ಪರಿಸರ ಪ್ರೇಮಿಯೋರ್ವರು ಸಾರ್ವಜನಿಕವಾಗಿ ರಸ್ತೆ ಬದಿಯಲ್ಲಿ ನೆಟ್ಟಿರುವ ಗಿಡಗಳನ್ನು ದುಷ್ಕರ್ಮಿಗಳು ಕಿತ್ತೆಸೆದ ಘಟನೆ ಬಡಗಕಜೆಕಾರು ಗ್ರಾಮದ ದೆತ್ತಿಮಾರು ಎಂಬಲ್ಲಿ ಸಂಭವಿಸಿದ್ದು, ಈ ಬಗ್ಗೆ ಅರಣ್ಯ ಹಾಗೂ ಪೊಲೀಸ್ ಇಲಾಖೆಗೆ ದೂರು ನೀಡಲಾಗಿದೆ. ಇನ್ನು ರಾತೋರಾತ್ರಿ ಸ್ಥಳೀಯ ಐವರು ವ್ಯಕ್ತಿಗಳು ಕಿತ್ತೆಸೆದು ಧ್ವಂಸಗೊಳಿಸಿರುವುದಾಗಿ ಮಾರ್ಕ್ ಸೇರಾ ಅವರು ದೂರು
ಕೇಂದ್ರ ಸರಕಾರ ತಂದಿರುವ ಕೃಷಿ ಮಸೂದೆಗಳ ವಾಪಸ್ಸಾತಿಗೆ ಆಗ್ರಹಿಸಿ ಜಿಲ್ಲಾ ಮಟ್ಟದ ಬೃಹತ್ ಪ್ರತಿಭಟನಾ ಸಭೆ ಹಾಗೂ ರಾಷ್ಟ್ರೀಯ ಬಂದ್ ಸೆಪ್ಟಂಬರ್ 27ರಂದು ಬಿ.ಸಿ. ರೋಡ್‌ನಲ್ಲಿ ನಡೆಯಲಿದೆ. ಕೇಂದ್ರ ಸರಕಾರ ತಂದಿರು ಕೃಷಿ ಮಸೂದೆಗಳ ವಾಪಸ್ಸಾತಿಗೆ ಹಾಗೂ ಬೆಳೆಗಳಿಗೆ ಕನಿಷ್ಟ ಬೆಂಬಲಬೆಲೆಯನ್ನು ಕಾನೂನಾತ್ಮಕ ಗೊಳಿಸಲು ಆಗ್ರಹಿಸಿ ದೆಹಲಿ ಹೊರವಲಯದಲ್ಲಿ ನಡೆಯುತ್ತಿರು ನಿರಂತರ ಹೋರಾಟಕ್ಕೆ ಸೆಪ್ಟೆಂಬರ್ 26ಕ್ಕೆ 10 ತಿಂಗಳು ತುಂಬುತ್ತದೆ.ಈ ನಿಟ್ಟಿನಲ್ಲಿ ಸಂಯುಕ್ತ
ವಿಟ್ಲ: ವಿಟ್ಲ ಠಾಣಾ ವ್ಯಾಪ್ತಿಯ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬುಡೋಳಿ ಎಂಬಲ್ಲಿ ಖಾಸಗಿ ಮತ್ತು ಕಂಟೈನರ್ ಲಾರಿ ನಡುವೆ ಅಪಘಾತ ಸಂಭವಿಸಿದೆ. ಬೆಂಗಳೂರಿನಿಂದ ಮಂಗಳೂರಿಗೆ ಹೋಗುತ್ತಿದ್ದ ಖಾಸಗಿ ಬಸ್ ಮತ್ತು ಮಂಗಳೂರಿನಿಂದ ಬೆಂಗಳೂರಿಗೆ ಹೋಗುತ್ತಿದ್ದ ಕಂಟೈನರ್ ಲಾರಿ ನಡುವೆ ಬುಡೋಳಿಯ ಬೊಳ್ಳುಕಲ್ಲು ಎಂಬಲ್ಲಿ ಅಪಘಾತ ಸಂಭವಿಸಿದೆ.ಚಾಲಕ ಲಾರಿ ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದ್ದು, ಸುಮಾರು ೫ ಕಿ.ಮೀ ದೂರದಲ್ಲಿ ಲಾರಿಯನ್ನು ಬೆನ್ನಟ್ಟಿದ ತಂಡ
ಬಂಟ್ವಾಳ: ಅಡಿಕೆ ಮರ ಏರುವ ಬೈಕ್ ಆವಿಷ್ಕರಿಸಿ ಜಗತ್ತಿನ ಗಮನ ಸೆಳೆದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಜೀಪಮೂಡ ಗ್ರಾಮದ ಪ್ರಗತಿಪರ ಕೃಷಿಕ, ಸಂಶೋಧಕ ಗಣಪತಿ ಭಟ್ ಮತ್ತೊಮ್ಮೆ ಸುದ್ದಿಯಾಗುತ್ತಿದ್ದಾರೆ. ಮುಂದಿನ ವಿಶ್ವ ಟಿ-20 ಕ್ರಿಕೆಟ್ ಟೂರ್ನಿ ಸಂದರ್ಭ ಭಾರತ ಗೆದ್ದು ಬರುವಂತೆ ಜಾಹೀರಾತಿನಲ್ಲಿ ಗಣಪತಿ ಭಟ್, ಭಾರತ ಕ್ರಿಕೆಟ್ ತಂಡದ ಸದಸ್ಯರಿಗೆ ಚಿಯರ್ಸ್ ಮಾಡಲಿದ್ದಾರೆ. ಸ್ಟಾರ್ ಸ್ಪೋಟ್ಸ್ ಚಾನಲ್ ಈ ಅವಕಾಶವನ್ನು ಗ್ರಾಮೀಣ ಭಾಗದ ಒರ್ವ ಕೃಷಿಕನಿಗೆ
