಂಡಿರುವ ಶ್ರೇಯಾ ಘೋಷಾಲ್ ಅವರ ಮೆಲೋಡಿ ಹಾಡುಗಳ  “ಭಾವ ಲಹರಿ” ಸಂಗೀತ ಕಾರ್ಯಕ್ರಮವು ಪುತ್ತಿಗೆ ವಿವೇಕಾನಂದ ನಗರದ  ಬಯಲು ರಂಗಮಂದಿರದಲ್ಲಿ ಸೇರಿದ  ಸಂಗೀತ ರಸಿಕರ ಹೃದಯ ಗೆದ್ದಿತು. “ಐಸಾ ಕ್ಯೂನ್ ಹೋತಾ ಹೈ” ಚಿತ್ರದ ಯಾರಾ ಯಾರಾ ಹಾಡಿನ ಮೂಲಕ ಆರಂಭಿಸಿದ ಶ್ರೇಯಾ

ಮೂಡುಬಿದರೆ: ಆಳ್ವಾಸ್ ವಿರಾಸತ್ – ಸಪ್ತ ಮೇಳಗಳನ್ನು ಉದ್ಘಾಟಿಸಿದ ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯಾ

ಮೂಡುಬಿದಿರೆ : ಲಕ್ಷಾಂತರ ಮಕ್ಕಳನ್ನು ಸತ್ಪ್ರಜೆ ಮಾಡುವ ಆಳ್ವಾಸ್, ವಿರಾಸತ್ ಹಾಗೂ ವಿವಿಧ ಮೇಳಗಳ ಮೂಲಕ ಎಲ್ಲರ ಹೃದಯದ ಕಣ್ಣು ತೆರೆಸುವ ಕೆಲಸ ಮಾಡುತ್ತಿದೆ ಎಂದು ಕರ್ನಾಟಕ ಭಾರತ್ ಸ್ಕೌಟ್ಸ್-ಗೈಡ್ಸ್ ಮುಖ್ಯ ಆಯುಕ್ತ, ಮಾಜಿ ಸಚಿವ ಪಿ. ಜಿ. ಆರ್. ಸಿಂಧ್ಯಾ ಶ್ಲಾಘಿಸಿದರು. ವಿದ್ಯಾಗಿರಿಯಲ್ಲಿ ಅಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹಮ್ಮಿಕೊಂಡ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ’೨೯ನೇ ಆಳ್ವಾಸ್ ವಿರಾಸತ್’ ಅಂಗವಾಗಿ ಕೃಷಿಸಿರಿ ಆವರಣದಲ್ಲಿ ಅನ್ವೇಷಣಾತ್ಮಕ ಕೃಷಿಕ,