ಮೂಡುಬಿದಿರೆ: ವಿರಾಸತ್ ನಲ್ಲಿ ಶ್ರೇಯಾ ಘೋಷಾಲ್ “ಭಾವ ಲಹರಿ”

ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ಆಳ್ವಾಸ್ ವಿರಾಸತ್ ನ ಮೂರನೇ ದಿನವಾಗಿರುವ ಶನಿವಾರದಂದು  ಭಾರತೀಯ ಚಿತ್ರರಂಗದ ಹಿನ್ನಲೆ ಗಾಯಕಿ, ಮೆಲೋಡಿ ಹಾಡುಗಳ ಮೂಲಕ ಗುರುತಿಸಿಕೊಂಡಿರುವ ಶ್ರೇಯಾ ಘೋಷಾಲ್ ಅವರ ಮೆಲೋಡಿ ಹಾಡುಗಳ  “ಭಾವ ಲಹರಿ” ಸಂಗೀತ ಕಾರ್ಯಕ್ರಮವು ಪುತ್ತಿಗೆ ವಿವೇಕಾನಂದ ನಗರದ  ಬಯಲು ರಂಗಮಂದಿರದಲ್ಲಿ ಸೇರಿದ  ಸಂಗೀತ ರಸಿಕರ ಹೃದಯ ಗೆದ್ದಿತು.

ಐಸಾ ಕ್ಯೂನ್ ಹೋತಾ ಹೈ” ಚಿತ್ರದ ಯಾರಾ ಯಾರಾ ಹಾಡಿನ ಮೂಲಕ ಆರಂಭಿಸಿದ ಶ್ರೇಯಾ ಅವರು  ಐ ಹೇಟ್ ಲವ್ ಸ್ಟೋರಿಸ್ ಚಿತ್ರದ “ಬಹರಾ..ಬಹರಾ”, ಝೆಹೆರ್ ಚಿತ್ರದ ” ಅಗರ್ ತುಮ್ ಮಿಲ್ ಜಾವೂ ಜಮಾನ ಜೋಡುದೇಂಗೆ ಹಮ್”,ರಿಟರ್ನ್ಸ್ ಚಿತ್ರದ ಮೈನೇ ತುಮ್ ನೆ ನಾಮ್ ರಖ್ ದಿಯಾ”, “ಡೋಲ್ ಬಾಜೆ ಡೋಲ್ ಬಾಜೆ..”, ಬರ್ಸೋರೆ ಮೇಘಾ ಮೇಘಾ”

ಕನ್ನಡ ಚಲನಚಿತ್ರ ಕೋಟಿಗೊಬ್ಬದ ” ಸಾಲುತ್ತಿಲ್ಲವೇ ಸಾಲುತ್ತಿಲ್ಲವೇ..”, ಸಂಜು ವೆಡ್ಸ್ ಗೀತಾದ “ಗಗನವೇ ಬಾಗಿ ಭುವಿಯನ್ನು ಕೇಳುವ ಹಾಗೆ..” ರಾಬರ್ಟ್  ಚಿತ್ರದ  “ಕಣ್ಣು  ಹೊಡಿಯಾಕಾ ನಿನ್ನೆ ಕಲ್ತೀನಿ” ಮುಂತಾದ ಹಾಡುಗಳನ್ನು ಹಾಡುವ ಮೂಲಕ ಗಮನ ಸೆಳೆದರು.

2000ರಲ್ಲಿ ಸಂಜಯ ಲೀಲಾ ಬನ್ಸಾಲಿಯವರ ಚಿತ್ರ ‘ದೇವದಾಸ್’ ಮೂಲಕ ಚಿತ್ರಗಳಲ್ಲಿ ಹಿನ್ನಲೆ ಗಾಯಕಿಯಾಗಿ ಸಂಗೀತ ಪಯಣ ಆರಂಭಿಸಿರುವ ಶ್ರೇಯಾ ಅವರು ಬಹುಭಾಷಾ ಸಿಂಗರ್

ಭಾರತೀಯ ಚಿತ್ರರಂಗದ ಬಹುತೇಕ ಎಲ್ಲ ಭಾಷೆಯಲ್ಲೂ ಹಾಡುವ ಮೂಲಕ ಮನೆಮಾತಾಗಿರುವ ಶ್ರೇಯಾ ಘೋಷಾಲ್ ಅವರ ಅತ್ಯುತ್ತಮವಾದ ಗಾಯನಕ್ಕೆ ಐದು ಬಾರಿ ನ್ಯಾಷನಲ್ ಅವಾರ್ಡ್ ಸಿಕ್ಕಿದೆ. ಡಾ| ಮೋಹನ ಆಳ್ವರು ಶ್ರೇಯಾ ಅವರನ್ನು ಗೌರವಿಸಿದರು.

Related Posts

Leave a Reply

Your email address will not be published.