Home ಕರಾವಳಿ Archive by category ಮಂಗಳೂರು (Page 6)

ಮೂಡುಬಿದಿರೆ: ನ್ಯೂ ವೈಬ್ರೆಂಟ್ ಪದವಿ ಪೂರ್ವ ಕಾಲೇಜಿನಲ್ಲಿ 77ನೇ ಗಣರಾಜ್ಯೋತ್ಸವ

ಮೂಡುಬಿದಿರೆ: ಕಲ್ಲಬೆಟ್ಟುವಿನಲ್ಲಿರುವ ನ್ಯೂ ವೈಬ್ರೆಂಟ್ ಪದವಿಪೂರ್ವ ಕಾಲೇಜಿನಲ್ಲಿ 77ನೇ ಗಣರಾಜ್ಯೋತ್ಸವ ಸಮಾರಂಭವನ್ನು ಕಾಲೇಜಿನ ಆವರಣದಲ್ಲಿ ನಡೆಯಿತು. ಕಾಲೇಜಿನ ಟ್ರಸ್ಟಿ ಮೆಹಬೂಬ್ ಬಾಷಾ ಅಧ್ಯಕ್ಷತೆ ವಹಿಸಿ ಮಾತನಾಡಿ ಈ ಪವಿತ್ರ ದಿನವು ನಮ್ಮ ದೇಶದ ಸ್ವಾತಂತ್ರ್ಯ, ಸಂವಿಧಾನ ಮತ್ತು ಏಕತೆಯ ಮಹತ್ವವನ್ನು ನೆನಪಿಸುವುದಾಗಿ ಹೇಳಿದರು. ಈ ವರ್ಷವೂ ಭಾರತವು

ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಬಿಗ್ ಬಾಸ್ ರನ್ನರ್ ಆಫ್ ರಕ್ಷಿತಾ ಶೆಟ್ಟಿ ಭೇಟಿ

ಕಾಪು: ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಬಿಗ್ ಬಾಸ್ ರನ್ನರ್ ಆಫ್ ರಕ್ಷಿತಾ ಶೆಟ್ಟಿ ಅವರು ಶನಿವಾರ ಮಧ್ಯಾಹ್ನ ಭೇಟಿ ನೀಡಿದರು.ಭೇಟಿ ನೀಡಿ ಉಚ್ಚಂಗಿ ಸಹಿತ ಶ್ರೀ ಮಾರಿಯಮ್ಮ ದೇವಿಯ ದರುಶನ ಪಡೆದರು. ದೇವಸ್ಥಾನಕ್ಕೆ ಆಗಮಿಸಿದ ಬಿಗ್ ಬಾಸ್- 12 ರ ರನ್ನರ್ ಆಫ್ ರಕ್ಷಿತಾ ಶೆಟ್ಟಿ ಅವರನ್ನು ವ್ಯವಸ್ಥಾಪನ ಸಮಿತಿ ಮತ್ತು ಅಭಿವೃದ್ಧಿ ಸಮಿತಿ ವತಿಯಿಂದ ಅಮ್ಮನ ಅನುಗ್ರಹ ಪ್ರಸಾದವನ್ನು ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ದೇವಳದ ಅಭಿವೃದ್ಧಿ ಸಮಿತಿಯ ಪ್ರಧಾನ

ಶ್ರೀ ರಾಮಕೃಷ್ಣ ಶಿಕ್ಷಣ ಸಂಸ್ಥೆ ಸ್ಮಾರ್ಟ್ ಬೋರ್ಡ್ ಉದ್ಘಾಟನಾ ಕಾರ್ಯಕ್ರಮ

ಶ್ರೀ ರಾಮಕೃಷ್ಣ ಶಿಕ್ಷಣ ಸಂಸ್ಥೆ, ಬಂಟ್ಸ್ ಹಾಸ್ಟೆಲ್ ಮಂಗಳೂರು ಇಲ್ಲಿ ಸ್ಮಾರ್ಟ್ ಬೋರ್ಡ್ ಉದ್ಘಾಟನಾ ಕಾರ್ಯಕ್ರಮವು ಶಾಲಾ ಸಭಾಂಗಣದಲ್ಲಿ ನಡೆಯಿತು. ಸಂಸ್ಥೆಯ ಸಂಚಾಲಕರಾದ ಡಾ. ಬಿ ಸಂಜೀವ್ ರೈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಮಂಗಳೂರು ನಾರ್ತ್ ರೋಟರಿ ಕ್ಲಬ್ ಹಾಗೂ ಬೆಂಗಳೂರು ವಿಜಯನಗರ ರೋಡ್ ಮತ್ತು ಫಿಕ್ಸೆಲ್ ಸಾಫ್ಟ್ ಟೆಕ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗಳು ಐದು ಸ್ಮಾರ್ಟ್ ಬೋರ್ಡ್ ಗಳನ್ನು ಶಿಕ್ಷಣ ಸಂಸ್ಥೆಗಳಿಗೆ ದೇಣಿಗೆಯಾಗಿ ನೀಡಿದವು.

