Home ಕರಾವಳಿ Archive by category ಪುತ್ತೂರು (Page 45)

ಪಾಲ್ತಾಡು ಮಣಿಕರ ಶಾಲೆಯ ನೂತನ ಶಾಲಾ ಕೊಠಡಿ : ಶುದ್ಧ ಕುಡಿಯುವ ನೀರಿನ ಘಟಕ, ಸ್ಮಾರ್ಟ್ ಕ್ಲಾಸ್ ಉದ್ಘಾಟನೆ

ಪುತ್ತೂರು. ಕೋಳ್ತಿಗೆ ಗ್ರಾಮದ ಮಣಿಕಾರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಶಾಲಾ ಕೊಠಡಿಗಳ ಹಾಗೂ ಶಾಲಾ ಮಕ್ಕಳಿಗೆ ಆಧುನಿಕ ಶಿಕ್ಷಣಕ್ಕಾಗಿ ಸ್ಮಾರ್ಟ್ ಕ್ಲಾಸ್ ಹಾಗೂ ಮಕ್ಕಳಿಗೆ ಶುದ್ಧ ಕುಡಿಯುವ ನೀರಿನ ಘಟಕವನ್ನು ಪುತ್ತೂರಿನ ಜನಪ್ರಿಯ ಶಾಸಕರಾದ ಸಂಜೀವ ಮಠದೂರ್ ಉದ್ಘಾಟಿಸಿದರು. ಮಣಿಕರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸ್ಥಳ ದಾನಗೈದ ಮೇನಾಳ ದಿ. ಮೀಯಕ್ಕೆ

ಶಕುಂತಳಾ ಶೆಟ್ಟಿ ಅವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿ : ಪಕ್ಷದ ವರಿಷ್ಠರಿಗೆ ಮಹಿಳಾ ಕಾಂಗ್ರೆಸ್ ಸಮಿತಿ ಆಗ್ರಹ

ಪುತ್ತೂರು ಕಾಂಗ್ರೇಸ್ ನಲ್ಲಿ ಅಭ್ಯರ್ಥಿಯಾಗಿ ಮಾಜಿ ಶಾಸಕಿ ಶಕುಂತಳಾ ಶೆಟ್ಟಿಯವರಿಗೆ ಆದ್ಯತೆ ನೀಡಬೇಕು. ಅದರಲ್ಲಿ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಅವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿ ಅವರಿಗೆ ಮತ್ತೊಮ್ಮೆ ಅವಕಾಶ ನೀಡಬೇಕು ಎಂದು ಪುತ್ತೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ಸಮಿತಿ ಆಗ್ರಹಿಸಿದೆ. ಪುತ್ತೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷೆ ಶಾರದಾ ಅರಸ್ ಅವರು ಮಂಗಳವಾರ ಪುತ್ತೂರು ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಠಿಯಲ್ಲಿ

ಹಾವು ಕಡಿತಕ್ಕೆ ತುತ್ತಾಗಿದ್ದ ತಾಯಿಗೆ ಮರು ಜನ್ಮ ನೀಡಿದ ಮಗಳು

ತಾಯಿಗೆ ವಿಷದ ಹಾವು ಕಚ್ಚಿದ ಸಂದರ್ಭ ದೃತಿಗೆಡದ ಮಗಳು, ಆ ವಿಷವನ್ನು ಚೀಪಿ ಹೊರ ತೆಗೆದು ಸಿನಿಮೀಯ ರೀತಿಯಲ್ಲಿ ಅಮ್ಮನನ್ನು ರಕ್ಷಿಸಿದ ಘಟನೆ ಪುತ್ತೂರು ತಾಲೂಕು ಕೆಯ್ಯೂರು ಗ್ರಾಮದಿಂದ ವರದಿಯಾಗಿದೆ. ಈ ಸಾಹಸ ಮೆರೆದ ಯುವತಿಗೆ ಸಾರ್ವಜನಿಕ ವಲಯದಿಂದ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದ್ದು, ತಾಯಿಗೆ ಮರು ಜನ್ಮ ನೀಡಿದ ಮಗಳು ಎಂದು ಜನರು ಕೊಂಡಾಡುತ್ತಿದ್ದಾರೆ.ಪುತ್ತೂರು ತಾಲೂಕಿನ ಕೆಯ್ಯೂರು ಗ್ರಾಮದ ಎಟ್ಯಡ್ಕ ಎಂಬಲ್ಲಿ ವಾರದ ಹಿಂದೆ ಈ ಘಟನೆ ನಡೆದಿದ್ದು,