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಜೀಪಮೂಡ ಗ್ರಾಮದ ಅನ್ನಪಾಡಿ ಬಾಲಗಣಪತಿ ದೇವಾಲಯದ ಬಳಿಯ ದಿ. ಮೋನಪ್ಪ ಪೂಜಾರಿಯವರ ತೋಟದಲ್ಲಿರುವ ಶಾಸನವನ್ನು ಸಂಚಯಗಿರಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಇದರ ಅಧ್ಯಕ್ಷರಾದ ಡಾ| ತುಕಾರಾಮ ಪೂಜಾರಿಯವರು ಹಾಗೂ ಬಂಟ್ವಾಳ ತಾಲೂಕು ಪಂಚಾಯತಿನ ಮಾಜಿ ಅಧ್ಯಕ್ಷರಾದ ಶ್ರೀ ಯಶವಂತ ದೇರಾಜೆ ಅವರು ಈ ಮೊದಲು ಪತ್ತೆ ಮಾಡಿರುತ್ತಾರೆ. ಪ್ರಾಚ್ಯಸಂಚಯ ಸಂಶೋಧನಾ ಕೇಂದ್ರ – ಉಡುಪಿ (ಎನ್.ಟಿ.ಸಿ- ಎ.ಒ.ಎಂ ನ ಅಂಗ
ಬಂಟ್ವಾಳ : ತಾಲೂಕಿನ ಮೇಗಿನ ಕುರಿಯಾಳದಲ್ಲಿ ಪ್ರಾಚ್ಯಸಂಚಯ ಸಂಶೋಧನ ಕೇಂದ್ರ-ಉಡುಪಿ,(ಎನ್.ಟಿ.ಸಿ.-ಎ.ಒ.ಎಂ-ನ ಅಂಗ ಸಂಸ್ಥೆ) ಇದರ ಅಧ್ಯಯನ ನಿರ್ದೇಶಕ ಪ್ರೊ.ಎಸ್.ಎ.ಕೃಷ್ಣಯ್ಯ ಅವರು ಇತ್ತೀಚೆಗೆ ಪತ್ತೆ ಮಾಡಿದ ಶಾಸನವನ್ನು ಇತಿಹಾಸ ಮತ್ತು ಪುರಾತತ್ವ ಸಂಶೋಧನಾರ್ಥಿ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಅವರು ಓದಿ ಅರ್ಥೈಸಿದ್ದಾರೆ. ಗ್ರಾನೈಟ್ (ಕಣ)ಶಿಲೆಯಲ್ಲಿ ಕೊರೆಯಲ್ಪಟ್ಟ ಈ ಶಾಸನವು ಕನ್ನಡ ಲಿಪಿ ಮತ್ತು ಭಾಷೆಯಲ್ಲಿದ್ದು 25 ಸಾಲುಗಳನ್ನು ಹೊಂದಿದೆ. ಶಾಸನವು
ಬಂಟ್ವಾಳ: ಕೆಎಸ್‍ಆರ್‍ಟಿಸಿಯ ಐಸಿಯು ಬಸ್ ಸೇವೆ, ಕೋವಿಡ್ ವ್ಯಾಕ್ಸಿನ್ ನೀಡಿಕೆ ಹಾಗೂ ಕಾರ್ಮಿಕ ಇಲಾಖೆಯಿಂದ ನೀಡುವ ಆಹಾರದ ಕಿಟ್‍ನಲ್ಲಿ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿ ಮಾಜಿ ಸಚಿವ ಬಿ. ರಮಾನಾಥ ರೈ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಬಿ.ಸಿ. ರೋಡಿನ ಮಿನಿವಿಧಾನ ಸೌಧದಲ್ಲಿರುವ ತಹಶೀಲ್ದಾರ್ ಕಚೇರಿಗೆ ದಿಢೀರ್ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಸರಕಾರದ ಸೌಲಭ್ಯಗಳು ನೀಡಿಕೆಯಲ್ಲಿ ಕಾಂಗ್ರೆಸ್ ಹಾಗೂ