ಜ.26ರಂದು ತಣ್ಣೀರುಬಾವಿಯಲ್ಲಿ ಅಂತರಾಷ್ಟ್ರೀಯ ಮುಕ್ತ ಈಜು ಸ್ಪರ್ಧೆ ‘ಡೆನ್ ಡೆನ್ 2026’ ಮುಕುಂದ್ ರಿಯಾಲ್ಟಿ ಶೀರ್ಷಿಕೆ ಪ್ರಾಯೋಜಕತ್ವ

ಮಂಗಳೂರು: ತಣ್ಣೀರುಬಾವಿಯ ಸರ್ಫ್ ಕ್ಲಬ್‌ನಲ್ಲಿ ಮೂರನೇ ಆವೃತ್ತಿಯ ‘ಡೆನ್ ಡೆನ್ 2026’ ಅಂತರಾಷ್ಟ್ರೀಯ ಮುಕ್ತ ಸಮುದ್ರ ಈಜು ಚಾಂಪಿಯನ್‌ಶಿಪ್ ಜ.26ರಂದು ಆಯೋಜಿಸಿದೆ. ಈ ಮೂಲಕ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಈಜುಪಟುಗಳನ್ನು ಮಂಗಳೂರಿಗೆ ಸೆಳೆಯುತ್ತಿದೆ. ಡೆನ್ ಡೆನ್ 2026ರ ಆವೃತ್ತಿಯಲ್ಲಿ 500 ಮೀ(ಮುಕ್ತ ಈಜು), 2 ಕಿ.ಮೀ., 4 ಕಿ.ಮೀ., 6 ಕಿ.ಮೀ. ಮತ್ತು 8 ಕಿ.ಮೀ. ವಿಭಾಗಗಳಲ್ಲಿ ಸಮುದ್ರದಲ್ಲಿ ಈಜು ಸ್ಪರ್ಧೆ ನಡೆಯಲಿದೆ. ವೇಗವಾಗಿ

ಜಿಲ್ಲಾ ಮಟ್ಟದ ಕುಣಿತ ಭಜನಾ ಸ್ಪರ್ಧೆ: ಶ್ರೀ ಆನೆಗುಂದಿ ಸರಸ್ವತಿ ಪೀಠ ಸೂರ್ಯ ಚೈತನ್ಯ ಗ್ಲೋಬಲ್ ಅಕಾಡೆಮಿ ಪ್ರೌಢ ವಿಭಾಗದಲ್ಲಿ ತೃತೀಯ ಸ್ಥಾನ

ಶ್ರೀ ಜನಾರ್ಧನ ಶಾಲೆ ಎಳ್ಳಾರೆಯಲ್ಲಿನಡೆದ ಜಿಲ್ಲಾ ಮಟ್ಟದ ಕುಣಿತ ಭಜನಾ ಸ್ಪರ್ಧೆಯಲ್ಲಿ ಶ್ರೀ ಆನೆಗುಂದಿ ಸರಸ್ವತಿ ಪೀಠ ಸೂರ್ಯ ಚೈತನ್ಯ ಗ್ಲೋಬಲ್ ಅಕಾಡೆಮಿ ಶಾಲೆಯಿಂದ ಪ್ರಾಥಮಿಕ ಮತ್ತು ಪ್ರೌಢ ವಿಭಾಗದಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದು, ಪ್ರೌಢ ವಿಭಾಗದಲ್ಲಿ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.