ಏ.10ರಿಂದ ಪುತ್ತೂರು ಜಾತ್ರೆ

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಹತ್ತಾರು ಮಾಸ್ಟರ್ ಪ್ಲಾನ್ ಅಭಿವೃದ್ದಿ ಕಾರ್ಯಗಳು ನಿರಂತರ ನಡೆಯುತ್ತಿದ್ದು, ಕೆರೆಯ ಅಭಿವೃದ್ಧಿ ಕಾರ್ಯಕ್ಕೆ ಸಂಬಂಧಿಸಿ ಶಿಲಾ ಕಟ್ಟೆಯ ಕಾಮಗಾರಿ ಜಾತ್ರೆ ಮುಂದೆ ಪೂರ್ಣಗೊಳ್ಳಲಿದೆ. ಇದರ ಜೊತೆಗೆ ಅನ್ನಛತ್ರ ಮೇಲಂತಸ್ತು ನಿರ್ಮಾಣ, ಸಭಾಭವನದ ನವೀಕರಣ, ಆವರಣಗೋಡೆ, ದೇವಳದ ಹೊರಾಂಗಣ ಚರಂಡಿ ಅಭಿವೃದ್ಧಿ, ಇಂಟರ್‍ಲಾಕ್ ಅಳವಡಿಕೆ, ರಥ ಮಂದಿರ ನಿರ್ಮಾಣ ಸಹಿತ ಹಲವಾರು

ರಾಷ್ಟ್ರೀಯ ಮಹಿಳಾ ಸೀನಿಯರ್ ಕಬಡ್ಡಿ ಚಾಂಪಿಯನ್ ಶಿಫ್ ಗೆ ಕರ್ನಾಟಕ ರಾಜ್ಯ ತಂಡಕ್ಕೆ ಆಯ್ಕೆಯಾದ ಪುತ್ತೂರು ಬಲ್ನಾಡಿನ ವಿನುಶ್ರೀ

ರಾಷ್ಟ್ರೀಯ ಮಹಿಳಾ ಸೀನಿಯರ್ ಕಬಡ್ಡಿ ಚಾಂಪಿಯನ್ ಶಿಫ್ ಗೆ ಕರ್ನಾಟಕ ರಾಜ್ಯ ತಂಡಕ್ಕೆ ಆಯ್ಕೆಯಾದ ಪುತ್ತೂರು ಬಲ್ನಾಡಿನ ವಿನುಶ್ರೀ ಹರಿಯಾಣದಲ್ಲಿ ನಡೆಯುವ 69ನೇ ರಾಷ್ಟ್ರೀಯ ಮಹಿಳಾ ಸೀನಿಯರ್ ಕಬಡ್ಡಿ ಚಾಂಪಿಯನ್ ಶಿಫ್ ಗೆ ಕರ್ನಾಟಕ ರಾಜ್ಯ ತಂಡಕ್ಕೆ ಪುತ್ತೂರು ತಾಲೂಕಿನ ಬಲ್ನಾಡಿನ ವಿನುಶ್ರೀ ಇವರು ಆಯ್ಕೆಯಾಗಿದ್ದಾರೆ.ಬಲ್ನಾಡು ಗ್ರಾಮದ ಕೆಲ್ಲಾಡಿ ದಿ. ವೀರಪ್ಪ ಗೌಡ ಮತ್ತು ಸುಶೀಲ ರವರ ತೃತೀಯ ಪುತ್ರಿಯಾದ ಇವರು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಹಿರಿಯ

ಮಾ.26 ಎಪಿಎಂಸಿ ರೈಲ್ವೇ ಅಂಡರ್ ಪಾಸ್ ಲೋಕಾರ್ಪಣೆ-ವಿವೇಕಾನಂದ ಕಾಲೇಜು ಸಂಪರ್ಕದ ಮೇಲ್ಸೇತುವೆ ಅಗಲೀಕರಣಕ್ಕೆ ಶಿಲಾನ್ಯಾಸ