ಬಂಟ್ವಾಳ: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ,ಹಿರಿಯ ಪತ್ರಕರ್ತ, ಸಂಘಟಕ, ಸಾಮಾಜಿಕ ಕಾರ್ಯಕರ್ತ ಡಿ.ಎಂ.ಕುಲಾಲ್ (54) (ದೈಪಲ ಮಾಧವ ಕುಲಾಲ್) ಅವರು ಸುಧೀರ್ಘ ಕಾಲದ ಅಸೌಖ್ಯದಿಂದ ಗುರುವಾರ ಮಧ್ಯಾಹ್ನ ದೈಪಲದಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾದರು. ಮೃತರು ತಾಯಿ, ಪತ್ನಿ, ಒಂದು ಹೆಣ್ಣು, ಒಂದು ಗಂಡು ಮಕ್ಕಳ ಸಹಿತ ಬಂಧುಗಳನ್ನು ಅಗಲಿದ್ದಾರೆ. ಮುಂಗಾರು, ಮಂಗಳೂರು ಮಿತ್ರ, ನೇತ್ರಾವತಿ ವಾರ್ತೆ ಪತ್ರಿಕೆಯಲ್ಲಿ ಪತ್ರಕರ್ತರಾಗಿ ಕಾರ್ಯ
ಬಂಟ್ವಾಳ: ದ.ಕ. ಜಿ.ಪಂ. ಹಿ.ಪ್ರಾ. ಶಾಲೆ ಬ್ರಹ್ಮರಕೂಟ್ಲು ಹಾಗೂ ಕಳ್ಳಿಗೆ ಗ್ರಾಮಾಭಿವೃದ್ದಿ ಸಂಘದ ವತಿಯಿಂದ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಬರವಣಿಗೆ ಪುಸ್ತಕ ವಿತರಣಾ ಕಾರ್ಯಕ್ರಮ ಬುಧವಾರ ಶಾಲೆಯಲ್ಲಿ ನಡೆಯಿತು. ಮಾಜಿ ಸಚಿವ, ಕಳ್ಳಿಗೆ ಗ್ರಾಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಬಿ.ರಮಾನಾಥ ರೈ ಕಾರ್ಯಕ್ರಮ ಉದ್ಘಾಟಿಸಿ ಸಾಂಕೇತಿಕವಾಗಿ ಪುಸ್ತಕ ವಿತರಣೆ ಮಾಡಿದರು. ಬಳಿಕ ಮಾತನಾಡಿದ ಅವರು ಶಿಕ್ಷಣ ಪ್ರಗತಿಯ ಸಂಕೇತ ಆದರೆ ಹಿಂದೆಲ್ಲಾ ಎಲ್ಲರಿಗೂ ಶಿಕ್ಷಣ ಪಡೆಯುವ
ಬಂಟ್ವಾಳ: ಶಾಸಕ ರಾಜೇಶ್ ನಾಕ್ ನೇತೃತ್ವದಲ್ಲಿ ಸರಕಾರಿ ಶಾಲೆ ಉಳಿಸಿ ಬೆಳೆಸಿ ರಾಜ್ಯ ಸಮಿತಿ ಅಧ್ಯಕ್ಷ ಪ್ರಕಾಶ್ ಅಂಚನ್ ಅವರಿದ್ದ ನಿಯೋಗ ಬುಧವಾರ ಬೆಂಗಳೂರಿನ ಕಚೇರಿಯಲ್ಲಿ ರಾಜ್ಯ ಪ್ರಾಥಮಿಕ ಹಾಗೂ ಪೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರನ್ನು ಭೇಟಿ ಮಾಡಿತು. ಕೋವಿಡ್ ಕಾರಣದಿಂದಾಗಿ ಸ್ಥಗಿತಗೊಂಡಿರುವ ಶಾಲೆಗಳನ್ನು ಒಂದನೇ ತರಗತಿಯಿಂದಲೇ ಆರಂಭಿಸಬೇಕು ಎನ್ನುವ ನಿಯೋಗದ ಮನವಿಗೆ ಸ್ಪಂದಿಸಿದ ಸಚಿವರು 9 ಮತ್ತು 10ನೇ ತರಗತಿಗಳು ಆರಂಭಗೊಂಡ ಬಳಿಕ ಎರಡು ದಿನದಲ್ಲಿ