ಮೂಡುಬಿದಿರೆಯಲ್ಲಿ ರಾಷ್ಟ್ರೀಯ ಮಟ್ಟದ ಭಾವೈಕ್ಯತಾ ಶಿಬಿರ ಆರಂಭ

ಮೂಡುಬಿದಿರೆ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಷ್ಟ್ರ ಸಂಸ್ಥೆ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಸಂಸ್ಥೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆ, ಸ್ಥಳೀಯ ಸಂಸ್ಥೆ ಮೂಡುಬಿದಿರೆ ಹಾಗೂ ಆಳ್ವಾಸ್ ಶಿಕ್ಷಣ ಸಂಸ್ಥೆಯ ಸಹಭಾಗಿತ್ವದಲ್ಲಿ ಕನ್ನಡ ಭವನದಲ್ಲಿ 5 ದಿನಗಳ ಕಾಲ ನಡೆಯುವ ರಾಷ್ಟ್ರಮಟ್ಟದ ರಾಷ್ಟ್ರೀಯ ಭಾವೈಕ್ಯತಾ ಶಿಬಿರವು ಗುರುವಾರ ಆರಂಭಗೊಂಡಿತು. ಮಂಗಳೂರು ಪೊಲೀಸ್ ಉಪ ಆಯುಕ್ತರಾದ ನಜ್ಮಾ ಫರೂಕಿ ಶಿಬಿರವನ್ನು ಉದ್ಘಾಟಿಸಿ ಶುಭ

ಬೆಳ್ತಂಗಡಿ: ತ್ರಿಶಲ ಜೈನ್ ಅವರಿಗೆ ಭಾರತ್ ಸ್ಕೌಟ್ ಏಂಡ್ ಗೈಡ್ ALT ಅರ್ಹತೆ

ಬೆಳ್ತಂಗಡಿ: ಸ. ಉ. ಪ್ರಾ. ಶಾಲೆ ಬಂಗಾಡಿ ಇಲ್ಲಿನ ದೈಹಿಕ ಶಿಕ್ಷಣ ಶಿಕ್ಷಕಿಯಾದ ತ್ರಿಶಲ ಜೈನ್ ರವರು ಭಾರತ್‌ ಸ್ಕೌಟ್ ಏಂಡ್ ಗೈಡ್ ಇದರ ಗೈಡ್ ಕ್ಯಾಪ್ಟನ್ ರಾಗಿ ಸೇವೆ ಸಲ್ಲಿಸುತ್ತಿದ್ದು, ಇವರು ರಾಷ್ಟ್ರೀಯ ತರಬೇತಿ ಕೇಂದ್ರ ಪಚಿಮರಿ ಮಧ್ಯಪ್ರದೇಶದಲ್ಲಿ ಏಪ್ರಿಲ್ ತಿಂಗಳಲ್ಲಿ ನಡೆದ 65ನೇ ಸಹಾಯಕ ಲೀಡರ್ (ALT) ತರಬೇತಿದಾರರ ತರಬೇತಿಯಲ್ಲಿ ಭಾಗವಹಿಸಿ 2025-26 ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಕ್ಯಾಂಪೋರಿಯಲ್ಲಿ ಇವರಿಗೆ ALT ಪದವಿಯ ಪ್ರಮಾಣ ಪತ್ರ ಹಾಗೂ

ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನ : ಎರಡು ತಿಂಗಳಲ್ಲಿ 15 ಕೋಟಿಗೂ ಮಿಕ್ಕಿ ಆದಾಯ

ಸುಬ್ರಹ್ಮಣ್ಯ ಜನವರಿ 21 : ದಕ್ಷಿಣ ಭಾರತದ ನಾಗರಾಧನೆಯ ಹೆಸರಾಂತ ಪುಣ್ಯಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ 2025 ನವಂಬರ್ ಹಾಗೂ ಡಿಸೆಂಬರ್ ನ ಎರಡು ತಿಂಗಳಲ್ಲಿ ಒಟ್ಟು 14 ಕೋಟಿ 77 ಲಕ್ಷದ 80,000 ರೂ. ಆದಾಯ ಬಂದಿರುತ್ತದೆ.ನವೆಂಬರ್ ತಿಂಗಳಲ್ಲಿ ವಿವಿಧ ಸೇವೆಗಳಿಂದ 4,5621739 ಕೋಟಿರೂಪಾಯಿ ಹುಂಡಿಯಿಂದ 1,0976957 ಕೋಟಿ ರೂಪಾಯಿ ಹಾಗೂ ಅನ್ನದಾನ ನಿಧಿಯಿಂದ 8357769 ಲಕ್ಷ ರೂಪಾಯಿ ಆದಾಯ ಬಂದಿರುತ್ತದೆ. ಹಾಗೆಯೇ ಡಿಸೆಂಬರ್ ತಿಂಗಳ ವಿವಿಧ