ಪುತ್ತೂರು: ರೂ.13 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಪುತ್ತೂರು ಕೃಷಿ ಉತ್ಪನ್ನ ಮಾರುಕಟ್ಟೆಯ ಮೂಲಕ ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ರ ಉಪ್ಪಿನಂಗಡಿಯನ್ನು ಸಂಪರ್ಕಿಸುವ ರಸ್ತೆಗೆ ರೈಲ್ವೆ ಅಂಡರ್ ಬ್ರಿಡ್ಜ್‌ಗೆ 10 ತಿಂಗಳ ಬಳಿಕ ಲೋಕಾರ್ಪಣೆಗೆ ಸಿದ್ದಗೊಂಡಿದೆ. ಮಾ.18ರಂದು ಬ್ರಿಡ್ಜ್‌ನ ಅಂತಿಮ ಬಾಕ್ಸ್ ಕಾಮಗಾರಿ ನಡೆಯುತ್ತಿದ್ದು, ಈ ಸಂದರ್ಭ ಸ್ಥಳಕ್ಕೆ ಆಗಮಿಸಿದ ಶಾಸಕ ಸಂಜೀವ ಮಠಂದೂರು ಕಾಮಗಾರಿ ಪರಿಶೀಲಿಸಿ ಮಾ.26ಕ್ಕೆ ಎಪಿಎಂಸಿ

ಪುತ್ತೂರಿಗೆ ಜನರ ಬೇಡಿಕೆಗೆ ಅನುಗುಣವಾಗಿ ಬೇರೆಯೇ ಪ್ರಣಾಳಿಕೆ: ಶಾಸಕ ಸಂಜೀವ ಮಠಂದೂರು

ಪುತ್ತೂರು: ಚುನಾವಣೆ ಸಂದರ್ಭ ಹಿಂದಿನ ಸಲ ಅಭಿಪ್ರಾಯ ಸಂಗ್ರಹ ಮಾಡಿದ್ದೆವು. ಅದರ ಆಧಾರದಲ್ಲಿ ಕಳೆದ ೫ ವರ್ಷಗಳಲ್ಲಿ ನಾನು ಶಾಸಕನಾಗಿ ಮತ್ತು ಎರಡೂವರೆ ವರ್ಷದಲ್ಲಿ ನಗರಸಭೆಯಿಂದ ಏನೇನು ಭರವಸೆಯನ್ನು ಇಟ್ಟಿದ್ದಾರೋ, ಏನು ಬೇಡಿಕೆಯನ್ನು ಸಲ್ಲಿಸಿದ್ದಿರೋ ಅದರ ಅಧಾರದಲ್ಲಿ ಒಂದಷ್ಟು ಕೆಲಸ ಕಾರ್ಯ ಮಾಡಿದ್ದೇವೆ. ಶೇ.೭೫ ರಷ್ಟು ಪ್ರಣಾಳಿಕೆಯ ಬೇಡಿಕೆಯನ್ನು ನಮ್ಮ ಸರಕಾರ ಈಡೇರಿಸಿದೆ. ಮುಂದಿನ ಚುನಾವಣೆಯ ನಮ್ಮ ಪ್ರಣಾಳಿಕೆ, ನಾಗರಿಕರ ಪ್ರಣಾಳಿಕೆ ಆಗಬೇಕು. ಈ

ರಬ್ಬರ್ ಟ್ಯಾಪಿಂಗ್ ಕತ್ತಿ ಎದೆಯೊಳಗೆ ಹೊಕ್ಕಿ ಮಹಿಳೆಸಾವು

ಕಡಬ : ರಬ್ಬರ್ ಟ್ಯಾಪಿಂಗ್ ಕತ್ತಿಯ ರೂಪದಲ್ಲಿ ಬಂದ ಸಾವು ಮಹಿಳೆಯನ್ನು ಬಲಿಪಡೆದ ಘಟನೆ ಕಡಬ ತಾಲೂಕಿನ ಎಡಮಂಗಲದಲ್ಲಿ ಮಾ.17ರಂದು ನಡೆದಿದೆ. ಎಡಮಂಗಲ ಗ್ರಾಮದ ಬಳಕ್ಕಬೆ ನಿವಾಸಿ ಶಿವರಾಮ ಎಂಬವರ ಪತ್ನಿ ಗೀತಾ(37 ವ.) ಎಂಬವರು ಬೆಳ್ಳಂಬೆಳಗ್ಗೆ 6.30 ಗಂಟೆ ಹೊತ್ತಿಗೆ ತನ್ನ ಗಂಡನ ಜೊತೆ ತಮ್ಮದೇ ತೋಟದಲ್ಲಿ ರಬ್ಬರ್ ಟ್ಯಾಪಿಂಗ್ ಕೆಲಸಕ್ಕೆ ಹೋಗಿದ್ದರು. ಟ್ಯಾಪಿಂಗ್ ಮಾಡುತ್ತಾ ಹೋಗುತ್ತಿದ್ದಾಗ ಇಳಿಜಾರು ಪ್ರದೇಶದಲ್ಲಿ ಕಾಲು ಜಾರಿ ಬಿದ್ದಿದ್ದಾರೆ. ಬೀಳುವಾಗ

Puttur : ಅಕ್ರಮ ಗಾಂಜಾ ಮಾರಾಟ ಪ್ರಕರಣ – ಆರೋಪಿ ಬಂಧನ, ರೂ. 40ಸಾವಿರ ಮೌಲ್ಯದ ಗಾಂಜಾ ವಶ.

ಪುತ್ತೂರು: ಮಾದಕ ಪದಾರ್ಥ ಗಾಂಜಾವನ್ನು ಮಾರಾಟ ಮಾಡುವ ಉದ್ದೇಶದಿಂದ ತನ್ನ ಬಳಿ ಆರೋಪಿಯೊಬ್ಬರನ್ನು ಪುತ್ತೂರು ನಗರ ಪೊಲೀಸ್ ಠಾಣೆಯ ಇನ್‍ಸ್ಪೆಕ್ಟರ್ ಮತ್ತು ಎಸ್.ಐ ಅವರ ನೇತೃತ್ವದ ಕಾರ್ಯಾಚರಣೆಯಲ್ಲಿ ಬಂಧಿಸಿ, ಆರೋಪಿಯಿಂದ ರೂ. 40ಸಾವಿರ ಮೌಲ್ಯದ 1.020 ಕೆ.ಜಿ ತೂಕದ ಗಾಂಜಾವನ್ನು ವಶಕ್ಕೆ ಪಡೆದು ಕೊಂಡ ಘಟನೆ ಪುತ್ತೂರು ಮುಕ್ರಂಪಾಡಿಯ ಬಸ್‍ತಂಗುದಾಣದಲ್ಲಿ ಮಾ.16ರಂದು ನಡೆದಿದೆ. ಬಲ್ನಾಡು ಗ್ರಾಮದ ಬುಳ್ಳೇರಿಕಟ್ಟೆ ನಿವಾಸಿ ಅಬೂಬಕ್ಕರ್ ಎಂಬವರ

ಪುತ್ತೂರು ನಗರಸಭೆ ಸದಸ್ಯ ನೇಣು ಬಿಗಿದು ಆತ್ಮಹತ್ಯೆ.

ಪುತ್ತೂರು: ನಗರಸಭಾ ಸದಸ್ಯರೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪುತ್ತೂರು ನಗರದ ಹೊರವಲಯದ ಸಾಲ್ಮರ ಸಮೀಪದ ಊರಮಾಲು ಎಂಬಲ್ಲಿ ಗುರುವಾರ ನಡೆದಿದೆ. ಇಲ್ಲಿನ ನಿವಾಸಿ ಶಿವರಾಮ ಸಫಲ್ಯ(46) ಮೃತಪಟ್ಟ ವ್ಯಕ್ತಿ. ಅವರು ಪುತ್ತೂರು ನಗರಸಭೆಯ 1ನೆ ವಾರ್ಡಿನ ಸದಸ್ಯರಾಗಿದ್ದಾರೆ.ಗುರುವಾರ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಅವರು ಮನೆಯ ಒಳಗಡೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಗೆ ಶರಣಾಗಿದ್ದಾರೆ. ಸಾವಿಗೆ ಕಾರಣ ತಿಳಿದು ಬಂದಿಲ್ಲ. ಅವರ ಪತ್ನಿಯು ಪತಿಯ