ಮಲ್ಲಿಕಟ್ಟೆ ಶಿವಭಾಗ್ ವಾರ್ಡ್‌ನ ಪಾರ್ಕ್ ಅವ್ಯವಸ್ಥೆ – ನಾಗರಿಕರ ನಿರ್ಲಕ್ಷ್ಯದ ಪ್ರತಿಬಿಂಬ

ಪಾರ್ಕ್ ಉಳಿಸುವ ಹೊಣೆ ಯಾರದು ? ನಗರದ ಮಲ್ಲಿಕಟ್ಟೆ ಶಿವಭಾಗ್ ವಾರ್ಡ್ ಸಂಖ್ಯೆ 34 ವ್ಯಾಪ್ತಿಯಲ್ಲಿ ಇರುವ ಪಾರ್ಕ್ ಇಂದು ಸಂಪೂರ್ಣ ಅವ್ಯವಸ್ಥೆಯ ಗೂಡಾಗಿದೆ. ಮಕ್ಕಳ ಆಟ, ಹಿರಿಯರ ವಾಕಿಂಗ್‌, ಸಾರ್ವಜನಿಕರ ವಿಶ್ರಾಂತಿಗಾಗಿ ನಿರ್ಮಿಸಲಾಗಿದ್ದ ಈ ಪಾರ್ಕ್‌ ಈಗ ಅಸ್ತವ್ಯಸ್ತ ಸ್ಥಿತಿಯಲ್ಲಿ ಕಂಡುಬರುತ್ತಿದೆ. ಸರಿಯಾದ ನಿರ್ವಹಣೆ ಇಲ್ಲದ ಕಾರಣ ಪಾರ್ಕ್‌ಗೆ ಬರುವ ನಾಗರಿಕರು ಅನೇಕ ಅನಾನುಕೂಲಗಳನ್ನು ಅನುಭವಿಸಬೇಕಾಗಿದ್ದು, ಬೆಳಗ್ಗೆ ಹಾಗೂ ಸಂಜೆ ಸಮಯದಲ್ಲಿ ವಾಕಿಂಗ್‌ಗೆ

ಯೇನೇಪೋಯದಲ್ಲಿ ರಾಷ್ಟ್ರೀಯ ಯುವದಿನಾಚರಣೆ – ವ್ಯಕ್ತಿತ್ವ ಅಭಿವೃದ್ಧಿ ಕಾರ್ಯಾಗಾರ

ಸ್ವಾಮಿ ವಿವೇಕಾನಂದರ ಜನ್ಮ ದಿನದ ಸಂದರ್ಭದಲ್ಲಿಆಚರಿಸಲಾದ ರಾಷ್ಟ್ರೀಯ ಯುವದಿನ 2026ಅನ್ನುಅನುಸಂಧಾನಿಸಿ, ಯೇನೇಪೋಯ ನ್ಯಾಚುರೋಪಥಿ ಮತ್ತು ಯೋಗ ವಿಜ್ಞಾನ ಕಾಲೇಜು ಮತ್ತುಆಸ್ಪತ್ರೆಯ ರಾಷ್ಟ್ರೀಯ ಸೇವಾ ಯೋಜನೆ ಘಟಕವು ವ್ಯಕ್ತಿತ್ವ ಅಭಿವೃದ್ಧಿ ಕಾರ್ಯಾಗಾರವನ್ನು ಆಯೋಜಿಸಿತು. ಕಾರ್ಯಕ್ರಮವು19 ಜನವರಿ 2026, ಬೆಳಿಗ್ಗೆ10:30 ರಿಂದ ಮಧ್ಯಾಹ್ನ 12:30ರವರೆಗೆ ಕಾಲೇಜು ಸಭಾಂಗಣದಲ್ಲಿ ಜರುಗಿತು.ಈ ಸಂದರ್ಭದಲ್ಲಿ ಮಂಗಳೂರು ಮೂಲದ ORESO ಸಂಸ್ಥೆಯ ಸ್ಥಾಪಕಿ ಮತ್ತು